ಕೂದಲು ಉದುರುವಿಕೆಗೆ ನಿಮ್ಮ ಕೇಶವಿನ್ಯಾಸ, ಒತ್ತಡ ಅಥವಾ ಆಹಾರ ಹೀಗೆ ಬೇರೆ ಬೇರೆ ಕಾರಣಗಳಿಂದ ಉಂಟಾಗಬಹುದು. ಕಾರಣ ಏನೇ ಇರಲಿ, ಕೂದಲು ಉದುರುವಿಕೆಯನ್ನು ಯಾರೂ ಇಷ್ಟಪಡುವುದಿಲ್ಲ. ಆದ್ದರಿಂದ, ಕೂದಲು ಉದುರುವುದು ಆರಂಭವಾದ ಕೂಡಲೇ ವಿವಿಧ ಶಾಂಪೂ ಬದಲಾಯಿಸುವುದರ ಬದಲು ಸರಳ ಮತ್ತು ಆರೋಗ್ಯಕ್ಕೂ ಪೂರಕವಾದ ಮನೆ ಮದ್ದುಗಳನ್ನು ಬಳಸಿ ನೋಡಿ. ನೀವು ಕುಂಬಳಕಾಯಿ ಬೀಜಗಳ ಬಗ್ಗೆ ಕೇಳಿರಬಹುದು. ಇದಕ್ಕೂ ಕೂದಲಿಗೂ ಯಾವ ರೀತಿಯ ಸಂಬಂಧ ಎಂಬುದು ನಿಮ್ಮ ಪ್ರಶ್ನೆಯಾಗಿದ್ದರೇ ಇಲ್ಲಿದೆ ಉತ್ತರ. ಕುಂಬಳಕಾಯಿ ಬೀಜಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ ಎಂದುಬುದನ್ನು ವಿಜ್ಞಾನವೂ ಹೇಳುತ್ತದೆ. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ಪ್ರಕಟಿಸಿದ 2019 ರ ಅಧ್ಯಯನದ ಪ್ರಕಾರ, ಕುಂಬಳಕಾಯಿ ಬೀಜದ ಮೇಲ್ಮೈ ಮುಖ್ಯವಾಗಿ ಸ್ಯಾಚುರೇಟೆಡ್ ಮತ್ತು ಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಒಳಗೊಂಡಿದೆ, ಇದು ಕೂದಲಿನ ಬೆಳವಣಿಗೆಗೆ ಉತ್ತೇಜನಕಾರಿಯಾಗಿದೆ.
ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಮನೆಮದ್ದುಗಳ ವಿಷಯಕ್ಕೆ ಬಂದಾಗ, ಕುಂಬಳಕಾಯಿ ಬೀಜಗಳನ್ನು ಹೆಚ್ಚಾಗಿ ಕಡೆಗಣಿಸಲಾಗುತ್ತದೆ ಎಂದು ಗುರುಗ್ರಾಮ್ ಮೂಲದ ಚರ್ಮರೋಗ ಮತ್ತು ಕಾಸ್ಮೆಟಾಲಜಿಸ್ಟ್ ಡಾ. ಉರ್ವಿ ಪಾಂಚಾಲ್ ಅವರು ಹೇಳಿದ್ದಾರೆ. ಈ ಸಣ್ಣ ಬೀಜಗಳು ಅಗತ್ಯ ಪೋಷಕಾಂಶಗಳು ಮತ್ತು ಜೀವಸತ್ವಗಳಿಂದ ತುಂಬಿರುತ್ತವೆ, ಅದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಮತ್ತು ಒಟ್ಟಾರೆ ಕೂದಲಿನ ಆರೋಗ್ಯವನ್ನು ಸುಧಾರಿಸುತ್ತದೆ.
ಕುಂಬಳಕಾಯಿ ಬೀಜಗಳಲ್ಲಿ ವಿಟಮಿನ್ ಎ, ಬಿ ಮತ್ತು ಸಿ ಜೊತೆಗೆ ಮೆಗ್ನೀಸಿಯಮ್, ರಂಜಕ, ಕಬ್ಬಿಣ ಮತ್ತು ತಾಮ್ರದಂತಹ ಸೂಕ್ಷ್ಮ ಪೋಷಕಾಂಶಗಳು ಸಮೃದ್ಧವಾಗಿವೆ ಎಂದು ತಜ್ಞರು ಹೇಳುತ್ತಾರೆ. ಕುಂಬಳಕಾಯಿ ಬೀಜಗಳಲ್ಲಿ ಕಂಡು ಬರುವ ಪ್ರಮುಖ ಖನಿಜವಾದ ಸತುವು ಕೂದಲಿನ ಬೆಳವಣಿಗೆಗೆ ನಿರ್ಣಾಯಕ ಪಾತ್ರ ವಹಿಸುತ್ತದೆ. ಇದು ಹಾರ್ಮೋನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೋಶ ವಿಭಜನೆಯನ್ನು ಉತ್ತೇಜಿಸುತ್ತದೆ ಮತ್ತು ಪ್ರೋಟೀನ್ ಸಂಶ್ಲೇಷಣೆಯನ್ನು ಬೆಂಬಲಿಸುತ್ತದೆ. ಹೊಸ ಕೂದಲಿನ ಬೆಳವಣಿಗೆಗೆ ಈ ಪ್ರಕ್ರಿಯೆಗಳು ಅತ್ಯಗತ್ಯ. ನಿಮ್ಮ ಆಹಾರದಲ್ಲಿ ಕುಂಬಳಕಾಯಿ ಬೀಜಗಳನ್ನು ಸೇರಿಸುವುದು ಎಂದರೆ ಸತುವನ್ನು ಸೇವಿಸುವುದು, ಆದ್ದರಿಂದ ಇದು ಆರೋಗ್ಯಕರ ಮತ್ತು ಬಲವಾದ ಕೂದಲಿನ ಬೆಳವಣಿಗೆಯನ್ನು ಸುಗಮಗೊಳಿಸುತ್ತದೆ.
ಕೂದಲಿನ ರಚನೆಯನ್ನು ಬಲಪಡಿಸುತ್ತವೆ:
ಕುಂಬಳಕಾಯಿ ಬೀಜಗಳಲ್ಲಿ ಕಂಡುಬರುವ ಒಮೆಗಾ -3 ಕೊಬ್ಬಿನಾಮ್ಲಗಳು ಕೂದಲಿನ ರಚನೆಯನ್ನು ಹೆಚ್ಚಿಸಲು ಪ್ರಯೋಜನಕಾರಿ. ಈ ಕೊಬ್ಬಿನಾಮ್ಲಗಳು ನೆತ್ತಿಯನ್ನು ತೇವಗೊಳಿಸುತ್ತವೆ, ಶುಷ್ಕತೆ ಮತ್ತು ಕಿರಿಕಿರಿಯನ್ನು ತಡೆಯುತ್ತವೆ. ಕೂದಲನ್ನು ಪೋಷಿಸುವ ಮೂಲಕ, ಕೂದಲಿನ ತುದಿಗಳು ಒಡೆಯುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೆಲ್ತ್ ಶಾಟ್ಸ್ಗೆ ತಿಳಿಸಿದ್ದಾರೆ.
ಕೂದಲು ಉದುರುವಿಕೆಯನ್ನು ತಡೆಯುತ್ತವೆ:
ಕುಂಬಳಕಾಯಿ ಬೀಜಗಳಲ್ಲಿನ ಫೈಟೊಕೆಮಿಕಲ್ ಸಂಯುಕ್ತಗಳು ಕೂದಲು ಉದುರುವಿಕೆಗೆ ಕಾರಣವಾಗುವ ಹಾರ್ಮೋನ್ ಡೈಹೈಡ್ರೊಟೆಸ್ಟೊಸ್ಟೆರಾನ್ (ಡಿಎಚ್ ಟಿ) ಉತ್ಪಾದನೆಯನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಡಿಎಚ್ ಟಿ ಮಟ್ಟವನ್ನು ಕಡಿಮೆ ಮಾಡುವ ಮೂಲಕ, ಕುಂಬಳಕಾಯಿ ಬೀಜಗಳು ಕೂದಲು ಉದುರುವಿಕೆಯನ್ನು ನಿಧಾನಗೊಳಿಸಲು ಮತ್ತು ಇರುವ ಕೂದಲನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ.
ನೆತ್ತಿಯ ಆರೋಗ್ಯವನ್ನು ಹೆಚ್ಚಿಸುತ್ತವೆ:
ಉತ್ತಮ ಕೂದಲಿನ ಬೆಳವಣಿಗೆಗೆ ನಿಮಗೆ ಆರೋಗ್ಯಕರ ನೆತ್ತಿಯ ಅಗತ್ಯವಿದೆ. ಕುಂಬಳಕಾಯಿ ಬೀಜಗಳು ವಿಟಮಿನ್ ಇ ನಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತವೆ, ಇದು ನೆತ್ತಿಯನ್ನು ಆಕ್ಸಿಡೇಟಿವ್ ಒತ್ತಡದಿಂದ ರಕ್ಷಿಸುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಿಕೊಳ್ಳುತ್ತದೆ ಎಂದು ಡಾ. ಉರ್ವಿ ಪಾಂಚಾಲ್ ಹೇಳುತ್ತಾರೆ. ಕುಂಬಳಕಾಯಿ ಬೀಜಗಳನ್ನು ತಿನ್ನುವುದು ನೆತ್ತಿಯ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಕಾರಿಯಾಗಿದೆ.
ಇದನ್ನೂ ಓದಿ: ಹೊಟ್ಟೆಯ ಕೊಬ್ಬನ್ನು ಕರಗಿಸಲು ಬಯಸಿದರೆ ಪ್ರತಿದಿನ ಬೆಳಗ್ಗೆ ಈ ಕೆಲವು ಪಾನೀಯಗಳನ್ನು ಸೇವನೆ ಮಾಡಿ
ನೀವು ಯಾವಾಗಲೂ ಕುಂಬಳಕಾಯಿ ಬೀಜಗಳನ್ನು ರುಚಿಕರ ಮತ್ತು ಆರೋಗ್ಯಕರ ತಿಂಡಿಯಾಗಿ ತಿನ್ನಬಹುದು ಅಥವಾ ಅವುಗಳನ್ನು ನಿಮ್ಮ ಊಟಕ್ಕೆ ಸೇರಿಸಬಹುದು. ಕುಂಬಳಕಾಯಿ ಬೀಜಗಳ ಪ್ರಯೋಜನಗಳನ್ನು ಪಡೆಯಲು ಇತರ ಮಾರ್ಗಗಗಳೂ ಇವೆ ಅದೇನೆಂದು ತಿಳಿಯಬೇಕಾ? ಇಲ್ಲಿದೆ ಮಾಹಿತಿ.
1. ಕುಂಬಳಕಾಯಿ ಬೀಜದ ಎಣ್ಣೆ:
ಕುಂಬಳಕಾಯಿ ಬೀಜವನ್ನು ಶಾಂಪೂಗಳು, ಕಂಡೀಷನರ್ಗಳು ಮತ್ತು ಹೇರ್ ಮಾಸ್ಕ್ಗಳಂತಹ ವಿವಿಧ ಕೂದಲಿನ ಆರೈಕೆ ಉತ್ಪನ್ನಗಳಲ್ಲಿ ನೀವು ಒಂದು ಘಟಕಾಂಶವಾಗಿ ಕಾಣಬಹುದು ಅಥವಾ ಆಳವಾದ ಕಂಡೀಷನಿಂಗ್ ಚಿಕಿತ್ಸೆಗಾಗಿ ನೇರವಾಗಿ ಬಳಸಬಹುದು.
2. ಕುಂಬಳಕಾಯಿ ಬೀಜದ ಹೇರ್ ಮಾಸ್ಕ್:
ಬೇಕಾಗುವ ಸಾಮಾಗ್ರಿಗಳು:
ವಿಧಾನ:
ಕುಂಬಳಕಾಯಿ ಬೀಜಗಳು ಕೂದಲು ಉದುರುವ ಸಮಸ್ಯೆಗೆ ನೈಸರ್ಗಿಕ ಮತ್ತು ಪರಿಣಾಮಕಾರಿ ಪರಿಹಾರವನ್ನು ನೀಡುತ್ತವೆ. ಆದ್ದರಿಂದ, ಕುಂಬಳಕಾಯಿ ಬೀಜಗಳುಕೂದಲಿನ ಆರೈಕೆಗೆ ಯೋಗ್ಯವಾದ ಸೇರ್ಪಡೆಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: