AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಗಿ, ಸಜ್ಜೆ ಮಿಶ್ರಿತ ರೊಟ್ಟಿ ಸೂಪರೋ ಸೂಪರ್… ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಬಾಬಾ ರಾಮದೇವ್ ವಿವರಣೆ

Ragi and Bajra roti benefits: ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರು ತಮ್ಮ ಆಯುರ್ವೇದ ಪರಿಹಾರಗಳಿಗಾಗಿ ಪ್ರಪಂಚದಾದ್ಯಂತ ಜನಪ್ರಿಯರಾಗಿದ್ದಾರೆ. ಸಿರಿಧಾನ್ಯಗಳೆನಿಸಿರುವ ರಾಗಿ ಮತ್ತು ಸಜ್ಜೆ ಬಳಸಿ ತಯಾರಿಸಿದ ರೊಟ್ಟಿಯನ್ನು ಹೇಗೆ ತಿನ್ನಬೇಕು, ಯಾವ ಪಲ್ಯದೊಂದಿಗೆ ತಿಂದರೆ ಚೆನ್ನಾಗಿರುತ್ತೆ ಎಂಬುದನ್ನು ಅವರು ವೀಡಿಯೊದಲ್ಲಿ ವಿವರಿಸಿದ್ದಾರೆ. ಈ ವಿಶೇಷ ರೊಟ್ಟಿಯಿಂದ ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ತಿಳಿಸಿದ್ದಾರೆ.

ರಾಗಿ, ಸಜ್ಜೆ ಮಿಶ್ರಿತ ರೊಟ್ಟಿ ಸೂಪರೋ ಸೂಪರ್... ಏನೆಲ್ಲಾ ಪ್ರಯೋಜನಗಳಿವೆ ಗೊತ್ತಾ? ಬಾಬಾ ರಾಮದೇವ್ ವಿವರಣೆ
ಬಾಬಾ ರಾಮದೇವ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Nov 13, 2025 | 8:04 PM

Share

ಆಯುರ್ವೇದಲ್ಲಿ ವರ್ಣಿಸಲಾಗಿರುವ 9 ಸಿರಿಧಾನ್ಯಗಳಲ್ಲಿ (millets) ರಾಗಿ, ಸಜ್ಜೆ (Bajra), ನವಣೆ ಮೊದಲಾದವು ಇವೆ. ಸಜ್ಜೆ ಚಳಿಗಾಲದ ಆಹಾರ ಎನಿಸಿದೆ. ರಾಗಿ ಸರ್ವ ಋತು ಆಹಾರವಾಗಿದೆ. ಸಜ್ಜೆ ರೊಟ್ಟಿ (Bajra roti) ರಾಜಸ್ಥಾನ ಸೇರಿದಂತೆ ದೇಶದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಾಕಷ್ಟು ಬಳಕೆ ಆಗುತ್ತದೆ. ರಾಗಿ ಮೈಸೂರು ಸೀಮೆಯಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತದೆ. ಆಂಧ್ರ, ತೆಲಂಗಾಣ ಹಾಗೂ ತಮಿಳುನಾಡಿನ ಕೆಲ ಪ್ರದೇಶಗಳಲ್ಲೂ ರಾಗಿ ಬಳಸಲಾಗುತ್ತದೆ. ಈ ರಾಗಿ ದೇಹಕ್ಕೆ ತಂಪು ನೀಡುತ್ತದೆ. ಪತಂಜಲಿ ಸಹ-ಸಂಸ್ಥಾಪಕ ಬಾಬಾ ರಾಮದೇವ್ ಅವರು ಇತ್ತೀಚಿನ ವಿಡಿಯೋವೊಂದರಲ್ಲಿ ರಾಗಿ ಹಾಗೂ ಸಜ್ಜೆ ಹಿಟ್ಟಿನಿಂದ ತಯಾರಿಸಿದ ರೊಟ್ಟಿ ಬಗ್ಗೆ ಮಾತನಾಡಿದ್ದಾರೆ. ಬೆಳ್ಳುಳ್ಳಿ ಚಟ್ನಿಯೊಂದಿಗೆ ಈ ರೊಟ್ಟಿ ತಿನ್ನುವುದು ಎಷ್ಟು ಅದ್ಭುತ ಎಂದು ಹಾಡಿ ಹೊಗಳಿರುವ ಅವರು, ಆರ್ಥ್ರೈಟಿಸ್​ನಂತಹ ರೋಗವನ್ನು ದೂರ ಮಾಡಲು ಈ ಆಹಾರಗಳು ಪರಿಣಾಮಕಾರಿ ಎಂದು ಹೇಳುತ್ತಾರೆ.

ರಾಗಿ ಮತ್ತು ಸಜ್ಜೆ ಎರಡೂ ಕೂಡ ಸೂಪರ್ ಫುಡ್ ಎನಿಸಿವೆ. ಸಜ್ಜೆಯಲ್ಲಿ ಸಾಕಷ್ಟು ಫೈಬರ್ ಅಂಶ ಇರುತ್ತದೆ. ಸಜ್ಜೆಯನ್ನು ಚಳಿಗಾಲದ ಆಹಾರವೆಂದು ಪರಿಗಣಿಸಲಾಗುತ್ತದೆ . ಇದು ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ ಮತ್ತು ಶಕ್ತಿಯನ್ನು ನೀಡುತ್ತದೆ. ಆದ್ದರಿಂದ, ಆಯುರ್ವೇದವು ಇದನ್ನು ಅಪಾರ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎಂದು ಹೇಳುತ್ತದೆ. ಶುದ್ಧ ತುಪ್ಪದೊಂದಿಗೆ ಸಜ್ಜೆ ರೊಟ್ಟಿಗಳು ರಾಜಸ್ಥಾನ ಸೇರಿದಂತೆ ದೇಶದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ಇನ್ನೂ ಜನಪ್ರಿಯ ಆಯ್ಕೆಯಾಗಿದೆ.

ಬಾಜ್ರ ಅಥವಾ ಸಜ್ಜೆ ರೊಟ್ಟಿಯ ಪ್ರಯೋಜನಗಳು

ಸಜ್ಜೆ ದೇಹಕ್ಕೆ ಒಂದು ವರದಾನವಾಗಿದ್ದು, ಇದರಲ್ಲಿ ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು , ಫೈಬರ್ , ಫ್ಯಾಟ್ , ಕ್ಯಾಲ್ಸಿಯಂ , ಐರನ್, ಮೆಗ್ನೀಸಿಯಮ್, ಸಲ್ಫರ್, ಪೊಟ್ಯಾಸಿಯಮ್, ಸೋಡಿಯಂ, ಜಿಂಕ್, ವಿಟಮಿನ್ ಬಿ 1, ಬಿ 2, ಬಿ 3 ಮತ್ತು ಫೋಲೇಟ್‌ನಂತಹ ಅನೇಕ ಪೋಷಕಾಂಶಗಳಿವೆ.

ಇದನ್ನೂ ಓದಿ: ಬಿಡುವಿಲ್ಲದ ಜೀವನದಲ್ಲಿ ಫಿಟ್ ಅಂಡ್ ಫೈನ್ ಆಗಿರುವುದು ಹೇಗೆ? ಈ ಚಟುವಟಿಕೆಗಳಿಗೆ ಬಾಬಾ ರಾಮದೇವ್ ಶಿಫಾರಸು

ಗೋಧಿಗಿಂತ ಸಜ್ಜೆ ಮತ್ತು ರಾಗಿ ಏಕೆ ಉತ್ತಮ?

ಹೆಚ್ಚಿನ ಭಾರತೀಯರು ಪ್ರತಿದಿನ ಗೋಧಿ ಚಪಾತಿ ಮತ್ತು ಅನ್ನವನ್ನು ತಿನ್ನುತ್ತಾರೆ. ಜೈಪುರ ಮೂಲದ ಆಯುರ್ವೇದ ತಜ್ಞ ಕಿರಣ್ ಗುಪ್ತಾ ಅವರು ಗೋಧಿ ಚಪಾತಿ ಹಾನಿಕಾರಕವಲ್ಲದಿದ್ದರೂ, ಅದು ಪ್ರಯೋಜನಕಾರಿಯೂ ಅಲ್ಲ ಎಂದು ಹೇಳಿದ್ದಾರೆ. ಮತ್ತೊಂದೆಡೆ, ಸಜ್ಜೆ ಹಿಟ್ಟು ಫೈಬರ್‌ನಲ್ಲಿ ಸಮೃದ್ಧವಾಗಿದೆ, ಇದು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.

ಸಜ್ಜೆ ಮತ್ತು ರಾಗಿ ಹಿಟ್ಟು ಮಿಶ್ರಿತ ರೊಟ್ಟಿ ಬಗ್ಗೆ ಬಾಬಾ ರಾಮದೇವ್ ವಿವರಣೆ

ಬಾಬಾ ರಾಮದೇವ್ ಅವರು ವಿಡಿಯೋದಲ್ಲಿ ಸಜ್ಜೆ ಮತ್ತು ರಾಗಿ ಹಿಟ್ಟನ್ನು ಬೆರೆಸುವುದರಿಂದ ಎರಡು ಪಟ್ಟು ಪ್ರಯೋಜನ ಸಿಗುತ್ತದೆ ಎಂದು ವಿವರಿಸಿದ್ದಾರೆ. ಸಂಧಿವಾತ ಅಥವಾ ಬೊಜ್ಜು ಇರುವ ಯಾರಾದರೂ ಸಜ್ಜೆ ಮತ್ತು ರಾಗಿಯನ್ನು ಒಟ್ಟಿಗೆ ತಿನ್ನಬೇಕು ಎಂದು ಅವರು ಹೇಳುತ್ತಾರೆ. ಈ ಎರಡು ಧಾನ್ಯಗಳ ಹಿಟ್ಟನ್ನು ಬೆರೆಸಿ ತಯಾರಿಸಿದ ರೊಟ್ಟಿ ಮೃದುವಾಗುತ್ತದೆ. ಕುತೂಹಲ ಎಂದರೆ ಸಜ್ಜೆ ರೊಟ್ಟಿ ಮತ್ತು ರಾಗಿ ರೊಟ್ಟಿ ಪ್ರತ್ಯೇಕವಾಗಿ ತಯಾರಿಸಿದಾಗ ಗಟ್ಟಿಯಾಗಿರುತ್ತವೆ. ಆದರೆ, ಎರಡೂ ಹಿಟ್ಟನ್ನು ಬೆರೆಸಿ ರೊಟ್ಟಿ ತಯಾರಿಸಿದಾಗ ಮೃದುವಾಗಿರುತ್ತದೆ ಮತ್ತು ಹೆಚ್ಚು ರುಚಿಕರವಾಗಿರುತ್ತವೆ. ರಾಗಿ ಮತ್ತು ಸಜ್ಜೆ ಕಡಿಮೆ ಪಿಷ್ಟವನ್ನು (ಸ್ಟಾರ್ಚ್) ಹೊಂದಿರುತ್ತವೆ ಮತ್ತು ನೈಸರ್ಗಿಕ ಸಿಹಿ ಹೊಂದಿರುತ್ತವೆ. ಇದು ವಾತ ಸಂಬಂಧಿ ರೋಗಗಳನ್ನು ಕಡಿಮೆ ಮಾಡಲು ಮತ್ತು ತೂಕ ಕಡಿಮೆ ಮಾಡಲು ಪರಿಣಾಮಕಾರಿಯಾಗಿದೆ ಎಂದು ಬಾಬಾ ಹೇಳುತ್ತಾರೆ.

ಬಾಬಾ ರಾಮದೇವ್ ಅವರ ವಿಡಿಯೋ

ಅಲೋವೆರಾ ಪಲ್ಯದೊಂದಿಗೆ ರೊಟ್ಟಿ

ಅಲೋವೆರಾ , ಮೆಂತ್ಯ ಮೊಳಕೆ ಮತ್ತು ಹಸಿ ಅರಿಶಿನದಿಂದ ತಯಾರಿಸಿದ ಪಲ್ಯವನ್ನು ರಾಗಿ ಮತ್ತು ಸಜ್ಜೆ ರೊಟ್ಟಿಯೊಂದಿಗೆ ತಿನ್ನಲು ಬಾಬಾ ಶಿಫಾರಸು ಮಾಡುತ್ತಾರೆ. ಈ ಪಲ್ಯವನ್ನು ತಯಾರಿಸುವ ವಿಧಾನ ಇಂತಿದೆ: ಮೊದಲಿಗೆ 200 ಗ್ರಾಂ ಅಲೋವೆರಾ ಜೆಲ್, 20 ಗ್ರಾಂ ಮೆಂತ್ಯ ಮೊಳಕೆ ಮತ್ತು 10 ಗ್ರಾಂ ಹಸಿ ಅರಿಶಿನವನ್ನು ತೆಗೆದುಕೊಳ್ಳಬೇಕು. ಇವುಗಳಿಂದ ಪಲ್ಯ ತಯಾರಿಸಬೇಕು. ರಾಗಿ, ಸಜ್ಜೆ ಮಿಶ್ರಿತ ರೊಟ್ಟಿಯನ್ನು ಈ ಪಲ್ಯದೊಂದಿಗೆ ತಿನ್ನುವುದೇ ಅದ್ಭುತ. ಈ ಖಾದ್ಯ ತಿಂದವರಲ್ಲಿ ಶೇ. 99 ಮಂದಿಗೆ ಸಂಧಿವಾತ ಅಥವಾ ಆರ್ಥ್ರೈಟಿಸ್ ಸಮಸ್ಯೆ ಕಡಿಮೆ ಆಗುತ್ತದೆ ಎನ್ನುತ್ತಾರೆ ಪತಂಜಲಿ ಸಂಸ್ಥಾಪಕರು.​​​​​​​​​​​​​​

ಇದನ್ನೂ ಓದಿ: ದೇಹಕ್ಕೆ ಶಕ್ತಿ, ಉತ್ಸಾಹ ಕೊಡುವ 3 ಯೋಗಾಸನಗಳು: ಬಾಬಾ ರಾಮದೇವ್ ಸಲಹೆ

ಅಲೋವೆರಾ ಉತ್ತಮ ಔಷಧ

ಬಾಬಾ ರಾಮದೇವ್ ಅವರು ಅಲೋವೆರಾವನ್ನು ಸರ್ವರೋಗ ನಿವಾರಕ ಎಂದು ಬಣ್ಣಿಸಿದ್ದಾರೆ. ಮೆಕ್ಸಿಕನ್ನರು ಮಧುಮೇಹ, ಸಂಧಿವಾತ ಮತ್ತು ಹೊಟ್ಟೆಯ ಸಮಸ್ಯೆಗಳಿಗೆ ಅಲೋವೆರಾವನ್ನು ಬಳಸುತ್ತಿದ್ದುದನ್ನು ತಾನು ಹಿಂದೆ ಅಮೆರಿಕಕ್ಕೆ ಹೋದಾಗ ತಿಳಿದೆ. ಈ ಭಾರತೀಯ ಸಸ್ಯವನ್ನು ಶತಮಾನಗಳಿಂದ ಅಲ್ಲಿ ಔಷಧೀಯವಾಗಿ ಬಳಸಲಾಗುತ್ತಿದೆ. ಇದನ್ನು ತರಕಾರಿಯಾಗಿಯೂ ಬೇಯಿಸಿ ತಿನ್ನಬಹುದು. ಮನೆಗಳಲ್ಲಿ ತುಳಸಿ ಗಿಡಗಳ ಜೊತೆಗೆ ಅಲೋವೆರಾ ಗಿಡಗಳನ್ನೂ ನೆಡಬೇಕೆಂದು ಬಾಬಾ ರಾಮದೇವ್ ಸಲಹೆ ನೀಡುತ್ತಾರೆ.

ಇನ್ನಷ್ಟು ಲೈಫ್​ಸ್ಟೈಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 8:00 pm, Thu, 13 November 25