ಹಿಂದುಗಳ ನಂಬಿಕೆಯಂತೆ ರಕ್ಷಾ ಬಂಧನ ಹಾಗೂ ಯಜುರುಪಾಕರ್ಮ ಶ್ರಾವಣ ಮಾಸದ ಹುಣ್ಣಿಮೆಯಂದು ಆಚರಿಸುವ ಹಬ್ಬ ಆಗಿದೆ. ಈ ರಕ್ಷಾ ಬಂಧನ ದಿನಕ್ಕೆ ಭಾರತೀಯ ಪರಂಪರೆಯಲ್ಲಿ ಅನೇಕ ಕಥೆಗಳಿವೆ. ಈ ರಕ್ಷಾ ಬಂಧನ ಎಂಬ ದಿನ ಬರಲು ಹಲವು ಪುರಾವೆಗಳಿವೆ.ರಕ್ಷಾ ಬಂಧನ ದಾರದ ಗಂಟು ಎಷ್ಟು ಬಿಗಿಯಾಗಿರುತ್ತದೆಯೋ, ಅದೇ ರೀತಿ ರಕ್ಷೆ ಕಟ್ಟಿಸಿಕೊಳ್ಳುವ ಸಹೋದರ, ಕಟ್ಟುವ ಸಹೋದರಿ ಇಬ್ಬರ ಧೈರ್ಯ, ರಕ್ಷಣೆ ಎಂಬುದು ಬಲವಾದರೆ ಮಾತ್ರ ಈ ದಾರದ ಗಂಟಿಗೆ ಒಂದು ಅರ್ಥ.
ನಿಜವಾಗಿಯೂ ತಂಗಿ ಅಣ್ಣನಿಂದ ಬಯಸುವ ಉಡುಗೊರೆ ಆಕರ್ಷಿತ, ವೈಭವಿಕರಿತ , ಇಂತಹದ್ದು ಒಂದು ಕ್ಷಣ ಹೆಸರಿಗೆ.ಆದರೆ ಇದರಲ್ಲಿ ಇರುವ ಉಡುಗೊರೆಯ ಸಾರಾಂಶ ಅಣ್ಣನ ಪ್ರೀತಿ, ಅಣ್ಣನ ರಕ್ಷಣೆ ಇದುವೇ ಆಕೆಗೆ ಉಡುಗೊರೆ. ಸಹೋದರ ಸಹೋದರಿಯರಾಗಲು ಒಡಹುಟ್ಟಿಕೊಳ್ಳಬೇಕೆಂದು ಇದೆಯೇ. ಹಾಗಾದರೆ ಶ್ರೀ ಕೃಷ್ಣ ಯಾಕೆ ದ್ರೌಪತಿಯನ್ನು ಸಹೋದರಿಯಾಗಿ ಸ್ವೀಕರಿಸಿದ್ದು. ದ್ರೌಪತಿ ಏಕೆ ಶ್ರೀ ಕೃಷ್ಣನನ್ನು ರಕ್ಷಾಬಂಧನದ ರಕ್ಷೆಯಲ್ಲಿ ಕಟ್ಟಿಕೊಂಡಿದ್ದಳು. ರಕ್ತ ಸಂಬಂಧಗಳಿಂದ ಸೂಚಿಸುವ ಬಂದವಲ್ಲ ಈ ರಕ್ಷೆ. ನಮ್ಮೊಳಗೆ ಮೂಡಬೇಕು, ಸಹೋದರಿಯೂ ಸಹೋದರನ ರಕ್ಷಣೆ ಮಾಡುವ ಸಾಮರ್ಥ್ಯವನ್ನು ಸಹೋದರನ ಧೈರ್ಯದ ಮೂಲಕವೇ ಕಲಿತಿರುತ್ತಾಳೆ.
ಅಣ್ಣ ತಂಗಿಯ ಬಾಂಧವ್ಯ ಇಷ್ಟೇ ಅಲ್ಲವೇ, ಯಾವುದೇ ಹೊಡೆದಾಟ ಬಡಿದಾಟ ಆಗಿದ್ದರು, ತುಸುಕ್ಷಣ ಮಾತ್ರದಲ್ಲಿ ಎಲ್ಲವನ್ನು ಮರೆತು ಏನು ಆಗಲಿಲ್ಲವೇನೋ ಎಂಬಂತೆ ಇರುತ್ತಾರೆ. ತಮ್ಮೊಳಗೆ ಏನೇ ಗೊಂದಲಗಳಿದ್ದರೂ ಮನೆಯವರವರೆಗೂ ತಲುಪದೇ ತಮ್ಮೊಳಗೆ ಆ ಸರಿ ತಪ್ಪುಗಳನ್ನು ತಿದ್ದಿಕೊಳ್ಳುತ್ತಾ ಒಬ್ಬರಿಗೊಬ್ಬರು ಬುದ್ಧಿ ಹೇಳುತ್ತ, ಕಷ್ಟ -ಸುಖದಲ್ಲಿ ಭಾಗಿಯಾಗುತ್ತಾ, ಸಹೋದರ ಸಹೋದರಿ ಇಬ್ಬರೂ ರಕ್ಷಕರಾಗಿ ಇರುತ್ತಾರೆ.
ಇದನ್ನೂ ಓದಿ: ಇಲ್ಲಿ ರಕ್ತ ಸಂಬಂಧಕ್ಕೆ ಬೆಲೆಯಿಲ್ಲ ಅಣ್ಣನೊಂದಿಗೆ ತಂಗಿಯ ಮದುವೆ , ಏನಿದು ವಿಚಿತ್ರ ಸಂಪ್ರದಾಯ?
ಸಮಾಜದಲ್ಲಿ ಎಲ್ಲೇ ಏನೇ ಆದರೂ ಧೈರ್ಯವಾಗಿ ಇರಬಲ್ಲೆ, ಎಂದು ಒಬ್ಬ ಹೆಣ್ಣು ಹೇಳಿಕೊಳ್ಳಬಹುದಿತ್ತು ಯಾಕೆಂದರೆ ನನ್ನ ಸುತ್ತಮುತ್ತ ನನ್ನ ಸಹೋದರರು ಇರುವರು. ನಾನು ಅವರ ಸಹೋದರಿಯಂತೆ ಎಂದು. ಆದರೆ ಪ್ರಸ್ತುತ ನಡೆಯುತ್ತಿರುವ ವಿಚಾರವೇ ಬೇರೆಯಾಗಿದೆ. ತನ್ನ ಕಣ್ಣೆದುರೇ ಹೆಣ್ಣಿಗೆ ಅನ್ಯಾಯ ನಡೆಯುತ್ತಿದ್ದರು ನಮ್ಮ ಮನೆ ಮಗಳು ಅಲ್ಲ ಎಂಬ ಆಲೋಚನೆಯು ಅವರಲ್ಲಿ ಬೆಳೆದಿದೆ. ಏನೇ ನಡೆದಿದ್ದರೂ ಆ ಹೆಣ್ಣಿನ ತಪ್ಪಿರಬೇಕು,ಆ ಹೆಣ್ಣು ಹಾಗೆ, ಆ ಹೆಣ್ಣು ಹೀಗೆ ಎಂಬ ಮಾತುಗಳು ಉಳಿದುಬಿಡುತ್ತದೆ. ಹೊರತು,ಸಹೋದರಿ ನಮ್ಮ ಮನೆ ಮಗಳಿಗೆ ತೊಂದರೆಯಾಗುತ್ತಿದೆ, ನನ್ನಿಂದ ಆಕೆಗೆ ರಕ್ಷಣೆ ಬೇಕಿದೆ ಎಂಬ ಆಲೋಚಿಸುವ ಸಹೋದರರು ಒಂದು – ಎರಡು ಅಷ್ಟೇ. ಈ ರಕ್ಷಾ ಬಂಧನದಲ್ಲಿ ಕಟ್ಟುವ ನೂಲಿನ ದಾರ ಕೇವಲ ದಾರವಲ್ಲ, ಬಿಗಿಯಾಗಿ ಕಟ್ಟಿರುವ ಈ ಗಂಟು ತನ್ನ ರಕ್ಷಣಾ ಸಾಮರ್ಥ್ಯವನ್ನು ಹೇಳುತ್ತದೆ. ರಕ್ಷಾಬಂಧನದ ಬಂಧವು ನಿನ್ನಿಂದ ಕೊಡುವ ರಕ್ಷಣೆ ನೀ ಕೊಡು , ನಿನ್ನವರೇ ಅವರು ಎಂಬ ಭಾವನೆಯನ್ನು ಸಾರುವ ದಾರ ಇದು.
ಲೇಖನ: ಸುಮನಾ, ಬಾಯರು
ಹೆಚ್ಚಿನ ಜೀವನಶೈಲಿ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 2:45 pm, Sun, 18 August 24