ರಕ್ಷಾ ಬಂಧನ
Image Credit source: Getty Images
ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಅಂದರೆ ನೂಲ ಹುಣ್ಣಿಮೆಯ ದಿನದಂದು ರಕ್ಷಾ ಬಂಧನ (Raksha Bandhan) ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸಹೋದರ ಸಹೋದರಿಯ ನಡುವಿನ ಬೆಸುಗೆ, ಬಂಧವನ್ನು ಬಲಪಡಿಸುವ ಶ್ರೇಷ್ಠ ಹಬ್ಬವಾಗಿದೆ. ಈ ದಿನ ಸಹೋದರಿಯರು ತಮ್ಮ ಸಹೋದರ ಕೈಗೆ ರಾಖಿ ಕಟ್ಟಿ, ಹಣೆಗೆ ತಿಲಕ ಹಚ್ಚಿ ಅವರ ದೀರ್ಘಾಯುಷ್ಯ, ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರೆ, ಸಹೋದರರು ತಮ್ಮ ಎಂತಹದ್ದೇ ಪರಿಸ್ಥಿತಿಯಲ್ಲೂ ಸಹೋದರಿಯನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ. ಈ ಬಾರಿ ಆಗಸ್ಟ್ 09 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ರೀತಿಯಾಗಿ ನಿಮ್ಮ ಪ್ರೀತಿಪಾತ್ರರಿಗೆ ಸಂದೇಶಗಳನ್ನು (- Raksha Bandhan Wishes) ಕಳುಹಿಸಿ ಹಬ್ಬವನ್ನು ವಿಶೇಷವಾಗಿ ಆಚರಿಸಿ.
ರಕ್ಷಾ ಬಂಧನ ಹಬ್ಬದ ಶುಭ ಸಂದೇಶಗಳು:
- ಅಣ್ಣ ತಂಗಿಯರ ಈ ಬಂಧ, ಜನು ಜನುಮದ ಅನುಬಂಧ. ನನ್ನ ಪ್ರೀತಿಯ ಅಣ್ಣಂದಿಯರಿಗೆ ರಕ್ಷಾಬಂಧನ ಹಬ್ಬದ ಶುಭಾಶಯಗಳು.
- ಅಣ್ಣ ಎಂದರೆ ಬದುಕಿಗೆ ರಕ್ಷೆ, ದಾರಿ ದೀಪ. ನನ್ನ ಪ್ರೀತಿಯ ಅಣ್ಣನಿಗೆ ಈ ನಿನ್ನ ಮುದ್ದಿನ ತಂಗಿಯ ಕಡೆಯಿಂದ ರಕ್ಷಾ ಬಂಧನದ ಶುಭಾಶಯ.
- ನನ್ನ ನಗು ನೀನು, ನನ್ನ ಖುಷಿ ನೀನು, ನನ್ನೆಲ್ಲಾ ಆಯಸ್ಸು ನಿನ್ನದಾಗಲಿ. ನನ್ನ ಮುದ್ದಿನ ತಂಗಿಗೆ ರಕ್ಷಾಬಂಧನ ಶುಭಾಶಯಗಳು.
- ಒಡ ಹುಟ್ಟಿದವರು ಮಾತ್ರ ಅಣ್ಣತಂಗಿಯಲ್ಲ. ಮನಸ್ಸಿನ ಭಾವನೆಯಿಂದ ಕರೆಯುವ ಪ್ರತಿಯೊಬ್ಬರೂ ಅಣ್ಣ ತಂಗಿಯೇ. ನನ್ನೆಲ್ಲಾ ಸಹೋದರ-ಸಹೋದರಿಯರಿಗೂ ರಕ್ಷಾ ಬಂಧನದ ಶುಭಾಶಯಗಳು.
- ಕಷ್ಟ-ಸುಖ ಹಂಚಿಕೊಳ್ಳಲು ಅಕ್ಕ ತಂಗಿ ಇರಬೇಕು. ಏನೇ ಕಷ್ಟ ಎದುರಾಗಲಿ ನಾನಿದ್ದೀನಿ ಎಂದು ಧೈರ್ಯ ತುಂಬುವುದಕ್ಕೆ ಅಣ್ಣ ತಮ್ಮ ಇರಬೇಕು. ಅಣ್ಣ-ತಂಗಿಯರ ಹಬ್ಬವಾದ ರಕ್ಷಾ ಬಂಧನದ ಶುಭಾಶಯಗಳು.
- ನಿನ್ನಂತ ಸಹೋದರಿಯನ್ನು ಪಡೆದ ನಾನೇ ಧನ್ಯ. ಪ್ರತಿಯೊಂದು ಹೆಜ್ಜೆಯಲ್ಲೂ ನನ್ನ ಬೆನ್ನೆಲುಬಾಗಿ ನಿಂತ, ತಾಯಿಯಂತೆ ನನ್ನನ್ನು ಸಲುಹಿದ ತನ್ನ ಪ್ರೀತಿಯ ಅಕ್ಕನಿಗೆ ರಕ್ಷಾ ಬಂಧನದ ಶುಭಾಶಯ.
- ನನ್ನ ಮುದ್ದಿನ ಕೂಸು ನೀನು, ನಿನ್ನನ್ನು ಕಾಪಾಡುವ ಕಣ್ ನಾನು. ನನ್ನ ಮುದ್ದು ತಂಗಿಗೆ ಅಣ್ಣ-ತಂಗಿಯರ ಹಬ್ಬದ ಶುಭಾಶಯ.
- ತಾಯಿಯಂತೆ ನನ್ನನ್ನು ಕಾಳಜಿ ವಹಿಸಿದ್ದಕ್ಕಾಗಿ, ನಾನು ಎಷ್ಟೇ ನೋವು ಕೊಟ್ಟರೂ ನನಗೆ ನಿಷ್ಕಲ್ಮಶ ಪ್ರೀತಿಯನ್ನು ತೋರಿದ್ದಕ್ಕಾಗಿ ಧನ್ಯವಾದ. ಹ್ಯಾಪಿ ರಕ್ಷಾ ಬಂಧನ.
- ಓ ನನ್ನ ಪ್ರೀತಿಯ ಅಣ್ಣ… ನಾನು ನಿನ್ನ ಜೊತೆ ಎಷ್ಟೇ ಕಿತ್ತಾಡಿದರೂ, ಕೋಪ ಮಾಡಿಕೊಂಡರೂ ನೀನೇ ನನ್ನ ಪ್ರಪಂಚ. ನನ್ನೆಲ್ಲಾ ಆಸೆ, ಆಕಾಂಕ್ಷೆಯನ್ನು ಈಡೇರಿಸಿದ ನನ್ನ ಪ್ರೀತಿಯ ಅಣ್ಣನಿಗೆ ರಕ್ಷಾ ಬಂಧನದ ಶುಭಾಶಯ.
ಇದನ್ನೂ ಓದಿ: ರಕ್ಷಾ ಬಂಧನದ ದಿನ ಹೆಣ್ಮಕ್ಕಳು ಸಹೋದರರಿಗಷ್ಟೇ ಅಲ್ಲ, ಯಾರಿಗೆಲ್ಲಾ ರಾಖಿ ಕಟ್ಟಬಹುದು?
- ನನ್ನ ನಗು ನೀನು, ನನ್ನ ಖುಷಿ ನೀನು, ನನ್ನೆಲ್ಲಾ ಆಯಸ್ಸು ನಿನ್ನದಾಗಲಿ. ಅಣ್ಣ-ತಂಗಿಯರ ದಿನದ ಶುಭಾಶಯಗಳು.
- ಹುಟ್ಟಿನಿಂದಲೇ ಬೆಸದ ಸಂಬಂಧವಿದು, ರಾಖಿ ಸೂತ್ರವು ಅದನು ಬಲಪಡಿಸುವುದು. ಹ್ಯಾಪಿ ರಕ್ಷಾ ಬಂಧನ.
- ಅಣ್ಣ ಎಂದರೆ ಅನುದಿನವೂ ಸ್ವರ್ಗ. ನನ್ನೆಲ್ಲಾ ಅಕ್ಕರೆಯ ಅಣ್ಣಂದಿರಿಗೆ ರಕ್ಷಾ ಬಂಧನದ ಶುಭಾಶಯ. ನಿಮ್ಮ ಶ್ರೀರಕ್ಷೆ ಸದಾ ಈ ಮುದ್ದು ತಂಗಿಯ ಮೇಲಿರಲಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ