ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಲವಂಗ ಮುಂತಾದ ಮಸಾಲೆಗಳನ್ನು ಒಳಗೊಂಡ ಚಹಾವನ್ನು ನೀವು ಈಗಾಗಲೇ ಸವಿದಿರುತ್ತೀರಿ. ಆದರೆ ಇತ್ತೀಚೆಗೆ ಸಾಮಾಜಿಕ ಜಾಲತಾಣ(Social Media) ದಲ್ಲಿ ರಸಗುಲ್ಲಾ ಚಹಾ(Rasgulla Chai) ಸಕ್ಕತ್ತ್ ಆಗಿ ವೈರಲ್ ಆಗ್ತಾ ಇದೆ. ಇತ್ತೀಚೆಗೆ, ನಟ ಆಶಿಶ್ ವಿದ್ಯಾರ್ಥಿ ಮೊದಲ ಬಾರಿಗೆ ಈ ವಿಶಿಷ್ಟ ಚಹಾವನ್ನು ಪ್ರಯತ್ನಿಸಿದ್ದು, ಸಾಮಾಜಿಕಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಯೋಗಾಸನ ಮಾಡಲು ಹೋಗಿ ನದಿಗೆ ಬಿದ್ದ ಮಹಿಳೆ, ಹಳೆಯ ವಿಡಿಯೋ ಮತ್ತೆ ವೈರಲ್
ವೀಡಿಯೊದಲ್ಲಿ, ಕೋಲ್ಕತ್ತಾದ ಅಂಗಡಿಯೊಂದರಲ್ಲಿ ವ್ಯಕ್ತಿಯೊಬ್ಬರು ರಸಗುಲ್ಲಾ ಚಹಾ ತಯಾರಿಸುವುದನ್ನು ಕಾಣಬಹುದು. ಕುದಿಯುತ್ತಿರುವ ಚಹಾಕ್ಕೆ ಪುಡಿಮಾಡಿದ ಶುಂಠಿ, ನಂತರ ಮಣ್ಣಿನ ಲೋಟದಲ್ಲಿ ರಸಗುಲ್ಲಾದ ಮೇಲೆ ಚಹಾವನ್ನು ಸುರಿಯುವುದನ್ನು ಕಾಣಬಹುದು. ನೋಡಲು ಮಟ್ಕಾ ಚಹಾದಂತೆಯೇ ಇದೆ. ರಸಗುಲ್ಲಾ ಚಹಾದಲ್ಲಿ ಸಂಪೂರ್ಣವಾಗಿ ನೆನೆಸಲಾಗುತ್ತದೆ. ನೀವು ಒಮ್ಮೆ ಈ ಚಹಾವನ್ನು ಸವಿಯಲೇ ಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ವೀಡಿಯೊ 343ಸಾವಿರ ವೀಕ್ಷಣೆಗಳು, 35.1ಸಾವಿರ ಲೈಕ್ಸ್ ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ಜನ ಪ್ರತಿಕ್ರಿಯಿಸಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:58 pm, Sun, 26 February 23