ಆನ್ಲೈನ್​​​ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದೀರಾ? ಗೊತ್ತಿಲ್ಲದೇ ನಿಮ್ಮ ಜೇಬಿಗೆ ಬೀಳುತ್ತಿದೆ ಕತ್ತರಿ, ವರದಿಯಲ್ಲಿ ಬಹಿರಂಗ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 21, 2024 | 3:58 PM

ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ, ಕುಳಿತಲ್ಲಿಂದಲೇ ಏನು ಬೇಕಾದರೂ ಬುಕ್ ಮಾಡುವ ಕಾಲ ಘಟ್ಟದಲ್ಲಿದ್ದೇವೆ. ಹೀಗಾಗಿ ಆನ್‌ಲೈನ್‌ ನಲ್ಲಿ ಬುಕ್ ಮಾಡಿದರೆ ಕ್ಷಣಾರ್ಧದಲ್ಲಿಯೇ ಎಲ್ಲವೂ ಮನೆ ಬಾಗಿಲಿಗೆ ಬರುತ್ತದೆ. ನಗರ ಪ್ರದೇಶಗಳ ಜನರಿಗೆ ಈ ಆನ್ಲೈನ್ ಅಪ್ಲಿಕೇಶನ್ ಗಳು ತಮ್ಮ ಕೆಲಸವನ್ನು ಸುಲಭ ಮಾಡಿದೆ. ಆದರೆ ಫುಡ್ ಡೆಲಿವರಿ ಅಪ್ಲಿಕೇಶನ್ ಗಳು ಹೆಚ್ಚುವರಿ ಶುಲ್ಕಗಳು ಹಾಕುವ ಮೂಲಕ ಹೆಚ್ಚು ಹಣವನ್ನು ವಸೂಲಿ ಮಾಡುತ್ತಿದೆ. ಒಬ್ಬ ವ್ಯಕ್ತಿಯಿಂದ ಆತನಿಗೆ ಗೊತ್ತಿಲ್ಲದಂತೆ ವಾರ್ಷಿಕವಾಗಿ ಹನ್ನೆರಡು ಸಾವಿರ ರೂಪಾಯಿ ಹಣವನ್ನು ವಸೂಲಿ ಮಾಡುತ್ತಿದೆ ಎನ್ನುವುದು ವರದಿಯಲ್ಲಿ ಬಹಿರಂಗವಾಗಿದೆ.

ಆನ್ಲೈನ್​​​ನಲ್ಲಿ ಫುಡ್ ಆರ್ಡರ್ ಮಾಡುತ್ತಿದ್ದೀರಾ? ಗೊತ್ತಿಲ್ಲದೇ ನಿಮ್ಮ ಜೇಬಿಗೆ ಬೀಳುತ್ತಿದೆ ಕತ್ತರಿ, ವರದಿಯಲ್ಲಿ ಬಹಿರಂಗ
ಸಾಂದರ್ಭಿಕ ಚಿತ್ರ
Follow us on

ಇತ್ತೀಚೆಗಿನ ದಿನಗಳಲ್ಲಿ ಆನ್ಲೈನ್ ಶಾಪಿಂಗ್ ಸರ್ವೇ ಸಾಮಾನ್ಯವಾಗಿದೆ. ಈಗಿನ ಕಾಲದಲ್ಲಿ ಯಾರಿಗೂ ಸಮಯವಿಲ್ಲ, ಆಹಾರದಿಂದ ಹಿಡಿದು ಪ್ರತಿಯೊಂದು ವಸ್ತುಗಳನ್ನು ಆನ್ಲೈನ್ ನಲ್ಲೇ ಆರ್ಡರ್ ಮಾಡುತ್ತಾರೆ. ಆದರೆ ರೆಸ್ಟೋರೆಂಟ್‌ಗಳಿಂದ ನೇರವಾಗಿ ಅದೇ ಆಹಾರವನ್ನು ಆರ್ಡರ್ ಮಾಡುವುದಕ್ಕೆ ಹೋಲಿಸಿದರೆ, ಮನೆಯಲ್ಲೇ ಆರ್ಡರ್ ಮಾಡಲು ಅಪ್ಲಿಕೇಶನ್‌ಗಳನ್ನು ಬಳಸುವುದರಿಂದ ಭಾರತೀಯ ಮನೆಗಳಲ್ಲಿನ ಗ್ರಾಹಕರ ವೆಚ್ಚವನ್ನು ಹೆಚ್ಚಿಸುತ್ತದೆ ಎಂದು ವರದಿಯಲ್ಲಿ ತಿಳಿಸಿದೆ.

ಇತ್ತೀಚೆಗಷ್ಟೇ ಸಂಯೋಜಿತ ಮಾರ್ಕೆಟಿಂಗ್ ಏಜೆನ್ಸಿಯಾದ ದಿ ಮೇವರಿಕ್ಸ್ ಇಂಡಿಯಾದ ‘ಫುಡ್ ಡೆಲಿವರಿ ಅನ್‌ರ್ಯಾಪ್ಡ್: ಭಾರತದ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳ ಮೇಲಿನ ಗೌಪ್ಯ ವೆಚ್ಚಗಳನ್ನು ಬಹಿರಂಗಪಡಿಸುವುದು’ ಎಂಬ ಶೀರ್ಷಿಕೆಯಡಿ, ಸಂಶೋಧನಾ ವರದಿಯಲ್ಲಿ ಕೆಲವು ಅಚ್ಚರಿಕಾರಿ ವಿಷಯಗಳನ್ನು ಬಹಿರಂಗ ಪಡಿಸಿದೆ. ಹೌದು, ಆಗಸ್ಟ್ 21, 2024 ರಂತೆ ರೆಸ್ಟೋರೆಂಟ್‌ಗಳ ಸ್ವಂತ ಡೆಲಿವರಿ ಚಾನಲ್‌ಗಳ ಜೊತೆಗೆ ಸ್ವಿಗ್ಗಿ, ಜೋಮ್ಯಾಟೋ ಮತ್ತು ಮ್ಯಾಜಿಕ್ ಪಿನ್ ನಲ್ಲಿನ 50 ಕ್ಕೂ ಹೆಚ್ಚು ರೆಸ್ಟೋರೆಂಟ್‌ಗಳ ಬೆಲೆ ಡೇಟಾವನ್ನು ವರದಿಯು ವಿಶ್ಲೇಷಿಸಿದೆ. ಇದು ಮೂಲ ಬೆಲೆ, ವಿತರಣಾ ಶುಲ್ಕಗಳು, ಜಿಎಸ್ ಟಿ , ಪ್ಯಾಕೇಜಿಂಗ್ ಶುಲ್ಕಗಳು ಮತ್ತು ಹೆಚ್ಚುವರಿ ಹೆಚ್ಚುವರಿ ಶುಲ್ಕಗಳನ್ನು ಒಳಗೊಂಡಿದೆ ಎಂದು ತಿಳಿಸಿದೆ.

ನೇರವಾಗಿ ರೆಸ್ಟೋರೆಂಟ್ ನಲ್ಲಿ ಆರ್ಡರ್ ಮಾಡುವ ಮೂಲಕ ಜನಪ್ರಿಯ ಆಹಾರ ವಿತರಣಾ ಅಪ್ಲಿಕೇಶನ್‌ಗಳನ್ನು ಬಳಸುವಾಗ ಗ್ರಾಹಕರು ಸರಾಸರಿ 11% ಪ್ರೀಮಿಯಂ ಪಾವತಿಸುತ್ತಾರೆ. ರೆಸ್ಟೋರೆಂಟ್ ಚಾನೆಲ್‌ಗಳಲ್ಲಿ ಇರಿಸಲಾದ ಡೆಲಿವರಿ ಆರ್ಡರ್‌ಗಳಿಗೆ ಹೋಲಿಸಿದರೆ ಅಗ್ರಿಗೇಟರ್ ಪ್ಲಾಟ್‌ಫಾರ್ಮ್‌ಗಳು ಪ್ರತಿ ಖಾದ್ಯಕ್ಕೆ ಸರಾಸರಿ 46 ರೂ ಪ್ರೀಮಿಯಂ ಅನ್ನು ಸೇರಿಸುತ್ತಾರೆ. ಅಂದರೆ ನಗರಗಳಲ್ಲಿ ವಾಸಿಸುವ ಸರಾಸರಿ ಭಾರತೀಯ ಕುಟುಂಬಕ್ಕೆ ಕನಿಷ್ಠವಾಗಿ 12,000 ಹೆಚ್ಚುವರಿ ವಾರ್ಷಿಕ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿದೆ ಎನ್ನಲಾಗಿದೆ.

ಇದನ್ನೂ ಓದಿ: ದಸರಾಕ್ಕೆ ಉತ್ತರ ಕರ್ನಾಟಕದಲ್ಲಿ ತಾಲಿಪಟ್ಟು ತಿನಿಸಿನ ಘಮ, ಇಲ್ಲಿದೆ ರೆಸಿಪಿ

ಆದರೆ ಇಲ್ಲಿ ಯಾವುದೇ ಆಪ್‌ಗಳು ನಿಮಗೆ ಯಾವುದಕ್ಕೆ ಎಷ್ಟು ಹಣ ಪಾವತಿಸುತ್ತೀರಿ ಎಂಬುವ ಬಗ್ಗೆ ವಿವರವಾದ ಮಾಹಿತಿ ನೀಡುವುದಿಲ್ಲ. ಈ ಹೆಚ್ಚುವರಿ ದರಗಳನ್ನು ಗೌಪ್ಯವಾಗಿ ಇಡಲಾಗುತ್ತದೆ. ಆಪ್‌ನಲ್ಲಿ ಬುಕಿಂಗ್ ಮಾಡಿದಾಗಿನಿಂದ ಆರಂಭವಾಗಿ ಪ್ಯಾಕೇಜಿಂಗ್‌ಗೆ 2 ರೂಪಾಯಿ ವ್ಯಯವಾಗುತ್ತದೆ. ಈಗಾಗಲೇ ಕಂಪನಿಗಳು ವಾರ್ಷಿಕವಾಗಿ 400 ಕೋಟಿ ರೂಪಾಯಿ ವ್ಯಯಿಸುತ್ತವೆ. ಅದಲ್ಲದೇ ಕಂಪನಿಗಳು, ಟೋಕನ್, ಕೂಪನ್‌ ಗಳು, ಪ್ರೀಮಿಯಂ ಚಂದಾದಾರರಿಗೆ ಹಲವು ರೀತಿಯ ಆಫರ್ ನೀಡುವ ಮೂಲಕ ಗ್ರಾಹಕರಿಗೆ ಗೊತ್ತಿಲ್ಲದೇ ವಸೂಲಿ ಮಾಡುತ್ತವೆ. ಈ ಮೂಲಕ ಒಬ್ಬ ವ್ಯಕ್ತಿಯು ವರ್ಷಕ್ಕೆ 12 ಸಾವಿರಕ್ಕೂ ಅಧಿಕ ರೂಪಾಯಿ ಖರ್ಚು ಮಾಡುತ್ತಿದ್ದಾನೆ ಎನ್ನಲಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ