ಭಾರತ ವಿಭಿನ್ನ ಸಂಸ್ಕೃತಿಗಳ ಆಗರ. ಹಾಗಾಗಿ ದೇಶ -ವಿದೇಶಗಳ ಪ್ರವಾಸಿಗರು ಭಾರತದ ವಿವಿಧ ಸ್ಥಳಗಳಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ವಿಶೇಷವೆಂದರೆ ನಮ್ಮ ಭಾರತದಲ್ಲಿ ಪ್ರತಿ ಋತುವನ್ನು ಕೂಡ ತುಂಬಾ ಚೆನ್ನಾಗಿ ಆನಂದಿಸಬಹುದಾಗಿದೆ. ಈ ಕಾರಣದಿಂದಾಗಿ, ನಮ್ಮ ದೇಶದ ಪ್ರವಾಸಿ ಸ್ಥಳಗಳಲ್ಲಿ ಯಾವಾಗಲೂ ಜನದಟ್ಟಣೆ ಇರುತ್ತದೆ. ಅದಲ್ಲದೆ ಈಗ ಮಳೆಗಾಲದ ಸಮಯವಾದ್ದರಿಂದ, ಬೆಟ್ಟ- ಗುಡ್ಡಗಳ ಸೌಂದರ್ಯವೂ ಹೆಚ್ಚಾಗಿರುತ್ತದೆ ಅಲ್ಲದೆ ಇಲ್ಲಿನ ಹವಾಮಾನವು ಬಹಳ ಆಹ್ಲಾದಕರವಾಗಿರುತ್ತದೆ. ಆದರೆ ಈ ಸಮಯದಲ್ಲಿ ತಂಪಾದ ಸ್ಥಳಗಳಿಗೆ ಹೋಗುವುದು ಸ್ವಲ್ಪ ಕಷ್ಟ. ಆದರೆ ದಸರಾ ರಜೆಯಲ್ಲಿ ನೀವು ಕೆಲವು ಸ್ಥಳಗಳಿಗೆ ಭೇಟಿ ನೀಡಬಹುದು. ಅದಕ್ಕಾಗಿ ಈಗಿನಿಂದಲೇ ಸರಿಯಾದ ತಯಾರಿ ನಡೆಸುವುದು ಬಹಳ ಸೂಕ್ತ.
ಅಕ್ಟೋಬರ್ ತಿಂಗಳಲ್ಲಿ, ಭಾರತದ ಹೆಚ್ಚಿನ ಪ್ರವಾಸಿ ತಾಣಗಳ ಸೌಂದರ್ಯ ಇಮ್ಮಡಿಗೊಂಡಿರುತ್ತದೆ. ವಾತಾವರಣವೂ ಚೆನ್ನಾಗಿರುತ್ತದೆ. ದಸರಾ ರಜಾ ದಿನಗಳನ್ನು ಅವಿಸ್ಮರಣೀಯವಾಗಿಸಲು, ನೆನಪುಗಳ ಬುತ್ತಿ ಕಟ್ಟಿಕೊಳ್ಳಲು ಕೆಲವು ಸ್ಥಳಗಳಿಗೆ ಹೋಗಿ ಬನ್ನಿ. ಹಾಗಾದರೆ ಯಾವ ಸ್ಥಳಗಳಿಗೆ ಹೋಗಿ ಬರುವುದು ಒಳ್ಳೆಯದು? ಕರ್ನಾಟಕದಲ್ಲಿ ಯಾವ ಸ್ಥಳಗಳಿಗೆ ಹೋಗಬಹುದು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.
ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣ ಎಂದೂ ಘೋಷಿಸಿದೆ. ಇಲ್ಲಿ ರಾಜರ ಕಾಲದಲ್ಲಿ ನಿರ್ಮಿಸಲಾದ ಪ್ರಾಚೀನ ಕಟ್ಟಡಗಳ ವಾಸ್ತುಶಿಲ್ಪವು ಬಹಳ ಅದ್ಭುತವಾಗಿದೆ. ಸೆಪ್ಟೆಂಬರ್- ಅಕ್ಟೋಬರ್ ನಲ್ಲಿ ದಕ್ಷಿಣ ಭಾರತದ ಈ ಸ್ಥಳಕ್ಕೆ ಭೇಟಿ ನೀಡುವುದು ಉತ್ತಮ. ಹಂಪಿಯಲ್ಲಿರುವ ಐತಿಹಾಸಿಕ ಸ್ಮಾರಕಗಳು ಇತಿಹಾಸವನ್ನು ಹೇಳುತ್ತವೆ.
ಇದರ ಹೊರತಾಗಿ ನೀವು ಕರ್ನಾಟಕದಲ್ಲಿ ಮಂಗಳೂರಿಗೆ ಭೇಟಿ ನೀಡಬಹುದು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಹಾಗೂ ಮಂಗಳಾದೇವಿ ದೇವಸ್ಥಾನದಲ್ಲಿನಡೆಯುವ ನವರಾತ್ರಿ ವೈಭವವನ್ನು ಕಣ್ಣುತುಂಬಿಕೊಳ್ಳಬಹುದಾಗಿದೆ. ಇಲ್ಲಿ ಸುತ್ತ ಮುತ್ತ ಅನೇಕ ಸ್ಥಳಗಳಿದ್ದು ಅವುಗಳನ್ನು ಕೂಡ ನೋಡಬಹುದಾಗಿದೆ.
ಶಿರಸಿ ತಾಲೂಕಿನ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಉತ್ಸವ ನಡೆಯುತ್ತದೆ ಇಲ್ಲಿಗೆ ಭೇಟಿ ನೀಡಿ ಆ ಬಳಿಕ ಸಮೀಪದ ತಾಣಗಳಾದ ಕಾರವಾರದ ಕಡಲ ತೀರಗಳು, ಯಾಣ, ಉಂಚಳ್ಳಿ ಜಲಪಾತ, ಬನವಾಸಿ ಇತ್ಯಾದಿ ಸ್ಥಳಗಳಿಗೆ ಭೇಟಿ ನೀಡಬಹುದು.
ಕಾಶ್ಮೀರದ ಸೌಂದರ್ಯವನ್ನು ವಿಭಿನ್ನ ರೀತಿಯಲ್ಲಿ ಬಣ್ಣಿಸಲಾಗಿದೆ. ಇದು ಭಾರತದ ಒಂದು ಸುಂದರವಾದ ಸ್ಥಳ ಎಂದರೆ ತಪ್ಪಾಗಲಾರದು. ಒಮ್ಮೆ ನೀವು ಕಾಶ್ಮೀರಕ್ಕೆ ಭೇಟಿ ನೀಡಿದರೆ, ನಿಮಗೆ ಹಿಂತಿರುಗಲು ಮನಸ್ಸಾಗುವುದಿಲ್ಲ. ಅದರಲ್ಲಿಯೂ ಅಕ್ಟೋಬರ್ ನಲ್ಲಿ ಈ ಸ್ಥಳವು ಇನ್ನಷ್ಟು ಸುಂದರವಾಗಿ ಕಾಣುತ್ತದೆ. ಆದ್ದರಿಂದ ದಸರಾದ ರಜಾದಿನಗಳಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಬಹುದು.
ಇದನ್ನೂ ಓದಿ: ದಸರಾ ಸಮಯದಲ್ಲಿ ಆನೆಗಳಿಗೆ ಯಾವ ರೀತಿಯ ಆಹಾರ ನೀಡಲಾಗುತ್ತದೆ ಗೊತ್ತಾ?
ಗಂಗಾ ನದಿಯ ದಡದಲ್ಲಿರುವ ಋಷಿಕೇಶವನ್ನು ಭಾರತದ ಯೋಗ ನಗರ ಎಂದೂ ಕರೆಯಲಾಗುತ್ತದೆ. ಇಲ್ಲಿ ಅನೇಕ ಧಾರ್ಮಿಕ ಸ್ಥಳಗಳಿವೆ. ಅದರಲ್ಲಿಯೂ ಋಷಿಕೇಶ ಪರ್ವತಗಳ ನಡುವೆ ಇರುವ ಆಕರ್ಷಕ ಪ್ರವಾಸಿ ತಾಣವಾಗಿದೆ. ಮಳೆಗಾಲದ ನಂತರ ಈ ಸ್ಥಳ ಒಂದು ರೀತಿಯ ಭೂಮಿಯ ಮೇಲಿನ ಸ್ವರ್ಗವಾಗಿದೆ.
ಕೇರಳವು ಭಾರತದ ಅತ್ಯಂತ ಸುಂದರವಾದ ರಾಜ್ಯಗಳಲ್ಲಿ ಒಂದಾಗಿದೆ. ಚಹಾ ತೋಟಗಳು, ಕಡಲತೀರಗಳು ಮತ್ತು ಹಸಿರಿನಿಂದ ತುಂಬಿರುವ ಸ್ವರ್ಗವಾಗಿದೆ. ಅಲ್ಲದೆ ಕೇರಳದ ಅತ್ಯಂತ ಪ್ರಸಿದ್ಧ ಸ್ಥಳವಾದ ಮುನ್ನಾರ್ ಗೆ ಭೇಟಿ ನೀಡಬಹುದು. ನಿಮಗೆ ಕಡಲತೀರದ ಪ್ರಶಾಂತತೆ ಮತ್ತು ನೈಸರ್ಗಿಕ ಸೌಂದರ್ಯ ಎರಡೂ ಇಲ್ಲಿ ಸಿಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ