AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mysore Dasara 2024: ದಸರಾ ಸಮಯದಲ್ಲಿ ಆನೆಗಳಿಗೆ ಯಾವ ರೀತಿಯ ಆಹಾರ ನೀಡಲಾಗುತ್ತದೆ ಗೊತ್ತಾ?

ದಸರಾ ಸಮಯದಲ್ಲಿ ಆನೆಗಳ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಕಾಡಿನಲ್ಲಾದರೆ ಅವುಗಳಿಗೆ ಯಾವ ರೀತಿಯ ಆಹಾರಗಳು ಬೇಕು ಎಂಬುದನ್ನು ಅವುಗಳೇ ಆಯ್ಕೆ ಮಾಡಿ ತಿನ್ನುತ್ತವೆ. ಆದರೆ ಇಲ್ಲಿ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವುಗಳ ದೇಹಕ್ಕೆ ಯಾವ ರೀತಿಯ ಆಹಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡು ವೈದ್ಯರ ಸಲಹೆಯನುಸಾರ ಅವುಗಳಿಗೆ ಪೌಷ್ಠಿಕ ಆಹಾರವನ್ನು ಇಲಾಖೆಯಿಂದ ನೀಡಲಾಗುತ್ತದೆ. ಹಾಗಾದರೆ ಆನೆಗಳು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತದೆ? ಪೌಷ್ಠಿಕ ಆಹಾರ ಹೇಗೆ ತಯಾರಾಗುತ್ತದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Mysore Dasara 2024: ದಸರಾ ಸಮಯದಲ್ಲಿ ಆನೆಗಳಿಗೆ ಯಾವ ರೀತಿಯ ಆಹಾರ ನೀಡಲಾಗುತ್ತದೆ ಗೊತ್ತಾ?
ಮೈಸೂರು ಆನೆ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Sep 21, 2024 | 2:41 PM

Share

ಸಾಮಾನ್ಯವಾಗಿ ದಸರಾ ಸಮಯದಲ್ಲಿ ಆನೆಗಳ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಠಿಕ ಆಹಾರವನ್ನು ನೀಡಲಾಗುತ್ತದೆ. ಕಾಡಿನಲ್ಲಾದರೆ ಅವುಗಳಿಗೆ ಯಾವ ರೀತಿಯ ಆಹಾರಗಳು ಬೇಕು ಎಂಬುದನ್ನು ಅವುಗಳೇ ಆಯ್ಕೆ ಮಾಡಿ ತಿನ್ನುತ್ತವೆ. ಆದರೆ ಇಲ್ಲಿ ಆ ರೀತಿ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವುಗಳ ದೇಹಕ್ಕೆ ಯಾವ ರೀತಿಯ ಆಹಾರಗಳು ಬೇಕಾಗುತ್ತದೆ ಎಂಬುದನ್ನು ತಿಳಿದುಕೊಂಡು ವೈದ್ಯರ ಸಲಹೆಯನುಸಾರ ಅವುಗಳಿಗೆ ಪೌಷ್ಠಿಕ ಆಹಾರವನ್ನು ಇಲಾಖೆಯಿಂದ ನೀಡಲಾಗುತ್ತದೆ. ಹಾಗಾದರೆ ಆನೆಗಳು ಯಾವ ರೀತಿಯ ಆಹಾರಗಳನ್ನು ಸೇವನೆ ಮಾಡುತ್ತದೆ? ಪೌಷ್ಠಿಕ ಆಹಾರ ಹೇಗೆ ತಯಾರಾಗುತ್ತದೆ? ಎಂಬುದರ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

ಎಂಸಿವಿಜೆ ಕೌಶಲ್ಯ (MCVJ Kousalya) ಎಂಬವರು ತಮ್ಮ ಯೂಟ್ಯೂಬ್ ಖಾತೆಯಲ್ಲಿ ಆನೆಗಳಿಗೆ ನೀಡುವ ಪೌಷ್ಠಿಕ ಆಹಾರ ಮತ್ತು ಅವುಗಳು ಹೇಗೆ ತಯಾರಾಗುತ್ತದೆ? ಆನೆಗಳಿಗೆ ಆಹಾರವನ್ನು ಹೇಗೆ ಕೊಡುತ್ತಾರೆ ಎಂಬುದರ ಬಗ್ಗೆ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ನೀಡಿದ ಮಾಹಿತಿಯ ಪ್ರಕಾರ, ದಸರಾ ಸಮಯದಲ್ಲಿ ಆನೆಗಳಿಗೆ ಬೇಕಾದಂತ ಆಹಾರ ಪದಾರ್ಥಗಳನ್ನು ಉಗ್ರಾಣದಲ್ಲಿ ಸಂಗ್ರಹ ಮಾಡಿ ಇಡಲಾಗುತ್ತದೆ. ಬಳಿಕ ಪ್ರತಿನಿತ್ಯ ಅವುಗಳಿಗೆ ಆಹಾರವನ್ನು ಅಲ್ಲಿಯೇ ತಯಾರಿಸಿ ನೀಡಲಾಗುತ್ತದೆ. ತಾಲೀಮು ಮುಗಿಸಿಕೊಂಡು ಬಂದ ಆನೆ ಈ ಆಹಾರಗಳನ್ನು ಸೇವನೆ ಮಾಡುತ್ತದೆ. ಅದರ ಜೊತೆಗೆ ಇನ್ನು ಅನೇಕ ಆಹಾರಗಳನ್ನು ಸಮಯಾನುಸಾರ ಅವುಗಳಿಗೆ ನೀಡಲಾಗುತ್ತದೆ ಎಂದಿದ್ದಾರೆ.

ಪೌಷ್ಠಿಕಭರಿತವಾದ ದೊಡ್ಡ ದೊಡ್ಡ ಉಂಡೆಗಳು;

ಹೆಸರುಕಾಳು, ಬೆಳೆ ಕಾಳುಗಳನ್ನು ಬೇಯಿಸಿಕೊಂಡು ಅದನ್ನು ದೊಡ್ಡ ಪಾತ್ರೆಗೆ ಹಾಕಿ ತಣಿಸಿ ಅದಕ್ಕೆ ಸೌತೆಕಾಯಿ, ಕ್ಯಾರೆಟ್, ಬಿಟ್ರೋಟ್, ಮೂಲಂಗಿ ಮುಂತಾದ ತರಕಾರಿಗಳನ್ನು ಕತ್ತರಿಸಿ ಅದನ್ನು ಕೂಡ ಸೇರಿಸಿ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಲಾಗುತ್ತದೆ. ಬಳಿಕ ವೈದ್ಯರ ಸಲಹೆ ಮೇರೆಗೆ ಯಾವ ಆನೆಗಳಿಗೆ ಎಷ್ಟು ಉಂಡೆಗಳನ್ನು ನೀಡಬೇಕು ಎಂದು ನಿರ್ಧರಿಸಲಾಗುತ್ತದೆ. ನಂತರ ಆನೆಯ ಆರೋಗ್ಯವನ್ನು ನೋಡಿಕೊಂಡು ಮತ್ತು ಅದರ ದೇಹದ ತೂಕವನ್ನು ಆಧರಿಸಿ ಅವುಗಳಿಗೆ ಆಹಾರ ನೀಡಲಾಗುತ್ತದೆ. ಅವುಗಳಿಗೆ ಅಗತ್ಯವಾಗಿ ಬೇಕಾಗಿರುವ ಎಲ್ಲಾ ಆಹಾರಗಳನ್ನು ಮಾವುತರ ಜೊತೆಯಲ್ಲಿ ಬಂದ ಸಹಾಯಕರು ತಯಾರಿ ಮಾಡಿ ಅವುಗಳಿಗೆ ನೀಡುತ್ತಾರೆ.

ಇದನ್ನೂ ಓದಿ: ಉಸಿರಾಟದ ತೊಂದರೆ ಈ ರೋಗದ ಲಕ್ಷಣವಾಗಿರಬಹುದು, ಕಾರಣ ಮತ್ತು ತಡೆಗಟ್ಟುವ ವಿಧಾನ ತಿಳಿಯಿರಿ

ಸಾಮಾನ್ಯವಾಗಿ ಆನೆಗಳಿಗೆ ತುಂಬಾ ಇಷ್ಟವಾಗುವ ತಿಂಡಿ ಎಂದರೆ ಅದು ಕಬ್ಬು. ಇದನ್ನು ಕೂಡ ಉಗ್ರಾಣದಲ್ಲಿ ಆನೆಗಳಿಗೆ ಬೇಕಾಗುವಷ್ಟು ಸಂಗ್ರಹ ಮಾಡಿಟ್ಟುಕೊಳ್ಳಲಾಗುತ್ತದೆ. ದಿನಕ್ಕೆ ಬೇಕಾಗುವಷ್ಟು ನೀಡಲಾಗುತ್ತದೆ. ಅದರ ಜೊತೆಯಲ್ಲಿ ಒಣಹುಲ್ಲು, ಹಸಿಹುಲ್ಲುಗಳನ್ನು ಮಧ್ಯ ಮಧ್ಯ ನೀಡಲಾಗುತ್ತದೆ. ಅವುಗಳ ಬಿಡುವಿನ ಸಮಯದಲ್ಲಿ ಮೇವಿಗಾಗಿ ಆಲದ ಮರದ ರೆಂಬೆಗಳನ್ನು ಮುರಿದು ಸಂಗ್ರಹಿಸಿ ಅವುಗಳಿಗೆ ನೀಡಲಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ಒಣ ಹುಲ್ಲುಗಳನ್ನು ಸುತ್ತಿ ಅದರಲ್ಲಿ ಭತ್ತ ಮತ್ತು ಬೆಲ್ಲ ಹಾಗೂ ಕಾಯಿ ಚೂರುಗಳನ್ನು ಹಾಕಿ ಅವುಗಳಿಗೆ ನೀಡಲಾಗುತ್ತದೆ. ಏಕೆಂದರೆ ಇದರಲ್ಲಿ ಸಾಕಷ್ಟು ಪೌಷ್ಠಿಕ ಅಂಶಗಳಿದ್ದು ಆನೆಗಳಿಗೆ ಇದನ್ನು ನೀಡುವುದು ಅಗತ್ಯವಾಗಿದೆ. ಈ ಆಹಾರವನ್ನು ಅವುಗಳಿಗೆ ಕ್ಯಾಂಪ್ ಗಳಲ್ಲಿಯೂ ನೀಡಲಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ