ನೀವು ಕಾಫಿ ಪ್ರಿಯರೇ? ದಿನಕ್ಕೆ 2- 3 ಕಪ್ ಕುಡಿದರೆ ಹೃದಯದ ಆರೋಗ್ಯ ಹೆಚ್ಚಾಗುತ್ತೆ ಎಂದಿದೆ ಅಧ್ಯಯನ

ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೋನೊಲೊಜಿ ಅಂಡ್ ಮೆಟಬೋಲಿಸಂನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಪ್ರತಿದಿನ ಕಾಫಿ ಕುಡಿಯುವವರ ಹೃದಯದ ಆರೋಗ್ಯ, ಕಾಫಿ ಕುಡಿಯದವರ ಅಂದರೆ ಕೆಫೀನ್ ಸೇವಿಸದವರ ಹೃದಯದ ಆರೋಗ್ಯಕ್ಕಿಂತ ಚೆನ್ನಾಗಿದೆ ಎಂಬುದು ಕಂಡು ಬಂದಿದೆ. ಈ ಅಧ್ಯಯನವನ್ನು ಹಲವಾರು ಜನರ ಜೀವನಶೈಲಿ ಆಧಾರದ ಮೇಲೆ ಅವರು ನೀಡಿದ ಮಾಹಿತಿಯನ್ನು ಆಧರಿಸಿ ಫಲಿತಾಂಶ ನೀಡಲಾಗಿದೆ.

ನೀವು ಕಾಫಿ ಪ್ರಿಯರೇ? ದಿನಕ್ಕೆ 2- 3 ಕಪ್ ಕುಡಿದರೆ ಹೃದಯದ ಆರೋಗ್ಯ ಹೆಚ್ಚಾಗುತ್ತೆ ಎಂದಿದೆ ಅಧ್ಯಯನ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 21, 2024 | 4:34 PM

ನೀವು ಕಾಫಿ ಅಥವಾ ಟೀ ಪ್ರಿಯರಾ? ಹಾಗಾದರೆ ನಿಮಗೆ ಒಂದು ಗುಡ್ ನ್ಯೂಸ್ ಇದೆ. ಎಲ್ಲರೂ ಕಾಫಿ ಅಥವಾ ಟೀ ಸೇವನೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವಾಗ ಇದೇನಿದು ಹೊಸ ಸುದ್ದಿ ಎಂದು ಯೋಚಿಸುತ್ತಿದ್ದೀರಾ? ಹೌದು. ದಿನವೊಂದರಲ್ಲಿ ನಿಯಮಿತವಾಗಿ ಕಾಫಿ ಕುಡಿಯುವುದರಿಂದ ಟೈಪ್ 2 ಡಯಾಬಿಟಿಸ್, ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಸ್ಟ್ರೋಕ್ ನಿಂದ ನೀವು ಬಚಾವಾಗಬಹುದಂತೆ!. ಈ ವಿಷಯ ಕೇಳಿ ನಿಮಗೆ ಆಶ್ಚರ್ಯವಾಗಬಹುದು ಆದರೆ ಇದು ನಿಜ.

ಜರ್ನಲ್ ಆಫ್ ಕ್ಲಿನಿಕಲ್ ಎಂಡೋಕ್ರೋನೊಲೊಜಿ ಅಂಡ್ ಮೆಟಬೋಲಿಸಂನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ ಪ್ರತಿದಿನ ಕಾಫಿ ಕುಡಿಯುವವರ ಹೃದಯದ ಆರೋಗ್ಯ, ಕಾಫಿ ಕುಡಿಯದವರ ಅಂದರೆ ಕೆಫೀನ್ ಸೇವಿಸದವರ ಹೃದಯದ ಆರೋಗ್ಯಕ್ಕಿಂತ ಚೆನ್ನಾಗಿದೆ ಎಂಬುದು ಕಂಡು ಬಂದಿದೆ. ಈ ಅಧ್ಯಯನವನ್ನು ಹಲವಾರು ಜನರ ಜೀವನಶೈಲಿ ಆಧಾರದ ಮೇಲೆ ಅವರು ನೀಡಿದ ಮಾಹಿತಿಯನ್ನು ಆಧರಿಸಿ ಫಲಿತಾಂಶ ನೀಡಲಾಗಿದೆ.

ಹೇಗಿತ್ತು ಅಧ್ಯಯನ?

ಕಾಫಿ ಅಥವಾ ಟೀ ಕುಡಿಯುವ ಹವ್ಯಾಸ ಉಳ್ಳ 37- 73 ವರ್ಷದ ಸುಮಾರು 188000 ಜನರನ್ನು ಚೀನಾ ಮತ್ತು ಸ್ವೀಡನ್ನ ಅಧ್ಯಯನಕಾರರು ಸಂಪರ್ಕಿಸಿದ್ದು ಅವರ ಲೈಫ್ ಸ್ಟೈಲ್ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಜೊತೆಗೆ ಅವರ ಆರೋಗ್ಯ ಸಮಸ್ಯೆಗಳ ಬಗ್ಗೆಯೂ ಅಧ್ಯಯನ ನಡೆಸಿದ್ದಾರೆ. ಸಂಶೋಧಕರು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಿದವರ ಪೈಕಿ ಸುಮಾರು 172000 ಜನರು ತಾವು ನಿಯಮಿತವಾಗಿ ಕಾಫಿ ಅಥವಾ ಟೀ ಸೇವಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ. ವಿಶೇಷವೆಂದರೆ ಅವರು ನೀಡಿರುವ ಮಾಹಿತಿಯನ್ನು ಗಮನಿಸಿದಾಗ ಅವರಲ್ಲಿ ಯಾರೊಬ್ಬರಿಗೂ ಹೃದಯ ಸಂಬಂಧಿ ಕಾಯಿಲೆಗಳಾಗಲಿ ಟೈಪ್ 2 ಡಯಾಬಿಟಿಸ್ ಅಥವಾ ಸ್ಟ್ರೋಕ್ ನಂತಹ ಸಮಸ್ಯೆಗಳಾಗಲಿ ಕಂಡು ಬಂದಿಲ್ಲ.

ಇದನ್ನೂ ಓದಿ: ಮುಂಜಾನೆ ಮಾಡುವ ಈ ತಪ್ಪುಗಳು ಲಿವರ್ ಲಿವರ್​​ಗೆ ತೊಂದರೆ ಮಾಡುತ್ತೆ

ಹಾಗಾಗಿ ಈ ಅಧ್ಯಯನಕಾರರು, ನಿಯಮಿತವಾಗಿ ಕಾಫಿ ಅಥವಾ ಟೀ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು ಎಂದಿದ್ದಾರೆ. ಅತಿಯಾಗಿ ಸೇವನೆ ಮಾಡಬಾರದು. ಏಕೆಂದರೆ ಅತಿಯಾದರೆ ಅಮೃತವೂ ವಿಷವಾಗುವುದರಿಂದ ನಿಯಮಿತ ಸೇವನೆ ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Published On - 3:45 pm, Sat, 21 September 24

ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ಬಾಂಗ್ಲಾ ತಂಡದ ಫೀಲ್ಡಿಂಗ್ ಸೆಟ್ ಮಾಡಿದ ರಿಷಭ್ ಪಂತ್
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ದರ್ಬಾರ್ ಗಲ್ಲಿಯಲ್ಲಿ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜ ಶಾಮಿಯಾನ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಚನ್ನಪಟ್ಟಣ: ಹೈಟೆಕ್ ಕ್ರೀಡಾಂಗಣ ನಿರ್ಮಾಣಕ್ಕೆ ಡಿಕೆಶಿ ಶಂಕುಸ್ಥಾಪನೆ
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಬೆಳಗಾವಿ: ರೋಗಿ ಕೈಗೆ ಕೊಳಲು ಕೊಟ್ಟು ಶಸ್ತ್ರ ಚಿಕಿತ್ಸೆ ಮಾಡಿದ ವೈದ್ಯರು
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ಒಂದು ಕಡೆ ಕೋಮು ಗಲಭೆ, ಮತ್ತೊಂದೆಡೆ ಹಿಂದೂ ಮುಸ್ಲಿಂ ಯುವಕರಿಂದ ವಿಸರ್ಜನೆ
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
ವೇದಿಕೆ ಏರುತ್ತಿದ್ದಂತೆ ಹಾಸ್ಯದ ಹೊಳೆ ಹರಿಸಿದಿ ಕಿಚ್ಚ ಸುದೀಪ್
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
Vastu Tips: ಮನೆಯಲ್ಲಿ ಆಮೆ ಇಡುವುದರ ಹಿಂದಿನ ಮಹತ್ವವೇನು?
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಮೈಸೂರು: ಕಾದಾಡುತ್ತಾ ಅರಮನೆ ಆವರಣದಿಂದ ರಸ್ತೆಗೆ ಬಂದ ದಸರಾ ಆನೆಗಳು
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
ಇಂದು ಶಶ ರಾಜಯೋಗ, ಈ ರಾಶಿಯವರಿಗೆ ಶನಿದೇವನ ಕೃಪೆಯಿಂದ ಒಳಿತಾಗಲಿದೆ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ