Liver Health: ಮುಂಜಾನೆ ಮಾಡುವ ಈ ತಪ್ಪುಗಳು ಲಿವರ್ ಲಿವರ್ಗೆ ತೊಂದರೆ ಮಾಡುತ್ತೆ
ನಮ್ಮ ದೈನಂದಿನ ದಿನಚರಿಯಲ್ಲಿ ನಾವು ಮಾಡುವಂತಹ ಕೆಲವು ತಪ್ಪುಗಳು ಯಕೃತ್ತಿಗೆ ಅಪಾಯಕಾರಿಯಾಗಬಹುದು. ವಿಶೇಷವಾಗಿ, ಮುಂಜಾನೆ ಸಮಯದಲ್ಲಿ ರೂಢಿಸಿಕೊಂಡಿರುವ ಕೆಲವು ಕೆಟ್ಟ ಅಭ್ಯಾಸಗಳು ಯಕೃತ್ತಿಗೆ ಹಾನಿ ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ನಿಮ್ಮ ಯಕೃತ್ತಿಗೆ ಅಂದರೆ ಲಿವರ್ ಗೆ ಹಾನಿಯಾದರೆ, ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚಾಗಬಹುದು. ಹಾಗಾದರೆ ಆ ತಪ್ಪುಗಳು ಯಾವುದು? ಅವುಗಳನ್ನು ಸರಿಪಡಿಸದಿದ್ದರೆ, ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? ಭವಿಷ್ಯದಲ್ಲಿ ಆರೋಗ್ಯಕ್ಕೆ ಹಾನಿ ಮಾಡಬಹುದೇ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ತಜ್ಞರ ಉತ್ತರ.
ಯಕೃತ್ತು (Liver) ನಮ್ಮ ದೇಹದ ಪ್ರಮುಖವಾದ ಒಂದು ಅಂಗ. ಅಲ್ಲದೆ ಇದು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ನಮ್ಮ ದೇಹದ ವಿಷಕಾರಿ ಅಂಶಗಳ ನಿವಾರಣೆಗೆ ಸಹಕಾರಿಯಾಗಿದ್ದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ. ಇದು ದೇಹದ ಅನೇಕ ಅಂಗಗಳ ಸುಗಮ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ. ಆದರೆ, ನಮ್ಮ ದೈನಂದಿನ ದಿನಚರಿಯಲ್ಲಿ ನಾವು ಮಾಡುವಂತಹ ಕೆಲವು ತಪ್ಪುಗಳು ಯಕೃತ್ತಿಗೆ ಅಪಾಯಕಾರಿಯಾಗಬಹುದು. ವಿಶೇಷವಾಗಿ, ಮುಂಜಾನೆ ಸಮಯದಲ್ಲಿ ರೂಢಿಸಿಕೊಂಡಿರುವ ಕೆಲವು ಕೆಟ್ಟ ಅಭ್ಯಾಸಗಳು ಯಕೃತ್ತಿಗೆ ಹಾನಿ ಮಾಡಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ನಿಮ್ಮ ಯಕೃತ್ತಿಗೆ ಅಂದರೆ ಲಿವರ್ ಗೆ ಹಾನಿಯಾದರೆ, ಮಧುಮೇಹದಂತಹ ಗಂಭೀರ ಕಾಯಿಲೆಗಳ ಅಪಾಯವೂ ಹೆಚ್ಚಾಗಬಹುದು. ಹಾಗಾದರೆ ಆ ತಪ್ಪುಗಳು ಯಾವುದು? ಅವುಗಳನ್ನು ಸರಿಪಡಿಸದಿದ್ದರೆ, ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? ಭವಿಷ್ಯದಲ್ಲಿ ಆರೋಗ್ಯಕ್ಕೆ ಹಾನಿ ಮಾಡಬಹುದೇ? ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ತಜ್ಞರ ಉತ್ತರ.
ಬೆಳಿಗ್ಗೆ ಇದನ್ನು ಮಾಡಬೇಡಿ; ನೀರು ಕುಡಿಯದೆ ದಿನವನ್ನು ಪ್ರಾರಂಭಿಸುವುದು: ಬೆಳಿಗ್ಗೆ ಎದ್ದ ಕೂಡಲೇ ಮೊದಲು ನೀರು ಕುಡಿಯುವುದು ಅದರಲ್ಲಿಯೂ ಉಗುರು ಬೆಚ್ಚಗೆ ಅಥವಾ ಹದವಾಗಿ ಬಿಸಿಯಾಗಿರುವ ನೀರು ಕುಡಿಯುವುದು ಬಹಳ ಮುಖ್ಯ. ಆದರೆ ಹೆಚ್ಚಿನ ಜನರು ಈ ಅಭ್ಯಾಸವನ್ನು ನಿರ್ಲಕ್ಷಿಸುತ್ತಾರೆ. ಇದು ಯಕೃತ್ತಿಗೆ ಬಹಳ ಅಪಾಯಕಾರಿ. ಸಾಮಾನ್ಯವಾಗಿ ರಾತ್ರಿ ಮಲಗಿರುವ ಸಮಯದಲ್ಲಿ ದೇಹದಲ್ಲಿ ನಿರ್ಜಲೀಕರಣ ಉಂಟಾಗುತ್ತದೆ. ಹಾಗಾಗಿ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿನ ನೀರಿನ ಕೊರತೆಯನ್ನು ಸರಿದೂಗಿಸಬಹುದು. ಅದು ಅಲ್ಲದೆ ನೀರು ಕುಡಿಯುವುದರಿಂದ ಯಕೃತ್ತಿನಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕುವ ಮೂಲಕ ದೇಹವನ್ನು ನಿರ್ವಿಷಗೊಳಿಸಬಹುದು. ನೀವು ನೀರನ್ನು ಕುಡಿಯದೆ ದಿನವನ್ನು ಪ್ರಾರಂಭಿಸಿದರೆ, ಅದು ಯಕೃತ್ತಿನ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ.
ಬೆಳಿಗ್ಗೆ ಎಣ್ಣೆ -ಕೊಬ್ಬಿನ ಪದಾರ್ಥಗಳು: ಹೆಚ್ಚಿನ ಜನರು ಬೆಳಿಗ್ಗೆ ಉಪಾಹಾರವಾಗಿ ಕರಿದ ಅಥವಾ ಕೊಬ್ಬಿನ ವಸ್ತುಗಳನ್ನು ತಿನ್ನಲು ಬಯಸುತ್ತಾರೆ. ಎಣ್ಣೆಯುಕ್ತ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಹಾನಿಗೊಳಿಸುವುದು ಮಾತ್ರವಲ್ಲದೆ ಯಕೃತ್ತಿನ ಮೇಲೂ ಪರಿಣಾಮ ಬೀರುತ್ತದೆ. ಕೊಬ್ಬಿನ ಪದಾರ್ಥಗಳು ಯಕೃತ್ತಿನಲ್ಲಿ ಕೊಬ್ಬು ಸಂಗ್ರಹವಾಗಲು ಕಾರಣವಾಗುತ್ತವೆ. ಇದು ಯಕೃತ್ತಿನ ಕಾಯಿಲೆಯ ಅಪಾಯವನ್ನು ಹೆಚ್ಚಿಸುತ್ತದೆ. ಅಲ್ಲದೆ ಲಿವರ್ ಮಾಡುವ ಸಾಮಾನ್ಯ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುತ್ತದೆ. ದೀರ್ಘಕಾಲದ ವರೆಗೆ ನಿರ್ಲಕ್ಷಿಸಿದರೆ, ಇದು ಮಧುಮೇಹದಂತಹ ಕಾಯಿಲೆಗಳಿಗೆ ಕಾರಣವಾಗಬಹುದು.
ವ್ಯಾಯಾಮ ಮಾಡದಿರುವುದು: ಬೆಳಿಗ್ಗೆ ಸ್ವಲ್ಪ ವ್ಯಾಯಾಮ ಮಾಡುವುದು ದೇಹಕ್ಕೆ ಮಾತ್ರವಲ್ಲದೆ ನಮ್ಮ ಲಿವರ್ ಗೂ ಒಳ್ಳೆಯದು. ವ್ಯಾಯಾಮ ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ ಯಕೃತ್ತಿನ ಕಾರ್ಯವನ್ನು ಸುಧಾರಿಸುತ್ತದೆ. ತುಂಬಾ ಜಡ ಜೀವನಶೈಲಿಯನ್ನು ಅನುಸರಿಸುತ್ತಿರುವವರು, ಅಂದರೆ ದಿನವಿಡೀ ಕುಳಿತು ಬೆಳಿಗ್ಗೆ ವ್ಯಾಯಾಮ ಮಾಡದವರ ಲಿವರ್ ಅತ್ಯಂತ ಅಪಾಯದಲ್ಲಿರುತ್ತದೆ. ಇದು ಹೀಗೆಯೇ ಮುಂದುವರೆದರೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಅಲ್ಲದೆ ಈ ರೀತಿಯ ಅಭ್ಯಾಸದಿಂದ ಯಕೃತ್ತು ಕ್ರಮೇಣ ದುರ್ಬಲಗೊಳ್ಳುತ್ತದೆ.
ಇದನ್ನೂ ಓದಿ: ಉಸಿರಾಟದ ತೊಂದರೆ ಈ ರೋಗದ ಲಕ್ಷಣವಾಗಿರಬಹುದು, ಕಾರಣ ಮತ್ತು ತಡೆಗಟ್ಟುವ ವಿಧಾನ ತಿಳಿಯಿರಿ
ರಾತ್ರಿ ಉಳಿದ ಆಹಾರ ಸೇವನೆ ಮಾಡುವುದು: ಹೆಚ್ಚಿನ ಜನರು ರಾತ್ರಿ ಉಳಿದ ಆಹಾರವನ್ನು ಬೆಳಿಗ್ಗೆ ತಿನ್ನುತ್ತಾರೆ. ಆದರೆ ಈ ಅಭ್ಯಾಸವು ಯಕೃತ್ತಿಗೆ ಹಾನಿ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಈ ರಾತ್ರಿ ಉಳಿದ ಆಹಾರವು ಯಕೃತ್ತಿನ ಮೇಲೆ ಹೆಚ್ಚುವರಿ ಒತ್ತಡವನ್ನುಂಟು ಮಾಡುತ್ತದೆ. ಏಕೆಂದರೆ ದೇಹದಿಂದ ಬ್ಯಾಕ್ಟೀರಿಯಾ ಮತ್ತು ವಿಷಕಾರಿ ಅಂಶವನ್ನು ಹೊರಹಾಕಲು ಯಕೃತ್ತು ತುಂಬಾ ಶ್ರಮಿಸಬೇಕಾಗುತ್ತದೆ. ಹಾಗಾಗಿ ಇದು ಯಕೃತ್ತಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ.
ಸಿಗರೇಟ್ -ಮದ್ಯಪಾನ: ಬೆಳಿಗ್ಗೆ ಎದ್ದ ನಂತರ ಸಿಗರೇಟ್ ಸೇದುವುದು ಅಥವಾ ಮದ್ಯಪಾನ ಮಾಡುವುದು ಯಕೃತ್ತಿಗೆ ಹೆಚ್ಚು ಹಾನಿಕಾರಕವಾಗಿದೆ. ಧೂಮಪಾನ ಮತ್ತು ಮದ್ಯಪಾನವು ಯಕೃತ್ತಿನ ಕೋಶಗಳನ್ನು ಹಾನಿಗೊಳಿಸುತ್ತದೆ. ಈ ಅಭ್ಯಾಸವನ್ನು ನಿಲ್ಲಿಸದೆಯೇ ರೂಢಿಸಿಕೊಂಡು ಹೋದರೆ ಪಿತ್ತಜನಕಾಂಗದ ಸಿರೋಸಿಸ್ ಅಥವಾ ಕ್ಯಾನ್ಸರ್ ಅಪಾಯವಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ