Red Planet Day 2024 :ನವೆಂಬರ್ 28 ರಂದು ಕೆಂಪು ಗ್ರಹದ ದಿನವನ್ನು ಆಚರಿಸುವುದು ಏಕೆ? ಈ ವರ್ಷದ ಥೀಮ್ ಏನು?

| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 10:20 AM

ಮಂಗಳನ ಒಡಲಿನ ಮತ್ತಷ್ಟು ರಹಸ್ಯವನ್ನು ಅನ್ವೇಷಿಸಲು ಬಹಳ ಹಿಂದಿನಿಂದಲೂ ಮಾನವನ ಪ್ರಯತ್ನಗಳು ನಡೆಯುತ್ತಲೇ ಇದೆ. ಹೀಗಾವಗಿಯೇ 1964, ನವೆಂಬರ್ 28 ರಂದು ಮಂಗಳ ಗ್ರಹಕ್ಕೆ ಮ್ಯಾರಿನರ್​​4 ಎಂಬ ಮೊದಲ ಬಾಹ್ಯಾಕಾಶ ನೌಕೆ ಕಳುಹಿಸಲಾಯಿತು. ಇದರ ನೆನಪಿಗಾಗಿ ನವೆಂಬರ್ 28 ರಂದು ರೆಡ್ ಪ್ಲಾನೆಟ್ ಡೇ (ಕೆಂಪು ಗ್ರಹದ ದಿನ) ವನ್ನು ಆಚರಿಸಲಾಗುತ್ತಿದೆ. ಹಾಗಾದ್ರೆ ಈ ದಿನದ ಆಚರಣೆ ಇತಿಹಾಸ ಹಾಗೂ ಮಹತ್ವದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

Red Planet Day 2024 :ನವೆಂಬರ್ 28 ರಂದು ಕೆಂಪು ಗ್ರಹದ ದಿನವನ್ನು ಆಚರಿಸುವುದು ಏಕೆ? ಈ ವರ್ಷದ ಥೀಮ್ ಏನು?
Red Planet Day 2024
Follow us on

ಸೌರಮಂಡಲದ ನಾಲ್ಕನೇ ಗ್ರಹವಾಗಿರುವ ಮಂಗಳದಲ್ಲಿ ಮಾನವನು ಜೀವಿಸಲು ಯೋಗ್ಯವಾದ ವಾತಾವರಣವಿದೆ ಎನ್ನಲಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಅನೇಕ ಸಂಶೋಧನೆಗಳು ನಡೆದಿದೆ. ಇಂದು ವಿಶ್ವದಾದ್ಯಂತ ಖಗೋಳ ಪ್ರಿಯರು, ರೆಡ್ ಪ್ಲಾನೆಟ್ ಡೇಯನ್ನು ಆಚರಿಸುತ್ತಿದ್ದಾರೆ. ಮೊಟ್ಟ ಮೊದಲ ಬಾರಿಗೆ ಮಂಗಳ ಗ್ರಹದ ಗುರುತ್ವಾಕರ್ಷಣೆ ಪರಿಧಿ ತಲುಪಿದ ಗೌರವಾರ್ಥವಾಗಿ ಪ್ರತಿ ವರ್ಷ ನವೆಂಬರ್ 28 ರಂದು ರೆಡ್ ಪ್ಲಾನೆಟ್ ಡೇ (ಕೆಂಪು ಗ್ರಹದ ದಿನ)ಯನ್ನು ಆಚರಿಸಲಾಗುತ್ತಿದೆ.

ರೆಡ್ ಪ್ಲಾನೆಟ್ ಡೇ ಇತಿಹಾಸ:

ನವೆಂಬರ್ 28, 1964 ರಂದು ಮ್ಯಾರಿನರ್ 4 ಹೆಸರಿನ ಮಾನವ ನಿರ್ಮಿತ ಬಾಹ್ಯಾಕಾಶ ನೌಕೆ, ಮೊಟ್ಟ ಮೊದಲ ಬಾರಿಗೆ ಮಂಗಳ ಗ್ರಹದ ಗುರುತ್ವಾಕರ್ಷಣೆ ಪರಿಧಿ ತಲುಪಿತು. ಇದರ ಗೌರವಾರ್ಥವಾಗಿ ಪ್ರಪಂಚದಾದಂತ್ಯ ಪ್ರತಿವರ್ಷ ನವೆಂಬರ್ 28ರಂದು ರೆಡ್ ಪ್ಲಾನೆಟ್ ದಿನವನ್ನು ಆಚರಿಸಲಾಗುತ್ತದೆ.

ರೆಡ್ ಪ್ಲಾನೆಟ್ ಡೇಯ ಮಹತ್ವ ಹಾಗೂ ಥೀಮ್:

ಮಂಗಳ ಗ್ರಹದ ಬಗ್ಗೆ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳಲು ಮತ್ತು ಗ್ರಹದ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಹಾಗೂ ಕಳೆದ ಕೆಲವು ವರ್ಷಗಳಿಂದ ಕೈಗೊಳ್ಳುತ್ತಿರುವ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಚರ್ಚಿಸಲು ಜನರನ್ನು ಪ್ರೋತ್ಸಾಹಿಸಲು ಈ ದಿನವು ಮಹತ್ವದ್ದಾಗಿದೆ. ನಾಸಾದ ಜನರನ್ನು ಶ್ಲಾಘಿಸಲು ಇದೊಂದು ಉತ್ತಮ ದಿನವಾಗಿದೆ. ಈ ವರ್ಷ, ರೆಡ್ ಪ್ಲಾನೆಟ್ ದಿನವನ್ನು ಪ್ಲಾನೆಟ್ ವರ್ಸಸ್ ಪ್ಲಾಸ್ಟಿಕ್ಎಂಬ ಥೀಮ್ ನಲ್ಲಿ ಆಚರಿಸಲಾಗುತ್ತಿದೆ. ಇದು ಪ್ಲಾಸ್ಟಿಕ್ ಮಾಲಿನ್ಯವನ್ನು ಕಡಿಮೆ ಮಾಡುವುದು. ಮಾನವನ ಆರೋಗ್ಯ ಹಾಗೂ ಪರಿಸರದ ಮೇಲೆ ಅದರ ಪರಿಣಾಮಗಳನ್ನು ತಿಳಿಸುವುದಾಗಿದೆ.

ಇದನ್ನೂ ಓದಿ: ಅಪರಿಚಿತ ಹುಡುಗಿಯನ್ನು ಕಂಡಾಗ ಹುಡುಗನ ತಲೆಯಲ್ಲಿ ಏನೆಲ್ಲಾ ಆಲೋಚನೆಗಳು ಓಡುತ್ತೆ ಗೊತ್ತಾ? ಈ ವಿಷಯಗಳಂತೆ

ಮಂಗಳ ಗ್ರಹದ ಬಗೆಗಿನ ಕೆಲವು ಕುತೂಹಲಕಾರಿ ಮಾಹಿತಿಗಳು:

  • ಸೌರಮಂಡಲದ ನಾಲ್ಕನೇ ಗ್ರಹವಾಗಿರುವ ಮಂಗಳವು ತನ್ನ ಮಣ್ಣಿನ ಬಣ್ಣದ ಕಾರಣಕ್ಕೆ ಇದನ್ನು ಕೆಂಪು ಗ್ರಹ ಎಂದು ಕರೆಯಲಾಗುತ್ತದೆ.
  • ಮಂಗಳ ಗ್ರಹಕ್ಕೆ ರೋಮನ್ನರ ಯುದ್ಧ ದೇವತೆ ‘ಮಾರ್ಸ್’ ಎಂದು ಹೆಸರಿಸಲಾಗಿದೆ. ಈ ಗ್ರಹವು ಪ್ರಾಥಮಿಕವಾಗಿ ಇಂಗಾಲದ ಡೈಆಕ್ಸೈಡ್‌ನಿಂದ ಸಂಯೋಜಿಸಲ್ಪಟ್ಟ ತೆಳುವಾದ ವಾತಾವರಣವನ್ನು ಹೊಂದಿದೆ.
  • ಮಂಗಳ ಗ್ರಹದ ಅತಿದೊಡ್ಡ ಜ್ವಾಲಾಮುಖಿಯಾದ ಒಲಿಂಪಸ್ ಮಾನ್ಸ್, ಸೌರವ್ಯೂಹದ ಅತಿ ಎತ್ತರದ ಪರ್ವತವಾಗಿದೆ. ಈ ಪರ್ವತವು ಸರಿಸುಮಾರು 16 ಮೈಲು (25 ಕಿ.ಮೀ.) ಎತ್ತರ ಹಾಗೂ 373 ಮೈಲು (600 ಕಿ.ಮೀ) ವ್ಯಾಸವನ್ನು ಹೊಂದಿದೆ.
  • ಮಂಗಳ ಗ್ರಹವು ಭೂಮಿಯ ಅರ್ಧದಷ್ಟು ವ್ಯಾಸವನ್ನು ಹೊಂದಿದ್ದರೂ, ಅದರ ಮೇಲ್ಮೈಯೂ, ಭೂಮಿಯ ಒಣ ಭೂಮಿಯಂತಹ ಪ್ರದೇಶದಂತಿದೆ.
  • ಮಂಗಳದ ಮೇಲ್ಮೈ ಗುರುತ್ವಾಕರ್ಷಣೆಯು ಭೂಮಿಯ ಶೇ.37 ರಷ್ಟು ಮಾತ್ರ. ಹೀಗಾಗಿ ಮಂಗಳ ಗ್ರಹದಲ್ಲಿ ಸುಮಾರು ಮೂರು ಪಟ್ಟು ಹೆಚ್ಚು ಎತ್ತರಕ್ಕೆ ಸುಲಭವಾಗಿ ಹಾರಬಹುದು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ