AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship Tips : ಸೊಸೆಯ ಮೇಲೆ ಹೊಟ್ಟೆಕಿಚ್ಚು ಪಡುವ ಅತ್ತೆಯನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಟಿಪ್ಸ್

ಯಾವ ಮನೆಯಲ್ಲಿ ಅತ್ತೆ ಸೊಸೆಯಂದಿರ ಜಗಳಗಳು ಇಲ್ಲ ಹೇಳಿ. ತಾಯಿ ಮಗಳಂತೆ ಇರುವ ಅತ್ತೆ ಸೊಸೆಯರನ್ನು ಕಾಣುವುದು ಬಹಳ ಅಪರೂಪ. ಆದರೆ ಕೆಲವು ಅತ್ತೆಯಂದಿರು ಸೊಸೆಯನ್ನು ದ್ವೇಷಿಸುತ್ತಾರೆ, ಅಸೂಯೆಪಡುತ್ತಾರೆ. ಅತ್ತೆಯು ಈ ರೀತಿಯಾಡುತ್ತಿದ್ದರೆ ಸೊಸೆಯ ಜೊತೆಗಿನ ಸಂಬಂಧವು ಹಾಳಾಗುತ್ತದೆ. ಈ ವೇಳೆಯಲ್ಲಿ ಸಣ್ಣ ಪುಟ್ಟ ವಿಷಯಕ್ಕೂ ಹೊಟ್ಟೆ ಕಿಚ್ಚು ಪಟ್ಟುಕೊಳ್ಳುವ ಅತ್ತೆಯನ್ನು ನಿಭಾಯಿಸುವುದು ಹೇಗೆ ಎನ್ನುವುದನ್ನು ಸೊಸೆಯು ಅರಿತಿರಬೇಕು.

Relationship Tips : ಸೊಸೆಯ ಮೇಲೆ ಹೊಟ್ಟೆಕಿಚ್ಚು ಪಡುವ ಅತ್ತೆಯನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 19, 2024 | 3:53 PM

Share

ಅತ್ತೆ ಮತ್ತು ಸೊಸೆ ಸಂಬಂಧವನ್ನು ಉತ್ತಮವಾಗಿಟ್ಟುಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ಹೌದು, ಮದುವೆಯಾದ ಹೊಸದರಲ್ಲಿ ಅತ್ತೆಯು ಸೊಸೆಯನ್ನು ಮಗಳಂತೆ ನೋಡಿಕೊಳ್ಳಬಹುದು. ಆದರೆ ದಿನ ಕಳೆದಂತೆ ಮನೆಗೆ ಬಂದ ಹೆಣ್ಣು ಮಗಳು ನನ್ನಿಂದ ತನ್ನ ಮಗನನ್ನು ದೂರ ಮಾಡುತ್ತಿದ್ದಾಳೆ ಎನ್ನುವ ಅಭದ್ರತೆಯ ಭಾವವೊಂದು ಕಾಡಬಹುದು. ಇದೇ ಕಾರಣಕ್ಕೆ ಸೊಸೆಯನ್ನು ಕಂಡರೆ ಅತ್ತೆಯು ದ್ವೇಷಿಸಲು ಪ್ರಾರಂಭಿಸಬಹುದು. ಈ ವರ್ತನೆಯು ಅತ್ತೆಯ ಬಗ್ಗೆ ಕೆಟ್ಟ ಅಭಿಪ್ರಾಯ ಬರಲು ಕಾರಣವಾಗುತ್ತದೆ. ಇಂತಹ ಅತ್ತೆಯನ್ನು ಹೊಂದಿರುವ ಸೊಸೆಯಂದಿರು ಈ ಕೆಲವು ಸಲಹೆಗಳನ್ನು ಪಾಲಿಸಿ ನಿಭಾಯಿಸಿಕೊಂಡು ಹೋಗಬಹುದು.

  • ಸಂವಹನ ನಡೆಸುವುದು : ಯಾವುದೇ ಸಂಬಂಧವಿರಲಿ, ಜಗಳ ಹಾಗೂ ಮನಸ್ತಾಪಗಳು ಬಂದಾಗ ಸಂವಹನದಿಂದ ನಡೆಸುವುದು ಬಹಳ ಮುಖ್ಯ. ಮನಸ್ಸಿನಲ್ಲಿ ಯಾವುದೇ ಕಲ್ಮಶವನ್ನು ಇಟ್ಟುಕೊಳ್ಳದೆ ಮುಕ್ತವಾಗಿ ಮಾತನಾಡಿದರೆ ಎಲ್ಲಾ ಸಮಸ್ಯೆಗೂ ಪರಿಹಾರವು ಸಿಗುತ್ತದೆ. ಹೀಗಾಗಿ ಯಾವುದೇ ಯೋಚನೆಯಿಲ್ಲದೇ ಮನಸ್ಸು ಶಾಂತವಾಗಿದ್ದಾಗ ಈ ಬಗ್ಗೆ ಮಾತನಾಡಿದರೆ ಅತ್ತೆ ಸೊಸೆಯ ಬಾಂಧವ್ಯವು ಗಟ್ಟಿಯಾಗುತ್ತದೆ.
  • ಹೊಂದಿಕೊಳ್ಳಲು ಸಮಯಾವಕಾಶ ನೀಡಿ : ಮಗನಿಗೆ ಮದುವೆಯಾಯಿತು ಎಂದರೆ ತನ್ನ ಮಗ ನನ್ನಿಂದ ದೂರವಾಗುತ್ತಾನೆ ಎನ್ನುವ ಭಯವು ಕಾಡುತ್ತದೆ. ಹೀಗಾಗಿ ಮಗನನ್ನು ಕಳೆದುಕೊಳ್ಳಲು ತಾಯಿಯು ಇಷ್ಟಪಡುವುದಿಲ್ಲ. ಈ ವೇಳೆಯಲ್ಲಿ ಸೊಸೆಯು ಮಗನೊಂದಿಗೆ ಚೆನ್ನಾಗಿದ್ದರೆ ಆಕೆಗೆ ಸಹಿಸಿಕೊಳ್ಳಲು ಸಾಧ್ಯವಾಗದೇ ಇರಬಹುದು. ಅತ್ತೆಯ ಜೊತೆಯೂ ನೀವಿಬ್ಬರು ಸಮಯ ಕಳೆಯಿರಿ, ಸಲಹೆಗಳನ್ನು ಪಡೆಯುವುದನ್ನು ಮರೆಯದಿರಿ. ಈ ಮೂಲಕ ಅತ್ತೆಗೂ ಹೊಂದಿಕೊಂಡು ಹೋಗಲು ಕಾಲಾವಕಾಶವನ್ನು ನೀಡುವುದು ಒಳ್ಳೆಯದು.
  • ಸಹಾನುಭೂತಿಯಿರಲಿ : ದಾಂಪತ್ಯದಲ್ಲಿ ಪದೇ ಪದೇ ಸಮಸ್ಯೆಗಳು ಬರುತ್ತಿದ್ದರೆ ಅದಕ್ಕೆ ಕಾರಣ ಅತ್ತೆಯಾಗಿರಬಹುದು. ಹೀಗಾಗಿ ಪತಿಯ ತಾಯಿ ಯಾವ ಕಾರಣಕ್ಕಾಗಿ ಹೀಗೆ ವರ್ತಿಸುತ್ತಾರೆ ಎಂದು ಯೋಚಿಸಿ, ಆದರೆ ಅವಳ ಬಗ್ಗೆಯು ಸಹಾನುಭೂತಿ ಬೆಳೆಸಿಕೊಳ್ಳಿ. ಅದಲ್ಲದೇ ಅತ್ತೆ ಸ್ಥಾನದಲ್ಲಿ ನಿಂತು ಯೋಚಿಸಿದರೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುವ ಅತ್ತೆಯನ್ನು ನಿಭಾಯಿಸುವುದು ಸುಲಭವಾಗುತ್ತದೆ.
  • ಮನೆಕೆಲಸದಲ್ಲಿ ಸಹಾಯ ಮಾಡುವ ಅಭ್ಯಾಸ ಬೆಳೆಸಿಕೊಳ್ಳಿ : ಅಸೂಯೆ ಪಡುವ ಅತ್ತೆಯ ಮನಸ್ಸನ್ನು ಗೆಲ್ಲುವ ಅಸ್ತ್ರವೆಂದರೆ ಸಣ್ಣ ಪುಟ್ಟ ಕೆಲಸಗಳಲ್ಲಿ ಸಹಾಯ ಮಾಡುವುದು. ಮನೆಯ ಕೆಲಸಗಳಿಗೆ ಅವರ ಜೊತೆಗೆ ಕೈ ಜೋಡಿಸುವುದು, ಹಾಗೂ ಕೆಲಸಕ್ಕೆ ಸುಲಭವಾಗುವಂತಹ ವಸ್ತುಗಳನ್ನು ಅವರಿಗಾಗಿ ತಂದರೆ ಅತ್ತೆ ಸೊಸೆ ಸಂಬಂಧವು ಗಟ್ಟಿಯಾಗುತ್ತದೆ.
  • ಜಗಳವಾಗುವುದನ್ನು ತಪ್ಪಿಸಿ : ಸಾಮಾನ್ಯವಾಗಿ ಅತ್ತೆಯು ಸೊಸೆಯನ್ನು ಕಂಡರೆ ಮೈ ಮೇಲೆ ಬೀಳುವುದು ಹಾಗೂ ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡುವುದು ಸರ್ವೇ ಸಾಮಾನ್ಯವಾಗಿರುತ್ತದೆ. ಹೀಗಾಗಿ ಸೊಸೆಯಾದವಳು ತಾಳ್ಮೆ ಮತ್ತು ಸಮಾಧಾನದಿಂದಲೇ ಜಗಳವಾಡುವುದನ್ನು ತಪ್ಪಿಸುವುದು ಉತ್ತಮ. ಇದರಿಂದ ಎಷ್ಟೋ ಮನೆಗಳಲ್ಲಿ ಅತ್ತೆ ಸೊಸೆ ಸಂಬಂಧಗಳು ಉಳಿಯುತ್ತದೆ.
  • ವಿಶೇಷ ಉಡುಗೊರೆಯನ್ನು ನೀಡಿ : ಅಭದ್ರತೆಯ ಭಾವ, ತನ್ನ ಮಗನನ್ನು ಕಳೇದುಕೊಳ್ಳುವ ಭಯದಿಂದಲೇ ಅತ್ತೆಯು ಅಸೂಯೆ ಅಥವಾ ಹೊಟ್ಟೆಕಿಚ್ಚು ಪಟ್ಟುಕೊಳ್ಳಬಹುದು. ಹೀಗಾಗಿ ಆ ಭಯವನ್ನು ದೂರವಾಗಿಸುವ ಮೂಲಕ ಅತ್ತೆಗೆ ನೀವು ಮಗಳಾಗಿ. ಸಣ್ಣ ಪುಟ್ಟ ಉಡುಗೊರೆಗಳನ್ನು ನೀಡಿ, ಅವರ ಮೇಲೆ ನಿಮಗಿರುವ ಒಳ್ಳೆಯ ಅಭಿಪ್ರಾಯಗಳನ್ನು ತಿಳಿಸಿ.
  • ಕೆಟ್ಟ ನಡವಳಿಕೆಯನ್ನು ಸಾಧ್ಯವಾದಷ್ಟು ನಿರ್ಲಕ್ಷಿಸಿ : ದಾಂಪತ್ಯ ಜೀವನಕ್ಕೆ ಕೆಲವೊಮ್ಮೆ ಅತ್ತೆಯೇ ಮುಳ್ಳಾಗಬಹುದು. ತನ್ನ ಕುತಂತ್ರ ಬುದ್ಧಿಯಿಂದ ಮಗನಿಗೆ ಏನಾದರೂ ಹೇಳಿ ಗಂಡ ಹೆಂಡಿರ ನಡುವೆ ಜಗಳವಾಗುವಂತೆ ಮಾಡುವ ಸಾಧ್ಯತೆಯೇ ಹೆಚ್ಚು. ಅಂತಹ ನಡವಳಿಕೆಗಳು ಕಂಡು ಬಂದರೆ ಅದನ್ನು ನಿರ್ಲಕ್ಷ್ಯ ಮಾಡುವುದನ್ನು ಮೊದಲು ಕಲಿಯಿರಿ.
  • ಸಂಗಾತಿಯೊಂದಿಗೆ ಮಾತನಾಡಿ : ಸಂಗಾತಿಯೊಂದಿಗೆ ಈ ಬಗ್ಗೆ ಹೇಳಿದರೆ ಅತ್ತೆಯ ಬಗ್ಗೆ ದೂರು ಹೇಳಿದ್ದಂತೆ ಆಗುತ್ತದೆ. ಆದರೆ ಅತ್ತೆ ಸೊಸೆಯ ಸಂಬಂಧ ಚೆನ್ನಾಗಿರಬೇಕೆಂದರೆ ಸಂಗಾತಿಯೊಂದಿಗೆ ಈ ವಿಚಾರದ ಬಗ್ಗೆ ಮಾತನಾಡುವುದು ಅಗತ್ಯ. ಅತ್ತೆಯ ಬಗ್ಗೆ ನಿಮಗಿರುವ ಒಳ್ಳೆಯ ಅಭಿಪ್ರಾಯವನ್ನು ತಿಳಿಸಿ. ಅವರೊಂದಿಗೆ ಹೇಗೆ ಹೊಂದಿಕೊಂಡು ಹೋಗಬಹುದು ಎಂದು ಚರ್ಚಿಸಿ, ಇದರಿಂದ ಅತ್ತೆಯನ್ನು ನಿಭಾಯಿಸುವುದು ಸುಲಭವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?