Relationship: ದಾಂಪತ್ಯದಲ್ಲಿ ಸಂತೋಷವಿಲ್ಲದಿದ್ದರೂ ಸಂಬಂಧವನ್ನು ಮುಂದುವರೆಸಲು ಕಾರಣವೇನು?

|

Updated on: Feb 02, 2023 | 9:14 AM

ಮದುವೆ ಎಂಬುದು ಪವಿತ್ರವಾದ ಬಂಧ, ಕೆಲವರು ಇಷ್ಟ ಪಟ್ಟು ಅದೇ ವ್ಯಕ್ತಿ ತನ್ನ ಸಂಗಾತಿಯಾಗಬೇಕೆಂದು ಬಯಸಿ ಮದುವೆಯಾದರೆ ಇನ್ನೂ ಕೆಲವರು ತನ್ನ ತಂದೆ ತಾಯಿ ತೋರಿಸಿದ ವ್ಯಕ್ತಿಯನ್ನು ಮದುವೆಯಾಗುತ್ತಾರೆ.

Relationship: ದಾಂಪತ್ಯದಲ್ಲಿ ಸಂತೋಷವಿಲ್ಲದಿದ್ದರೂ ಸಂಬಂಧವನ್ನು ಮುಂದುವರೆಸಲು ಕಾರಣವೇನು?
Relationship
Follow us on

ಮದುವೆ ಎಂಬುದು ಪವಿತ್ರವಾದ ಬಂಧ, ಕೆಲವರು ಇಷ್ಟ ಪಟ್ಟು ಅದೇ ವ್ಯಕ್ತಿ ತನ್ನ ಸಂಗಾತಿಯಾಗಬೇಕೆಂದು ಬಯಸಿ ಮದುವೆಯಾದರೆ ಇನ್ನೂ ಕೆಲವರು ತನ್ನ ತಂದೆ ತಾಯಿ ತೋರಿಸಿದ ವ್ಯಕ್ತಿಯನ್ನು ಮದುವೆಯಾಗುತ್ತಾರೆ. ಆದರೆ ಲವ್ ಮ್ಯಾರೇಜ್ ಆಗಿರಲಿ ಅಥವಾ ಅರೇಂಜ್ಡ್​ ಆಗಿರಲಿ ನೀವು ಮದುವೆಗೂ ಮುನ್ನ ವ್ಯಕ್ತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿರಲು ಸಾಧ್ಯವಿಲ್ಲ. ಹಾಗೂ ಮದುವೆಗೂ ಮುನ್ನ ಕೆಲವು ಭಿನ್ನಾಭಿಪ್ರಾಯಗಳು ಬಂದಾಗ ನಮ್ಮ ದೃಷ್ಟಿಕೋನವನ್ನು ಅವರೊಂದಿಗೆ ಹಂಚಿಕೊಂಡರೆ ಎಲ್ಲಿ ಬೇಜಾರು ಮಾಡಿಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ನಮ್ಮ ಭಾವನೆಯನ್ನು ಹಿಡಿದಿಟ್ಟಿಕೊಂಡಿರುತ್ತೇವೆ, ಅದೇ ಮದುವೆಯಾದ ಬಳಿಕ ಎಷ್ಟು ದಿನಗಳ ಕಾಲ ನಿಮ್ಮ ಅನಿಸಿಕೆಗಳನ್ನು ಹೇಳದಿರಲು ಸಾಧ್ಯ, ಹಾಗಾಗಿ ಭಿನ್ನಾಭಿಪ್ರಾಯಗಳು ಹೆಚ್ಚಾಗಬಹುದು.

ಮದುವೆಗೂ ಮುಂಚೆ ಎಲ್ಲವೂ ಸರಿ ಇದೆ ಅನ್ನಿಸಿದ್ದು ಮದುವೆಯಾದ ಬಳಿಕ ಬದಲಾಗಿದೆ ಎನ್ನಿಸಬಹುದು. ಕೆಲವರು ಈ ಸಂಬಂಧವನ್ನು ಕಾಪಾಡಿಕೊಳ್ಳಲು ತುಂಬಾ ಪ್ರಯತ್ನಪಡುತ್ತಾರೆ. ಇನ್ನೂ ಕೆಲವರು ಸುಲಭವಾಗಿ ಸಂಬಂಧವನ್ನು ಮುರಿದುಕೊಳ್ಳುತ್ತಾರೆ.

ಮತ್ತಷ್ಟು ಓದಿ: Emotional Intelligence: ಭಾವನಾತ್ಮಕ ಬುದ್ಧಿಮತ್ತೆಯ ಬಗ್ಗೆ ನಿಮಗೆಷ್ಟು ಗೊತ್ತು? ನಿಮ್ಮ ಭಾವನೆಗಳನ್ನು ಗುರುತಿಸಬಹುದೇ?

ಕೆಲವರು ತಮ್ಮ ವೈವಾಹಿಕ ಜೀವನಲ್ಲಿ ಸಂತೋಷವಾಗಿಲ್ಲದಿದ್ದರೂ ಒಟ್ಟಿಗೆ ಜೀವನ ನಡೆಸುತ್ತಿರುತ್ತಾರೆ ಏಕೆ?

ಒಂಟಿತನದ ಭಯ
ಒಂಟಿತನದ ಭಯದಿಂದ ಅನೇಕ ಜನರು ಮದುವೆಯನ್ನು ಕೊನೆಗೊಳಿಸಲು ಬಯಸುವುದಿಲ್ಲ. ಒಂಟಿ ಜೀವನ ಇದಕ್ಕಿಂತ ಕೆಟ್ಟದ್ದಾಗಿರಬಹುದು ಎಂದು ಅವರು ಭಾವಿಸುತ್ತಾರೆ.
ಅದರಲ್ಲೂ ಹೆಂಗಸರು ಒಂಟಿಯಾಗಿರಲು ಹೆದರಿ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಲು ಸಿದ್ಧರಿರುತ್ತಾರೆ.
ವೈವಾಹಿಕ ಜೀವನದಲ್ಲಿ ಆರ್ಥಿಕ ಭದ್ರತೆ ಮತ್ತು ಸ್ಥಿರತೆ ಕೂಡ ದಾಂಪತ್ಯವನ್ನು ಮುರಿಯದಿರಲು ಪ್ರಮುಖ ಕಾರಣವಾಗಿದೆ.

ಒಟ್ಟಿಗೆ ವಾಸಿಸುವ ಅಭ್ಯಾಸ
ವರ್ಷಗಳ ಕಾಲ ಒಟ್ಟಿಗೆ ವಾಸಿಸಿ ನಂತರ ಪರಸ್ಪರ ಒಗ್ಗಿಕೊಳ್ಳುತ್ತಾರೆ. ಇಬ್ಬರು ಸಣ್ಣ ಕೆಲಸಗಳಿಗೆ ಪರಸ್ಪರ ಅವಲಂಬಿಸಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಸಂಬಂಧವನ್ನು ಕಡಿದುಕೊಳ್ಳಲು ಕಷ್ಟವಾಗಬಹುದು.

ಮಕ್ಕಳ ಬಗೆಗಿನ ಬಾಂಧವ್ಯ
ಕೆಲವರು ತಮ್ಮ ವೈವಾಹಿಕ ಜೀವನದಲ್ಲಿ ಅಸಮಾಧಾನ ಮತ್ತು ಅತೃಪ್ತಿ ಹೊಂದಿದ ನಂತರವೂ ಈ ಬಂಧದಲ್ಲಿಯೇ ಇರಲು ಇಷ್ಟಪಡುತ್ತಾರೆ. ಇದಕ್ಕೆ ದೊಡ್ಡ ಕಾರಣ ಮಕ್ಕಳ ಮೇಲಿನ ಪ್ರೀತಿ ಮತ್ತು ವಾತ್ಸಲ್ಯ.
ಪೋಷಕರ ಪ್ರತ್ಯೇಕತೆಯು ಮಕ್ಕಳ ಜೀವನದ ಮೇಲೆ ಪರಿಣಾಮ ಬೀರುತ್ತದೆ ಎನ್ನುವ ಕಾರಣಕ್ಕೆ ಪೋಷಕರು ಒಟ್ಟಾಗಿಯೇ ಇರಲು ಇಷ್ಟಪಡುತ್ತಾರೆ.

ಬೇರೊಂದು ಮದುವೆಯಾದರೆ ಎನ್ನುವ ಭಯ
ಒಂದೊಮ್ಮೆ ನಾನು ಸಂಗಾತಿಯನ್ನು ಬಿಟ್ಟು ಹೋದರೆ ಅವರು ಬೇರೆಯರನ್ನು ಮದುವೆಯಾಗಿಬಿಟ್ಟರೆ ಎನ್ನುವ ಭಯವೂ ಕಾಡುತ್ತಿರುತ್ತದೆ.

ಕುಟುಂಬದವರ ಭಯ
ಒಂದೊಮ್ಮೆ ಸಂಗಾತಿಯನ್ನು ಬಿಟ್ಟು ಬಂದರೆ ಸಮಾಜ ನನ್ನನ್ನು ಹೇಗೆ ನೋಡುತ್ತದೆ, ಕುಟುಂಬದವರ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು. ಕುಟುಂಬದವರು ಹೇಗೆ ಪ್ರತಿಕ್ರಿಸುತ್ತಾರೆ ಎಂಬ ಭಯ ಇರುತ್ತದೆ.

 

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಘಿ ಇಲ್ಲಿ ಕ್ಲಿಕ್ ಮಾಡಿ