ಈ ಗಣರಾಜ್ಯೋತ್ಸವ(Republic Day) ಸಂಭ್ರಮದ ಪ್ರಯುಕ್ತ ನೀವು ನಿಮ್ಮ ಕುಟುಂಬದೊಂದಿಗೆ ನೀವು ಈ ತ್ರಿವರ್ಣದ ಪಾಲಕ್ ಟೊಮೆಟೊ ರೈಸ್ ತಯಾರಿಸಿ. ಇದನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಬಹುದು. ನೀವು ತುಪ್ಪ ಆಧಾರಿತ ಅಕ್ಕಿ ಭಕ್ಷ್ಯಗಳ ಅಭಿಮಾನಿಯಾಗಿದ್ದರೆ, ಈ ತ್ರಿವರ್ಣ ಪಾಲಕ ಟೊಮೆಟೊ ಪಾಕವಿಧಾನವು ನಿಮಗೆ ಸೂಕ್ತವಾಗಿದೆ. ಈ ತ್ವರಿತ ಪಾಕವಿಧಾನವನ್ನು ತಯಾರಿಸಲು ನಿಮಗೆ ಕೆಲವು ಪಾಲಕ್ ಎಲೆಗಳು, ಟೊಮೆಟೊ ಪ್ಯೂರಿ, ಬೆಳ್ಳುಳ್ಳಿ, ಮಸಾಲೆಗಳು ಬೇಕಾಗುತ್ತವೆ. ಆದ್ದರಿಂದ, ಸಂಪೂರ್ಣ ಪಾಕವಿಧಾನಕ್ಕಾಗಿ ಈ ಸ್ಟೋರಿ ಪೂರ್ತಿಯಾಗಿ ಓದಿ.
1/2 ಕಪ್ ಟೊಮೆಟೊ ಪ್ಯೂರಿ
3 ಕಪ್ ಬಾಸ್ಮತಿ ಅಕ್ಕಿ
1 ಟೀಚಮಚ ಗರಂ ಮಸಾಲಾ ಪುಡಿ
ಅಗತ್ಯವಿರುವಷ್ಟು ನೀರು
1 ಚಮಚ ಬೆಳ್ಳುಳ್ಳಿ ಪೇಸ್ಟ್
ರುಚಿಗೆ ಉಪ್ಪು
1 ಕಪ್ ಪಾಲಕ್ ಸೊಪ್ಪು
4 ಚಮಚ ತುಪ್ಪ
1 ಚಮಚ ಪುಡಿಮಾಡಿದ ಒಣ ಕೆಂಪು ಮೆಣಸಿನಕಾಯಿ
1/2 ಕಪ್ ಈರುಳ್ಳಿ
1 ಚಮಚ ಶುಂಠಿ ಪೇಸ್ಟ್
2 ಹಸಿರು ಮೆಣಸಿನಕಾಯಿ
ಇದನ್ನೂ ಓದಿ: ಚಾಕೊಲೇಟ್ ರುಚಿಯೊಂದಿಗಿನ ಬೆಳಗಿನ ಸಿಂಪಲ್ ಉಪಹಾರ ತಯಾರಿಸಿ
ಹಂತ 1: ಈ ಸುಲಭವಾದ ಪಾಕವಿಧಾನವನ್ನು ಪ್ರಾರಂಭಿಸಲು, ಅಕ್ಕಿಯನ್ನು ತೊಳೆದು 30 ನಿಮಿಷಗಳ ಕಾಲ ನೆನೆಸಿಡಿ. ನಂತರ ಅಕ್ಕಿಯನ್ನು 1 ವಿಷಲ್ ವರೆಗೆ ಬೇಯಿಸಿ.
ಹಂತ 2: ಪ್ಯಾನ್ ತೆಗೆದುಕೊಂಡು 1 ಚಮಚ ತುಪ್ಪವನ್ನು ಬಿಸಿ ಮಾಡಿ ಮತ್ತು ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕತ್ತರಿಸಿದ ಹಸಿರು ಮೆಣಸಿನಕಾಯಿ ಮತ್ತು ಪಾಲಕ್ ಸೊಪ್ಪಿನ ಪೇಸ್ಟ್ ಮಾಡಿ ಸೇರಿಸಿ. 4 ರಿಂದ 5 ನಿಮಿಷ ಬೇಯಿಸಿ, ನಂತರ ಅಕ್ಕಿ ಸೇರಿಸಿ ಮತ್ತು ಚೆನ್ನಾಗಿ ಮಿಶ್ರಣ ಮಾಡಿ.
ಹಂತ 3: ಇನ್ನೊಂದು ಪ್ಯಾನ್ ತೆಗೆದುಕೊಂಡು ತುಪ್ಪ, ಕತ್ತರಿಸಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕೆಂಪು ಮೆಣಸಿನ ಪುಡಿ ಮತ್ತು ಟೊಮೆಟೊ ಪ್ಯೂರಿ ಸೇರಿಸಿ. ಮಸಾಲವನ್ನು ಬೇಯಿಸಿ ಮತ್ತು ಅಕ್ಕಿ ಸೇರಿಸಿ. ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಗರಂ ಮಸಾಲಾ ಸೇರಿಸಿ.
ಹಂತ 4: ನಂತರ ಒಂದು ಪ್ಲೇಟ್ನಲ್ಲಿ ಪಾಲಕ್ ರೈಸ್ ಕೆಳಭಾಗದಲ್ಲಿ ಲೇಯರ್ ಮಾಡಿ, ನಂತರ ಮಧ್ಯಭಾಗಕ್ಕೆ ವೈಟ್ ರೈಸ್ನಿಂದ ಮಾಡಿದ ಅನ್ನ ಹಾಗೂ ಅದರ ಮೇಲೆ ಟೊಮೆಟೊ ರೈಸ್ ಹಾಕಿ. ಸ್ಟಾರ್ ಸೋಂಪಿನಿಂದ ಅಲಂಕರಿಸಿ ಮತ್ತು ಸಾಂಬಾರ್ ಮತ್ತು ಚಟ್ನಿಯೊಂದಿಗೆ ಬಡಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 6:46 pm, Thu, 26 January 23