AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾಚ್ಯುಲರ್​ಗಳಿಗಾಗಿ ಚಿಕನ್ ಪೆಪ್ಪರ್ ಡ್ರೈ; ವಿಧಾನ ಸುಲಭವಿದೆ

Chicken Pepper Dry: ಮೊದಲು ಈರಳ್ಳಿ ಮತ್ತು ಟೊಮ್ಯಾಟೋವನ್ನು ಸಣ್ಣದಾಗಿ ಕತ್ತರಿಸಿ. ಹಸಿಮೆಣಸಿನಕಾಯಿ ಒಂದರಲ್ಲಿ ನಾಲ್ಕು ತುಂಡುಗಳಾಗಿ ಕತ್ತರಿಸಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಬಗ್ಗೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಸಿಗುತ್ತದೆ.

ಬ್ಯಾಚ್ಯುಲರ್​ಗಳಿಗಾಗಿ ಚಿಕನ್ ಪೆಪ್ಪರ್ ಡ್ರೈ; ವಿಧಾನ ಸುಲಭವಿದೆ
ಚಿಕನ್ ಪೆಪ್ಪರ್ ಡ್ರೈ
TV9 Web
| Edited By: sandhya thejappa|

Updated on: Dec 16, 2021 | 8:45 AM

Share

ಚಿಕನ್ ಪೆಪ್ಪರ್ ಡ್ರೈ (Chicken Pepper Dry) ಅಂದರೆ ಮಾಂಸ ಪ್ರಿಯರ ಬಾಯಲ್ಲಿ ನೀರು ಬರುತ್ತೆ. ಆದರೆ ಪೆಪ್ಪರ್ ಡ್ರೈ ಮಾಡುವುದು ರಗಳೆ ಅಂತ ಬ್ಯಾಚ್ಯುಲರ್ಸ್​ ಹೋಟೆಲ್, ರೆಸ್ಟೋರೆಂಟ್​ಗೆ ಹೋಗಿ ತಿನ್ನುತ್ತಾರೆ. ಅದು ಕೆಲವೊಮ್ಮೆ ತೃಪ್ತಿ ಕೊಡಲ್ಲ. ಎಷ್ಟೇ ಫೇಮಸ್ ರೆಸ್ಟೋರೆಂಟ್​ಗೆ ಹೋಗಿ ಚಿಕನ್ ಪೆಪ್ಪರ್ ಡ್ರೈ ಸೇವಿಸಿದರೂ ಮನೆಯಲ್ಲಿ ಅಮ್ಮ ಮಾಡಿದ ರೀತಿ ಇಲ್ಲ ಅಂತ ಬ್ಯಾಚ್ಯುಲರ್ಸ್ ಅಂದುಕೊಳ್ತಾರೆ. ಆದರೆ ಅನಿವಾರ್ಯಕ್ಕೆ ರೆಸ್ಟೋರೆಂಟ್, ಹೋಟೆಲ್​ಗೆ ಹೋಗುತ್ತಾರೆ. ಈ ಬಗ್ಗೆ ಬ್ಯಾಚ್ಯುಲರ್ಸ್ ಚಿಂತೆ ಪಡುವ ಅಗತ್ಯವಿಲ್ಲ.

ನಾವು ನಿಮಗೆ ಸುಲಭವಾಗಿ, ರುಚಿ ರುಚಿಯಾದ ಚಿಕನ್ ಪೆಪ್ಪರ್ ಡ್ರೈ ಮಾಡುವುದು ಹೇಗೆ ಅಂತ ಇಲ್ಲಿ ತಿಳಿಸಿದ್ದೇವೆ, ಗಮನಿಸಿ.

ಚಿಕನ್ ಪೆಪ್ಪರ್ ಡ್ರೈ ಮಾಡಲು ಬೇಕಾಗುವ ಸಾಮಾಗ್ರಿಗಳು (Ingredients) ಅರ್ಧ ಕೆಜಿ ಕೋಳಿ ಮಾಂಸ ಒಂದು ಸಣ್ಣ ಗಾತ್ರದ ಈರುಳ್ಳಿ ಮೂರರಿಂದ ನಾಲ್ಕು ಹಸಿಮೆಣಸಿನಕಾಯಿ ಒಂದು ಸಣ್ಣ ಗಾತ್ರದ ಟೊಮ್ಯಾಟೋ ಕಾಳು ಮೆಣಸಿನ ಪುಡಿ ಶುಂಠಿ, ಬೆಳ್ಳುಳ್ಳಿ ಪೆಸ್ಟ್ ಕೊತ್ತಂಬರಿ ಸೊಪ್ಪು ಅರಿಶಿನ ಪುಡಿ ಖಾರದ ಪುಡಿ ನಿಂಬೆಹಣ್ಣು ಉಪ್ಪು

ಮೊದಲು ಈರಳ್ಳಿ ಮತ್ತು ಟೊಮ್ಯಾಟೋವನ್ನು ಸಣ್ಣದಾಗಿ ಕತ್ತರಿಸಿ. ಹಸಿಮೆಣಸಿನಕಾಯಿ ಒಂದರಲ್ಲಿ ನಾಲ್ಕು ತುಂಡುಗಳಾಗಿ ಕತ್ತರಿಸಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಬಗ್ಗೆ ಚಿಂತೆ ಬೇಡ. ಮಾರುಕಟ್ಟೆಯಲ್ಲಿ ಸಿಗುತ್ತದೆ. ಒಂದು ಪ್ಯಾಕೆಟ್ ಶುಂಠಿ, ಬೆಳ್ಳುಳ್ಳಿ ಪೇಸ್ಟ್ ತಂದಿಟ್ಟುಕೊಳ್ಳಿ. ಕೋಳಿ ಮಾಂಸವನ್ನು ಚೆನ್ನಾಗಿ ತೊಳೆಯಿರಿ. ಮೂರರಿಂದ ನಾಲ್ಕು ಬಾರಿ ತೊಳೆದ ಬಳಿಕ ಅದಕ್ಕೆ ಸ್ವಲ್ಪ ಅರಿಶಿನ ಮತ್ತು ಒಂದು ಟೇಬಲ್ ಸ್ಪೂನ್ ಉಪ್ಪು ಹಾಕಿ ಮಿಶ್ರಣ ಮಾಡಿ. 10 ನಿಮಿಷ ಹಾಗೇ ಬಿಡಿ.

ಒಂದು ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಬಳಿಕ ಈರುಳ್ಳಿ ಹಾಕಿ. ಈರುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಹಸಿಮೆಣಸಿನಕಾಯಿ ಸೇರಿಸಿ. 30 ಸೆಕೆಂಡ್ ನಂತರ ಟೊಮ್ಯಾಟೋ ಹಾಕಿ ಫ್ರೈ ಮಾಡಿ. ಈಗ ಅದಕ್ಕೆ ಕೋಳಿ ಮಾಂಸ ಸೇರಿಸಿ. ಮಾಂಸಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಬೇಯಿಸಿ. ಬೆಂದ ನಂತರ ಮೂರರಿಂದ ನಾಲ್ಕು ಚಮಚ ಕಾಳು ಮೆಣಸಿನ ಪುಡಿ ಹಾಕಿ. ನಿಮಗೆ ಖಾರ ಇಷ್ಟವಾದರೆ ಇನ್ನೊಂದು ಚಮಚ ಜಾಸ್ತಿ ಹಾಕಬಹುದು. ನಂತರ ಒಂದು ಚಮಚ ಖಾರದ ಪುಡಿ ಹಾಕಿ. ಮಾರುಕಟ್ಟೆಯಲ್ಲಿ ಸಿಗುವ ಚಿಕನ್ ಮಸಾಲ ಪೌಡರ್ ಎರಡು ಚಮಚ ಹಾಕಿ 5 ನಿಮಿಷ ಸಣ್ಣ ಉರಿಯಲ್ಲಿ ಫ್ರೈ ಮಾಡಿ. ಕೊನೆಯದಾಗಿ ನಿಂಬೆಹಣ್ಣಿನ ರಸ ಸೇರಿಸಿ. ಗ್ಯಾಸ್ ಇಳಿಸುವ ಒಂದು ನಿಮಿಷದ ಮೊದಲು ಸಣ್ಣದಾಗಿ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪನ್ನು ಹಾಕಿ.

ಅಕ್ಕಿ ರೊಟ್ಟಿಯೊಂದಿಗೆ ಚಿಕನ್ನ ಪೆಪ್ಪರ್ ಡ್ರೈ ಸವಿಯಿರಿ.

ಇದನ್ನೂ ಓದಿ

Video: ಮೊಬೈಲ್​ ಸ್ವಿಚ್​ ಆಫ್​ ಮಾಡ್ರಿ; ಜೈಲುಪಾಲಾದ ಪುತ್ರನ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮ ಸಿಬ್ಬಂದಿಯನ್ನು ನಿಂದಿಸಿದ ಕೇಂದ್ರ ಸಚಿವ ಅಜಯ್​ ಮಿಶ್ರಾ !

Shocking News: 3 ಲಕ್ಷ ರೂ. ಟಿಪ್​​ ಪಡೆದ ಮಹಿಳಾ ಸರ್ವರ್ ರೆಸ್ಟೋರೆಂಟ್​ ಕೆಲಸದಿಂದ ಅಮಾನತು!

Follow Us
TV9 Web
TV9 Web

TV9 Kannada

Read More
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ