Video: ಮೊಬೈಲ್ ಸ್ವಿಚ್ ಆಫ್ ಮಾಡ್ರಿ; ಜೈಲುಪಾಲಾದ ಪುತ್ರನ ಬಗ್ಗೆ ಪ್ರಶ್ನಿಸಿದ್ದಕ್ಕೆ ಮಾಧ್ಯಮ ಸಿಬ್ಬಂದಿಯನ್ನು ನಿಂದಿಸಿದ ಕೇಂದ್ರ ಸಚಿವ ಅಜಯ್ ಮಿಶ್ರಾ !
ಅಜಯ್ ಮಿಶ್ರ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದ ಬಗ್ಗೆ ಕೇಳಿದೆ. ಅದಾದ ಬಳಿಕ ನಿಮ್ಮ ಪುತ್ರನ ಪ್ರಕರಣದ ಡೆವಲೆಪ್ಮೆಂಟ್ ಏನಿದೆ ಎಂದು ಪ್ರಶ್ನಿಸಿದೆ. ಆಗ ಸಚಿವರು ಬೈದರು ಎಂದು ಪತ್ರಕರ್ತ ಹೇಳಿದ್ದಾರೆ. ಅದನ್ನೊಂದು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.
ಲಖಿಂಪುರ ಖೇರಿ ಹಿಂಸಾಚಾರ (Lakhimpur Kheri Violence) ಪ್ರಕರಣದಲ್ಲಿ ಜೈಲು ಸೇರಿರುವ ಪುತ್ರನ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರನ್ನು ಕೇಂದ್ರ ಗೃಹ ಇಲಾಖೆ ರಾಜ್ಯ ಸಚಿವ ಅಜಯ್ ಮಿಶ್ರಾ ತೇನಿ (Union Minister Ajay Minister) ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ. ಅಜಯ್ ಮಿಶ್ರಾ ತಮ್ಮ ವಿಧಾನಸಭಾ ಕ್ಷೇತ್ರಕ್ಕೆ, ಸಮಾರಂಭವೊಂದನ್ನು ಉದ್ಘಾಟನೆ ಮಾಡಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಸಚಿವರನ್ನು ಕಂಡ ತಕ್ಷಣ ಪತ್ರಕರ್ತರು ತೀರ ಸಹಜವಾಗಿ, ಲಖಿಂಪುರ ಖೇರಿ ಹಿಂಸಾಚಾರ, ಆಶೀಶ್ ಮಿಶ್ರಾ (Ashish Mishra) ಬಂಧನದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೆ ಉತ್ತರ ಹೇಳದೆ, ಕಿರಿಕಿರಿಗೊಂಡ ಸಚಿವರು ಮಾಧ್ಯಮದವರನ್ನೇ ನಿಂದಿಸಿದ್ದಾರೆ.
ಪತ್ರಕರ್ತನೊಬ್ಬ ಅಜಯ್ ಮಿಶ್ರಾ ತೇನಿ ಬಳಿ ಪ್ರಶ್ನೆ ಮಾಡಿದ್ದೇ ತಡ, ‘ನಾಚಿಕೆಯೇನೂ ಇಲ್ಲ, ಆರೋಪಿಯನ್ನು ಜೈಲಿಗೆ ಕಳಿಸಿದ ಮಾಧ್ಯಮದವರೇ ದೊಡ್ಡ ಕಳ್ಳರು. ನಿಮ್ಮ ಮೊಬೈಲ್ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳಿ. ಈಗ ನಿಮಗೇನು ಹೇಳಬೇಕು’ ಎಂದು ಸಚಿವರು ಕಿಡಿಕಾರಿದ್ದು ವಿಡಿಯೋದಲ್ಲಿ ಕೇಳಿಸುತ್ತದೆ. ಹಾಗೇ, ಈ ವಿಡಿಯೋ ತುಂಬ ವೈರಲ್ ಆಗುತ್ತಿದೆ. ಅದರೊಂದಿಗೆ ಪ್ರಶ್ನೆ ಕೇಳಿ, ಸಚಿವರ ಬಳಿ ನಿಂದನೆಗೆ ಒಳಗಾದ ಪತ್ರಕರ್ತ ಒಂದು ವಿಡಿಯೋ ಮೆಸೇಜ್ನ್ನು ವೈರಲ್ ಮಾಡಿದ್ದಾರೆ. ಅಜಯ್ ಮಿಶ್ರ ಉದ್ಘಾಟನೆ ಮಾಡಲಿರುವ ಕಾರ್ಯಕ್ರಮದ ಬಗ್ಗೆ ಕೇಳಿದೆ. ಅದಾದ ಬಳಿಕ ನಿಮ್ಮ ಪುತ್ರನ ಪ್ರಕರಣದ ಡೆವಲೆಪ್ಮೆಂಟ್ ಏನಿದೆ ಎಂದು ಪ್ರಶ್ನಿಸಿದೆ. ಆಗ ಸಚಿವರು ಬೈದರು. ಇದೊಂದು ಮೂರ್ಖತನದ ಪ್ರಶ್ನೆ ಎಂದು ನಮ್ಮೆಲ್ಲರನ್ನೂ ನಿಂದಿಸಿದರು ಎಂದು ಹೇಳಿಕೊಂಡಿದ್ದಾರೆ.
#WATCH | MoS Home Ajay Kumar Mishra ‘Teni’ hurls abuses at a journalist who asked a question related to charges against his son Ashish in the Lakhimpur Kheri violence case. pic.twitter.com/qaBPwZRqSK
— ANI UP (@ANINewsUP) December 15, 2021
ಅಕ್ಟೋಬರ್ 3ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ಮೌನವಾಗಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ ಪುತ್ರ ಆಶೀಶ್ ಮಿಶ್ರಾ ಬೆಂಗಾವಲು ವಾಹನ ಹರಿದಿತ್ತು. ಆ ವಾಹನದಲ್ಲಿ ಆಶೀಶ್ ಮಿಶ್ರಾ ಕೂಡ ಇದ್ದರು ಎಂಬುದನ್ನು ಪ್ರತ್ಯಕ್ಷದರ್ಶಿಗಳು ಹೇಳಿದ್ದರು. ನಂತರ ಅವರನ್ನು ಬಂಧಿಸಲಾಗಿತ್ತು. ಸದ್ಯ ಆಶೀಶ್ ಮಿಶ್ರಾ ಜೈಲಿನಲ್ಲಿಯೇ ಇದ್ದಾರೆ. ಇದೊಂದು ಪೂರ್ವನಿಯೋಜಿತ ಸಂಚು ಎಂದು ತನಿಖಾಧಿಕಾರಿಗಳೂ ಹೇಳಿದ್ದಾರೆ. ಆಶೀಶ್ ಮಿಶ್ರಾ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರಿಂದ ಅಜಯ್ ಮಿಶ್ರಾರನ್ನು ವಜಾಗೊಳಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹ ಮಾಡುತ್ತಿವೆ. ಈಗಂತೂ ಇದು ಪಿತೂರಿ ಎಂದು ತನಿಖಾಧಿಕಾರಿಗಳು ಹೇಳಿದ ಮೇಲೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಮ್ಮೆ ಇದೇ ಆಗ್ರಹವನ್ನು ಮುಂದಿಟ್ಟಿದ್ದಾರೆ.
ಇದನ್ನೂ ಓದಿ: ಒಂದೊಂದೇ ರಾಜ್ಯವಾಗಿ ವ್ಯಾಪಿಸುತ್ತಿದೆ ಒಮಿಕ್ರಾನ್ ವೈರಾಣು; ಪಶ್ಚಿಮ ಬಂಗಾಳದಲ್ಲಿ 7ವರ್ಷದ ಬಾಲಕನಿಗೆ ಸೋಂಕು
Published On - 4:35 pm, Wed, 15 December 21