ಸಾಂದರ್ಭಿಕ ಚಿತ್ರ
ಸ್ಲಿಮ್ ಆಗಿ ಕಾಣಲು ಯಾರಿಗೆ ತಾನೆ ಇಷ್ಟ ಇಲ್ಲ. ಸಣ್ಣ ಇದ್ದರೆ ಯಾರೂ ನಮ್ಮನ್ನು ರೇಗಿಸುವುದಿಲ್ಲ, ಇಷ್ಟ ಆದ ಎಲ್ಲಾ ಬಟ್ಟೆಗಳನ್ನು ಧರಿಸಬಹುದು ಎನ್ನುವುದಿರುತ್ತದೆ. ಅದರಲ್ಲಿಯೂ ಈ ಪುರುಷರಿಗಿಂತ ಮಹಿಳೆಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಬಟ್ಟೆ ಖರೀದಿ ಮಾಡುವಾಗ ಕೂಡ ಈ ಬಟ್ಟೆಯಲ್ಲಿ ತೆಳ್ಳಗೆ ಕಾಣುತ್ತೇನಾ ಎಂದು ನೋಡುವುದೇ ಹೆಚ್ಚು. ದಪ್ಪಗಿರುವ ಹುಡುಗಿಯರು ಈ ರೀತಿ ಬಟ್ಟೆ ಧರಿಸಿದ್ರೆ ದಪ್ಪಗೆ ಕಾಣುವುದಿಲ್ಲ. ಹೀಗಾಗಿ ನೀವೇನಾದ್ರೂ ದಪ್ಪಗಿದ್ರೆ ಈ ರೀತಿ ಬಟ್ಟೆಯನ್ನು ಧರಿಸಿದ್ರೆ ಸ್ಲಿಮ್ ಆಗಿ ಕಾಣುವುದಂತೂ ಪಕ್ಕಾ. ಹೀಗಾಗಿ ಬಟ್ಟೆ ಖರೀದಿ ಮಾಡುವಾಗ ಈ ಕೆಲ ವಿಷಯಗಳ ಬಗ್ಗೆ ಗಮನಹರಿಸಿ.
- ತಿಳಿ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಳ್ಳಿ : ಎಲ್ಲರಿಗೂ ಕೂಡ ಸ್ಲಿಮ್ ಆಗಿ ಕಾಣಬೇಕೆನ್ನುವುದಿರುತ್ತದೆ. ಮಹಿಳೆಯರಿಗೆ ಬೇಸಿಗೆ ಋತುವಿನಲ್ಲಿ ತೆಳ್ಳಗೆ ಕಾಣಬೇಕು ಎನ್ನುವುದಿರುತ್ತದೆ. ಈ ತಿಳಿ ಬಣ್ಣದ ಬಟ್ಟೆಗಳು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಹೀಗಾಗಿ ತಿಳಿ ಬಣ್ಣಗಳು ಆರ್ದ್ರ ವಾತಾವರಣದೊಂದಿಗೆ ಚೆನ್ನಾಗಿ ಹೊಂದಿಕೊಳ್ಳುವ ಡಾರ್ಕ್ ಬಣ್ಣದ ಬಟ್ಟೆಗಳಿಗಿಂತ ತಿಳಿ ಬಣ್ಣದ ಬಟ್ಟೆಗಳನ್ನೆ ಧರಿಸಿ ಯಂಗ್ ಆಗಿ ಕಾಣಿಸಿಕೊಳ್ಳಬಹುದು.
- ವಿ ನೆಕ್ಲೈನ್ ಉಡುಗೆ ಧರಿಸಿ : ದಪ್ಪಗೆ ಇದ್ದು ದೇಹ ಸರಿಯಾದ ಶೇಪ್ ಹೊಂದಿಲ್ಲವಾದರೆ ವಿ ನೆಕ್ಲೈನ್ ಉಡುಗೆ ಆಯ್ಕೆ ಮಾಡಿಕೊಳ್ಳುವುದು ಒಳ್ಳೆಯದು. ಈ ರೀತಿ ಉಡುಗೆಗಳು ತಲೆ ಎತ್ತರವಾಗಿ ಕಾಣುವಂತೆ ಮಾಡಿ ದೇಹ ತೆಳ್ಳಗೆ ಸ್ಲಿಮ್ ಆಗಿ ಕಾಣುವಂತೆ ನಿಮ್ಮತ್ತ ನೋಟವನ್ನು ಬದಲಾಯಿಸುತ್ತದೆ.
- ಜೀನ್ಸ್ ಧರಿಸುವಾಗ ಈ ವಿಷ್ಯ ತಿಳಿದಿರಲಿ : ಯಾವುದೇ ಋತುವಿರಲಿ, ಜೀನ್ಸ್ ಪ್ಯಾಂಟ್ ನೊಂದಿಗೆ ಯಾವುದಾದರೂ ಟಾಪ್ ಧರಿಸುವುದು ಮಾಮೂಲಿ. ಬೇಸಿಗೆಯಲ್ಲಿ ಸ್ಲಿಮ್ ಆಗಿ ಕಾಣಿಸಬೇಕೆಂದಿದ್ದರೆ ಕಪ್ಪು ಅಥವಾ ಗಾಢ ಬಣ್ಣದ, ದೊಡ್ಡ ಸೊಂಟದ ಸೈಜ್, ಸ್ಲಿಮ್ ಫಿಟ್ ಜೀನ್ಸ್ ಆಯ್ಕೆ ಮಾಡಿಕೊಳ್ಳುವುದನ್ನು ಮರೆಯದಿರಿ. ಈ ರೀತಿ ಜೀನ್ಸ್ ಪ್ಯಾಂಟ್ ಗಳ ಆಯ್ಕೆ ಮಾಡಿಕೊಂಡರೆ ನೀವು ಸ್ವಲ್ಪ ದಪ್ಪ ಇದ್ದರೂ ಕಾಲು ತೊಡೆ ಸ್ಲಿಮ್ ಆಗಿ ಕಾಣಿಸುತ್ತದೆ.
- ಒಂದೇ ಬಣ್ಣದ ಬಟ್ಟೆ ಆಯ್ಕೆ ಮಾಡಿಕೊಳ್ಳಿ : ನೀವು ಎಷ್ಟೇ ಇದ್ದರೂ ನೀವು ಧರಿಸುವ ಬಟ್ಟೆಯೂ ಕೂಡ ನಿಮ್ಮನ್ನು ತೆಳ್ಳಗೆ ಅಥವಾ ದಪ್ಪಗೆ ಕಾಣುವಂತೆ ಮಾಡುತ್ತದೆ. ಒಂದು ವೇಳೆ ನೀವೇನಾದ್ರೂ ತೆಳ್ಳಗೆ ಕಾಣಿಸಿಕೊಳ್ಳಲು ಬಯಸಿದರೆ, ಮೇಲಿನಿಂದ ಕೆಳಕ್ಕೆ ಒಂದೇ ಬಣ್ಣ ಹೊಂದಿರುವ ಬಟ್ಟೆಯನ್ನೇ ಧರಿಸಿ. ಇದು ನೋಡುವವರ ಕಣ್ಣಿಗೆ ಲಂಬ ರೇಖೆಯನ್ನು ರಚಿಸುವ ಕಾರಣ ಎಷ್ಟೇ ದಪ್ಪ ಇದ್ದರೂ ಕೂಡ ಎತ್ತರವಾಗಿ ತೆಳ್ಳಗೆ ಕಾಣಿಸುವಂತೆ ಮಾಡುತ್ತದೆ.
- ಎ-ಲೈನ್ ಉಡುಪುಗಳ ಆಯ್ಕೆಯಿರಲಿ : ಎ-ಲೈನ್ ಉಡುಪುಗಳು ದಪ್ಪಗೆ ಇರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ. ಈ ಉದ್ದನೆಯ ಉಡುಪುಗಳು ಸೊಂಟವನ್ನು ತೆಳ್ಳಗೆ ಕಾಣುವಂತೆ ಮಾಡುತ್ತದೆ. ಹೀಗಾಗಿ ದಪ್ಪ ಇರುವ ಹುಡುಗಿಯರು ಎ-ಲೈನ್ ಉಡುಗೆಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ