Relationship Tips : ವಿಚ್ಛೇದನದವರೆಗೆ ತಲುಪಿದ ದಾಂಪತ್ಯ ಜೀವನವನ್ನು ಸರಿಪಡಿಸಿಕೊಳ್ಳುವುದೇಗೆ? ಇಲ್ಲಿದೆ ಸರಳ ಸಲಹೆಗಳು

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 11, 2024 | 5:37 PM

ಮದುವೆ ಎನ್ನುವುದು ಒಂದು ದಿನ ಬಂಧವಲ್ಲ. ಜೀವನ ಪರ್ಯಂತ ಗಂಡು ಹೆಣ್ಣು ಜೊತೆಗೆ ಬದುಕಬೇಕಾಗುತ್ತದೆ. ಆದರೆ ಇತ್ತೀಚೆಗಿನ ದಿನಗಳಲ್ಲಿ ಮದುವೆ ಎನ್ನುವ ಸುಮಧುರ ಬಾಂಧವ್ಯ ಅರ್ಥವನ್ನು ಕಳೆದುಕೊಳ್ಳುತ್ತಿದೆ. ಸಣ್ಣ ಪುಟ್ಟ ವಿಷಯಗಳಿಗೆ ಡೈವೋರ್ಸ್ ಒಂದೇ ಮಾರ್ಗ ಎನ್ನುವ ನಿರ್ಧಾರಕ್ಕೆ ಎಷ್ಟೋ ದಂಪತಿಗಳು ಬರುತ್ತಿದ್ದಾರೆ. ಆದರೆ ಡೈವೋರ್ಸ್ ಹಂತದಲ್ಲಿರುವ ದಂಪತಿಗಳು ಈ ಕೆಲವು ಸಲಹೆಗಳನ್ನು ಅನುಸರಿಸಿದರೆ ದಾಂಪತ್ಯ ಜೀವನವನ್ನು ಸರಿಪಡಿಸಿಕೊಳ್ಳಬಹುದು.

Relationship Tips : ವಿಚ್ಛೇದನದವರೆಗೆ ತಲುಪಿದ ದಾಂಪತ್ಯ ಜೀವನವನ್ನು ಸರಿಪಡಿಸಿಕೊಳ್ಳುವುದೇಗೆ? ಇಲ್ಲಿದೆ ಸರಳ ಸಲಹೆಗಳು
ಸಾಂದರ್ಭಿಕ ಚಿತ್ರ
Follow us on

ಯಾವುದೇ ಸಂಬಂಧವನ್ನು ಕಾಪಾಡಿಕೊಳ್ಳುವುದು ಸುಲಭದ ವಿಷಯ ಅಲ್ಲವೇ ಅಲ್ಲ. ಪ್ರೀತಿ ಬೆಟ್ಟದಷ್ಟು ಇದ್ದರೂ ಸಣ್ಣ ಪುಟ್ಟ ಮುನಿಸು, ಮನಸ್ತಾಪಗಳು ಆ ಪ್ರೀತಿಯನ್ನು ಮರೆಮಾಚಿ ಬಿಡುತ್ತದೆ. ಈ ದಂಪತಿಗಳಲ್ಲಿ, ಸಂಬಂಧವು ಅನೇಕ ವಿಷಯಗಳಿಂದಾಗಿ ಹಳಸಿ ಹೋಗುವ ಸಾಧ್ಯತೆ ಇದೆ. ಕೊನೆಗೆ ಜೊತೆಗೆ ಇರಲು ಸಾಧ್ಯವೇ ಇಲ್ಲ ಎನ್ನುವ ತೀರ್ಮಾನಕ್ಕೆ ಬರುತ್ತಾರೆ. ಆದರೆ ದಂಪತಿಗಳಿಬ್ಬರೂ ಎಲ್ಲವನ್ನು ಮರೆತು ಒಬ್ಬರು ಇನ್ನೊಬ್ಬರಿಗಾಗಿ ಬದುಕಿದರೆ ಅದಕ್ಕಿಂತ ಸ್ವರ್ಗ ಮತ್ತೊಂದಿಲ್ಲ.

* ಪ್ರೀತಿಯನ್ನು ವ್ಯಕ್ತಪಡಿಸಿ : ವಿಚ್ಛೇದನ ನೀಡಲು ಇಷ್ಟವಿಲ್ಲದಿದ್ದರೆ ಕೊನೆಯ ಹಂತದಲ್ಲಿ ಸಂಬಂಧವನ್ನು ಉಳಿಸಿಕೊಳ್ಳಲು ಅವಕಾಶವಿದೆ. ಸತಿ ಪತಿಯರಲ್ಲಿ ಏನೇ ಮನಸ್ತಾಪಗಳಿದ್ದರೂ, ಅದನ್ನೆಲ್ಲವನ್ನು ಮರೆತು ಪ್ರೀತಿಯನ್ನು ವ್ಯಕ್ತಪಡಿಸಬಹುದು. ನಿಮ್ಮ ಸಂಗಾತಿಯ ಮೇಲೆ ನಿಮಗಿರುವ ಪ್ರೀತಿಯನ್ನು ಹೇಳಲು ಇದೊಂದು ಒಳ್ಳೆಯ ಅವಕಾಶವಾಗಿದೆ.

* ಜೊತೆಯಾಗಿ ಸಮಯವನ್ನು ಕಳೆಯಿರಿ : ಗಂಡ ಹೆಂಡಿರ ನಡುವಿನ ಅಂತರವು ವಿಚ್ಛೇದನಕ್ಕೆ ಕಾರಣವಾಗಿರಬಹುದು. ಹೀಗಾಗಿ ವಿಚ್ಛೇದನ ಆಲೋಚನೆ ಬಂದ ತಕ್ಷಣವೇ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ಹೀಗಾಗಿ ದಂಪತಿಗಳಿಬ್ಬರೂ ಒಬ್ಬರನ್ನೊಬ್ಬರು ಅರಿತು ಕೊಂಡು ಡೈವೋರ್ಸ್ ನಂತಹ ಕಠಿಣ ನಿರ್ಧಾರದಿಂದ ಹೊರ ಸರಿಯಲು ಸಾಧ್ಯವಾಗುತ್ತದೆ.

* ಲೈಂಗಿಕ ಸಂಬಂಧ ಉತ್ತಮವಾಗಿರಲಿ : ಸಂಸಾರದಲ್ಲಿ ಹೊಂದಾಣಿಕೆಯೂ ಇರಬೇಕಾದರೆ ಲೈಂಗಿಕ ಜೀವನವು ಮುಖ್ಯವಾಗುತ್ತದೆ. ಒಂದು ವೇಳೆ ದಂಪತಿಗಳ ನಡುವೆ ಲೈಂಗಿಕ ಸಂಬಂಧ ಚೆನ್ನಾಗಿಲ್ಲ ಎನ್ನುವ ಕಾರಣಕ್ಕೆ ದೂರವಾಗಲು ಹೊರಟಿದ್ದರೆ ಸಂಸಾರವನ್ನು ಸರಿಪಡಿಸಿಕೊಳ್ಳುವುದು ಕಷ್ಟವೇನಲ್ಲ. ಹೀಗಾಗಿ ಸತಿ ಪತಿಗಳಿಬ್ಬರೂ ಆದಷ್ಟು ರೊಮ್ಯಾಂಟಿಕ್‌ ಆಗಿದ್ದರೆ ದೂರವಾಗುವುದನ್ನು ತಪ್ಪಿಸಬಹುದು.

* ತಜ್ಞರೊಂದಿಗೆ ಆಪ್ತ ಸಮಾಲೋಚನೆ ಮಾಡಿ : ಕೆಲವೊಮ್ಮೆ ಹೊಂದಾಣಿಕೆ ಸಾಧ್ಯವಿಲ್ಲ ಎನ್ನುವ ಮಟ್ಟಿಗೆ ದಂಪತಿಗಳಿಬ್ಬರಿಗೂ ಅನಿಸಿರಬಹುದು. ಹೀಗಾದಾಗ ಸತಿ ಪತಿಗಳಿಬ್ಬರೂ ತಜ್ಞರೊಂದಿಗೆ ಸಮಾಲೋಚನೆ ನಡೆಸುವ ಮೂಲಕ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಪ್ರಯತ್ನಿಸಬೇಕು.

* ಅನಗತ್ಯವಾಗಿ ಜಗಳವಾಗುವುದನ್ನು ತಪ್ಪಿಸಿ : ಗಂಡ ಹೆಂಡಿರ ನಡುವೆ ಹೊಂದಾಣಿಕೆಯೂ ಇಲ್ಲದಿದ್ದಾಗ ಜಗಳ, ಮನಸ್ತಾಪಗಳು ಆಗುತ್ತದೆ. ಕೆಲವೊಮ್ಮೆ ಜಗಳದಿಂದ ಮನಸ್ಸುಗಳು ಒಡೆದು ಹೋಗಬಹುದು. ಜೊತೆಗೆ ಬಾಳಬೇಕು ಎನ್ನುವ ಒಬ್ಬರ ಮನಸ್ಸಿನಲ್ಲಿದ್ದರೆ ಜಗಳವಾಗುವ ಸನ್ನಿವೇಶವನ್ನು ತಪ್ಪಿಸುವುದು ಒಳ್ಳೆಯದು. ಪದೇ ಪದೇ ಮನಸ್ಸುಗಳು ಒಡೆದಂತೆ ನೋಡಿಕೊಳ್ಳುವ ಜವಾಬ್ದಾರಿ ಇಬ್ಬರಿಗೂ ಇದೆ ಎನ್ನುವುದನ್ನು ಮರೆಯದಿರಿ.

ಇದನ್ನೂ ಓದಿ: ಮುಟ್ಟು ನಿಲ್ಲುವ ಸಮಯದಲ್ಲಿ ಮಹಿಳೆಯರ ಆಹಾರ ಕ್ರಮ ಹೇಗಿರಬೇಕು? ಇಲ್ಲಿದೆ ಸಿಂಪಲ್ ಟಿಪ್ಸ್

* ಇಬ್ಬರಿಗೂ ಒಪ್ಪಿಗೆ ಇದೆಯೇ ತಿಳಿದುಕೊಳ್ಳಿ : ದೂರವಾಗುವ ನಿರ್ಧಾರಕ್ಕೆ ಬರುವ ಮುನ್ನ ಇಬ್ಬರೂ ಜೊತೆಯಾಗಿ ಕುಳಿತು ಚರ್ಚಿಸಿ. ಮತ್ತೆ ದಾಂಪತ್ಯ ಜೀವನವನ್ನು ಮುಂದುವರೆಸುವ ಆಯ್ಕೆಯೂ ನಿಮ್ಮ ಕೈಯಲ್ಲೇ ಇದೆ. ಆದರೆ ದಂಪತಿಗಳ ಕೊನೆಯ ಆಯ್ಕೆಯೇ ಡೈವೋರ್ಸ್ ಎನ್ನುವುದಾದರೆ ಮತ್ತೆ ಜೊತೆಗೆ ಬದುಕಲು ಸಾಧ್ಯವಿಲ್ಲ. ದೂರವಾಗುವ ಬಗ್ಗೆ ಇಬ್ಬರ ಅಭಿಪ್ರಾಯವೇನು ಎಂದು ತಿಳಿಯುವುದು ಮುಖ್ಯವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: