Cooking Tips : ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಟೆನ್ಶನ್ ಮಾಡಿಕೊಳ್ಬೇಡಿ, ತಕ್ಷಣವೇ ಹೀಗೆ ಮಾಡಿ

ಯಾವುದೇ ಅಡುಗೆಯೇ ಇರಲಿ ಉಪ್ಪಿಯಿಲ್ಲದೇ ರುಚಿಸುವುದೇ ಇಲ್ಲ. ಉಪ್ಪು ಕಡಿಮೆಯಾದರೆ, ಬೆರೆಸಿಯಾದರೂ ಊಟ ಮಾಡಬಹುದು. ಹೆಚ್ಚಾದರೆ ಆಹಾರವನ್ನು ಸೇವಿಸಲು ಆಗುವುದೇ ಇಲ್ಲ. ಕೆಲವೊಮ್ಮೆ ಅಪ್ಪಿತಪ್ಪಿ ಅಡುಗೆಗೆ ಉಪ್ಪು ಹೆಚ್ಚಾದರೆ, ತಕ್ಷಣವೇ ಹೀಗೆ ಮಾಡಿದರೆ ಆಹಾರದಲ್ಲಿರುವ ಉಪ್ಪಿನಾಂಶವನ್ನು ಕಡಿಮೆ ಮಾಡಬಹುದು.

Cooking Tips : ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಟೆನ್ಶನ್ ಮಾಡಿಕೊಳ್ಬೇಡಿ, ತಕ್ಷಣವೇ ಹೀಗೆ ಮಾಡಿ
Follow us
ಅಕ್ಷತಾ ವರ್ಕಾಡಿ
|

Updated on: Jun 11, 2024 | 7:40 PM

ಒಬ್ಬರ ಕೈ ರುಚಿ ಮತ್ತೊಬ್ಬರ ಕೈ ರುಚಿಗೆ ಹೋಲಿಸಿದರೆ ಭಿನ್ನವಾಗಿರುತ್ತದೆ. ಅಡುಗೆ ಮಾಡುವಾಗ ಕೆಲವೊಮ್ಮೆ ರುಚಿಯಲ್ಲಿ ವ್ಯತ್ಯಾಸವಾಗಬಹುದು. ರುಚಿ ಬದಲಾದರೆ ಹೇಗೋ ತಿನ್ನಬಹುದು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡೋದು. ಮನೆಗೆ ಅತಿಥಿಗಳು ಬರುತ್ತಾರೆ ಅಂತಾದರೆ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹೀಗಾಗಿ ಅದೆಷ್ಟೋ ಸಲ ಅಡುಗೆ ಉಪ್ಪಿರುವ ಕಾರಣಕ್ಕೆ ತಯಾರಿಸಿದ ಪದಾರ್ಥಗಳನ್ನು ಬಿಸಾಡುತ್ತಾರೆ. ಕೆಲವರು ಬೇರೆ ಅಡುಗೆ ಮಾಡಿ ಅತಿಥಿಗಳ ಮುಂದೆ ಮರ್ಯಾದೆಯನ್ನು ಉಳಿಸಿಕೊಳ್ಳುವುದಿದೆ. ಆದರೆ ಈ ಕೆಲವು ಟ್ರಿಕ್ಸ್ ಬಳಸಿದರೆ ಅಡುಗೆಯಲ್ಲಿ ಹೆಚ್ಚಾಗಿರುವ ಉಪ್ಪನ್ನು ಕಡಿಮೆ ಮಾಡಬಹುದು.

  1. ಸಾರಿಗೆ ಉಪ್ಪು ಹೆಚ್ಚಾಗಿದ್ದರೆ ನೀರು ಬೆರೆಸಿ ಮತ್ತೊಮ್ಮೆ ಕುದಿಸಿಕೊಳ್ಳುವುದು ಒಳ್ಳೆಯದು. ಹೀಗೆ ಮಾಡಿದ್ದಲ್ಲಿ ಬೆರೆಸಿದ ಹೆಚ್ಚುವರಿ ನೀರಲ್ಲಿ ಉಪ್ಪು ಕರಗಿ ಹೋಗುತ್ತದೆ.
  2. ಅಡುಗೆಯ ಹೆಚ್ಚು ಉಪ್ಪಾಗಿದ್ದರೆ, ಅದನ್ನು ಸರಿ ಮಾಡಲು ಹುರಿದ ಕಡಲೆ ಹಿಟ್ಟನ್ನು ಬೆರೆಸುವುದು ಉತ್ತಮ. ಇದು ರುಚಿಯನ್ನು ಹೆಚ್ಚಿಸಿ, ಉಪ್ಪಿನಾಂಶವು ಕಡಿಮೆಯಾಗುತ್ತದೆ.
  3. ನಿಂಬೆ ರಸವನ್ನು ಬಳಸುವ ಮೂಲಕ, ನೀವು ಅಡುಗೆಯಲ್ಲಿನ ಹೆಚ್ಚುವರಿ ಉಪ್ಪನ್ನು ಸುಲಭವಾಗಿ ಕಡಿಮೆ ಮಾಡಬಹುದು.
  4. ಸಾಂಬಾರು ಉಪ್ಪಾಗಿದ್ದರೆ ಎರಡರಿಂದ ಮೂರು ಚಮಚ ನಿಂಬೆ ರಸವನ್ನು ಮಿಶ್ರಣವನ್ನು ಸೇರಿಸಿದರೆ ಸಮತೋಲನಕ್ಕೆ ಬರುತ್ತದೆ.
  5. ಉಪ್ಪಾಗಿರುವ ಅಡುಗೆಗೆ ತಕ್ಷಣವೇ ಮೊಸರನ್ನು ಬೆರೆಸಿ, ಎರಡರಿಂದ ಮೂರು ನಿಮಿಷಗಳ ಕಾಲ ಸಾಂಬಾರು ಅಥವಾ ಗ್ರೇವಿಯನ್ನು ಚೆನ್ನಾಗಿ ಕುದಿಸಿಬೇಕು. ಈ ಮೊಸರು ಉಪ್ಪಿನ ಅಂಶವನ್ನು ಹೀರಿಕೊಳ್ಳುತ್ತದೆ.
  6. ಅಡುಗೆಯಲ್ಲಿ ಉಪ್ಪಿನಾಂಶವು ಹೆಚ್ಚಾಗಿದರೆ ಬೇಯಿಸಿದ ಆಲೂಗಡ್ಡೆಯನ್ನು ಬಳಸಬಹುದು. ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಪದಾರ್ಥಕ್ಕೆ ಮಿಶ್ರಣ ಮಾಡಿದರೆ ಉಪ್ಪು ಸಮತೋಲನಕ್ಕೆ ಬರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್