ಬಿಪಿ ಇಲ್ಲವೆಂದು ಹೆಚ್ಚು ಉಪ್ಪು ಸೇವನೆ ಮಾಡುವವರೇ ಎಚ್ಚರ! ಈ ಸಮಸ್ಯೆ ಹೆಚ್ಚಾಗಬಹುದು

ಉಪ್ಪು ಬಿಪಿಯನ್ನು ಹೆಚ್ಚಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡ ಇರುವವರಿಗೆ ವೈದ್ಯರು, ಕಡಿಮೆ ಉಪ್ಪನ್ನು ಸೇವಿಸಲು ಸಲಹೆ ನೀಡುತ್ತಾರೆ. ಆದರೆ ಬಿಪಿ ಸಾಮಾನ್ಯವಾಗಿರುವವರು ಅಂದರೆ ಬಿಪಿ ಸಮಸ್ಯೆ ಇಲ್ಲದವರು "ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ ನಾವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ತಿನ್ನಬಹುದು" ಎಂದು ಭಾವಿಸುತ್ತಾರೆ. ನೀವು ಕೂಡ ಇದೇ ರೀತಿ ಭಾವಿಸುತ್ತೀರಾ? ಆದರೆ ತಜ್ಞರು ಈ ರೀತಿ ತಿಳಿದುಕೊಳ್ಳುವುದು ತಪ್ಪು ಎನ್ನುತ್ತಾರೆ.

ಬಿಪಿ ಇಲ್ಲವೆಂದು ಹೆಚ್ಚು ಉಪ್ಪು ಸೇವನೆ ಮಾಡುವವರೇ ಎಚ್ಚರ! ಈ ಸಮಸ್ಯೆ ಹೆಚ್ಚಾಗಬಹುದು
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 10, 2024 | 5:37 PM

ಇತ್ತೀಚಿನ ದಿನಗಳಲ್ಲಿ ಅನೇಕರು ಎದುರಿಸುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಅಧಿಕ ರಕ್ತದೊತ್ತಡವು ಒಂದಾಗಿದೆ. ಮೊದಲು ಈ ಸಮಸ್ಯೆ ಹೆಚ್ಚಾಗಿ 50 ವರ್ಷ ದಾಟಿದವರಲ್ಲಿ ಕಂಡುಬರುತ್ತಿತ್ತು ಆದರೆ ನಮ್ಮ ಜೀವನಶೈಲಿ ಮತ್ತು ಆಹಾರ ಸೇವನೆಯಲ್ಲಿನ ಬದಲಾವಣೆಗಳಿಂದಾಗಿ, ಚಿಕ್ಕ ಮಕ್ಕಳಲ್ಲಿಯೂ ಬಿಪಿ ಸಮಸ್ಯೆ ಕಂಡುಬರುತ್ತಿದೆ. ಇನ್ನು ಕೆಲವರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವುದರಿಂದ ಮತ್ತು ಪ್ರತಿನಿತ್ಯ ಹೊರಗಿನ ಆಹಾರವನ್ನು ಸೇವಿಸುವುದರಿಂದ, ಅದರಲ್ಲಿಯೂ ವಿಶೇಷವಾಗಿ ಉದ್ಯೋಗದಿಂದಾಗಿ ಬಿಪಿ ಹೆಚ್ಚುತ್ತಿದೆ. ಆದರೆ ಇದೆಲ್ಲದರ ಹೊರತಾಗಿ, ಹೆಚ್ಚಿನ ಪ್ರಮಾಣದ ಉಪ್ಪಿನ ಸೇವನೆಯು ಬಿಪಿಯನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಉಪ್ಪು ಬಿಪಿಯನ್ನು ಹೆಚ್ಚಿಸುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡ ಇರುವವರಿಗೆ ವೈದ್ಯರು, ಕಡಿಮೆ ಉಪ್ಪನ್ನು ಸೇವಿಸಲು ಸಲಹೆ ನೀಡುತ್ತಾರೆ. ಆದರೆ ಬಿಪಿ ಸಾಮಾನ್ಯವಾಗಿರುವವರು ಅಂದರೆ ಬಿಪಿ ಸಮಸ್ಯೆ ಇಲ್ಲದವರು “ನಮಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ, ನಾವು ಹೆಚ್ಚಿನ ಪ್ರಮಾಣದಲ್ಲಿ ಉಪ್ಪನ್ನು ತಿನ್ನಬಹುದು” ಎಂದು ಭಾವಿಸುತ್ತಾರೆ. ನೀವು ಕೂಡ ಇದೇ ರೀತಿ ಭಾವಿಸುತ್ತೀರಾ? ಆದರೆ ತಜ್ಞರು ಈ ರೀತಿ ತಿಳಿದುಕೊಳ್ಳುವುದು ತಪ್ಪು ಎನ್ನುತ್ತಾರೆ.

ಇದನ್ನೂ ಓದಿ: ನೆನೆಸಿದ ಖರ್ಜೂರ ತಿನ್ನುವುದರಿಂದ ಹೃದಯಕ್ಕೆ ಒಳ್ಳೆಯದು

ಸಾಮಾನ್ಯ ರಕ್ತದೊತ್ತಡ ಹೊಂದಿರುವವರು ಸಹ ಹೆಚ್ಚು ಉಪ್ಪು ಸೇವಿಸಿದರೆ ಹೃದಯ ಮತ್ತು ಮೆದುಳಿನ ರಕ್ತನಾಳಗಳಲ್ಲಿ ಪ್ಲೇಕ್ ಗಳು ಉಂಟಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಹೇಳುತ್ತಾರೆ. ಸ್ವೀಡನ್ ನ ಸಂಶೋಧಕರು ನಡೆಸಿದ ಅಧ್ಯಯನಗಳಲ್ಲಿ ಇದು ಬಹಿರಂಗವಾಗಿದೆ. ಹೆಚ್ಚು ಉಪ್ಪು ಸೇವಿಸುವ ಜನರಲ್ಲಿ, ಅಧಿಕ ರಕ್ತದೊತ್ತಡ ಸಮಸ್ಯೆ ಕಾಣಿಸಿಕೊಳ್ಳುವುದಕ್ಕಿಂತ ಮೊದಲು, ರಕ್ತನಾಳಗಳಿಗೆ ಹಾನಿ ಉಂಟಾಗುತ್ತದೆ ಎಂದು ಸಂಶೋಧನೆ ತೋರಿಸಿ ಕೊಟ್ಟಿದೆ. ಜೊತೆಗೆ ಅಧಿಕ ಉಪ್ಪಿನ ಸೇವನೆ ಮತ್ತು ರಕ್ತನಾಳಗಳಲ್ಲಿನ ಪ್ಲೇಕ್ ನಡುವೆ ಸಂಬಂಧ ಕಂಡುಬಂದಿದೆ. ಉಪ್ಪಿನ ಸೇವನೆಯು ಹೆಚ್ಚಾದಷ್ಟೂ ಪ್ಲೇಕ್ ಗಳ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡ ಇರುವವರು ಮಾತ್ರವಲ್ಲ, ಇತರರು ಸಹ ಹೆಚ್ಚು ಉಪ್ಪನ್ನು ಸೇವಿಸಬಾರದು ಎಂದು ತಜ್ಞರು ಎಚ್ಚರಿಸುತ್ತಾರೆ. ವಿಶ್ವ ಆರೋಗ್ಯ ಸಂಸ್ಥೆ ಹೇಳಿರುವ ಪ್ರಕಾರ, ದಿನಕ್ಕೆ ಒಂದು ಚಮಚಕ್ಕಿಂತ ಹೆಚ್ಚು ಉಪ್ಪನ್ನು ಸೇವನೆ ಮಾಡಬಾರದು ಎಂದು ಶಿಫಾರಸು ಮಾಡುತ್ತದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
MLC 2024: ಅದ್ಭುತ... ಅತ್ಯದ್ಭುತ ಕ್ಯಾಚ್ ಹಿಡಿದ ಕೋರಿ ಅ್ಯಂಡರ್ಸನ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಜಿಯೋ ಏರ್​ಫೈಬರ್ ಗ್ರಾಹಕರಿಗೆ ಶೇ 30 ಡಿಸ್ಕೌಂಟ್ ಆಫರ್
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಮೊದಲ ಮಳೆ,ಕತ್ತೆಗಳಿಗೆ ಗುಲಾಬ್​​​ ಜಾಮೂನು ತಿನಿಸಿ ಸಂಭ್ರಮಿಸಿದ ಗ್ರಾಮಸ್ಥರು
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ