Skin Care
ಇಂದಿನ ಒತ್ತಡದ ಜೀವನದಲ್ಲಿ ತಮ್ಮ ಆರೋಗ್ಯ ,ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳುವುದೇ ಕಷ್ಟಕರವಾಗಿದೆ. ಆದರೂ ಕೂಡ ಎಲ್ಲರೂ ಮೃದುವಾದ, ತ್ವಚೆಯ ಮೇಲೆ ಯಾವುದೇ ಕಲೆ ಇಲ್ಲದ ಆರೋಗ್ಯಕರ ಹೊಳೆಯುವ ಚರ್ಮವನ್ನು ಬಯಸುತ್ತಾರೆ. ಆದರೆ ಮಾಲಿನ್ಯಯುಕ್ತ ಪರಿಸರ, ಕೆಲಸದ ಒತ್ತಡ, ಆಹಾರ ಪದ್ಧತಿ ಮತ್ತು ಜೀವನಶೈಲಿಯು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತಿವೆ. ಹಬ್ಬದ ದಿನಗಳಂತೂ ಹೊಸ ಹೊಸ ಉಡುಪುಗಳೊಂದಿಗೆ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳವುದರ ಕುರಿತಾದ ಉತ್ತಮ ಸಲಹೆಗಳು ಇಲ್ಲಿವೆ.
ಹಿಂದೂಸ್ತಾನ್ ಟೈಮ್ಸ್ಗೆ ಚರ್ಮರೋಗ ತಜ್ಞ ಡಾ ರೇಷ್ಮಾ ಟಿ ವಿಷ್ನಾನಿ ನೀಡಿದ ಸಂದರ್ಶನದ ಮಾಹಿತಿ ಇಲ್ಲಿದೆ.
- ನೀವು ಬೊಟೊಕ್ಸ್, ಫಿಲ್ಲರ್‌ಗಳು, ಲೇಸರ್‌ಗಳು, ಡರ್ಮಪೆನ್, ಸ್ಕಿನ್ ಬೂಸ್ಟರ್‌ಗಳು ಮುಂತಾದ ತ್ವಚೆಗೆ ಸಂಬಂಧಪಟ್ಟ ಮುಖಕ್ಕೆ ಯಾವುದೇ ಟ್ರಿಟ್ ಮೆಂಟ್ ಮಾಡಲು ಯೋಜಿಸುತ್ತಿದ್ದರೆ ಕನಿಷ್ಠ ಒಂದು ವಾರದ ಮುಂಚಿತವಾಗಿ ಎಲ್ಲಾ ಚಿಕಿತ್ಸೆಯನ್ನು ಮುಗಿಸುವುದು ಉತ್ತಮ.
- ಒಂದು ವಾರಕ್ಕಿಂತ ಕಡಿಮೆ ಅವಧಿಯಲ್ಲಿ ಮಾಡಲಾಗುವ ವಿಧಾನವೆಂದರೆ ಮೆಡಿ ಫೇಶಿಯಲ್‌ಗಳು, ಇವುಗಳನ್ನು ತರಬೇತಿ ಪಡೆದ ಕೈಗಳಿಂದ ಮಾಡಿದಾಗ ಸುರಕ್ಷಿತವಾಗಿರುತ್ತವೆ, ಅಲ್ಲಿ ಯಂತ್ರಗಳ ಮೂಲಕ ಚರ್ಮವನ್ನು ಆಳವಾದ ಶುಚಿಗೊಳಿಸುವಿಕೆ ಮತ್ತು ತ್ವರಿತ ಹೊಳಪಿಗಾಗಿ ಚರ್ಮಕ್ಕಾಗಿ ಹಣ್ಣಿನ ಆಮ್ಲಗಳು ಮತ್ತು ಪೆಪ್ಟೈಡ್‌ಗಳನ್ನು ಬಳಸುವುದು.
- ನಿಮ್ಮ ಚರ್ಮವನ್ನು ಹೈಡ್ರೀಕರಿಸುವತ್ತ ಹೆಚ್ಚಿನ ಗಮನಹರಿಸಿ.
- ಹೊರಗಡೆ ಒಡಾಡುವ ಸಂದರ್ಭಗಳಲ್ಲಿ ಸನ್ ಸ್ರೀನ್ ಹಚ್ಚೋದನ್ನು ಮರೆಯದಿರಿ.
- ದಿನ ಪೂರ್ತಿ ಎಷ್ಟೇ ದಣಿದಿದ್ದರೂ ಯಾವಾಗಲೂ ನಿಮ್ಮ ಮೇಕಪ್ ಅನ್ನು ಸಂಪೂರ್ಣವಾಗಿ ತೆಗೆದು ಸ್ವಚ್ಚಗೊಳಿಸಿ.
- ಮುಖದ ಮೇಲೆ ಅತಿಯಾದ ಸ್ಕ್ರಬ್ಬಿಂಗ್ ಮಾಡುವುದನ್ನು ತಪ್ಪಿಸಿ.
- ಹಬ್ಬದ ಸಂದರ್ಭಗಳಲ್ಲಿ ಆರೋಗ್ಯಕರವಾದ ಆಹಾರದ ಬಗ್ಗೆ ಗಮನಹರಿಸಿ. ಮಿತವಾದ ಆಹಾರ ಸೇವನೆ ಉತ್ತಮ.
- ಆದಷ್ಟು ಸೌಂದರ್ಯವರ್ಧಕಗಳಲ್ಲಿ ಬಳಸಲಾಗುವ ಬ್ರೆಶ್ ಗಳನ್ನು ಸ್ವಚ್ಚಗೊಳಿಸಿ ಉಪಯೋಗಿಸಿ.
ಹಬ್ಬದ ನಂತರದ ಚರ್ಮದ ಆರೈಕೆಗಾಗಿ,
1. ಹಬ್ಬದ ಸಂದರ್ಭಗಳಲ್ಲಿ ಅತಿಯಾಗಿ ಸೌಂದರ್ಯ ಬಳಸಿರುವುದರಿಂದ ಹಬ್ಬದ ನಂತರದ ಎರಡು ಮೂರು ಮೇಕ್ಅಪ್ ಬಳಸದಿರಿ, ಚರ್ಮದ ಒಣಗುವಿಕೆಯನ್ನು ಕಡಿಮೆಮಾಡಿ ಮತ್ತು ಸನ್‌ಸ್ಕ್ರೀನ್ ಬಳಸುವುದು ಉತ್ತಮ.
2. ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಪಡೆಯಿರಿ
3. ಚರ್ಮದ ಮೇಲೆ ಕೆಂಪು ಅಥವಾ ತುರಿಕೆ ಕಿರಿಕಿರಿ ಉಂಟಾದ ಸಂದರ್ಭದಲ್ಲಿ ನಿಮ್ಮ ಹತ್ತಿರದ ಚರ್ಮಶಾಸ್ತ್ರಜ್ಞರನ್ನು ಭೇಟಿ ಮಾಡಿ ಸಲಹೆ ಪಡೆದು ಕೊಳ್ಳಿ.
ಹಬ್ಬದ ಪೂರ್ವ ತ್ವಚೆಯ ರಕ್ಷಣೆ
ಹಬ್ಬದ ಋತುವಿನಲ್ಲಿ ನೀವು ಹೆಚ್ಚು ಪ್ರಕಾಶಮಾನವಾಗಿ ಕಾಣಲು ಬಯಸುವುದು ಸಹಜ, ನಿಮ್ಮ ದೈನಂದಿನ ದಿನಚರಿಗೆ ಕೆಲವು ಹೊಸ ಅಂಶಗಳು ಸಹಾಯ ಮಾಡುತ್ತದೆ. ನಿಮ್ಮ ವೇಳಾಪಟ್ಟಿಯ ಪ್ರಕಾರ, ಕೆಳಗೆ ನೀಡಲಾದ ಕೆಲವು ದಿನಚರಿಗಳನ್ನು ನಿಮ್ಮ ದಿನಚರಿಗೆ ಸೇರಿಸಿಕೊಳ್ಳಿ.
- ತ್ವಚೆಯ ಸ್ವಚ್ಚತೆ, ಟೋನಿಂಗ್ ಮತ್ತು ಮಾಯಿಶ್ಚರೈಸರ್ಇದು ಪ್ರತಿಯೊಬ್ಬರೂ ಅನುಸರಿಸಬೇಕಾದ ಮೂಲಭೂತ ದಿನಚರಿಯಾಗಿದೆ. ನಿಮ್ಮ ಧೂಳು ಮತ್ತು ಮಾಲಿನ್ಯದ ಕಾರಣದ ಅನುಗುಣವಾಗಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಮುಖವನ್ನು ಸ್ವಚ್ಛಗೊಳಿಸುವುದು ಅತ್ಯಗತ್ಯ. ಎಣ್ಣೆಯುಕ್ತ ಅಥವಾ ಮೊಡವೆ ಪೀಡಿತ ಚರ್ಮವನ್ನು ಹೊಂದಿರುವವರು ಆಲ್ಕೋಹಾಲ್–ಮುಕ್ತ ಟೋನರ್ ಅನ್ನು ಬಳಸಬಹುದು. ಕಾಮೆಡೋಜೆನಿಕ್ ಅಲ್ಲದ ಮಾಯಿಶ್ಚರೈಸರ್ ಅನ್ನು ಹವಾಮಾನ ಮತ್ತು ಚರ್ಮದ ಪ್ರಕಾರಕ್ಕೆ ಅನುಗುಣವಾಗಿ ದಿನಕ್ಕೆ ಒಂದು ಅಥವಾ ಎರಡು ಬಾರಿ ಬಳಸಬೇಕು.
- ಸನ್ಸ್ಕ್ರೀನ್
ಪ್ರತಿದಿನ ಬಳಸಿ , ಇದ್ದರಿಂದ ತ್ವಚೆಯ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು.
- ಉತ್ಕರ್ಷಣ ನಿರೋಧಕಗಳು
ಹಬ್ಬ ಹರಿದಿನಗಳಲ್ಲಿ ನಮ್ಮ ತ್ವಚೆಯು ಬಹಳಷ್ಟು ಧೂಳು, ಮಾಲಿನ್ಯ, ಬೆಳಕು ಮತ್ತು ಮೇಕಪ್‌ಗೆ ಒಡ್ಡಿಕೊಳ್ಳುತ್ತದೆ. ಆದ್ದರಿಂದ ಹೊಳಪನ್ನು ಮರಳಿ ತರಲು ಹೆಚ್ಚಿನ ಕಾಳಜಿಯನ್ನು ತೆಗೆದುಕೊಳ್ಳಬೇಕು. ಹಬ್ಬಗಳ ನಂತರ ಒಂದು ತಿಂಗಳ ಕಾಲ ಆಂಟಿಆಕ್ಸಿಡೆಂಟ್‌ಗಳನ್ನು ಮುಂದುವರಿಸಬೇಕು.
- ಹೈಡ್ರಾಫೇಶಿಯಲ್ಗಳು
ಎಣ್ಣೆಯುಕ್ತ ಮತ್ತು ಸಿಹಿ ಆಹಾರ, ಮೇಕಪ್ ಮತ್ತು ಪಟಾಕಿ ಧೂಳಿಗೆ ಒಡ್ಡಿಕೊಳ್ಳುವುದರಿಂದ ಚರ್ಮಕ್ಕೆ ಹಾನಿಯಾಗುತ್ತದೆ. ಆದ್ದರಿಂದ ಕ್ಲಿನಿಕ್ ಆಧಾರಿತ ಕಾರ್ಯವಿಧಾನಗಳು ಬೇಕಾಗಬಹುದು.
- ಆಹಾರ ನಿಯಂತ್ರಣ ಮತ್ತು ವ್ಯಾಯಾಮಹೆಚ್ಚಿನ ಕ್ಯಾಲೋರಿ ಆಹಾರ ಸೇವನೆಯಿಂದಾಗಿ ನಾವು ತೂಕವನ್ನು ಹೆಚ್ಚಿಸುವ ಪ್ರವೃತ್ತಿಯನ್ನು ಹೊಂದಿರುವುದರಿಂದ, ಆಹಾರ ಮತ್ತು ವ್ಯಾಯಾಮವು ಅತ್ಯಗತ್ಯವಾಗಿರುತ್ತದೆ. ಸಾಕಷ್ಟು ಹಣ್ಣುಗಳು, ಸಲಾಡ್‌ಗಳು ಮತ್ತು ಸಾಕಷ್ಟು ನೀರಿನ ಸೇವನೆಯೊಂದಿಗೆ ಕಡಿಮೆ ಕೊಬ್ಬು ಮತ್ತು ಕಡಿಮೆ ಕಾರ್ಬೋಹೈಡ್ರೇಟ್ ಆಹಾರವು ಅತ್ಯಗತ್ಯವಾಗಿರುತ್ತದೆ.ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ