Lumpy Skin Disease: ಚರ್ಮಗಂಟು ಕಾಯಿಲೆಗೆ ಮನೆ ಮದ್ದು: ಇಲ್ಲಿದೆ ಪಶುವೈದ್ಯರ ಸಲಹೆ

ಜಾನುವಾರುಗಳ ಚರ್ಮಗಂಟು ಕಾಯಿಲೆಗೆ ‘ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ’ದ ಸೋಲೂರು ಘಟಕದ ಪಶುವೈದ್ಯರು ಮನೆ ಮದ್ದು ಸಲಹೆ ನೀಡಿದ್ದಾರೆ. ಕಾಯಿಲೆ ನಿಯಂತ್ರಣಕ್ಕೆ ಏನೇನು ಮಾಡಬೇಕು ಎಂಬುದು ಇಲ್ಲಿದೆ.

Lumpy Skin Disease: ಚರ್ಮಗಂಟು ಕಾಯಿಲೆಗೆ ಮನೆ ಮದ್ದು: ಇಲ್ಲಿದೆ ಪಶುವೈದ್ಯರ ಸಲಹೆ
ಚರ್ಮಗಂಟು ರೋಗ (ಸಾಂದರ್ಭಿಕ ಚಿತ್ರ)Image Credit source: PTI
Follow us
| Updated By: ಗಣಪತಿ ಶರ್ಮ

Updated on: Oct 16, 2022 | 1:05 PM

ಬೆಂಗಳೂರು: ದೇಶದಾದ್ಯಂತ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿರುವ ಚರ್ಮಗಂಟು ಕಾಯಿಲೆಗೆ (Lumpy Skin Disease) ‘ಬೆಂಗಳೂರು ಸಹಕಾರ ಹಾಲು ಒಕ್ಕೂಟ ನಿಯಮಿತ’ದ ಸೋಲೂರು ಘಟಕದ ಪಶುವೈದ್ಯರು (Veterinary Doctor) ಮನೆ ಮದ್ದು (Home Remedies) ಸಲಹೆ ನೀಡಿದ್ದಾರೆ. ಇದೊಂದು ವೈರಾಣು ಕಾಯಿಲೆಯಾಗಿದ್ದು ಸೊಳ್ಳೆ ಕಡಿತದಿಂದ ಹರಡುತ್ತದೆ. ಕಾಯಿಲೆ ಹರಡುವಿಕೆ ತಡೆಗೆ ಜಾನುವಾರುಗಳ ಕೊಟ್ಟಿಗೆಯನ್ನು ಶುಚಿಯಾಗಿಡುವುದು ಅಗತ್ಯ ಎಂದು ಪಶುವೈದ್ಯರು ಹೇಳಿದ್ದಾರೆ.

ಪಶುವೈದ್ಯರು ಸೂಚಿಸಿರುವ ಔಷಧಿ ಹೀಗಿದೆ:

– 100 ಗ್ರಾಂ ವೀಳ್ಯದೆಲೆ, 10 ಗ್ರಾಂ ಮೆಣಸು, 10 ಗ್ರಾಂ ಉಪ್ಪು, ಅರ್ಧ ಅಚ್ಚು ಬೆಲ್ಲವನ್ನು ರುಬ್ಬಿ ಉಂಡೆ ಮಾಡಿ 3ರಿಂದ 4 ಉಂಡೆಗಳನ್ನು ದಿನಕ್ಕೆ 2 ಬಾರಿ ತಿನ್ನಿಸಬೇಕು.

ಇದನ್ನೂ ಓದಿ
Image
ಚರ್ಮಗಂಟು ರೋಗ ಆತಂಕ: ಕರ್ನಾಟಕದಾದ್ಯಂತ ಜಾನುವಾರು ಸಂತೆ, ಸಾಗಣೆ ನಿಷೇಧ
Image
ರಾಯಚೂರು: ಜಾನುವಾರುಗಳಲ್ಲಿ ಚರ್ಮಗಂಟು ರೋಗ ಪತ್ತೆ; ಸಂತೆ, ಸಾಗಾಣಿಕೆಗೆ ಜಿಲ್ಲಾಡಿತದಿಂದ ನಿಷೇಧ
Image
Gadag: ಗದಗ ಜಿಲ್ಲೆಯಲ್ಲಿ ಕಾಡುತ್ತಿದೆ ಪಶು ವೈದ್ಯರ ತೀವ್ರ ಕೊರತೆ, ವ್ಯಾಪಕವಾಗಿ ಹರಡುತಿದೆ ಮಾರಕ ಚರ್ಮಗಂಟು ರೋಗ, ಜಾನುವಾರಗಳು ವಿಲವಿಲ
Image
Lumpy Skin Disease: ಕರ್ನಾಟಕದಲ್ಲಿಯೂ ಚರ್ಮಗಂಟು ರೋಗ ಉಲ್ಬಣ, ಹಾವೇರಿಯಲ್ಲಿ ಒಂದೇ ದಿನ ನೂರಾರು ರಾಸುಗಳ ಸಾವು

– 500 ಮಿಲಿ ಗ್ರಾಂ ಎಳ್ಳೆಣ್ಣೆ, 20 ಗ್ರಾಂ ಅರಶಿನ ಪುಡಿ, 100 ಗ್ರಾಂ ಮೆಹಂದಿ ಸೊಪ್ಪು, 100 ಗ್ರಾಂ ತುಳಸಿ ಎಲೆ, 100 ಗ್ರಾಂ ಬೇವಿನ ಸೊಪ್ಪು ಇವುಗಳ ಮಿಶ್ರಣವನ್ನು ಕುದಿಸಿ ಆರಿದ ನಂತರ ಜಾನುವಾರುಗಳ ಮೈಮೇಲಿನ ಗಂಟುಗಳ ಮೇಲೆ ದಿನಕ್ಕೆ ಮೂರರಿಂದ ನಾಲ್ಕು ಬಾರಿ ಹಚ್ಚಬೇಕು.

ಹಾವೇರಿಯಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ:

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ಹೊರವಲಯದ ಎಪಿಎಂಸಿ ಸಮೀಪದ ಜಮೀನಿನಲ್ಲಿ ನಿಷೇಧದ ನಡುವೆಯೂ ಜಾನುವಾರು ಸಂತೆ ನಡೆಯುತ್ತಿದೆ. ಜಾನುವಾರುಗಳಿಗೆ ಚರ್ಮಗಂಟು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜಾನುವಾರು ಜಾತ್ರೆ ನಿಷೇಧಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿತ್ತು. ಅದರಂತೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಕೂಡ ಸಂತೆ ನಿಷೇಧ ಆದೇಶ ಹೊರಡಿಸಿದ್ದರು. ಇದನ್ನು ಲೆಕ್ಕಿಸದೆ ಸಂತೆ ಮುಂದುವರಿದಿದೆ. ಅಕ್ಟೋಬರ್ 9ರಿಂದ ನವಂಬರ್ 8 ರವರೆಗೆ ಜಿಲ್ಲೆಯಲ್ಲಿ ಜಾನುವಾರು ಸಂತೆ ನಡೆಯುತ್ತದೆ.

ಇದನ್ನೂ ಓದಿ: ಚರ್ಮಗಂಟು ರೋಗ ಆತಂಕ: ಕರ್ನಾಟಕದಾದ್ಯಂತ ಜಾನುವಾರು ಸಂತೆ, ಸಾಗಣೆ ನಿಷೇಧ

ಚರ್ಮಗಂಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಾನುವಾರುಗಳ ಸಂತೆ ಹಾಗೂ ಸಾಗಣೆ ನಿಷೇಧಿಸಿ ಎಲ್ಲಾ ಜಿಲ್ಲಾಡಳಿತಗಳಿಗೆ ಪಶುಸಂಗೋಪನಾ ಇಲಾಖೆಯು ಅಕ್ಟೋಬರ್ 13ರಂದು ಸೂಚನೆ ನೀಡಿತ್ತು. ಜಾನುವಾರುಗಳಿಗೆ ಚರ್ಮಗಂಟು ರೋಗ ವಿಪರೀತವಾಗಿ ಹಬ್ಬುತ್ತಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಅಲ್ಲದೇ ಆತಂಕಗೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಜಾನುವಾರುಗಳ ಸಂತೆಯನ್ನು ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿತ್ತು.

ಚರ್ಮಗಂಟು ರೋಗ ಹಸು ಮತ್ತು ಎಮ್ಮೆಗಳಲ್ಲಿ ತೀವ್ರವಾಗಿ ಕಾಣಿಸಿಕೊಂಡಿದ್ದು, ಹರಡುವುದನ್ನು ತಡೆಯಲು ಸಾಗಾಟಕ್ಕೆ ನಿರ್ಬಂಧ ವಿಧಿಸಲಾಗಿದೆ.

20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್