Gadag: ಗದಗ ಜಿಲ್ಲೆಯಲ್ಲಿ ಕಾಡುತ್ತಿದೆ ಪಶು ವೈದ್ಯರ ತೀವ್ರ ಕೊರತೆ, ವ್ಯಾಪಕವಾಗಿ ಹರಡುತಿದೆ ಮಾರಕ ಚರ್ಮಗಂಟು ರೋಗ, ಜಾನುವಾರಗಳು ವಿಲವಿಲ

Lumpy Skin Disease: ಜಾನುವಾರುಗಳಲ್ಲಿ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು, ಚರ್ಮದ ಮೇಲೆ ಗುಳ್ಳೆ, ಗಾಯಕ್ಕೆ ಹುಳು ಬೀಳುವುದು ಹಾಗೂ ಹಾಲಿನ ಇಳುವರಿ ಕೂಡಾ ಕಡಿಮೆಯಾಗುತ್ತದೆ‌. ಅದ್ರಲ್ಲೂ ಹಿಂಗಾರು ಬಿತ್ತನೆ ಸಮಯದಲ್ಲಿ ರೋಗ ಕಾಣಿಸಿಕೊಂಡಿದ್ದು, ಕೃಷಿ ಚಟುವಟಿಕೆಗೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿದೆ.

Gadag: ಗದಗ ಜಿಲ್ಲೆಯಲ್ಲಿ ಕಾಡುತ್ತಿದೆ ಪಶು ವೈದ್ಯರ ತೀವ್ರ ಕೊರತೆ, ವ್ಯಾಪಕವಾಗಿ ಹರಡುತಿದೆ ಮಾರಕ ಚರ್ಮಗಂಟು ರೋಗ, ಜಾನುವಾರಗಳು ವಿಲವಿಲ
ರೈತರ ಮೂಕರೋದನೆ: ಗದಗ ಜಿಲ್ಲೆಯಲ್ಲಿ ಕಾಡುತ್ತಿದೆ ಭಾರೀ ಪಶು ವೈದ್ಯರ ಕೊರತೆ, ವ್ಯಾಪಕವಾಗಿ ಹರಡುತಿದೆ ಮಾರಕ ಚರ್ಮಗಂಟು ರೋಗ, ಜಾನುವಾರಗಳು ವಿಲವಿಲ
Follow us
| Updated By: ಸಾಧು ಶ್ರೀನಾಥ್​

Updated on: Sep 29, 2022 | 9:18 PM

ರೈತರ ಮಿತ್ರ ಜಾನುವಾರಗಳು ಈಗ ಸಂಕಷ್ಟದಲ್ಲಿವೆ. ಮಕ್ಕಳಂತೆ ಸಾಕಿಸಲುಹಿದ ಜಾನುವಾರಗಳು ಮಾರಕ ರೋಗದಿಂದ (Cow Disease) ಕುಸಿಯುತ್ತಿದ್ದು, ಅನ್ನದಾತರು ಕಂಗಾಲಾಗಿದ್ದಾರೆ. ಹಿಂಗಾರು ಬಿತ್ತನೆ ಸಮಯದಲ್ಲಿ ಜಾನುವಾರಗಳು ಚರ್ಮಗಂಟು ರೋಗದಿಂದ ನಿಶಕ್ತವಾಗಿ ಒದ್ದಾಡುತ್ತಿವೆ. ಜಾನುವಾರಗಳ ಸಂಕಷ್ಟ ನೋಡಲಾಗದೇ ರೈತ ಸಮೂಹ ವಿಲವಿಲ ಅಂತಿದೆ. ಈ ನಡುವೆ ಸಕಾಲಕ್ಕೆ ಚಿಕಿತ್ಸೆ ಸಿಗದೇ (Veterinary Doctors) ಇರೋದು ಅನ್ನದಾತರ ನಿದ್ದೆಗೆಡಿಸಿದೆ.

ಗದಗ ಜಿಲ್ಲೆಯಲ್ಲಿ (Gadag) ಮಾರಕ ಕಾಯಿಲೆಯಿಂದ ಜಾನುವಾರಗಳು ವಿಲವಿಲ ಅಂತಿವೆ. ಜಾನುವಾರಗಳ ಮೂಕ ರೋಧನ ನೋಡಿ ಅನ್ನದಾತರು ಮಮ್ಮಲ ಮರಗುವಂತಾಗಿದೆ. ಜಾನುವಾರಗಳ ದೇಹದ ಮೇಲಿನ ಗಂಟುಗಳು ನೋಡಿದ್ರೆ ಮೈ ಜುಂ ಅನ್ನುತ್ತದೆ. ಹೌದು ಜಾನುವಾರುಗಳು ಈಗ ಸಂಕಷ್ಟದಲ್ಲಿವೆ. ಗದಗ ಜಿಲ್ಲೆಯಾದ್ಯಂತ ಜಾನುವಾರುಗಳು ಚರ್ಮ ಗಂಟುರೋಗದಿಂದ ಬಳಲುತ್ತಿವೆ. ರೈತಮಿತ್ರ ಜಾನುವಾರಗಳ ಸ್ಥಿತಿ ನೋಡಿ ರೈತರ ನಿದ್ದೆಗೆಡಿಸಿದೆ. ಹಗಲು ರಾತ್ರಿ ಎನ್ನದೇ ರೈತರು ತಮ್ಮ ಜಾನುವಾರುಗಳ ಚಾಕರಿಯಲ್ಲೇ ದಿನ ದೂಡುವಂತೆ ಮಾಡಿದೆ.

ಗದಗ ಜಿಲ್ಲೆಯಲ್ಲಿ ವೇಗವಾಗಿ ಚರ್ಮ ಗಂಟುರೋಗ (Lumpy Skin Disease) ಹರಡುತ್ತಿದೆ. ಮೊದ ಮೊದಲು ಜಿಲ್ಲೆಯ ಲಕ್ಷ್ಮೇಶ್ವರ ಹಾಗೂ ಶಿರಹಟ್ಟಿ ತಾಲೂಕುಗಳಲ್ಲಿ ಈ ರೋಗ ಕಾಣಿಸಿಕೊಂಡಿತ್ತು. ಇದೀಗ ಇಡೀ ಜಿಲ್ಲೆಯಾದ್ಯಂತ ಜಾನುವಾರುಗಳಿಗೆ ಚರ್ಮ ಗಂಟುರೋಗ ಪಸರಿಸುತ್ತಿರೋದು ರೈತರನ್ನು ಕಂಗಾಲಾಗುವಂತೆ ಮಾಡಿದೆ. ಕ್ಯಾಪ್ರಿಫಾಕ್ಸ್ ಎಂಬ ವೈರಾಣುವಿನಿಂದ ಜಾನುವಾರುಗಳಿಗೆ ಈ ರೋಗ ಹರಡುತ್ತಿದ್ದು ದನ, ಎಮ್ಮೆ, ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಹೆಚ್ಚಾಗಿ ಕಾಣಿಸ್ತಿದೆ. (ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ)

ಜಾನುವಾರುಗಳಲ್ಲಿ ಅತಿಯಾದ ಜ್ವರ, ಕಣ್ಣುಗಳಿಂದ ನೀರು ಸೋರುವುದು, ನಿಶಕ್ತಿ, ಕಾಲುಗಳಲ್ಲಿ ಬಾವು, ಚರ್ಮದ ಮೇಲೆ ಗುಳ್ಳೆ, ಗಾಯಕ್ಕೆ ಹುಳು ಬೀಳುವುದು ಹಾಗೂ ಹಾಲಿನ ಇಳುವರಿ ಕೂಡಾ ಕಡಿಮೆಯಾಗುತ್ತದೆ‌. ಅದ್ರಲ್ಲೂ ಹಿಂಗಾರು ಬಿತ್ತನೆ ಸಮಯದಲ್ಲಿ ರೋಗ ಕಾಣಿಸಿಕೊಂಡಿದ್ದು, ಕೃಷಿ ಚಟುವಟಿಕೆಗೆ ಮೇಲೂ ವ್ಯತಿರಿಕ್ತ ಪರಿಣಾಮ ಬಿರಿದೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಜಾನುವಾರಗಳಿಗೆ ಲಸಿಕೆ ಹಾಗೂ ಸೂಕ್ತ ಚಿಕಿತ್ಸೆ ವ್ಯವಸ್ಥೆ ಮಾಡಬೇಕು ಅಂತ ರೈತರು ಒತ್ತಾಯಿಸಿದ್ದಾರೆ. ಸಕಲಕ್ಕೆ ವೈದ್ಯರು ಬಾರದ ಕಾರಣ ತೀವ್ರ ಅಸ್ವಸ್ಥಗೊಂಡು ಜಾನವಾರಗಳು ಸಾಯುವ ಹಂತಕ್ಕೆ ತಲುಪುತ್ತಿವೆ ಅಂತ ರೈತರು ಗೋಳಾಡುತ್ತಿದ್ದಾರೆ.

ಇದನ್ನೂ ಓದಿ: ಜಾನುವಾರುಗಳ ಬಾಧಿಸುತ್ತಿರುವ ಚರ್ಮ ಗಂಟು ಕಾಯಿಲೆಗೆ ಇನ್ನು ಸ್ವದೇಶಿ ಲಸಿಕೆ! ಪ್ರಧಾನಿ ಮೋದಿ ಮಹತ್ವದ ಘೋಷಣೆ

ರೋಗ ತಡೆಗಟ್ಟಲು ಸುಮಾರು 25 ಸಾವಿರ ಲಸಿಕೆಗಳನ್ನು ಹಾಕಲಾಗಿದೆ. ಗದಗ ಜಿಲ್ಲೆಯಲ್ಲಿ ಒಟ್ಟು 1ಲಕ್ಷ 90 ಸಾವಿರ ಜಾನುವಾರುಗಳಿದ್ದು 593 ಜಾನುವಾರುಗಳಲ್ಲಿ ರೋಗ ಕಂಡುಬಂದಿದ್ದು, 8 ಜಾನುವಾರುಗಳು ರೋಗಕ್ಕೆ ತುತ್ತಾಗಿ ಸಾವನ್ನಪ್ಪಿವೆ. ಪಶು ವೈದ್ಯಾಧಿಕಾರಿಗಳ ಕೊರತೆಯಿಂದ ರೋಗ ತಡೆಗಟ್ಟಲು ಹಿನ್ನಡೆಯಾಗಿದೆ ಅಂತ ಅಧಿಕಾರಿಗಳು ಹೇಳಿದ್ದಾರೆ.

ರಾಜ್ಯದಲ್ಲೇ ಅತೀ ಹೆಚ್ಚು ವೈದ್ಯರ ಕೊರತೆ ಇರೋದು ಗದಗ ಜಿಲ್ಲೆಯಲ್ಲಿ ಮಾತ್ರ. ಟಿವಿ 9ಗೆ ಗದಗ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ ಡಾ. ಎಚ್ ಬಿ ಹುಲಗಣ್ಣವರ ಹೇಳಿದ್ದಾರೆ. ಪಶುವೈದ್ಯರು ಸೇರಿದಂತೆ ಒಟ್ಟು 384 ಸಿಬ್ಬಂದಿ ಗದಗ ಜಿಲ್ಲೆಯಲ್ಲಿ ಇರಬೇಕು. ಆದ್ರೆ ಈಗ ಇರುವುದು 114 ಸಿಬ್ಬಂದಿಗಳು ಮಾತ್ರ. ಸುಮಾರು 270 ರಷ್ಟು ಸಿಬ್ಬಂದಿಯ ಕೊರತೆ ಇದೆ. ಗದಗ ಜಿಲ್ಲೆಯಲ್ಲಿ 87 ಜನ ಪಶುವೈದ್ಯರು ಇರಬೇಕು. ಆದ್ರೆ ಜಿಲ್ಲೆಯಲ್ಲಿ ಇದ್ದಿದ್ದು ಕೇವಲ 18 ವೈದ್ಯರು ಮಾತ್ರ ಇದ್ದಾರೆ.

ಹೀಗಾಗಿ ರೋಗ ನಿಯಂತ್ರಣಕ್ಕೆ ಅಡ್ಡಿಯಾಗಿದೆ ಅಂತ ಪಶುಸಂಗೋಪನೆ ಇಲಾಖೆ ಹೇಳುತ್ತಿದೆ. ಸರ್ಕಾರಕ್ಕೆ ವೈದ್ಯರು, ಸಿಬ್ಬಂದಿಯ ಕೊರತೆ ಬಗ್ಗೆ ವರದಿ ನೀಡಲಾಗಿದೆ. ಗದಗ ಜಿಲ್ಲೆಯ ಸಚಿವರು, ಶಾಸಕರ ಗಮನಕ್ಕೂ ತರಲಾಗಿದೆ. ಆದ್ರೂ ಸಮಸ್ಯೆ ಬಗೆಹರಿದಿಲ್ಲ. ವೈದ್ಯರು, ಸಿಬ್ಬಂದಿಯ ಕೊರತೆಯಿಂದ ಜಾನುವಾರುಗಳ ರೋಗ ನಿಯಂತ್ರಣ ಕಷ್ಟವಾಗುತ್ತಿದೆ.

ವೈದ್ಯರು ಸಕಾಲಕ್ಕೆ ಬಾರದ ಕಾರಣ ಜಾನುವಾರುಗಳ ಅಸ್ವಸ್ಥಗೊಂಡು ಸಾವನ್ನಪ್ಪುತ್ತಿವೆ. ವೈದ್ಯರು, ಸಿಬ್ಬಂದಿ ಸಂಖ್ಯೆಯನ್ನು ಹೆಚ್ಚಳ ಮಾಡಿದ್ರೆ ರೋಗ ನಿಯಂತ್ರಣ ‌ಮಾಡಲು ಅನಕೂಲ ಆಗುತ್ತೆ. ಈ ನಿಟ್ಟಿನಲ್ಲಿ ಗದಗ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆ ಜಿಲ್ಲೆಗೆ ವೈದ್ಯರು ಹಾಗೂ ಸಿಬ್ಬಂದಿಯನ್ನು ನಿಯೋಜನೆ ಮಾಡುವ ಮೂಲಕ ರೈತ ಮಿತ್ರ ಜಾನುವಾರಗಳ ಜೀವ ಉಳಿಸಬೇಕಿದೆ.

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ