Sleeping Position: ಮಲಗುವ ಭಂಗಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ

| Updated By: ಅಕ್ಷಯ್​ ಪಲ್ಲಮಜಲು​​

Updated on: Sep 18, 2024 | 5:42 PM

ಕೆಲಸ ಮಾಡಿ ಸುಸ್ತು ಆದರೆ ಮುಗಿದೇ ಹೋಯಿತು, ಕೆಲವರ ಪರಿಸ್ಥಿತಿಯು ನಿದ್ದೆ ಮಾಡಿದರೆ ಸಾಕು ಎನ್ನುವಂತಾಗಿರುತ್ತದೆ. ಆದರೆ ನಿದ್ರಿಸುವ ಭಂಗಿಯು ಒಬ್ಬರಿಗಿಂತ ಮತ್ತೊಬ್ಬರದ್ದು ಭಿನ್ನವಾಗಿರುತ್ತದೆ. ಕೆಲವರಿಗೆ ಇಂತಹದ್ದೆ ಭಂಗಿಯಲ್ಲಿ ಮಲಗಿದರೆ ಮಾತ್ರ ನಿದ್ದೆ ಬರೋದು. ಆದರೆ ಈ ನಿದ್ರಿಸುವ ರೀತಿಯು ಕೂಡ ನಿಮ್ಮ ವ್ಯಕ್ತಿತ್ವವನ್ನು ರಿವೀಲ್ ಮಾಡುತ್ತದೆ. ಹೌದು, ನೀವು ಮಲಗುವ ಭಂಗಿ ಯಾವುದು ಎನ್ನುವುದರ ಮೇಲೆ ನಿಮ್ಮ ವ್ಯಕ್ತಿತ್ವವು ಗೋಚರಿಸುತ್ತದೆ. ಹಾಗಾದ್ರೆ ಈ ಕುರಿತಾದ ಕುತೂಹಲಕಾರಿ ಮಾಹಿತಿ ಇಲ್ಲಿದೆ.

Sleeping Position: ಮಲಗುವ ಭಂಗಿಯಲ್ಲಿ ಅಡಗಿದೆ ನಿಮ್ಮ ವ್ಯಕ್ತಿತ್ವ
ಸಾಂದರ್ಭಿಕ ಚಿತ್ರ
Follow us on

ಸಾಮಾನ್ಯವಾಗಿ ಕೈ ನೋಡಿ ವ್ಯಕ್ತಿಯ ಗುಣಸ್ವಭಾವವನ್ನು ಹೇಳುವುದನ್ನು ಕೇಳಿದ್ದೇವೆ. ಇಲ್ಲವಾದರೆ ಒಬ್ಬ ವ್ಯಕ್ತಿಯ ಜೊತೆಗೆ ಒಂದೆರಡು ನಿಮಿಷಗಳ ಕಾಲ ಬೆರೆತರೆ ಸಾಕು, ಆ ವ್ಯಕ್ತಿಯ ವ್ಯಕ್ತಿತ್ವವೇನು, ಅವನ ಗುಣಸ್ವಭಾವವೇನು ಎನ್ನುವುದು ಅರ್ಥವಾಗುತ್ತದೆ. ಆದರೆ ನಿದ್ರಿಸುವ ಭಂಗಿಯಿಂದಲೇ ಈ ವ್ಯಕ್ತಿಯು ಹೀಗೆಯೇ ಎಂದು ಹೇಳಬಹುದು. ಒಬ್ಬ ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಹೋಲಿಕೆ ಮಾಡಿದರೆ ಆತನು ಮಲಗುವ ರೀತಿಯೇ ಭಿನ್ನ. ಇದರಿಂದಲೇ ಆತನ ಗುಣಸ್ವಭಾವವನ್ನು ನಿರ್ಣಯಿಸಬಹುದಾಗಿದೆ.

  1. ಬೇಬಿ ಭಂಗಿ : ಈ ಭಂಗಿಯನ್ನು ‘ಕರ್ಲಿಂಗ್ ಅಪ್ ಲೈಕ್ ಎ ಬೇಬಿ’ ಅಥವಾ ಭ್ರೂಣದ ಪೊಸಿಶನ್ ಎನ್ನಲಾಗುತ್ತದೆ. ಹೆಚ್ಚಿನ ಜನರು ಈ ಭಂಗಿಯಲ್ಲೇ ನಿದ್ರಿಸುತ್ತಾರೆ. ಈ ರೀತಿಯ ಜನರು ಮುಗ್ಧ ಸ್ವಭಾವದವರಾಗಿರುತ್ತಾರೆ. ಮುಗ್ಧ ಹಾಗೂ ಶಾಂತ ಸ್ವಭಾವದವರಾಗಿರುವ ಕಾರಣ ಹೊರಜಗತ್ತನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಹೀಗಾಗಿ ಹೆಚ್ಚಿನ ಸಂದರ್ಭದಲ್ಲಿ ಎಲ್ಲರನ್ನು ನಂಬಿ ಮೋಸ ಹೋಗುವುದೇ ಹೆಚ್ಚು.
  2. ದಿಂಬಿನ ಜೊತೆಗೆ ಮಲಗುವುದು : ಕೆಲವರಿಗೆ ದಿಂಬನ್ನು ಹಿಡಿದುಕೊಂಡು ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ತಮ್ಮ ಜೀವನದಲ್ಲಿ ಸಂಬಂಧಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ. ಸಹಾಯ ಮಾಡುವ ಗುಣವಿರುವ ಕಾರಣ, ಪ್ರೀತಿಸುವ ವ್ಯಕ್ತಿಗಳಿಗೆ ಜೀವ ಕೊಡಲು ಸಿದ್ಧವಿರುವ ವ್ಯಕ್ತಿತ್ವ ಇವರದ್ದಾಗಿರುತ್ತದೆ.
  3.  ಹೊಟ್ಟೆಯ ಮೇಲೆ ಮಲಗುವುದು : ಹೊಟ್ಟೆಯ ಮೇಲೆ ಮಲಗುವ ವ್ಯಕ್ತಿಗಳು ನೇರವಾದ, ಮೋಜಿನ, ತಮಾಷೆಯ ಮತ್ತು ಮುಕ್ತ ಮನಸ್ಸಿನ ವ್ಯಕ್ತಿಗಳಾಗಿರುತ್ತಾರೆ. ಈ ಗುಣವುಳ್ಳ ವ್ಯಕ್ತಿಗಳು ಎಲ್ಲವನ್ನೂ ಸರಿಯಾಗಿ ನಿರ್ವಹಿಸುತ್ತಾರೆ. ಆದರೆ ಈ ರೀತಿಯ ಭಂಗಿಯಲ್ಲಿ ಮಲಗುವುದು ಅಭದ್ರತೆ ಮತ್ತು ಆತ್ಮವಿಶ್ವಾಸದ ಕೊರತೆಯನ್ನು ಹೊಂದಿದ್ದಾರೆ ಎನ್ನುವುದು ತೋರಿಸುತ್ತದೆ.
  4. ಸ್ಟಮಕ್ ಸ್ಲೀಪರ್ : ಹೊಟ್ಟೆ ಕೆಳಗಾಗಿ ಮಲಗುವ ಭಂಗಿಯನ್ನು ಸ್ಟಮಕ್ ಸ್ಲೀಪರ್ ಪೊಸಿಶನ್ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಮಲಗುವವರು ಎಲ್ಲರೊಂದಿಗೆ ಸುಲಭವಾಗಿ ಹೊಂದಿಕೊಳ್ಳುವ ಗುಣವನ್ನು ಹೊಂದಿರುತ್ತಾರೆ. ಎಲ್ಲರೊಂದಿಗೆ ಬೆರೆಯುವ ಈ ವ್ಯಕ್ತಿಗಳು ಆಲೋಚನೆ ಮಾಡುವುದು ಕಡಿಮೆ. ಜೀವನದಲ್ಲಿ ಸದಾ ರಿಸ್ಕ್ ತೆಗೆದುಕೊಳ್ಳುತ್ತಿರುತ್ತಾರೆ. ಈ ವ್ಯಕ್ತಿಗಳು ಟೀಕೆಗಳನ್ನು ಸಹಿಸದ ಕಾರಣ ಅಭದ್ರತೆಯ ಭಾವವೊಂದು ಸದಾ ಕಾಡುತ್ತದೆ.
  5. ಬೆನ್ನಿನ ಮೇಲೆ ಮಲಗುವುದು : ಕೆಲವರಿಗೆ ಬೆನ್ನಿನ ಮೇಲೆ ಮಲಗುವ ಅಭ್ಯಾಸವಿರುತ್ತದೆ. ಈ ವ್ಯಕ್ತಿಗಳು ಸದಾ ಉತ್ಸಾಹಿಗಳಾಗಿದ್ದು, ಎಲ್ಲಾ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ತನ್ನಿಂದ ಮಾತ್ರವಲ್ಲದೇ ಆಪ್ತರಿಂದ ಹೆಚ್ಚು ನಿರೀಕ್ಷೆ ಇಟ್ಟುಕೊಳ್ಳುತ್ತಾರೆ. ಹೀಗಾಗಿ ಕೆಲವೊಮ್ಮೆ ಈ ವ್ಯಕ್ತಿಗಳಿಗೆ ನಿರಾಸೆ ಆಗೋದೇ ಹೆಚ್ಚು.
  6. ಲಾಗ್ ಸ್ಲೀಪರ್ : ಒಂದೇ ಮಗ್ಗಲಿನಲ್ಲಿ ಎರಡೂ ಕೈಗಳನ್ನು ಒಟ್ಟಿಗೆ ಇಟ್ಟು ಮಲಗುವವರ ವ್ಯಕ್ತಿಗಳು ಸ್ನೇಹ ಜೀವಿಗಳಾಗಿರುತ್ತಾರೆ. ನಂಬಿಕೆ ವಿಶ್ವಾಸಕ್ಕೆ ಅರ್ಹರಾಗಿದ್ದು, ತಮ್ಮ ಸ್ನೇಹಿತರ ಗುಂಪಿನಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿಕೊಂಡಿರುತ್ತಾರೆ. ಹೆಚ್ಚು ಹೆಚ್ಚು ಸ್ನೇಹಿತರನ್ನು ಸಂಪಾದಿಸುವ ಗುಣವನ್ನು ಹೊಂದಿರುತ್ತಾರೆ.
  7. ಸೈನಿಕನ ಭಂಗಿ : ಸೈನಿಕ ಹೇಗೆ ಸೀದಾ ನಿಲ್ಲುತ್ತಾನೋ ಹಾಗೆ ಮಲಗುವ ವ್ಯಕ್ತಿಗಳು ಬಹಳ ಕಟ್ಟುನಿಟ್ಟಿನ ಮತ್ತು ಕಠಿಣ ವ್ಯಕ್ತಿಯಾಗಿರುತ್ತಾರೆ. ಇವರು ಶಿಸ್ತು ಬದ್ಧ ಜೀವನನ್ನು ನಡೆಸುವುದಲ್ಲದೆ ಎಲ್ಲ ವಿಷಯಗಳನ್ನು ಗಂಭೀರವಾಗಿ ಸ್ವೀಕರಿಸುವ ವ್ಯಕ್ತಿತ್ವವು ಇವರದ್ದಾಗಿರುತ್ತದೆ.
  8. ಸ್ಟಾರ್ ಫಿಶ್ ನಂತೆ ಮಲಗುವುದು : ಸ್ಟಾರ್ ಫಿಶ್ ನಂತೆ ತನ್ನ ತೋಳು ಮತ್ತು ಕಾಲುಗಳನ್ನು ಚಾಚಿ ಮಲಗುವ ಈ ವ್ಯಕ್ತಿಗಳು, ಸ್ನೇಹ ಮತ್ತು ಸಂಬಂಧಗಳನ್ನು ಗೌರವಿಸುತ್ತಾರೆ. ಉತ್ತಮ ಸ್ನೇಹಿತನಾಗಲು ಪ್ರಯತ್ನಿಸುವುದರೊಂದಿಗೆ ಇತರರ ಮಾತನ್ನು ಶಾಂತಿಯಿಂದ ಕೇಳುತ್ತಾರೆ. ತಮ್ಮ ಸುತ್ತಮುತ್ತಲಿನವರ ನೋವನ್ನು ತಮ್ಮ ನೋವೆಂದು ಭಾವಿಸಿ ಸಹಾಯ ಮಾಡಲು ಮುಂದಾಗುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ