ನಿದ್ರಾಹೀನತೆಯಿಂದ ಹದಿಹರೆಯದವರಲ್ಲಿ ನರವೈಜ್ಞಾನಿಕ ಸಮಸ್ಯೆ ಉಂಟಾದೀತು!

|

Updated on: Mar 15, 2024 | 11:42 AM

ಮೊಬೈಲ್, ಟಿವಿ, ಕಂಪ್ಯೂಟರ್​ಗಳನ್ನು ನೋಡುವುದರಿಂದ ಹದಿಹರೆಯದವರು ನಿದ್ರೆಯ ಅಭಾವವನ್ನು ಎದುರಿಸುತ್ತಿದ್ದಾರೆ ಎಂದು ತಜ್ಞರು ಎಚ್ಚರಿಸಿದ್ದಾರೆ. ನಿದ್ರೆಯ ಕೊರತೆಯು ಮಾನಸಿಕ ಆರೋಗ್ಯ, ಏಕಾಗ್ರತೆ ಮತ್ತು ರೋಗನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಇದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಶಾಲೆಗಳು ಮತ್ತು ಪೋಷಕರು ಈ ಹೆಚ್ಚುತ್ತಿರುವ ಸಮಸ್ಯೆಯನ್ನು ಪರಿಹರಿಸಲು ಮುಂದಾಗಬೇಕು ಎಂದು ಸಲಹೆ ನೀಡಿದ್ದಾರೆ.

ನಿದ್ರಾಹೀನತೆಯಿಂದ ಹದಿಹರೆಯದವರಲ್ಲಿ ನರವೈಜ್ಞಾನಿಕ ಸಮಸ್ಯೆ ಉಂಟಾದೀತು!
ನಿದ್ರೆ
Image Credit source: iStock
Follow us on

ಉತ್ತಮ ನಿದ್ರೆಯ ಅಭ್ಯಾಸಗಳು ನಿಮಗೆ ಉತ್ತಮ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ನಿಮ್ಮ ನಿದ್ರೆಯ ಆರೋಗ್ಯವನ್ನು ಸುಧಾರಿಸಲು ಪ್ರತಿ ರಾತ್ರಿ ಒಂದೇ ಸಮಯಕ್ಕೆ ಮಲಗಲು ಅಭ್ಯಾಸ ಮಾಡಿಕೊಳ್ಳಿ. ವಾರಾಂತ್ಯದಲ್ಲಿ ಸೇರಿದಂತೆ ಪ್ರತಿ ದಿನ ಬೆಳಿಗ್ಗೆ ಅದೇ ಸಮಯಕ್ಕೆ ಎದ್ದೇಳಿ. ನಿಮ್ಮ ಮಲಗುವ ಕೋಣೆ ಶಾಂತವಾಗಿ, ಕತ್ತಲೆಯಿಂದ ಕೂಡಿರಲಿ. ಮಲಗುವ ಕೋಣೆಯಿಂದ ಟಿವಿಗಳು, ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳನ್ನು ತೆಗೆದುಹಾಕಿ. ಮಲಗುವ ಮುನ್ನ ಭಾರೀ ಊಟ, ಕೆಫೀನ್ ಮತ್ತು ಆಲ್ಕೋಹಾಲ್ ಸೇವನೆ ಮಾಡಬೇಡಿ. ಏಕೆಂದರೆ, ನಿದ್ರಾಹೀನತೆಯಿಂದ ಹದಿಹರೆಯದವರಲ್ಲಿ ನರವೈಜ್ಞಾನಿಕ ಸಮಸ್ಯೆಗಳು ಹೆಚ್ಚಾಗುತ್ತಿವೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

14 ವರ್ಷದ ದಿವ್ಯಾಂಶು ತನ್ನ ಹೆತ್ತವರೊಂದಿಗೆ ಇತ್ತೀಚೆಗೆ ವೈದ್ಯರನ್ನು ನೋಡಲು ಹೋದಾಗ ಆತ ಮಾನಸಿಕ ಕಿರಿಕಿರಿ ಮತ್ತು ಆತಂಕಕ್ಕೊಳಗಾಗಿದ್ದನ್ನು ವೈದ್ಯರು ಗಮನಿಸಿದರು. 9ನೇ ತರಗತಿಯ ದಿವ್ಯಾಂಶು ದಿನವಿಡೀ ನಿದ್ರಿಸುತ್ತಿದ್ದ. ಇದು ಅವನ ಶೈಕ್ಷಣಿಕ ವ್ಯಾಸಂಗದ ಮೇಲೆ ಭಾರೀ ಪರಿಣಾಮ ಬೀರುತ್ತಿತ್ತು. ಇತ್ತೀಚಿನ ದಿನಗಳಲ್ಲಿ ಹದಿಹರೆಯದವರಲ್ಲಿ ತುಂಬಾ ಸಾಮಾನ್ಯವಾಗಿರುವ ಸಮಸ್ಯೆಯೆಂದರೆ ಅದು ನಿದ್ರಾಹೀನತೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ನಿದ್ರಾಹೀನತೆಯಿಂದ ಮಹಿಳೆಯರಲ್ಲಿ ಡಯಾಬಿಟಿಸ್ ಹೆಚ್ಚಳ; ಅಧ್ಯಯನದಲ್ಲಿ ಬಯಲು

14-17 ವರ್ಷ ವಯಸ್ಸಿನ ಸರಾಸರಿ ಹದಿಹರೆಯದವರು ದಿನಕ್ಕೆ ಕನಿಷ್ಠ 8-10 ಗಂಟೆಗಳ ಕಾಲ ನಿದ್ರೆ ಮಾಡಬೇಕಾಗುತ್ತದೆ. ವೈದ್ಯರು ಹೇಳುವ ಪ್ರಕಾರ, ಶೈಕ್ಷಣಿಕ ಒತ್ತಡದಿಂದಾಗಿ ಅಥವಾ ಸಮಯಕ್ಕೆ ಮಲಗಲು ಸಾಮಾಜಿಕ ಮಾಧ್ಯಮ ಬಳಕೆ ಅಥವಾ ಗೇಮಿಂಗ್‌ನಂತಹ ಚಟುವಟಿಕೆಗಳಿಗೆ ಹೆಚ್ಚು ಒಗ್ಗಿಕೊಂಡಿರುವುದರಿಂದ ಸಾಕಷ್ಟು ನಿದ್ರೆ ಪಡೆಯದ ಅನೇಕ ಮಕ್ಕಳಿದ್ದಾರೆ.

ನಿದ್ರೆಯ ಕೊರತೆಯು ಮಾನಸಿಕ ಮತ್ತು ವರ್ತನೆಯ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ತಿಳಿದುಬಂದಿದೆ. ಉದಾಹರಣೆಗೆ, ಇದು ಮಗುವಿನ ಮನಸ್ಥಿತಿಯ ಮೇಲೆ ಪರಿಣಾಮ ಬೀರಬಹುದು. ಆಕ್ರಮಣಕಾರಿ ನಡವಳಿಕೆಯಂತಹ ವರ್ತನೆಯ ಸಮಸ್ಯೆಗಳನ್ನು ಕಾಣಬಹುದು. ಅಲ್ಲದೆ, ಮಕ್ಕಳು ಸೇರಿದಂತೆ ನಿದ್ರೆ ವಂಚಿತ ಜನರು ಏಕಾಗ್ರತೆ ಹೊಂದಲು ಸಾಧ್ಯವಾಗದೆ ತಪ್ಪುಗಳನ್ನು ಮಾಡುವುದು ಸಾಮಾನ್ಯವಾಗಿದೆ. ಹೀಗಾಗಿ, ಹದಿಹರೆಯದವರು ಸಾಮಾಜಿಕ ಜಾಲತಾಣದ ಬಳಕೆಯನ್ನು ಕಡಿಮೆ ಮಾಡುವುದು ಉತ್ತಮ.

ಇದನ್ನೂ ಓದಿ: ಕಡಿಮೆ ನಿದ್ರೆ ಮಾಡುವುದರಿಂದ ಟೈಪ್ 2 ಡಯಾಬಿಟಿಸ್ ಅಪಾಯ ಹೆಚ್ಚಾಗುತ್ತಾ?

ಹದಿಹರೆಯದವರು ಪ್ರತಿ ರಾತ್ರಿ ಕನಿಷ್ಠ 8 ಗಂಟೆಗಳ ನಿದ್ರೆ ಪಡೆಯಬೇಕು. ಮಲಗುವುದಕ್ಕೂ 1 ಗಂಟೆ ಮೊದಲು ಮೊಬೈಲ್, ಲ್ಯಾಪ್​ಟಾಪ್, ಟಿವಿ ನೋಡುವುದನ್ನು ನಿಲ್ಲಿಸಬೇಕು. ನಿದ್ರಾಹೀನತೆಯು ಹದಿಹರೆಯದವರ ಮೆದುಳುಗಳಲ್ಲಿನ ನರವೈಜ್ಞಾನಿಕ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ. ಇದರಿಂದ ಹದಿಹರೆಯದವರ ಆತ್ಮಹತ್ಯೆಗೆ ಕೂಡ ಕಾರಣವಾಗಬಹುದು. ನಿದ್ರಾಹೀನತೆಯು ಶೀತ ಮತ್ತು ಜ್ವರದಿಂದ ರಕ್ಷಿಸುವ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ಚಯಾಪಚಯ ತೊಂದರೆಯನ್ನು ಉಂಟುಮಾಡುತ್ತದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 11:42 am, Fri, 15 March 24