ಸ್ನ್ಯಾಪ್ ಚಾಟ್(Snapchat) ಬಳಕೆದಾರರು ತಮ್ಮ ಸ್ನ್ಯಾಪ್‌ಗಳನ್ನು ಕಸ್ಟಮೈಸ್ ಮಾಡಲು ಅಡ್ಡಹೆಸರು ಬಳಸಲಾಗುತ್ತದೆ. ಆದರೆ ಇದೀಗಾ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿರುವ ಅಡ್ಡಹೆಸರುಗಳ ಪಟ್ಟಿಯನ್ನು ಸ್ನ್ಯಾಪ್ ಚಾಟ್ ಬಹಿರಂಗಪಡಿಸಿದೆ. ಪ್ರತಿಯೊಬ್ಬರಿಗೂ ಮನೆಯಲ್ಲಿ ಅಥವಾ ಸ್ನೇಹಿತರು ಪ್ರೀತಿಯಿಂದ ಅಡ್ಡ ಹೆಸರು ಇಡುವುದು ಸರ್ವೇ ಸಾಮಾನ್ಯವಾಗಿದೆ. ಕೆಲವು ಸಂದರ್ಭಗಳಲ್ಲಿ, ಅಡ್ಡಹೆಸರು ವ್ಯಕ್ತಿಯ ಅಧಿಕೃತ ಹೆಸರಿಗಿಂತ ಹೆಚ್ಚು ಜನಪ್ರಿಯವಾಗಿರುತ್ತದೆ. ಅಡ್ಡಹೆಸರುಗಳನ್ನು ನೀಡುವ ಕಲ್ಪನೆಯು ದೇಶದಲ್ಲಿ ಎಷ್ಟು ಸಾಮಾನ್ಯವಾಗಿದೆ ಎಂದರೆ ಅಡ್ಡಹೆಸರುಗಳ ಭಾರತೀಯ ಸಂಸ್ಕೃತಿಯ ಕುರಿತು Snapchat ಮತ್ತು YouGov ಇತ್ತೀಚಿನ ಸಂಶೋಧನೆಯೊಂದನ್ನು ನಡೆಸಿದೆ.
ಈ ಅಧ್ಯಯನದ ಪ್ರಕಾರ ಶೇಕಡಾ 96 ರಷ್ಟು ಭಾರತೀಯರು ತಮ್ಮ ಜೀವನದ ಒಂದು ಹಂತದಲ್ಲಿ ಅಡ್ಡಹೆಸರನ್ನು ಬಳಸಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.ಭಾರತದಲ್ಲಿನ ಐದು ಸಾಮಾನ್ಯ ಅಡ್ಡ ಹೆಸರುಗಳೆಂದರೆ ಸೋನು, ಬಾಬು, ಚೋಟು, ಅಣ್ಣು ಮತ್ತು ಚಿಂಟು ಎಂದು ಅಧ್ಯಯನವು ತಿಳಿಸಿದೆ.
ಇದನ್ನೂ ಓದಿ: ಈ ದೇಶದಲ್ಲಿ ನಗುವುದು ಹೇಗೆಂದು ಕಲಿಯಲು ತರಬೇತಿ ನೀಡಲಾಗುತ್ತದೆಯಂತೆ!
ಇದರ ಹೊರತಾಗಿ ಪ್ರಾದೇಶಿಕ ಹೆಸರುಗಳೊಂದಿಗೆ ವಿವರಿಸುವುದಾದರೆ, ಉತ್ತರ ಭಾರತದಲ್ಲಿ, ಗೋಲು ಮತ್ತು ಸನ್ನಿ ಮತ್ತು ದಕ್ಷಿಣದಲ್ಲಿ ಅಮ್ಮು ಮತ್ತು ಮಚ್ಚಾ ವ್ಯಾಪಕವಾಗಿ ಜನಪ್ರಿಯವಾಗಿವೆ. ಪೂರ್ವ ಪ್ರದೇಶಗಳಲ್ಲಿ, ಶೋನಾ ಮತ್ತು ಮಿಶ್ತಿ, ಆದರೆ ಪಶ್ಚಿಮದವರು ಪಿಂಕಿ ಮತ್ತು ದಾದಾ ಹೆಸರುಗಳನ್ನು ಇಷ್ಟಪಡುತ್ತಾರೆ ಎಂದು ತಿಳಿದುಬಂದಿದೆ. ಗಮನಾರ್ಹವಾಗಿ, ಸಮೀಕ್ಷೆಗೆ ಒಳಗಾದವರಲ್ಲಿ ಶೇಕಡಾ 60 ರಷ್ಟು ಜನರು ತಮ್ಮ ಅಡ್ಡಹೆಸರುಗಳನ್ನು ಬಾಲ್ಯದಲ್ಲಿ ಅಥವಾ ಶಾಲೆಯ ಸಮಯದಿಂದಲೂ ಬಳಸುತ್ತಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: