AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು, ಸ್ನ್ಯಾಪ್​ಚಾಟ್ ಮೈ ಎಐ ಎಂಬ ಆಯ್ಕೆಯ ಮೂಲಕ ಚಾಟ್​ಗಳಿಗೆ ಪ್ರತಿಕ್ರಿಯಿಸುವುದು, ವಿವಿಧ ಕಾರ್ಯಕ್ರಮಗಳಿಗೆ ಅನುಗುಣವಾಗಿ ಪ್ಲ್ಯಾನ್ ಮಾಡುವ ಫೀಚರ್ ಅನ್ನು ಒದಗಿಸುತ್ತಿದೆ.

Snapchat ChatGPT: ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ- ಮೈ ಎಐ ಬೆಂಬಲ
ಸ್ನ್ಯಾಪ್​ಚಾಟ್​ಗೂ ಬಂತು ಚಾಟ್​ಜಿಪಿಟಿ
Follow us
ಕಿರಣ್​ ಐಜಿ
|

Updated on:Feb 28, 2023 | 1:17 PM

ಟೆಕ್​ಲೋಕದಲ್ಲಿ ಸದ್ಯಕ್ಕೆ ಹೆಚ್ಚು ಚರ್ಚೆಯಲ್ಲಿರುವುದು ಚಾಟ್​ಜಿಪಿಟಿ (ChatGPT). ನಾವು ಊಹಿಸದೇ ಇರುವ ರೀತಿಯಲ್ಲಿ, ಚಾಟ್​ಜಿಪಿಟಿ ರೀತಿಯ ಕೃತಕ ಬುದ್ಧಿಮತ್ತೆ ಬಳಸುವ ಬಾಟ್​ಗಳು ವಿವಿಧ ಕ್ಷೇತ್ರಗಳಲ್ಲಿ ಇಂದು ಆವರಿಸಿಕೊಂಡುಬಿಟ್ಟಿವೆ. ಸ್ನ್ಯಾಪ್ ಕಳುಹಿಸಿ ಚಾಟ್ ಮಾಡುವ ವಿಶಿಷ್ಟ ಅಪ್ಲಿಕೇಶನ್ ಸ್ನ್ಯಾಪ್​ಚಾಟ್ ಕೂಡ, ಮೈ ಎಐ ಎನ್ನುವ ಆವೃತ್ತಿಯನ್ನು ಬಳಸುತ್ತಿದೆ. ಆರಂಭದಲ್ಲಿ ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಪರೀಕ್ಷಾರ್ಥವಾಗಿ ಮೈ ಎಐ ಲಭ್ಯವಾಗುತ್ತಿದೆ. ಈ ವಾರವೇ ಹೊಸ ಅಪ್​ಡೇಟ್ ಸ್ನ್ಯಾಪ್​ಚಾಟ್+ ಬಳಕೆದಾರರಿಗೆ ದೊರೆಯಲಿದೆ.

ಸ್ನ್ಯಾಪ್​ಚಾಟ್+ ಚಂದಾದಾರರಿಗೆ ಮೈ ಎಐ

ಮೈಎಐ ಅನ್ನು ಸ್ನ್ಯಾಪ್​ಚಾಟ್​ಗೆಂದೇ ಪ್ರತ್ಯೇಕವಾಗಿ ವಿನ್ಯಾಸ ಮಾಡಲಾಗಿದೆ. ಅಂದರೆ, ಚಾಟ್ ಮಾಡುವ ಸಂದರ್ಭದಲ್ಲಿ ಬಳಕೆದಾರರ ಬದಲಿಗೆ, ಮೈ ಎಐ ಉತ್ತರ ನೀಡಲಿದೆ. ಅದಕ್ಕಾಗಿ, ಪರೀಕ್ಷಾರ್ಥ ಬಳಕೆಯ ನಂತರ, ಇತರರಿಗೆ ಹೊಸ ಫೀಚರ್ ಒದಗಿಸುವುದು ಸ್ನ್ಯಾಪ್​ಚಾಟ್(SnapChat) ಉದ್ದೇಶವಾಗಿದೆ.

ಸ್ನ್ಯಾಪ್​ಚಾಟ್ ಫ್ರೆಂಡ್ಸ್ ಪಟ್ಟಿಯಲ್ಲಿರುವ ಆಪ್ತರು, ಗೆಳೆಯರಿಗೆ ಅವರ ಹುಟ್ಟುಹಬ್ಬಕ್ಕೆ ಶುಭಕೋರುವುದು, ಉಡುಗೊರೆಯನ್ನು ಸೂಚಿಸುವುದು ಹಾಗೂ ಡಿನ್ನರ್ ಮಾಡುವುದಕ್ಕೆ ಸೂಕ್ತ ಸ್ಥಳದ ಸಲಹೆ, ಹೊಸ ರೆಸಿಪಿ ಬಗ್ಗೆ ಮಾಹಿತಿ.. ಹೀಗೆ ಹತ್ತು ಹಲವು ವೈಶಿಷ್ಟ್ಯಗಳನ್ನು ಸ್ನ್ಯಾಪ್​​ಚಾಟ್ ಮೈ ಎಐ ಬಾಟ್ ಒದಗಿಸಲಿದೆ.

ಇದು ಆರಂಭಿಕ ಹಂತವಾಗಿದ್ದು, ಪರೀಕ್ಷಾರ್ಥ ಬಳಕೆಯಲ್ಲಿರುವುದರಿಂದ ಎಐ ಬಾಟ್ ಮೂಲಕ ದಾಖಲಾಗುವ ಮೈ ಎಐಯ ಸಂಭಾಷಣೆಯನ್ನು ಶೇಖರಿಸಲಾಗುತ್ತದೆ. ಜತೆಗೆ, ಎಐ ಚಾಟ್​ನ ಗುಣಮಟ್ಟ ಸುಧಾರಣೆಯ ಉದ್ದೇಶದಿಂದ, ಬಳಕೆದಾರರಿಗೆ ಉತ್ತಮ ಅನುಭವ ನೀಡುವ ಸಲುವಾಗಿ ಅವುಗಳನ್ನು ವಿಮರ್ಶೆಗೊಳಪಡಿಸಬಹುದು. ಹೀಗಾಗಿ, ಮೈ ಎಐ ಚಾಟ್ ಬಾಟ್ ಜತೆಗೆ ಯಾವುದೇ ರೀತಿಯ ವೈಯಕ್ತಿಕ, ಖಾಸಗಿ ಮತ್ತು ಹಣಕಾಸು ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸ್ನ್ಯಾಪ್​ಚಾಟ್ ಎಚ್ಚರಿಸಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:16 pm, Tue, 28 February 23

ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
ಮಂಗಳೂರು: ರಹಿಮಾನ್ ಶವಯಾತ್ರೆಯ ವೇಳೆ ಯುವಕರ ದಾಂಧಲೆ, ವೀಡಿಯೋ ವೈರಲ್
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
VIDEO: ಇಲ್ಲಿ ಏನ್ ನಡೀತಿದೆ... ಗೊಂದಲದಲ್ಲೇ ಕೂತ RCB ಆಟಗಾರ
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಷಷ್ಠಿಪೂರ್ತಿ ಯಾಕೆ ಆಚರಿಸಬೇಕು ಹಾಗೂ ಇದರ ಮಹತ್ವವೇನು?
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಈ ರಾಶಿಯವರಿಗೆ ಏಳು ಗ್ರಹಗಳ ಅನುಗ್ರಹ, ವ್ಯಾಪಾರದಲ್ಲಿ ಅಧಿಕ ಲಾಭ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಬೆಂಗಳೂರಿನ ದೊಡ್ಡಕಲ್ಲಸಂದ್ರ ರಸ್ತೆಯ ದುಸ್ಥಿತಿ: ವಿಡಿಯೋ ಮಾಡಿ ತೋರಿಸಿದ ನಟ
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ಕಮಲ್ ಹಾಸನ್ ಆಡಿದ್ದು ದುರಹಂಕಾರದ ಮಾತು: ವಾಟಾಳ್ ನಾಗರಾಜ್
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ತಮಿಳು ಕನ್ನಡದ ತಾಯಿ ಭಾಷೆ ಅಲ್ಲ: ಕಮಲ್ ಹೇಳಿಕೆಗೆ ನಾಗತಿಹಳ್ಳಿ ವಿರೋಧ
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಬೂಕರ್ ಪ್ರಶಸ್ತಿಗೆ ಭಾಜನರಾದ ಕನ್ನಡದ ಮೊದಲ ಲೇಖಕಿ ಬಾನು ಮುಷ್ತಾಕ್
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಇತ್ತೀಚಿಗೆ ಪತಿ-ಪತ್ನಿ ನಡುವೆ ಪದೇಪದೆ ಜಗಳ ಅಗುತಿತ್ತು; ಸಂಬಂಧಿಕರ ಮಾತು
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್
ಹೆಚ್​​ಎಎಲ್ ನೆಹರೂರವರು ಭಾರತಕ್ಕೆ ನೀಡಿರುವ ಕೊಡುಗೆ ಅಲ್ಲ: ಯದುವೀರ್