Oppo F21 Pro: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ F21 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ

ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ 27,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಈ ಫೋನಿನ ಮೇಲೆ 25% ರಿಯಾಯಿತಿ ಪಡೆದುಕೊಂಡಿದೆ.

Oppo F21 Pro: ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿದ ಒಪ್ಪೋ F21 ಪ್ರೊ ಮೇಲೆ ಬಂಪರ್ ಡಿಸ್ಕೌಂಟ್: ಆಫರ್ ಮಿಸ್ ಮಾಡ್ಬೇಡಿ
Oppo F21 Pro
Follow us
|

Updated on: Feb 28, 2023 | 11:30 AM

ಕಡಿಮೆ ಬೆಲೆಗೆ ಆಕರ್ಷಕ ಫೀಚರ್​ಗಳ ಸ್ಮಾರ್ಟ್​ಫೋನ್ ಬಿಡುಗಡೆ ಮಾಡುವ ಸಾಲಿನಲ್ಲಿ ಒಪ್ಪೋ (Oppo) ಸಂಸ್ಥೆ ಕೂಡ ಮುಂಚೂಣಿಯಲ್ಲಿದೆ. ಮುಖ್ಯವಾಗಿ ಕ್ಯಾಮೆರಾ ಪ್ರಿಯರಿಗೆ ಹೆಚ್ಚು ಇಷ್ಟವಾಗುವ ಒಪ್ಪೋ ಕಳೆದ ವರ್ಷ ಒಪ್ಪೋ ಎಫ್​​21 ಪ್ರೊ (Oppo F21 Pro) ಎಂಬ ಸ್ಮಾರ್ಟ್​​ಫೋನ್​ ಅನ್ನು ಬಿಡುಗಡೆ ಮಾಡಿ ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿರುವ ಈ ಫೋನಿನ ಹಿಂಭಾಗದಲ್ಲಿ ಆರ್ಬಿಟ್ ಲೈಟ್ ಒಳಗೊಂಡಿದೆ. ಆಕರ್ಷಕ ಡಿಸೈನ್ ಕೂಡ ಈ ಫೋನಿನ ಪ್ರಮುಖ ಹೈಲೇಟ್. ಹೀಗೆ ನಾನಾ ವಿಚಾರಗಳಿಂದ ಸದ್ದು ಮಾಡಿದ್ದ ಈ ಸ್ಮಾರ್ಟ್​ಫೋನ್ (Smartphone) ಈಗ ಭರ್ಜರಿ ಡಿಸ್ಕೌಂಟ್​ನಲ್ಲಿ ಸೇಲ್ ಕಾಣುತ್ತಿದೆ. ಹಾಗಾದರೆ ಈ ಫೋನನ್ನು ಎಷ್ಟು ರೂ. ಗೆ ಖರೀದಿಸಬಹುದು?, ಇದರ ಫೀಚರ್ಸ್ ಏನೇನು ಎಂಬುದನ್ನು ನೋಡೋಣ.

ಭಾರತದಲ್ಲಿ ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆ ಆಗಿತ್ತು. ಇದಕ್ಕೆ 27,999 ರೂ. ನಿಗದಿ ಮಾಡಲಾಗಿತ್ತು. ಆದರೀಗ ಈ ಫೋನಿನ ಮೇಲೆ 25% ರಿಯಾಯಿತಿ ಪಡೆದುಕೊಂಡಿದ್ದು, 20,999 ರೂ. ಗಳಿಗೆ ಲಭ್ಯವಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್‌ಕಾರ್ಟ್ ಈ ಆಫರ್ ಘೋಷಣೆ ಮಾಡಿದ್ದು ಹೆಚ್‌ಡಿಎಫ್‌ಸಿ, ಐಸಿಐಸಿಐ ಬ್ಯಾಂಕ್‌ ಮತ್ತು ಎಸ್‌ಬಿಐ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ ಹಾಗೂ ಡೆಬಿಟ್‌ ಕಾರ್ಡ್‌ ಹೊಂದಿರುವ ಗ್ರಾಹಕರು ಈ ಫೋನ್‌ ಖರೀದಿಯ ಮೇಲೆ 2,000 ರೂ. ಗಳ ತ್ವರಿತ ರಿಯಾಯಿತಿ ಕೂಡ ಪಡೆದುಕೊಳ್ಳಬಹುದಾಗಿದೆ. ಈ ಫೋನ್ ಕಾಸ್ಮಿಕ್ ಬ್ಲ್ಯಾಕ್ ಮತ್ತು ಸನ್‌ಸೆಟ್ ಆರೆಂಜ್ ಬಣ್ಣಗಳಲ್ಲಿ ಬರುತ್ತದೆ.

Tech Tips: ವಾಟ್ಸ್​ಆ್ಯಪ್​ನಲ್ಲಿ ಚಾಟ್ ಹೈಡ್ ಮಾಡುವುದು ಹೇಗೆ ಗೊತ್ತೇ?: ಇಲ್ಲಿದೆ ನೋಡಿ ಟ್ರಿಕ್

ಇದನ್ನೂ ಓದಿ
Image
Power Bank: 5 ಸಾವಿರ ಮೊಬೈಲ್ ಚಾರ್ಜ್ ಮಾಡಿ: ಇದು ವಿಶ್ವದ ಅತಿ ದೊಡ್ಡ ಪವರ್ ಬ್ಯಾಂಕ್: ಬೆಲೆ ಎಷ್ಟು?
Image
Tech Tips: ನಿಮ್ಮ ಫೇಸ್​ಬುಕ್​ನಲ್ಲಿರುವ ಫೋಟೋ, ವಿಡಿಯೋಗಳನ್ನು ಗೂಗಲ್ ಫೋಟೋಸ್​ಗೆ ವರ್ಗಾಹಿಸಬೇಕೇ?: ಇಲ್ಲಿದೆ ಟ್ರಿಕ್
Image
Xiaomi 13: ಬಹುನಿರೀಕ್ಷಿತ ಶವೋಮಿ 13 ಸರಣಿ ಬಿಡುಗಡೆ: ಫೀಚರ್ಸ್ ಕಂಡು ದಂಗಾದ ಟೆಕ್ ಪ್ರಿಯರು
Image
Nokia Logo: ನೂತನ ಬದಲಾವಣೆಗೆ ಮುಂದಾದ ನೋಕಿಯಾ: 60 ವರ್ಷಗಳ ಬಳಿಕ ಮೊದಲ ಬಾರಿ ಲೋಗೋ ಬದಲಾವಣೆ

ಒಪ್ಪೋ F21 ಪ್ರೊ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.43 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ರೇಟ್​​ನಿಂದ ಕೂಡಿದೆ. ಇದು ಆಕ್ಟಾ-ಕೋರ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 680 SoC ಪ್ರೊಸೆಸರ್‌ ಹೊಂದಿದ್ದು, ಆಂಡ್ರಾಯ್ಡ್‌ 12 ನಲ್ಲಿ ಕಲರ್‌ OS 12.1 ಜೊತೆಗೆ ರನ್ ಆಗುತ್ತದೆ.

ಈ ಫೋನ್‌ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ Sony IMX709 ಸೆನ್ಸಾರ್‌ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು,33W SuperVOOC ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi, ಬ್ಲೂಟೂತ್, GPS- AGPS ಮತ್ತು USB ಟೈಪ್-C ಪೋರ್ಟ್ ಸೇರಿವೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮೇಲ್ಮನೆ ಮತ್ತು ಕೆಳಮನೆಗೆ ಯೋಗ್ಯ ಪ್ರತಿಪಕ್ಷ ನಾಯಕರ ಅಯ್ಕೆಯಾಗಲಿ:ತೇಜಸ್ವಿನಿ
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಮಂಗಳೂರಿನಲ್ಲಿ ಮಳೆ ಅವಾಂತರ: ರಾಜಕಾಲುವೆಯ ತಡೆಗೋಡೆ ಕುಸಿದು ರಸ್ತೆ ಬಂದ್
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಜಿಯೋ ಬಳಿಕ ಏರ್​ಟೆಲ್ ರೀಚಾರ್ಜ್ ಪ್ಲ್ಯಾನ್​ ಬೆಲೆಯಲ್ಲಿ ಹೆಚ್ಚಳ
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು
ಕಲರ್​ ಬಳಸಿದ್ದ ಕಬಾಬ್, ಚಿಕನ್ ತಂದೂರಿ, ಗೋಬಿ ಸೀಜ್ ಮಾಡಿದ ಅಧಿಕಾರಿಗಳು