AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

UPI LITE- ಪೇಟಿಎಂನ ಯುಪಿಐ ಲೈಟ್- 200 ರೂ ಒಳಗಿನ ಸಣ್ಣ ಪಾವತಿಗೆ ಬೇಕಿಲ್ಲ ಪಿನ್; ಸುಲಭ, ಕ್ಷಿಪ್ರ ಸೇವೆಯ ಹೊಸ ಫೀಚರ್

New Feature In Paytm: ಪೇಟಿಎಂ ಇದೀಗ UPI LITE ಫೀಚರ್ ಅನ್ನು ಬಿಡುಗಡೆ ಮಾಡಿದೆ. 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಬಹಳ ತ್ವರಿತವಾಗಿ ಪೇಮೆಂಟ್ ಮಾಡಬಹುದು.

UPI LITE- ಪೇಟಿಎಂನ ಯುಪಿಐ ಲೈಟ್- 200 ರೂ ಒಳಗಿನ ಸಣ್ಣ ಪಾವತಿಗೆ ಬೇಕಿಲ್ಲ ಪಿನ್; ಸುಲಭ, ಕ್ಷಿಪ್ರ ಸೇವೆಯ ಹೊಸ ಫೀಚರ್
ಪೇಟಿಎಂ
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 10, 2023 | 3:31 PM

Share

ಯುಪಿಐ ವ್ಯವಸ್ಥೆ ಬಂದ ಬಳಿಕ ಭಾರತದಲ್ಲಿ ಪೇಮೆಂಟ್ ಸಿಸ್ಟಮ್​ನಲ್ಲಿ (UPI Payment System) ದೊಡ್ಡ ಕ್ರಾಂತಿಯೇ ಆಗಿಹೋಗಿದೆ. ನಗದು, ಚಿಲ್ಲರೆ ಕೊಡುವ ತಲೆನೋವು ಕಡಿಮೆ ಆಗಿದೆ. ಸ್ಮಾರ್ಟ್​ಫೋನ್ ಹೊಂದಿರುವ ಬಹುತೇಕ ಮಂದಿ ಯುಪಿಐ ಪೇಮೆಂಟ್ ವ್ಯವಸ್ಥೆಗೆ ಒಳಪಟ್ಟಿದ್ದಾರೆ. ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿ ವ್ಯಾಲಟ್ ಆ್ಯಪ್​ಗಳಿಂದ ಸ್ಕ್ಯಾನ್ ಮಾಡಿ, ಹಣ ನಮೂದಿಸಿ, ಬ್ಯಾಂಕ್ ಕೋಡ್ ಹಾಕಿ, ಪಾವತಿ ಮಾಡಿ. ಇದು ಅಷ್ಟು ಸರಳವಾಗಿದೆ. ವ್ಯಾಲಟ್​ಗೆ ಹಣ ತುಂಬಿಸಿದರೆ ಇದು ಇನ್ನೂ ಸುಲಭ. ಪೇಟಿಎಂ ಇದೀಗ ಯುಪಿಐ ಲೈಟ್ ಫೀಚರ್ (UPI LITE) ಅನ್ನು ಬಿಡುಗಡೆ ಮಾಡಿದೆ. 200 ರೂ ಒಳಗಿನ ಪಾವತಿಗಳನ್ನು ಒಮ್ಮೆಗೇ ಹಲವು ಬಾರಿ ಮಾಡಲು ಸಾಧ್ಯವಾಗುತ್ತದೆ. ಈ ಯುಪಿಐ ಲೈಟ್​ಗೆ ದಿನಕ್ಕೆ ಎರಡು ಬಾರಿ 2 ಸಾವಿರ ರೂ ತುಂಬಿಸಬಹುದು. ದಿನಕ್ಕೆ ಒಟ್ಟು 4 ಸಾವಿರ ರೂಗಳಷ್ಟು ಹಣವನ್ನು ಯುಪಿಐ ಲೈಟ್ ಖಾತೆಗೆ ಹಾಕಬಹುದು. ಅಂದರೆ ಯುಪಿಐ ಲೈಟ್​ನಲ್ಲಿ ದಿನದ ಪಾವತಿ ಮಿತಿ 4,000 ಇರುತ್ತದೆ. ಈ ಮಿತಿಯವರೆಗೂ ನೀವು 200 ರೂ ಒಳಗಿನ ಹಲವು ಹಣ ಪಾವತಿಗಳನ್ನು ಲೈಟ್ ಮೂಲಕ ಮಾಡಬಹುದು.

ಪೇಟಿಎಂನ ಯುಪಿಐ ಲೈಟ್​ನಿಂದ ಹಣ ಪಾವತಿಸುವಾಗ ಪಿನ್ ನಂಬರ್ ಕೇಳಲಾಗುವುದಿಲ್ಲ. ಹೀಗಾಗಿ, ತ್ವರಿತವಾಗಿ ಪೇಮೆಂಟ್ ಮಾಡಬಹುದು. ಪೇಮೆಂಟ್ ಮೊತ್ತ 200 ರೂ ಮೀರಬಾರದು.

ಯುಪಿಐ ಲೈಟ್ ವ್ಯವಸ್ಥೆಯನ್ನು ಸದ್ಯಕ್ಕೆ ಪೇಟಿಎಂನಲ್ಲಿ ಅಳವಡಿಸಲಾಗಿದೆ. ಫೋನ್ ಪೇ ಹಾಗೂ ಇತರ ಆ್ಯಪ್​ಗಳಲ್ಲೂ ಶೀಘ್ರದಲ್ಲೇ ಈ ಫೀಚರ್ ಲಭ್ಯ ಇರಲಿದೆ. ಸದ್ಯ ಕೆಲ ಬ್ಯಾಂಕುಗಳಷ್ಟೇ ಯುಪಿಐ ಲೈಟ್​ಗೆ ಬೆಂಬಲ ಕೊಡುತ್ತಿವೆ. ಮುಂದೆ ಯುಪಿಐ ವ್ಯವಸ್ಥೆ ಇರುವ ಎಲ್ಲಾ ಬ್ಯಾಂಕುಗಳೂ ಯುಪಿಐ ಲೈಟ್​ಗೂ ತೆರೆದುಕೊಳ್ಳಬಹುದು.

ಇದನ್ನೂ ಓದಿ: BSNL Recharge Plans: 269 ರೂ, 769 ರೂ; ಬಿಎಸ್​ಎನ್​ಎಲ್​ನಿಂದ 2 ಹೊಸ ರೀಚಾರ್ಜ್ ಪ್ಲಾನ್​ಗಳು

ಯುಪಿಐ ಲೈಟ್ ಹೆಚ್ಚೂಕಡಿಮೆ ಪೇಮೆಂಟ್ ಆ್ಯಪ್​ಗಳ ವ್ಯಾಲಟ್ ಅಕೌಂಟ್ ರೀತಿ ಕಾರ್ಯನಿರ್ವಹಿಸುತ್ತವೆ. ಯುಪಿಐ ವ್ಯಾಲಟ್​ಗಳಲ್ಲಿ ನೀವು ಎಷ್ಟು ಬೇಕಾದರೂ ಹಣ ಹಾಕಬಹುದು. ಹೆಚ್ಚು ಮೊತ್ತದ ಹಣದ ಪಾವತಿ ಮಾಡಬಹುದು. ಆದರೆ, ಯುಪಿಐ ಲೈಟ್ ವ್ಯಾಲಟ್​ಗೆ ನೀವು ಒಮ್ಮೆಗೆ ಗರಿಷ್ಠ 2 ಸಾವಿರ ರೂ ಮಾತ್ರ ತುಂಬಿಸಬಹುದು. ದಿನದಲ್ಲಿ ಒಟ್ಟು 4 ಸಾವಿರ ರೂ ಮಾತ್ರ ಈ ವ್ಯಾಲಟ್​ಗೆ ಭರ್ತಿ ಮಾಡಬಹುದು. 200 ರೂಗಿಂತ ಅಧಿಕ ಮೊತ್ತದ ಪೇಮೆಂಟ್ ಮಾಡಲಾಗುವುದಿಲ್ಲ.

ನೀವು ಪೇಟಿಎಂ ಆ್ಯಪ್ ತೆರೆದರೆ ಅಲ್ಲಿ ಮಧ್ಯದಲ್ಲಿ ಯುಪಿಐ ಲೈಟ್ ಫೀಚರ್ ಕಾಣಬಹುದು. ನೀವು ಆ್ಯಪ್​ನ ಇತ್ತೀಚಿನ ಆವೃತ್ತಿಗೆ ಅಪ್​ಡೇಟ್ ಮಾಡಿದರೆ ಯುಪಿಐ ಲೈಟ್ ಆಕ್ಟಿವೇಶನ್​ಗೆ ಕೇಳಲಾಗುತ್ತದೆ. ಸುಲಭವಾಗಿ ಆ್ಯಕ್ಟಿವೇಟ್ ಮಾಡಬಹುದು.

ಇನ್ನಷ್ಟು ವ್ಯವಹಾರ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 5:08 pm, Tue, 28 February 23

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಪ್ರಧಾನಿ ಮೋದಿ ಸಮ್ಮುಖದಲ್ಲಿ 'ವಿಂಗ್ಸ್ ಓವರ್ ಗಂಗಾ' ಏರ್ ಶೋ!
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
ಬೈಪಾಸ್​​ಗೆ ಆಗ್ರಹಿಸಿ ಕಗ್ಗಲಿಪುರ ನಿವಾಸಿಗಳಿಂದ ವಿನೂತನ ಪ್ರತಿಭಟನೆ
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
RSS ಪಥಸಂಚಲನಕ್ಕೆ ಕೊನೆ ಕ್ಷಣದಲ್ಲಿ ಸರ್ಕಾರ ಅನುಮತಿ ನೀಡಿದೆ ಎಂದ ಅಶೋಕ್
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ಕಿರಿಕ್; ಎಳೆಎಳೆಯಾಗಿ ವಿವರಿಸಿದ ಆಪ್ತ ವೇಲು
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ದರ್ಶನ್ ಹೊರಗೆ ಬರೋದು ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಲಾಯರ್ ಪ್ರತಿಕ್ರಿಯೆ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಪರಿಷತ್​​​ ಬಿಜೆಪಿ ಅಭ್ಯರ್ಥಿ ಸುರೇಶ್​​ ನಡೆಗೆ ಶಾಸಕ ಬಿ.ಪಿ.ಹರೀಶ್ ಆಕ್ರೋಶ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ಧನ್ವೀರ್, ವಿಜಯಲಕ್ಷ್ಮಿ ದರ್ಶನ್ ನಡುವಿನ ಜಗಳಕ್ಕೆ ಸಿಕ್ತು ಮುಖ್ಯ ಕಾರಣ
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ ಆರೋಪ: ನಾಲ್ವರ ವಿರುದ್ಧ ಎಫ್ಐಆರ್
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು
ವಾರಭವಿಷ್ಯ: ಅ.26 ರಿಂದ ನ.01ರ ವರೆಗಿನ ದ್ವಾದಶ ರಾಶಿಗಳ ಫಲಾಫಲಗಳು