ಸೂರ್ಯ ಗ್ರಹಣ(Solar Eclipse) ವು ಸೌರಮಂಡಲದಲ್ಲಿ ನಡೆಯುವ ಭೂಮಿ, ಸೂರ್ಯ ಮತ್ತು ಚಂದ್ರರನ್ನೊಳಗೊಂಡ ಒಂದು ಖಗೋಳ ಪ್ರಕ್ರಿಯೆ. ಅಮಾವಾಸ್ಯೆಯ ದಿನ ಮಾತ್ರ ಸೂರ್ಯ ಗ್ರಹಣ ಸಂಭವಿಸಲು ಸಾಧ್ಯ. ಗ್ರಹಣವು ಸಾವಿರಾರು ವರ್ಷಗಳ ನಂತರ ಸಂಭವಿಸಲಿದ್ದರೂ, ಅದರ ದಿನಾಂಕವನ್ನು ಈಗಾಗಲೇ ಪಂಚಾಂಗದಲ್ಲಿ ದಾಖಲಿಸಲಾಗಿದೆ. ಭೂಮಿ ಮತ್ತು ಸೂರ್ಯನ ನಡುವೆ ಚಂದ್ರನು ಅಡ್ಡಲಾಗಿ ಬಂದ ಸಂದರ್ಭದಲ್ಲಿ ಈ ಸೂರ್ಯಗ್ರಹಣವು ಸಂಭವಿಸುತ್ತದೆ. ಈ ವರ್ಷ ಅಂದರೆ 2023 ರಲ್ಲಿ 2 ಸೂರ್ಯಗ್ರಹಣಗಳು ಮತ್ತು 2 ಚಂದ್ರಗ್ರಹಣಗಳು ಸಂಭವಿಸಲಿವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಣಗಳು ಜನರ ಜೀವನದ ಮೇಲೂ ಮಹತ್ವದ ಪರಿಣಾಮ ಬೀರುತ್ತವೆ.
ಈ ವರ್ಷದ ಮೊದಲ ಸೂರ್ಯಗ್ರಹಣ ಏಪ್ರಿಲ್ 20 ರಂದು ಗುರುವಾರ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ, ಬೆಳಿಗ್ಗೆ 07.40ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 12:28 ಕ್ಕೆ ಕೊನೆಗೊಳ್ಳುತ್ತದೆ. ಆದರೆ ಸೂರ್ಯ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ. 2023 ರ ಮೊದಲ ಗ್ರಹಣವು ಆಸ್ಟ್ರೇಲಿಯಾ, ಫಿಲಿಪೈನ್ಸ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಸಾಗರದಲ್ಲಿ ಗೋಚರಿಸುತ್ತದೆ.
ಇದನ್ನೂ ಓದಿ: 2023ರಲ್ಲಿ ಮೊದಲ ಸೂರ್ಯಗ್ರಹಣ, ಈ 5 ರಾಶಿಯವರಿಗೆ ಏಪ್ರಿಲ್ 20ರಿಂದ ಹಲವು ತೊಂದರೆಗಳು ಎದುರಾಗಲಿವೆ
ನಾಸಾ ಪ್ರಕಾರ, ಕಣ್ಣಿನ ಸುರಕ್ಷತೆ ಅಥವಾ ರಕ್ಷಣೆ ಇಲ್ಲದೆ ಸೂರ್ಯಗ್ರಹಣವನ್ನು ನೋಡುವುದು ಸುರಕ್ಷಿತವಲ್ಲ. ಇದು ಕಣ್ಣುಗಳಿಗೆ ಜೀವಿತಾವಧಿಯ ಹಾನಿಯನ್ನು ಉಂಟುಮಾಡಬಹುದು ಮತ್ತು ಕುರುಡುತನಕ್ಕೂ ಕಾರಣವಾಗಬಹುದು. ಸೂರ್ಯಗ್ರಹಣವನ್ನು ಸುರಕ್ಷಿತವಾಗಿ ವೀಕ್ಷಿಸಲು ಕಪ್ಪು ಪಾಲಿಮರ್, ಅಲ್ಯುಮಿನೈಸ್ಡ್ ಮೈಲಾರ್ ಅಥವಾ ಶೇಡ್ ಸಂಖ್ಯೆ 14 ರ ವೆಲ್ಡಿಂಗ್ ಗ್ಲಾಸ್‌ನಂತಹ ಸರಿಯಾದ ಫಿಲ್ಟರ್‌ಗಳನ್ನು ನೀವು ಬಳಸಬಹುದು ಎಂದು ತಿಳಿಸಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ :
Published On - 1:01 pm, Tue, 7 March 23