ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.

ಕೆಲವರು ಬಿಸಿ ಬಿಸಿ ಚಹಾವನ್ನು ಕ್ಷಣದಲ್ಲೇ ಹೀರಿಬಿಡುತ್ತಾರೆ, ಇನ್ನೂ ಕೆಲವರು ಅದೇ ಚಹಾ ಕುಡಿಯುವಾಗ ನಾಲಿಗೆ ಸುಟ್ಟುಕೊಳ್ಳುತ್ತಾರೆ ಏಕೆ?
ಚಹಾ

Updated on: Feb 17, 2023 | 8:00 AM

ಕೆಲವರಿಗೆ ಬಿಸಿ ಬಿಸಿ ಚಹಾ ಕುಡಿಯುವುದಂದರೆ ಇಷ್ಟ, ಇನ್ನೂ ಕೆಲವರು ಚಹಾವನ್ನು ತಣಿಸಿ, ತಣ್ಣಗಾದ ಮೇಲೆ ಕುಡಿಯುವ ಅಭ್ಯಾಸವಿಟ್ಟುಕೊಂಡಿರುತ್ತಾರೆ. ಆದರೆ ಬಿಸಿ ಒಂದೇ ಹಾಗಾದರೆ ಅವರ ನಾಲಿಗೆಯಲ್ಲಿ ಏನಾದರೂ ವ್ಯತ್ಯಾಸವಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ.
ಚಹಾ ಕುಡಿಯುವಾಗ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಕೆಲವು ಮಂದಿ ತುಂಬಾ ಬಿಸಿಯಾದ ಚಹಾವನ್ನು ಕುಡಿಯುತ್ತಾರೆ, ಅವರ ನಾಲಿಗೆ ಸುಡುವುದಿಲ್ಲ. ಇದರ ಹಿಂದೆ ತರ್ಕವಿದೆ. ವಾಸ್ತವವಾಗಿ, ಪ್ರತಿ ಸಿಪ್ ತೆಗೆದುಕೊಳ್ಳುವ ಮೊದಲು, ಕಾಫಿಯ ಮೇಲ್ಮೈಯಲ್ಲಿ 8-10 ಸೆಕೆಂಡುಗಳ ಉಫ್​ ಎಂದು ಊದಬೇಕು, ಅಷ್ಟೇ ವೇಗವಾಗಿ ಚಹಾವನ್ನು ಹೀರಬಹುದು, ಚಹಾ ಬಾಯಿಯೊಳಗೆ ಹೋದ ತಕ್ಷಣ ಸಾಕಷ್ಟು ತಂಪಾಗುತ್ತದೆ. ಈ ಕಾರಣದಿಂದಾಗಿ, ನಾಲಿಗೆ ಮತ್ತು ಬಾಯಿಯ ಇತರ ಭಾಗಗಳು ಸುಡುವುದಿಲ್ಲ.

ಕೆಲವರ ನಾಲಿಗೆ ಸುಡುವುದೇಕೆ?
ನಾಲಿಗೆಯ ಅಂಗಾಂಶಗಳು ಮೃದುವಾಗಿರುತ್ತವೆ, ಬಾಯಿಯ ಚರ್ಮವು ತುಂಬಾ ಗಟ್ಟಿಯಾಗಿರುವುದಿಲ್ಲ. ಬಿಸಿಬಿಸಿ ಚಹಾವನ್ನು ಕುಡಿಯುವಾಗ, ಅದಕ್ಕೆ ಗಾಳಿ ಊದಿ ತಣಿಸುವುದನ್ನು ಮರೆಯುತ್ತಾರೆ. ಬಿಸಿಯಾದ ಚಹಾವು ಬಾಯಿಗೆ ಹೋಗುತ್ತದೆ ಮತ್ತು ಈ ಬಿಸಿ ಚಹಾವು ಬಾಯಿಯನ್ನು ಸುಡುತ್ತದೆ.

ಮತ್ತಷ್ಟು ಓದಿ:Tea Side Effects: ನೀವು ಚಹಾ ಪ್ರಿಯರೇ?; ಸಂಜೆ ಟೀ ಕುಡಿಯುವ ಅಭ್ಯಾಸವಿದ್ದರೆ ಬಿಟ್ಟುಬಿಡಿ

ರಕ್ಷಣೆಗಾಗಿ ಏನು ಮಾಡಬೇಕು
ಬಿಸಿ ಚಹಾದಿಂದ ನಾಲಿಗೆ ಅಥವಾ ಬಾಯಿಯ ಇತರ ಭಾಗವನ್ನು ಸುಟ್ಟುಹೋದರೆ, ಅಗತ್ಯ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಹ ಪರಿಹಾರವನ್ನು ಕಾಣಬಹುದು.

ಉದಾಹರಣೆಗೆ, ಯಾವುದೇ ಐಸ್ ಕ್ರೀಮ್ ಅಥವಾ ಐಸ್ ಕ್ಯೂಬ್ ಅನ್ನು ತಕ್ಷಣವೇ ಬಾಯಿಯಲ್ಲಿ ಬಳಸಬಹುದು., ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಸೋಂಕು ನಿರೋಧಕಗಳಲ್ಲಿ ಸಮೃದ್ಧವಾಗಿದೆ. 12 ತಿಂಗಳೊಳಗಿನ ಮಕ್ಕಳು ಜೇನುತುಪ್ಪವನ್ನು ನೀಡುವುದನ್ನು ತಪ್ಪಿಸಬೇಕು, ಇದು ಅಪಾಯಕಾರಿಯಾಗಬಹುದು.  ಸುಟ್ಟಗಾಯಗಳನ್ನು ತಡೆಯಲು ಸಕ್ಕರೆಯನ್ನು ಸಹ ಬಳಸಬಹುದು. ಸಕ್ಕರೆ ಕರಗಿದಂತೆ, ನೋವು ಕೊನೆಗೊಳ್ಳಲು ಪ್ರಾರಂಭವಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us