ಕೊರೊನಾ ನಂತರದ ದಿನಗಳಲ್ಲಿ ವರ್ಕ್ ಫ್ರಮ್ ಹೋಮ್ ಹೆಚ್ಚಾಗಿ ಕಂಡು ಬರುತ್ತಿದೆ. ಇದರಿಂದಾಗಿ ಕಾನ್ಫರೆನ್ಸ್ ಕಾಲ್ಗಳು, ಗೂಗಲ್ ಮೀಟ್ಗಳ ಮೂಲಕ ಕೆಲಸಗಳು ನಡೆಯುತ್ತಿವೆ. ನೀವು ಬೆಂಗಳೂರಿನಲ್ಲಿ ಇದ್ದುಕೊಂಡು ಆಫೀಸ್ ವರ್ಕ್ಗಳಿಗಾಗಿ ಒಂದೊಳ್ಳೆಯ ಕೆಫೆಟೇರಿಯವನ್ನು ಹುಡುಕುತ್ತಿದ್ದೀರಾ? ಹಾಗಿದ್ದರೆ ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಲ್ಲಿ ನೀವು ಆಫೀಸ್ ಕಾನ್ಫರೆನ್ಸ್ ಕಾಲ್ಗಳು, ಗೂಗಲ್ ಮೀಟ್ಗಳಿಗೆ ಶಾಂತವಾದ ಕೆಫೆಟೇರಿಯಗಳನ್ನು ಹುಡುಕುತ್ತಿದ್ದರೆ ಮಾಹಿತಿ ಇಲ್ಲಿದೆ.
ಈ ಕೆಫೆಟೇರಿಯಾ ನಿಮ್ಮ ಆಫೀಸ್ ಕಾನ್ಫರೆನ್ಸ್ ಕಾಲ್ಗಳು, ಗೂಗಲ್ ಮೀಟ್ಗಳಿಗೆ ಉತ್ತಮ ಸ್ಥಳವಾಗಿದೆ. ಮ್ಯಾಟಿಯೊ ಕಾಫಿಯು ಉಚಿತ ವೈಫೈ, ಸಾಕಷ್ಟು ಪವರ್ ಔಟ್‌ಲೆಟ್‌ಗಳು ಮತ್ತು ಶಾಂತವಾದ ವಾತಾವರಣವನ್ನು ನಿಮಗೆ ಒದಗಿಸುತ್ತದೆ. ಜೊತೆಗೆ ನೀವು ಪುಸ್ತಕಗಳನ್ನು ಓದಲು ಕೂಡ ಉತ್ತಮ ಸ್ಥಳವಾಗಿದೆ.
ಕಾನ್ಫರೆನ್ಸ್ ಕರೆಗಳು ಅಥವಾ ವೈಯಕ್ತಿಕ ಮೀಟಿಂಗ್ಗಳಿಗೆ ಈ ಕೆಫೆಟೇರಿಯಾ ಉತ್ತಮ ಸ್ಥಳವಾಗಿದೆ. ನೀವಿಲ್ಲಿ ವೈಫೈ ಸೇವೆಗಳನ್ನು ಕೂಡ ಪಡೆಯಬಹುದಾಗಿದೆ. ಜೊತೆಗೆ ನೀವಿಲ್ಲಿ ಉತ್ತಮ ಗುಣಮಟ್ಟದ ಆಹಾರಗಳು ಹಾಗೂ ಪಾನೀಯಗಳನ್ನು ಸವಿಯಬಹುದು.
ನೀವು ಕೆಫೆಗಳಲ್ಲಿ ನಿಮ್ಮ ಆಫೀಸ್ ಕರೆಗಳು ಮೀಟಿಂಗ್ಗಳನ್ನು ಮಾಡಲು ಬಯಸಿದರೆ ಜೆಪಿ ನಗರದಲ್ಲಿರುವ ಡೈಲಾಗ್ಸ್ ಕೆಫೆ ಉತ್ತಮ ಆಯ್ಕೆಯಾಗಿದೆ. ನೀವಿಲ್ಲಿ ಆರ್ಡರ್ ಮಾಡುವುದಕ್ಕಿಂತ ಹೆಚ್ಚಾಗಿ ಕೆಫೆಯಲ್ಲಿ ಕಳೆಯುವ ಸಮಯಕ್ಕೆ ಪಾವತಿಸಬೇಕಾಗುತ್ತದೆ. ಇಲ್ಲಿ ಗಂಟೆಯ ಪಾಸ್ ಮತ್ತು ದಿನದ ಪಾಸ್ಗಳು ಲಭ್ಯವಿದ್ದು. ಪಾಸ್ನಿಂದ ನೀವು ಕೆಫೆಯ ದೈನಂದಿನ ಮೆನುವಿನಿಂದ ಆಹಾರ ಮತ್ತು ಪಾನೀಯಗಳನ್ನು ಪಡೆಯಬಹುದು.
ಇದು ವೈವಿಧ್ಯಮಯವಾದ ಎಲ್ಲಾ ಸಸ್ಯಾಹಾರಿ ಮೆನುವನ್ನು ಹೊಂದಿದೆ ಮತ್ತು ಅದರ ನೈರ್ಮಲ್ಯ ಮತ್ತು ಅತ್ಯುತ್ತಮ ಸೇವೆಗೆ ಹೆಸರುವಾಸಿಯಾಗಿದೆ. ಬೆಂಗಳೂರಿನಂತಹ ಅಧಿಕ ಜನದಟ್ಟನೆ ಇರುವಲ್ಲಿ ನೀವು ಆಫೀಸ್ ಕಾನ್ಫರೆನ್ಸ್ ಕಾಲ್ಗಳು, ಗೂಗಲ್ ಮೀಟ್ಗಳಿಗೆ ಶಾಂತವಾದ ಸ್ಥಳಗಳನ್ನು ಹುಡುಕುತ್ತಿದ್ದರೆ ಜಯನಗರದ ಟೀ ವಿಲ್ಲಾ ಕೆಫೆ ಉತ್ತಮ ಆಯ್ಕೆಯಾಗಿದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 12:31 pm, Fri, 17 February 23