AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Confession Day: ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವಿರಾ? ಇಲ್ಲಿದೆ ಸಿಂಪಲ್ ಟಿಪ್ಸ್​​​​

ವ್ಯಾಲೆಂಟೆನ್ಸ್ ಡೇ ಮುಗಿದಿದೆ ಮತ್ತು ನಿಮ್ಮ ಪ್ರೀತಿ ಭಾವನೆಯನ್ನು ವ್ಯಕ್ತಪಡಿಸಲು ನೀವು ಪ್ರೀತಿಸುವ ಹುಡುಗಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ನಿಮಗೆ ಇನ್ನೊಂದು ಅವಕಾಶ ಉಳಿದಿದೆ. ಅದುವೇ ಕನ್ಪೆಷನ್ ಡೇ.

Confession Day: ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಬಯಸುವಿರಾ? ಇಲ್ಲಿದೆ ಸಿಂಪಲ್ ಟಿಪ್ಸ್​​​​
ಕನ್ಫೆಷನ್ ಡೇImage Credit source: Bee Bulletin
TV9 Web
| Updated By: ಅಕ್ಷತಾ ವರ್ಕಾಡಿ|

Updated on:Feb 16, 2023 | 9:16 PM

Share

ಇದು ಆಂಟಿ ವ್ಯಾಲೆಂಟೈನ್ಸ್ ಡೇ ವಾರವಾಗಿದೆ. ತಪ್ಪೊಪ್ಪಿಗೆ ದಿನವೂ ಹತ್ತಿರ ಬರುತ್ತಿದೆ. ಈ ಕನ್ಫೆಷನ್ ಡೇಯಂದು ನೀವು ಪ್ರೀತಿಸುವ ಮಹಿಳೆಗೆ ವಜ್ರದ ಉಡುಗೊರೆಯನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ಹೇಳಿಕೊಳ್ಳಬಹುದು. ವ್ಯಾಲೆಂಟೆನ್ಸ್ ಡೇ ಮುಗಿದಿದೆ ಮತ್ತು ನಿಮ್ಮ ಪ್ರೀತಿ ಭಾವನೆಯನ್ನು ವ್ಯಕ್ತಪಡಿಸಲು ನೀವು ಪ್ರೀತಿಸುವ ಹುಡುಗಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ನಿಮಗೆ ಇನ್ನೊಂದು ಅವಕಾಶ ಉಳಿದಿದೆ. ಅದುವೇ ಕನ್ಪೆಷನ್ ಡೇ. ಪ್ರೇಮಿಗಳ ದಿನದ ನಂತರ ಆಟಿ-ವ್ಯಾಲೆಂಟೈನ್ಸ್ ವೀಕ್‌ನ್ನು ಆಚರಿಸಲಾಗುತ್ತದೆ, ಅದರಲ್ಲಿ ಕನ್ಫೆಷನ್ ಡೇ ಫೆಬ್ರವರಿ 19 ರಂದು ಬರುತ್ತದೆ. ಇದು ನಿಮ್ಮ ಪ್ರೀತಿಯನ್ನು ಸಂಗಾತಿಗೆ ವ್ಯಕ್ತಪಡಿಸಲು ಸೂಕ್ತ ದಿನವಾಗಿದೆ. ಯಾವುದಾದರೂ ವಜ್ರದ ಉಡುಗೊರೆಯನ್ನು ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ವಜ್ರಗಳನ್ನು ಇಷ್ಟಪಡದ ಮಹಿಳೆಯರೇ ಇಲ್ಲ. ವಜ್ರಗಳನ್ನು ಹೆಚ್ಚಿನ ಮಹಿಳೆಯರು ಪ್ರೀತಿ, ಐಷಾರಾಮಿ, ಸೌಂದರ್ಯದ ಸಂಕೇತವಾಗಿ ನೋಡಿದರೆ. ಕೆಲವು ಮಹಿಳೆಯರು ವಜ್ರವನ್ನು ಶಕ್ತಿ ಮತ್ತು ಸ್ವಾತಂತ್ರ್ಯದ ಸಂಕೇತವೆಂದು ಭಾವಿಸುತ್ತಾರೆ. ದೊಡ್ಡ ಸೆಲೆಬ್ರಿಟಿಗಳಿಂದ ಹಿಡಿದು ಸಾಮಾನ್ಯ ಮಹಿಳೆಯರವರೆಗೆ ವಜ್ರವನ್ನು ಖರೀದಿಸಬೇಕೆಂಬುವುದು ಪ್ರತಿಯೊಬ್ಬ ಮಹಿಳೆಯ ಕನಸಾಗಿರುತ್ತದೆ. ವಜ್ರವು ಮಹಿಳೆಯರನ್ನು ಹೆಚ್ಚಾಗಿ ಆಕರ್ಷಿಸುತ್ತದೆ.ಡೀ ಬರ‍್ಸ್ ಫರೆವರ್‌ಮಾರ್ಕ್ನ ಉಪಾಧ್ಯಕ್ಷ ಅಮೀತ್ ಪ್ರತೀಹಾರಿ ವಜ್ರಗಳನ್ನು ನೀಡುವುದರಿಂದ ನೀವು ಪ್ರೀತಿಸುವ ಹುಡುಗಿಯ ಮನಸ್ಸನ್ನು ಯಾವ ರೀತಿ ಗೆಲ್ಲಬಹುದು ಎಂಬುದರ ಕಾರಣಗಳನ್ನು ತಿಳಿಸಿದ್ದಾರೆ.

ಅಪರೂಪದ ಸೌಂದರ್ಯ:

ನೈಸರ್ಗಿಕ ವಜ್ರವು ಅಪರೂಪವಾದ ಹಾಗೂ ದುಬಾರಿಯಾಗಿರುತ್ತದೆ. ಮಹಿಳೆಯರು ಎಷ್ಟೇ ಆಭರಣಗಳನ್ನು ಹೊಂದಿದ್ದರು, ನೈಸರ್ಗಿಕ ವಜ್ರದ ಆಭರಣಗಳ ಬಯಕೆ ಇದ್ದೇ ಇರುತ್ತದೆ. ವಜ್ರಗಳನ್ನು ಉಡುಗೊರೆಯನ್ನಾಗಿ ನೀಡುವುದರಿಂದ ಇದು ನಿಮ್ಮ ಬಗ್ಗೆ ಆತ್ಮವಿಶ್ವಾಸ ಮತ್ತು ಹೆಮ್ಮೆಯ ಭಾವನೆಯನ್ನು ಆಕೆಯಲ್ಲಿ ಮೂಡಿಸುತ್ತದೆ. ಮತ್ತು ಈ ವಜ್ರದ ಹರಳುಗಳು ಸಂಬಂಧದಲ್ಲಿ ನಂಬಿಕೆ ಮತ್ತು ಧೃಡೀಕರಣವನ್ನು ಸಂಕೇತಿಸುತ್ತದೆ.

ಶಾಶ್ವತ ಹೊಳಪು:

ವಜ್ರದ ತೇಜಸ್ಸು ಶಾಶ್ವತವಾಗಿರುತ್ತದೆ. ಇದು ನಿಮ್ಮ ಪ್ರೀತಿಗೆ ಶಾಶ್ವತ ಹೊಳಪನ್ನು ನೀಡುತ್ತದೆ. ಈ ವಜ್ರವನ್ನು ನಿಮ್ಮ ಹುಡುಗಿಗೆ ಉಡುಗೊರೆಯಾಗಿ ನೀಡುವುದು ಅವುಗಳು ಪ್ರೀತಿಯ ಶಾಶ್ವತತೆ ಹಾಗೂ ಪ್ರೀತಿಯ ಐಷಾರಾಮಿಯನ್ನು ಸಂಕೇತಿಸುತ್ತದೆ. ಮತ್ತು ಇದು ನಿಮ್ಮ ಪ್ರೀತಿ ಶಾಶ್ವತವಾಗಿರುವಂತೆ ಮಾಡುತ್ತದೆ. ನಿಮ್ಮ ಪ್ರೀತಿಯ ಕಥೆಯನ್ನು ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹಸ್ತಾಂತರಿಸಲ್ಪಡುತ್ತವೆ. ಈ ಅಮೂಲ್ಯವಾದ ಉಡುಗೊರೆಯು ಭಾವನಾತ್ಮಕ ಮೌಲ್ಯವನ್ನು ಹೊಂದಿದ್ದು, ಈ ವಜ್ರವನ್ನು ಧರಿಸುವವರು ಮತ್ತು ಉತ್ಸಾಹ ಮತ್ತು ಸಮಯೋಚಿತತೆಯ ಭಾವನೆಯನ್ನು ಉಂಟುಮಾಡುತ್ತದೆ.

ಇದನ್ನೂ ಓದಿ: ಮಾಜಿ ಪ್ರೇಮಿಯನ್ನು ನಿಮ್ಮ ಜೀವನದಿಂದ ಹೇಗೆ ದೂರು ಮಾಡುವುದು? ಇಲ್ಲಿದೆ ಟಿಪ್ಸ್

ಸಾಂಕೇತಿಕತೆ:

ವಜ್ರವು ಪ್ರೀತಿಯ ಸಂಕೇತವಾಗಿದೆ. ಒಬ್ಬ ಪುರುಷನು ಆತ ಪ್ರೀತಿಸುವ ಹುಡುಗಿಗೆ ವಜ್ರದ ಉಂಗುರ ನೀಡಿದಾಗ, ಅದು ಶಾಶ್ವತವಾದ ಭರವಸೆಯನ್ನು ಪ್ರತಿನಿಧಿಸುತ್ತದೆ. ವಜ್ರವು ಇಬ್ಬರು ಪ್ರೇಮಿಗಳ ನಡುವಿನ ದೃಢವಾದ ಬಂಧದ ಸಂಕೇತವಾಗಿದೆ. ವಜ್ರದುಂಗರಗಳನ್ನು ನೀಡುವ ಮೂಲಕ ನೀವು ಪ್ರೀತಿಸುವ ಹುಡುಗಿಯನ್ನು ಶಾಶ್ವತವಾಗಿ ನಿಮ್ಮವಳನ್ನಾಗಿ ಮಾಡಿಕೊಳ್ಳಬಹುದು. ಇಂದು ವಜ್ರವು ಮಹಿಳೆಯರಿಗೆ ಸ್ವಾತಂತ್ರ್ಯದ ಸಂಕೇತವಾಗಿ ಮಾರ್ಪಟ್ಟಿದೆ.

ವಿನ್ಯಾಸ:

ಸಂದರ್ಭ ಮತ್ತು ಭಾವನೆಗಳಿಗೆ ಅನುಗುಣವಾಗಿ ವಿವಿಧ ವಿನ್ಯಾಸದಲ್ಲಿ ವಜ್ರದ ಆಭರಣಗಳು ದೊರೆಯುತ್ತದೆ. ವಜ್ರಗಳು ವಿಭಿನ್ನ ಗಾತ್ರಗಳು, ಕಟ್‌ಗಳು ಹಾಗೂ ಬಣ್ಣಗಳಲ್ಲಿ ಬರುತ್ತವೆ. ಖರೀದಿದಾದರು ತಮ್ಮ ಭಾವನೆಗಳಿಗನುಗುಣವಾಗಿ ವಜ್ರವನ್ನು ಖರೀದಿಸಲು ಅನುವು ಮಾಡಿಕೊಡುತ್ತದೆ. ಉಂಗುರು, ನೆಕ್ಲೆಸ್, ಕಿವಿಯೋಲೆ ಯಾವುದನ್ನಾದರೂ ಉಡುಗೊರೆ ನೀಡುವ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Published On - 9:16 pm, Thu, 16 February 23

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ