
ನೋಯ್ಡಾ, 1 ಅಕ್ಟೋಬರ್ 2025: ಡ್ಯುಯೊಲಾಗ್ NXT ಕಾರ್ಯಕ್ರಮದಲ್ಲಿ ಉದಯೋನ್ಮುಖ ತಾರೆ ರಿಯಾ ಸಿಂಘಾ ಅವರನ್ನು ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು ರಿಯಾ ಸಿಂಘಾ ಅವರ ಸಾಧನೆ, ಹಾಗೂ ನಿರಂತರ ಸಿದ್ಧತೆ ಮತ್ತು ಭವಿಷ್ಯದ ಬಗ್ಗೆ ಸ್ಪೂರ್ತಿದಾಯಕ ವಿಚಾರಗಳ ಕುರಿತು ಸಂದರ್ಶನ ನಡೆಸಿದ್ದಾರೆ. ಈ ಸಂದರ್ಶನದಲ್ಲಿ ರಿಯಾ ಮಿಸ್ ಯೂನಿವರ್ಸ್ ಇಂಡಿಯಾ ಗೆದ್ದ ಬಗ್ಗೆ ಹಾಗೂ ಈ ಸಾಧನೆಗೆ ಸ್ಫೂರ್ತಿಯಾದ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಜಾಗತಿಕ ವೇದಿಕೆಯಲ್ಲಿ ಇಂತಹ ಸಾಧನೆ ಮಾಡುವುದು ಅಷ್ಟೊಂದು ಸುಲಭದ ಮಾತಲ್ಲ ಅದರೂ ಈ ಯಶಸ್ಸಿಗಾಗಿ ಸಮಗ್ರ ಸಿದ್ಧತೆಯ ಬಗ್ಗೆ ಸಂಭಾಷಣೆ ನಡೆಸಿದ್ದಾರೆ. ಇದಕ್ಕೆ ಉತ್ತರಿಸಿದ ರಿಯಾ “ವಿಜೇತರು ತಮ್ಮ ಮನಸ್ಥಿತಿಯಿಂದ ಅವರ ಪ್ರಸ್ತುತಿಗೆ ಸಂಪೂರ್ಣ ಮೂಲ ಮಾದರಿಗಳಾಗಿ ನಡೆಯುತ್ತಾರೆ ಎಂದು ನಾನು ಅರಿತುಕೊಂಡೆ. ತಯಾರಿ ಮಾತುಕತೆಗೆ ಒಳಪಡುವುದಿಲ್ಲ,” ಎಂದು ಹೇಳಿಕೊಂಡಿದ್ದಾರೆ.
ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಆಗಿರುವ ಬರುಣ್ ದಾಸ್ ಅವರು ರಿಯಾ ಅವರ ಈ ದಿಟ್ಟ ಹೆಜ್ಜೆಯ ಬಗ್ಗೆ ಹಾಗೂ ಅವರು ಸಾಧನೆ ಮಾಡಲು ಕೈಜೋಡಿಸಿರುವವರನ್ನು ಕೂಡ ಇಲ್ಲಿ ಉಲ್ಲೇಖ ಮಾಡಿದ್ದಾರೆ. ಈ ಪಯಾಣದ ಬಗ್ಗೆಯೂ ಮಾತನಾಡಿದ್ದಾರೆ. ದೂರುದೃಷ್ಟಿಯನ್ನು ಶಿಸ್ತಿನಿಂದ ಬೆರೆಸುವ ರಿಯಾ ಅವರ ಸಾಮರ್ಥ್ಯ ನನಗೆ ಹೆಚ್ಚು ಇಷ್ಟವಾಯಿತು ಎಂದು ಬರುಣ್ ಹೇಳಿದ್ದಾರೆ.
ಡ್ಯುಯೊಲೊಗ್ NXT ಕಾರ್ಯಕ್ರಮದಲ್ಲಿ ತಮ್ಮ ಸಮಯದ ಬಗ್ಗೆ ಮಾತನಾಡುತ್ತಾ, ರಿಯಾ, “ಡ್ಯುಯೊಲೊಗ್‌ನಲ್ಲಿರುವುದು ಸ್ವತಃ ಒಂದು ದೊಡ್ಡ ವಿಷಯ ಏಕೆಂದರೆ ನಾನು ಇಲ್ಲಿಗೆ ಬಂದ ಎಲ್ಲ ಜನರನ್ನು ನೋಡಿದ್ದೇನೆ ಮತ್ತು ಅದರ ಭಾಗವಾಗುವುದು ಅಪಾರ ಹೆಮ್ಮೆಯ ಭಾವನೆ. ಇವು ಯಾರೊಬ್ಬರ ಜೀವನವನ್ನು ಬದಲಾಯಿಸುವ ಮತ್ತು ಅವರು ಎಂದಿಗೂ ತಿಳಿದಿರದ ಏನನ್ನಾದರೂ ಅರಿತುಕೊಳ್ಳುವಂತೆ ಮಾಡುವ ಸಂಭಾಷಣೆ ನಡೆಸುವ ಹಾಗೂ ಸರಿಯಾದ ಪ್ರಶ್ನೆಗಳನ್ನು ಕೇಳುವಂತೆ ಬರುಣ್ ದಾಸ್ ಮಾಡಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಈ ಸಂದರ್ಶನದ ವೇಳೆ ತಮ್ಮ ‘ಹುಚ್ಚು’ ಕನಸುಗಳ ಬಗ್ಗೆಯೂ ಮಾತನಾಡಿದ್ದಾರೆ. ಕೋವಿಡ್ ಸಮಯದಲ್ಲಿ ಬಾಲ್ಕನಿಯಲ್ಲಿ ಮಾಡಿದ ಕೆಲವೊಂದು ತಮಾಷೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ ಆ ಘಟನೆಗಳು ಅವರನ್ನು ಖ್ಯಾತಿಯನ್ನು ಗಳಿಸುವಲ್ಲಿ ಹಾಗೂ ಈ ಸಾಧನೆಗೆ ಸ್ಫೂರ್ತಿಯಾಗಿದೆ. ಈ ವೇಳೆ ಬರುಣ್ ದಾಸ್ ಅವರು ಕೂಡ ತಮ್ಮ ವೃತ್ತಿಜೀವನದ ಆರಂಭಿಕ ಹಂತದಲ್ಲಿಯೇ ಸಿಇಒ ಆಗಬೇಕೆಂಬ ದಿಟ್ಟ ದೃಷ್ಟಿಕೋನವನ್ನು ಹೊಂದಿದರು ಎಂದು ಹೇಳಿದ್ದಾರೆ. ಗುರಿಗಳು ದಿಟ್ಟವಾಗಿರಬೇಕು, ಅಸಾಧ್ಯವೆಂದು ತೋರಬೇಕು. ಅಸಾಧಾರಣ ಮಾರ್ಗಗಳನ್ನು ಸೃಷ್ಟಿಸುವುದು ಹೀಗೆ ಅನೇಕ ಕನಸುಗಳು ಇರಬೇಕು ಎಂದು ಹೇಳಿದ್ದಾರೆ. ತನ್ನ ಜೀವನದಲ್ಲಾದ ಅನುಮಾನಗಳನ್ನು, ಇತರರ ನಿಷ್ಟುರದ ಮಾತುಗನ್ನು ಕೇಳಿದ ನಂತರವೂ ನಾವು ಬೆಳೆಯುವುದು ಇನ್ನು ದೊಡ್ಡ ಸಾಧನೆ ಎಂದು ಹೇಳಿದ್ದಾರೆ.
ಆದರೆ ರಿಯಾ ಸೌಂದರ್ಯ ಅಥವಾ ತಾರಾಪಟ್ಟದ ಲೇಬಲ್‌ಗಳಿಗೆ ಸೀಮಿತವಾಗಿರಲು ನಿರಾಕರಿಸಿದ್ದಾರೆ. ಜೀವನವು ನಿಮ್ಮನ್ನು ಮಿತಿಗೊಳಿಸಲು ತುಂಬಾ ಚಿಕ್ಕದಾಗಿದೆ. ನಾನು ಬಯಸುವ ಜೀವನವನ್ನು ರಚಿಸಲು ನನ್ನ ನೋಟ, ನನ್ನ ಬುದ್ಧಿವಂತಿಕೆ ಮತ್ತು ನನ್ನ ಕೌಶಲ್ಯಗಳ ಪ್ರತಿಯೊಂದು ಸಾಮರ್ಥ್ಯವನ್ನು ಬಳಸುತ್ತೇನೆ. ಸೌಂದರ್ಯವು ಹೊರೆಯಲ್ಲ, ಅದು ಒಂದು ಸಾಧನ” ಎಂದು ರಿಯಾ ಹೇಳಿದ್ದಾರೆ. ವರ್ಕ್ ರೆಡಿ ವಿತ್ ರಿಯಾ ಎಂಬ ವಿಚಾರದ ಮೂಲಕ ಯುವ ಆಕಾಂಕ್ಷಿಗಳಿಗೆ ಸಂವಹನ ಕೌಶಲ್ಯವನ್ನು ಹೆಚ್ಚಿಸುವ ಬಗ್ಗೆ ಪ್ರೋತ್ಸಾಹಿಸುತ್ತಾರೆ, ಈ ಉದ್ದೇಶವು ಭಾರತದ ಯುವಜನರಿಗೆ ಅವಕಾಶಗಳನ್ನು ನೀಡಲು ಸಬಲೀಕರಣಗೊಳಿಸುತ್ತದೆ.ನಾನು ಇನ್ನೊಬ್ಬ ನಟಿಗಿಂತ ಹೆಚ್ಚಿನವನಾಗಲು ಬಯಸುತ್ತೇನೆ. ಹೊಸದನ್ನು ತರುವ ಪಾತ್ರಗಳು ಮತ್ತು ಯೋಜನೆಗಳನ್ನು ಆಯ್ಕೆ ಮಾಡುವ ಮೂಲಕ ಬಾಲಿವುಡ್ ಅನ್ನು ಪರಿವರ್ತಿಸಲು ನಾನು ಬಯಸುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯಮಿ ಸನಾ ಸಾಜನ್ ಜೊತೆ ಟಿವಿ9 ನೆಟ್‌ವರ್ಕ್ ಎಂಡಿ, ಸಿಇಒ ಬರುಣ್ ದಾಸ್ ವಿಶೇಷ ಸಂವಾದ
ರಿಯಾ ಸಿಂಘಾ ಕೇವಲ ಪ್ರಚಾರದ ಬೆನ್ನಟ್ಟುತ್ತಿಲ್ಲ, ಅವರು ಮುಂದಿನ ದೊಡ್ಡ ಸಾಧನೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ. ರಿಯಾ ಸಿಂಘಾ ಒಳಗೊಂಡ ಡ್ಯುಯೊಲೊಗ್ NXT ಯ ಪೂರ್ಣ ಸಂಚಿಕೆಯನ್ನು 01 ಅಕ್ಟೋಬರ್ 2025 ರಂದು ರಾತ್ರಿ 10:30 ಕ್ಕೆ ನ್ಯೂಸ್ 9 ನಲ್ಲಿ ಮಾತ್ರ ವೀಕ್ಷಿಸಿ ಮತ್ತು ಡ್ಯುಯೊಲೊಗ್ ಯೂಟ್ಯೂಬ್ ಚಾನೆಲ್ (@Duologuewithbarundas) ಮತ್ತು ನ್ಯೂಸ್ 9 ಪ್ಲಸ್ ಅಪ್ಲಿಕೇಶನ್‌ನಲ್ಲಿ ಸ್ಟ್ರೀಮ್ ಮಾಡಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ