International Day Of Older Persons 2025: ಹಿರಿ ಜೀವಗಳ ಬಗ್ಗೆ ತಾತ್ಸಾರ ಬೇಡ, ಇರಲಿ ಗೌರವ
ಹಿರಿಯರನ್ನು ದೇವರ ಸಮ ಅಂತ ಹೇಳುತ್ತಾರೆ. ಆದರೆ ಇಂದು ಅದೆಷ್ಟೋ ಮನೆಗಳಲ್ಲಿ ಹಿರಿಯ ವ್ಯಕ್ತಿಗಳಿಗೆ ಸರಿಯಾದ ಆರೈಕೆ ಸಿಗುತ್ತಿಲ್ಲ. ಸ್ವಂತ ಮನೆಯವರೇ ಅವರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ. ಇನ್ನೂ ಕೆಲವರು ವೃದ್ಧರ ಮೇಲೆ ದೌರ್ಜನ್ಯವನ್ನು ಕೂಡ ಎಸಗುತ್ತಾರೆ. ಈ ನಿಟ್ಟಿನಲ್ಲಿ ಹಿರಿಯರನ್ನು ಗೌರವಿಸಬೇಕು, ಅವರಿಗೂ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕು ಎಂದು ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಆಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ವೃದ್ಧರ ದಿನವನ್ನು ಆಚರಿಸಲಾಗುತ್ತದೆ.

ಬಾಲ್ಯ, ಯೌವನ, ವೃದ್ದಾಪ್ಯ ಇವೆಲ್ಲಾ ಜೀವನದ ಹಂತಗಳು. ಅದರಲ್ಲಿ ವೃದ್ಧಾಪ್ಯವು ಪ್ರಮುಖ ಹಂತವಾಗಿ, ಈ ಹಂತದಲ್ಲಿ ಹಿರಿ ಜೀವಗಳಿಗೆ (Older Persons) ಸರಿಯಾದ ಆರೈಕೆಯ ಅವಶ್ಯಕತೆ ಇರುತ್ತದೆ. ಏಕೆಂದರೆ ದೇಹಕ್ಕೆ ವಯಸ್ಸಾದಂತೆ ಹೋದಂತೆ ಹಿರಿಯರು ಮಕ್ಕಳಂತೆ ವರ್ತಿಸುತ್ತಾರೆ. ಪ್ರತಿ ವಿಷಯಗಳಿಗೂ ಹಠ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಸರಿಯಾದ ಪ್ರೀತಿ, ಬೆಂಬಲ ಮತ್ತು ಕಾಳಜಿಯ ಅಗತ್ಯವಿರುತ್ತದೆ. ಆದರೆ ಅದೆಷ್ಟೋ ಹಿರಿ ಜೀವಗಳಿಗೆ ಸರಿಯಾದ ಪ್ರೀತಿ ಸಿಗುತ್ತಿಲ್ಲ. ಅವರ ತಲೆ ಬಿಸಿ ನಮಗ್ಯಾಕಪ್ಪಾ ಎಂದು ಸ್ವಂತ ಮನೆಯವರೇ ಹಿರಿಯರನ್ನು ವೃದ್ಧಾಶ್ರಮಕ್ಕೆ ನೂಕುತ್ತಿದ್ದಾರೆ. ಇನ್ನೂ ಕೆಲವರಂತೂ ವೃದ್ಧರ ದೌರ್ಜನ್ಯವನ್ನೇ ಎಸಗುತ್ತಾರೆ. ಹೀಗೆ ವೃದ್ಧರಿಗೆ ಸರಿಯಾದ ಆರೈಕೆ ಮತ್ತು ಪ್ರೀತಿ ಸಿಗುತ್ತಿಲ್ಲ. ಈ ನಿಟ್ಟಿನಲ್ಲಿ ವೃದ್ಧಾಪ್ಯದಲ್ಲಿ ಹಿರಿಯರಿಗೆ ಸರಿಯಾದ ಪ್ರೀತಿ ಮತ್ತು ಕಾಳಜಿಯನ್ನು ತೋರಬೇಕೆಂದು ಜಾಗೃತಿ ಮೂಡಿಸಲು ಹಾಗೂ ವೃದ್ಧರ ಮೇಲಿನ ದೌರ್ಜನ್ಯವನ್ನು ತಡೆಯಲು ಪ್ರತಿವರ್ಷ ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ವೃದ್ಧರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.
ಅಂತಾರಾಷ್ಟ್ರೀಯ ವೃದ್ಧರ ದಿನದ ಇತಿಹಾಸವೇನು?
ವೃದ್ಧರ ಮೇಲಿನ ದೌರ್ಜನ್ಯ, ಅನ್ಯಾಯವನ್ನು ತಡೆಯಲು, ಹಾಗೂ ಸಮಾಜದಲ್ಲಿ ಅವರಿಗೆ ಸರಿಯಾದ ಸ್ಥಾನಮಾನ ಮತ್ತು ಗೌರವ ಸಿಗಬೇಕು ಎಂಬ ಉದ್ದೇವನ್ನು ಇಟ್ಟುಕೊಂಡು ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು 14 ಡಿಸೆಂಬರ್ ಅಕ್ಟೋಬರ್ 1990 ರಂದು ಹಿರಿಯರ ದಿನವನ್ನು ಆಚರಿಸಬೇಕು ಎಂಬ ನಿರ್ಧಾರವನ್ನು ತೆಗೆದುಕೊಂಡಿತು. ಮತ್ತು ಅಕ್ಟೋಬರ್ 1 ರಂದು ಅಂತಾರಾಷ್ಟ್ರೀಯ ಹಿರಿಯರ ದಿನವನ್ನು ಆಚರಿಸುವುದಾಗಿ ಘೋಷಿಸಿತು. ನಂತರ 1991, ಅಕ್ಟೋಬರ್ 1 ರಂದು ಮೊದಲ ಬಾರಿಗೆ ವಿಶ್ವ ಹಿರಿಯರ ದಿನವನ್ನು ಆಚರಿಸಲಾಯಿತು. ನಂತರದಲ್ಲಿ ಪ್ರತಿ ವರ್ಷ ಕೂಡ ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇದನ್ನೂ ಓದಿ: ನದಿಗಳು ಬರೀ ನೀರಿನ ಮೂಲವಲ್ಲ, ಪರಿಸರ ವ್ಯವಸ್ಥೆಯ ಜೀವನಾಡಿ; ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆ
ಅಂತಾರಾಷ್ಟ್ರೀಯ ವೃದ್ಧರ ದಿನದ ಮಹತ್ವವೇನು?
- ಪ್ರಪಂಚದಾದ್ಯಂತ ವೃದ್ಧರು ಮತ್ತು ಹಿರಿಯರು ಎದುರಿಸುತ್ತಿರುವ ತಾರತಮ್ಯ, ಅಗೌರವ, ನಿರ್ಲಕ್ಷ್ಯ ಮತ್ತು ಅನ್ಯಾಯವನ್ನು ಕೊನೆಗೊಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.
- ಈ ದಿನದಂದು, ಅನೇಕ ಸ್ವಯಂಸೇವಾ ಸಂಸ್ಥೆಗಳು ವೃದ್ಧರು ಎದುರಿಸುತ್ತಿರುವ ಅನ್ಯಾಯಗಳನ್ನು ಎತ್ತಿ ತೋರಿಸಲು ಮತ್ತು ಅವರ ಬಗ್ಗೆ ಗೌರವವನ್ನು ಬೆಳೆಸಿಕೊಳ್ಳಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
- ಹಿರಿಯರ ಆರೋಗ್ಯ ಮತ್ತು ಆರೈಕೆಯ ಬಗ್ಗೆ ಗಮನವನ್ನು ನೀಡಬೇಕು. ಅವರಿಗಾಗಿ ಒಂದಷ್ಟು ಸಮಯವನ್ನು ಮೀಸಲಿಡಬೇಕು. ಹಾಗೂ ಹಿರಿಯರಿಗೆ ನಿಂದಿಸದೆ ಅವರನ್ನು ಗೌರವಭಾವದಿಂದ ನೋಡಿಕೊಳ್ಳಬೇಕೆಂದು ವಿಶ್ವ ಹಿರಿಯರ ದಿನದ ಮೂಲಕ ಜಾಗೃತಿಯನ್ನು ಮೂಡಿಸಲಾಗುತ್ತದೆ.
- ಅಲ್ಲದೆ ಈ ದಿನವು ನಮ್ಮ ಸಮಾಜಕ್ಕೆ ಹಿರಿಯರ ಕೊಡುಗೆಯನ್ನು ಎತ್ತಿ ತೋರಿಸುವ ಗುರಿಯನ್ನು ಹೊಂದಿದೆ. ಹಿರಿಯ ವ್ಯಕ್ತಿಗಳ ಬಗ್ಗೆ ತಾರತಮ್ಯ, ಆರೈಕೆಯ ನಿರ್ಲಕ್ಷ್ಯವನ್ನು ಮತ್ತು ಅನ್ಯಾಯವನ್ನು ನಿಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.
- ಈ ದಿನದಂದು ಅನೇಕ ಸಂಸ್ಥೆಗಳು ವಿಶ್ವದಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಜಾಗೃತಿ ಅಭಿಯಾನಗಳನ್ನು ನಡೆಸುತ್ತವೆ. ಹಾಗೂ ಈ ದಿನ ಹಿರಿಯರನ್ನು ಸಂತೋಷವಾಗಿರಿಸಲು ವೃದ್ಧಾಶ್ರಮಗಳಲ್ಲಿ ಹಲವು ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








