AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Rhino Day 2025: ವಿಶ್ವ ಘೇಂಡಾಮೃಗ ದಿನದ ಆಚರಣೆಯ ಇತಿಹಾಸ, ಮಹತ್ವವನ್ನು ತಿಳಿಯಿರಿ

ಹುಲಿ, ಸಿಂಹ, ಆನೆಗಳಂತೆ ಕಾಡಿನಲ್ಲಿರುವ ದೈತ್ಯ ಪ್ರಾಣಿಗಳಲ್ಲಿ ಒಂದಾಗಿರುವ ಘೇಂಡಾಮೃಗಗಳ ಸಂತತಿ ಕ್ಷೀಣಿಸುತ್ತಿವೆ. ನಿರಂತರ ಬೇಟೆ, ಕಾಡು ನಾಶ ಈ ಎಲ್ಲಾ ಕಾರಣದಿಂದ ಘೇಂಡಾಮೃಗಗಳ ಸಂತತಿ ಅಳಿವಿನಂಚಿನಲ್ಲಿದ್ದು, ಇವುಗಳ ರಕ್ಷಣೆ ಹಾಗೂ ಇವುಗಳ ನೈಸರ್ಗಿಕ ಆವಾಸಸ್ಥಾನವಾದ ಕಾಡುಗಳನ್ನು ಸಂರಕ್ಷಿಸುವ ಅಗತ್ಯತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ವಿಶ್ವ ಘೇಂಡಾಮೃಗ ದಿನವನ್ನು ಪ್ರತಿವರ್ಷ ಸೆಪ್ಟೆಂಬರ್ 22 ರಂದು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ.

World Rhino Day 2025: ವಿಶ್ವ ಘೇಂಡಾಮೃಗ ದಿನದ ಆಚರಣೆಯ ಇತಿಹಾಸ, ಮಹತ್ವವನ್ನು ತಿಳಿಯಿರಿ
ವಿಶ್ವ ಘೇಂಡಾಮೃಗ ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on: Sep 22, 2025 | 9:50 AM

Share

ಅಕ್ರಮ ಬೇಟೆ, ಆವಾಸಸ್ಥಾನಗಳ ನಷ್ಟದ ಕಾರಣದಿಂದಾಗಿ ಹುಲಿ, ಸಿಂಹ, ಆನೆಗಳಂತಹ ಅದೆಷ್ಟೋ ಕಾಡು ಪ್ರಾಣಿಗಳ ಸಂಖ್ಯೆ ಕ್ಷೀಣಿಸುತ್ತಿದೆ. ಅದೇ ರೀತಿ ಒಂಟಿ ಕೊಂಬಿನ ದೈತ್ಯ ಪ್ರಾಣಿಯಾದ ಘೇಂಡಾಮೃಗಗಳನ್ನು (Rhino) ಸಹ ಹೆಚ್ಚು ಬೇಟೆಯಾಡಲಾಗುತ್ತದೆ. ಚೀನಾ, ವಿಯೆಟ್ನಾಂ, ಕೊರಿಯಾ ಮತ್ತು ಮಲೇಷ್ಯಾ ಸೇರಿದಂತೆ ಅನೇಕ ದೇಶಗಳಲ್ಲಿ ಘೇಂಡಾಮೃಗದ ಕೊಂಬುಗಳಿಗೆ ಹೆಚ್ಚಿನ ಬೇಡಿಕೆಯಿದೆ. ಚೀನಾದಲ್ಲಿ ಈ ಕೊಂಬುಗಳನ್ನು ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಅದೇ ರೀತಿ  ಅನೇಕ ಸ್ಥಳಗಳಲ್ಲಿ ಘೇಂಡಾಮೃಗದ ಕೊಂಬುಗಳನ್ನು ಆಭರಣ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಈ ಹೆಚ್ಚಿನ ಬೇಡಿಕೆಯ ಕಾರಣದಿಂದಾಗಿ ಘೇಂಡಾಮೃಗಳ ಕಳ್ಳಸಾಗಣಿಕೆ, ಬೇಟೆ ವಿಪರೀತವಾಗಿ ಹೆಚ್ಚಾಗಿ ಅವುಗಳ ಸಂತತಿ ಅಳಿವಿನ ಅಂಚಿಗೆ ಬಂದು ನಿಂತಿದೆ.  ಈ ನಿಟ್ಟಿನಲ್ಲಿ ಈ ಮುಗ್ಧ ಜೀವಿಗಳನ್ನು ರಕ್ಷಣೆ ಮಾಡಬೇಕು ಎನ್ನುವ ಉದ್ದೇಶದಿಂದ ಜನರಲ್ಲಿ ಜಾಗೃತಿಯನ್ನು ಮೂಡಿಸುವ ಸಲುವಾಗಿ ಪ್ರತಿವರ್ಷ ಸೆಪ್ಟೆಂಬರ್‌ 22 ರಂದು ವಿಶ್ವ ಘೇಂಡಾಮೃಗ (World Rhino Day) ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ಘೇಂಡಾಮೃಗ ದಿನದ ಇತಿಹಾಸವೇನು?

ಘೇಂಡಾಮೃಗಗಳ ಕಳ್ಳಸಾಗಾಣಿಕೆಯಿಂದಾಗಿ 1990 ರ ವೇಳೆಯಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಘೇಂಡಾಮೃಗಗಳ ಸಂಖ್ಯೆ ಕ್ಷೀಣಿಸತೊಡಗಿದವು. 2010 ರ ವೇಳೆಗೆ ಈ ಪ್ರಾಣಿಗಳ ಸಂಖ್ಯೆ ತೀರಾ ಇಳಿಮುಖವಾಯಿತು.  ಈ ಬಗ್ಗೆ  ರಾಷ್ಟ್ರವ್ಯಾಪಿ  ಕಳವಳ ವ್ಯಕ್ತವಾಯಿತು. ಇದಲ್ಲದೆ  ಆ ವೇಳೆಯಲ್ಲಿ ಜಗತ್ತಿನಲ್ಲಿ ಕೇವಲ 30,000 ಘೇಂಡಾಮೃಗಗಳು ಮಾತ್ರ ಜೀವಂತವಾಗಿದ್ದವು. ಈ ನಿಟ್ಟಿನಲ್ಲಿ ಘೇಂಡಾಮೃಗಗಳ  ಸಂತತಿಯನ್ನು ರಕ್ಷಿಸುವ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು 2010 ರಲ್ಲಿ  ವಿಶ್ವ ವನ್ಯಜೀವಿ ನಿಧಿ (WWF) ದಕ್ಷಿಣ ಆಫ್ರಿಕಾದಲ್ಲಿ  ಸೆಪ್ಟೆಂಬರ್ 22 ರಂದು ಘೇಂಡಾಮೃಗ ದಿನವನ್ನು  ಆಚರಿಸಲು ಘೋಷಿಸಿತು. 2011 ರಲ್ಲಿ ಲಿಸಾ ಜೇನ್ ಕ್ಯಾಂಪ್ಬೆಲ್ ಮತ್ತು ರಿಶ್ಜಾ ಎಂಬವರು ಈ ವಿಶೇಷ ಆಚರಣೆಯೊಂದಿಗೆ  ಕೈಜೋಡಿಸಿ ಈ ವಿಶೇಷ  ದಿನವನ್ನು ಅಂತರಾಷ್ಟ್ರೀಯ ಆಚರಣೆಯಾಗಿ ಮಾಡಿದರು.  ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ 22 ರಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತಿದೆ.

ವಿಶ್ವ ಘೇಂಡಾಮೃಗ ದಿನದ ಆಚರಣೆಯ ಮಹತ್ವವೇನು?

  • ಹವಮಾನ ಬದಲಾವಣೆ, ಬೇಟೆ, ಕಳ್ಳಸಾಗಣಿಕೆ ಮತ್ತು ನೈಸರ್ಗಿಕ ಆವಾಸಸ್ಥಾನಗಳ ನಾಶದಿಂದಾಗಿ ಘೇಂಡಾಮೃಗಗಳು ಇಂದು ಅಳಿವಿನಂಚಿಗೆ ಬಂದು ತಲುಪಿವೆ. ಹೀಗಾಗಿ ಈ ಪ್ರಾಣಿಗಳ ಪ್ರಾಮುಖ್ಯತೆ, ಕಾಡುಗಳ ರಕ್ಷಣೆ, ಈ ಪ್ರಾಣಿಗಳ  ಕಳ್ಳಸಾಗಣಿಕೆಯನ್ನು ತಡೆಗಟ್ಟುವ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ  ವಿಶ್ವ ಘೇಂಡಾಮೃಗ ದಿನವನ್ನು ಆಚರಿಸಲಾಗುತ್ತದೆ.
  • ಪರಿಸರ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಎಲ್ಲಾ ಸಸ್ಯ ಮತ್ತು ಪ್ರಾಣಿ ಪ್ರಭೇದಗಳನ್ನು ಸಂರಕ್ಷಿಸುವುದು ಅವಶ್ಯಕ.
  • ಹಲವು ಸಂರಕ್ಷಣಾ ಸಂಸ್ಥೆಗಳು, ಸರ್ಕಾರಗಳು ಮತ್ತು ಸಮುದಾಯಗಳು ಈ ದಿನವನ್ನು ಹಲವು ಜಾಗೃತಿ ಅಭಿಯಾನಗಳು, ಶೈಕ್ಷಣಿಕ ಕಾರ್ಯಕ್ರಮಗಳು ಮತ್ತು ನಿಧಿಸಂಗ್ರಹಣೆ ಅಭಿಯಾನಗಳ ಮೂಲಕ ಆಚರಿಸುತ್ತವೆ.

ಇದನ್ನೂ ಓದಿ: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ

ಇದನ್ನೂ ಓದಿ
Image
ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು, ಅವುಗಳ ರಕ್ಷಣೆ ಅತ್ಯಗತ್ಯ
Image
ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು
Image
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ
Image
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವನ್ನು ತಿಳಿಯಿರಿ

ನಾವು ಏನು ಮಾಡಬಹುದು? 

  • ನಾವು ಸ್ವಂತವಾಗಿ ಹೆಚ್ಚಿನದನ್ನು ಮಾಡಲು ಸಾಧ್ಯವಾಗದಿರಬಹುದು, ಆದರೆ ಘೇಂಡಾಮೃಗಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಮ್ಮ ಕೈಲಾಗುವಷ್ಟು  ಘೇಂಡಾಮೃಗಗಳ ರಕ್ಷಣೆಯಲ್ಲಿ ತೊಡಗಿರುವ ಸಂಸ್ಥೆಗಳು ಮತ್ತು ಲಾಭರಹಿತ ಗುಂಪುಗಳಿಗೆ ನಾವು ಸಹಾಯ ಮಾಡಬಹುದು.
  • ಈ ಸಂಸ್ಥೆಗಳಿಗೆ ಹಣಕಾಸು ಸಹಾಯ ಮಾಡಬಹುದು.
  • ಘೇಂಡಾಮೃಗ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ