AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navratri 2025: ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ

ಹಿಂದೂ ಧರ್ಮದ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ ಹಬ್ಬ ಅತ್ಯಂತ ಮುಖ್ಯವಾದ್ದು. ಈ ಬಾರಿಯ ನವರಾತ್ರಿ ಹಬ್ಬ ನಾಳೆಯಿಂದ ಆರಂಭವಾಗಲಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಜಗನ್ಮಾತೆಯ 9 ಅವತಾರಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ಭಕ್ತರು ದೇವಿಗೆ ಪ್ರಿಯವಾದ ಬಣ್ಣದ ಉಡುಗೆಗಳನ್ನೂ ತೊಡುತ್ತಾರೆ. ಹೀಗಿರುವಾಗ ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಿದರೆ ಶುಭ, ಈ ನವ ಬಣ್ಣದ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

Navratri 2025: ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ
ನವರಾತ್ರಿ ಹಬ್ಬ Image Credit source: Pinterest
ಮಾಲಾಶ್ರೀ ಅಂಚನ್​
|

Updated on: Sep 21, 2025 | 5:02 PM

Share

ಹಿಂದೂ ಧರ್ಮದಲ್ಲಿ ನವರಾತ್ರಿ ಹಬ್ಬಕ್ಕೆ (Navratri festival) ವಿಶೇಷವಾಗ ಮಹತ್ವವಿದೆ. ಈ ಹಬ್ಬವನ್ನು ದೇಶಾದ್ಯಂತ ಬಹಳ ವಿಜೃಂಭನೆಯಿಂದ ಆಚರಿಸಲಾಗುತ್ತದೆ. ಈ ಬಾರಿಯ ಶಾರದೀಯ ನವರಾತ್ರಿ ನಾಳೆಯಿಂದ ಆರಂಭವಾಗಲಿದ್ದು, ಸೆಪ್ಟೆಂಬರ್‌ 22 ರಿಂದ ಅಕ್ಟೋಬರ್‌ 2 ರವರೆಗೆ ಒಟ್ಟು 10 ದಿನಗಳ ಕಾಲ ಈ ಬಾರಿ ಹಬ್ಬವನ್ನು ಆಚರಿಸಲಾಗುತ್ತದೆ. ನವರಾತ್ರಿ ಹಬ್ಬದ ಸಂದರ್ಭದಲ್ಲಿ ದೇವಿಯ ನವ ಅವತಾರಗಳನ್ನು ಪೂಜಿಸಲಾಗುತ್ತದೆ. ಜೊತೆಗೆ ಭಕ್ತರು ದೇವಿಗೆ ಪ್ರಿಯವಾದ ಬಣ್ಣದ ಉಡುಗೆಗಳನ್ನೂ ತೊಡುತ್ತಾರೆ. ಹೀಗಿರುವಾಗ ಯಾವ ದಿನ ಯಾವ ಬಣ್ಣದ ಉಡುಗೆ ಧರಿಸಿದರೆ ಶುಭ, ಈ ನವ ಬಣ್ಣದ ಮಹತ್ವದ ಬಗೆಗಿನ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ನವರಾತ್ರಿ ಹಬ್ಬದ ಯಾವ ದಿನ ಯಾವ ವರ್ಣದ ಬಟ್ಟೆ ಧರಿಸಿದರೆ ಶುಭ?

ನವರಾತ್ರಿ ಮೊದಲ ದಿನ ಕೇಸರಿ ಬಣ್ಣದ ಬಟ್ಟೆ ಧರಿಸಿ: ನವರಾತ್ರಿಯ ಮೊದಲ  ದಿನ ಪಾಡ್ಯ. ಈ ದಿನದಂದು ಕಳಶ ಪ್ರತಿಷ್ಠಾಪಿಸಿ ನವರಾತ್ರಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ. ಈ ದಿನ ಶೈಲಪುತ್ರಿಯನ್ನು ಪೂಜಿಸಲಾಗುತ್ತದೆ.  ದೇವಿ ಶೈಲಪುತ್ರಿಗೆ ಕಿತ್ತಳೆ ಬಣ್ಣವೆಂದರೆ ಪ್ರಿಯವಾದುದು. ಹಾಗಾಗಿ  ಈ ದಿನ ಕೇಸರಿ ಬಣ್ಣದ ಬಟ್ಟೆಯನ್ನು ತೊಡುವುದು ಶ್ರೇಷ್ಠ ಎಂದು ಪರಿಗಣಿಸಲಾಗಿದೆ. ಈ ಬಣ್ಣದ ಮಹತ್ವವನ್ನು ನೋಡುವುದಾರೆ  ಕೇಸರಿ ಬಣ್ಣವು ಶಕ್ತಿ ಮತ್ತು ಸಂತೋಷದ ಭಾವನೆಯನ್ನು ನೀಡುತ್ತದೆ ಮತ್ತು ಧನಾತ್ಮಕ ಶಕ್ತಿಯನ್ನು ರವಾನಿಸುತ್ತದೆ.

ನವರಾತ್ರಿ ಎರಡನೇ ದಿನ, ಬಿಳಿಬಣ್ಣದ ಬಟ್ಟೆ ಧರಿಸಿ: ನವರಾತ್ರಿ ಹಬ್ಬದ ಎರಡನೇ ದಿನದಂದು ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಬಿಳಿ ಬಣ್ಣದ ಉಡುಗೆಯನ್ನು ತೊಟ್ಟರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಏಕೆಂದರೆ ಬ್ರಹ್ಮಚಾರಿಣಿ ದೇವಿಗೆ ಬಿಳಿ ಬಣ್ಣವು ಅತ್ಯಂತ ಪ್ರಿಯವಾದುದು. ಈ ಬಣ್ಣದ ಮಹತ್ವವನ್ನು ನೋಡುವುದಾದರೆ ಇದು ಶುದ್ಧತೆ, ಮುಗ್ಧತೆ ಮತ್ತು ಶಾಂತಿಯ ಸಂಕೇತಿಸುತ್ತದೆ. ಅಲ್ಲದೆ ಈ ದಿನ ಬಿಳಿ ಬಟ್ಟೆಯನ್ನು ಧರಿಸುವುದರಿಂದ ಆಂತರಿಕ ಶಾತಿ ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಬಹುದು.

ನವರಾತ್ರಿ ಮೂರನೇ ದಿನ ಕೆಂಪು ಬಣ್ಣದ ಬಟ್ಟೆ ಧರಿಸಿ: ನವರಾತ್ರಿ ಹಬ್ಬದ ಮೂರನೇ ದಿನದಂದು ಚಂದ್ರಘಂಟಾ ದೇವಿಯನ್ನು ಪೂಜಿಲಾಗುತ್ತದೆ. ಈ ದಿನ ನೀವು ಕೆಂಪು ಬಣ್ಣದ ಬಟ್ಟೆಯನ್ನು ತೊಡಬಹುದು. ಕೆಂಪು ಬಣ್ಣವು ಜಗನ್ಮಾತೆಯ ನೆಚ್ಚಿನ ಬಣ್ಣವಾಗಿದ್ದು, ಇದು ಶಕ್ತಿ ಮತ್ತು ಪ್ರೀತಿಯ ಸಂಕೇತವಾಗಿದೆ. ಈ ದಿನ ಈ ಬಣ್ಣದ ಬಟ್ಟೆ ಧರಿಸುವುದರಿಂದ ಮನಸ್ಸು ಮತ್ತು ದೇಹವು ಚೈತನ್ಯದಿಂದ ಹಾಗೂ ಸಕಾರಾತ್ಮಕತೆಯಿಂದ ಕೂಡಿರುತ್ತಂತೆ.

ನವರಾತ್ರಿ ನಾಲ್ಕನೇ ದಿನ ಕಡುನೀಲಿ ಬಣ್ಣದ ಬಟ್ಟೆ ಧರಿಸಿ: ನವರಾತ್ರಿಯ ನಾಲ್ಕನೇ ದಿನದಂದು ಜಗನ್ಮಾತೆಯ ಒಂಬತ್ತು ಅವತಾರಗಳಲ್ಲಿ ಒಂದಾದ ಕೂಷ್ಮಾಂಡ ದೇವಿಯನ್ನು ಪೂಜಿಸಲಾಗುತ್ತದೆ. ಕೂಷ್ಮಾಂಡ ದೇವಿಗೆ ಪ್ರಿಯವಾದ ಬಣ್ಣವೆಂದರೆ ಕಡುನೀಲಿ ಬಣ್ಣ. ಈ ದಿನ ಕಡುನೀಲಿ ಬಣ್ಣದ ಬಟ್ಟೆಯನ್ನುಟ್ಟು ದೇವಿಯನ್ನು ಪೂಜಿಸಿದರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಣ್ಣವು ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ.

ನವರಾತ್ರಿ ಐದನೇ ದಿನ ಹಳದಿ ಬಣ್ಣದ ಬಟ್ಟೆ ಧರಿಸಿ: ನವರಾತ್ರಿಯ ಐದನೇ ದಿನ ದೇವಿಯ ಒಂಬತ್ತು ಅವತಾರಗಳಲ್ಲಿ ಒಂದಾದ ಸ್ಕಂದ ಮಾತೆಯನ್ನು ಪೂಜಿಸಲಾಗುತ್ತದೆ. ಈ ದಿನ ಹಳದಿ ಬಣ್ಣದ ಬಟ್ಟೆ ಧರಿಸುವುದು ಶ್ರೇಷ್ಠ ಎಂದು ಪರಿಗಣಿಸಲಾಗುತ್ತದೆ. ಹಳದಿ ಬಣ್ಣವು ಖುಷಿ, ಉತ್ಸಾಹ ಮತ್ತು  ಸಕಾರಾತ್ಮಕತೆಯನ್ನು ಸಂಕೇತಿಸುತ್ತದೆ. ಅಲ್ಲದೆ ಹಳದಿ ಬಣ್ಣವು ಶುಭದ ಸಂಕೇತವಾಗಿದ್ದು, ಈ ದಿನ ಹಳದಿ ಬಣ್ಣದ ಉಡುಗೆಯನ್ನು  ಧರಿಸಿ ದೇವಿಯನ್ನು ಪೂಜಿಸುವುದರಿಂದ ಅದೃಷ್ಟ ಬರುತ್ತದೆ ಎಂದು ಹೇಳಲಾಗುತ್ತದೆ.

ನವರಾತ್ರಿ ಆರನೇ ದಿನ ಹಸಿರುಬಣ್ಣದ ಬಟ್ಟೆ ಧರಿಸಿ: ಕಾತ್ಯಾಯಿನಿ ದೇವಿಯನ್ನು ಪೂಜಿಸುವ ನವರಾತ್ರಿಯ ಆರನೇ ದಿನ ಹಸಿರು ಬಣ್ಣದ ಉಡುಗೆಯನ್ನು ತೊಟ್ಟರೆ ಶ್ರೇಷ್ಠ ಎಂದು ಹೇಳಲಾಗುತ್ತದೆ. ಈ ಬಣ್ಣ ಹಸಿರು ಬಣ್ಣವು ಹೊಸ ಆರಂಭ ಮತ್ತು ಸಮೃದ್ಧಿ ಮತ್ತು ಏಳಿಗೆಯ ಸಂಕೇತವಾಗಿದ್ದು, ನಿಮ್ಮ ಏಳಿಗೆಗಾಗಿ ನವರಾತ್ರಿಯ ಆರನೇ ದಿನ ಹಸಿರು ಬಣ್ಣದ ಬಟ್ಟೆ ಧರಿಸಿ.

ನವರಾತ್ರಿಯ ಸಪ್ತಮಿ ದಿನ ಬೂದುಬಣ್ಣದ ಬಟ್ಟೆ ಧರಿಸಿ: ನವರಾತ್ರಿಯ ಏಳನೇ ದಿನ  ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿ ಹಾಗೂ ದುಷ್ಟಶಕ್ತಿಗಳನ್ನು ನಾಶಮಾಡಲು ಜಗನ್ಮಾತೆಯ ಒಂಬತ್ತು ಅವತಾರಗಳಲ್ಲಿ ಒಂದಾದ  ಕಾಳರಾತ್ರಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಬೂದು ಬಣ್ಣದ ಉಡುಗೆಯನ್ನುಟ್ಟು ಜಗನ್ಮಾತೆಯನ್ನು ಪೂಜಿಸಿದರೆ ನವ ದುರ್ಗೆಯರ ಆಶಿರ್ವಾದ ಪಡೆಯಬಹುದು ಎಂದು ಹೇಳಲಾಗುತ್ತದೆ. ಈ ಬೂದು  ಬಣ್ಣವು ಭಾವನೆಗಳನ್ನು ಸಮನ್ವಯಗೊಳಿಸುತ್ತದೆ, ಆಲೋಚನೆಗಳನ್ನು ಸಮತೋಲನಗೊಳಿಸುತ್ತದೆ.

ಇದನ್ನೂ ಓದಿ: ಮುಸ್ಲಿಂ ವಾಸ್ತು ಶಿಲ್ಪಿ ನಿರ್ಮಿಸಿದ ದೇವಾಲಯವಿದು, ಲಿಂಗರೂಪದಲ್ಲಿ ನೆಲೆನಿಂತ ಬ್ರಾಹ್ಮಿ ದುರ್ಗಾ ಪರಮೇಶ್ವರಿ

ನವರಾತ್ರಿಯ ಎಂಟನೇ ದಿನ ನೇರಳೆ ಬಣ್ಣದ ಬಟ್ಟೆ ಧರಿಸಿ: ನವರಾತ್ರಿಯ ಎಂಟನೇ ದಿನದಂದು  ಮಹಾಗೌರಿಯನ್ನು ಪೂಜಿಸಲಾಗುತ್ತದೆ. ಮಾತೆ ಮಹಾಗೌರಿಗೆ ಪ್ರಿಯವಾದ ಬಣ್ಣವೆಂದರೆ ಅದು ನೇರಳೆ ಬಣ್ಣ. ಈ ಬಣ್ಣವು ಶ್ರೀಮಂತಿಕೆ ಮತ್ತು ಸಮೃದ್ಧಿಯ ಸಂಕೇತವಾಗಿದ್ದು, ನೀವು ಈ ದಿನ ನೇರಳೆ ಬಣ್ಣದ ಬಟ್ಟೆಯನ್ನು ಧರಿಸಿ.

ನವರಾತ್ರಿಯ ಒಂಬತ್ತನೇ ದಿನ ನವಿಲು ಪಚ್ಚೆ ಬಣ್ಣದ ಬಟ್ಟೆ ಧರಿಸಿ: ನವರಾತ್ರಿ ಹಬ್ಬದ ಒಂಬತ್ತನೇ ದಿನದಂದು ಸಿದ್ಧಿದಾತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ನವಿಲು ಹಸಿರು ಬಣ್ಣದ ಬಟ್ಟೆಯನ್ನು ತೊಡಬೇಕಂತೆ. ಸಿದ್ಧಿದಾತ್ರಿ ದೇವಿಗೆ ಪ್ರಿಯವಾದ ಈ ಬಣ್ಣವು ಸಹಾನುಭೂತಿ, ಅಭಿವೃದ್ಧಿ, ಸಮೃದ್ಧಿಯನ್ನು ಪ್ರತಿನಿಧಿಸುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ