AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Navaratri 2025: ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ಭಿನ್ನ; ಶಾರದಾ ದೇವಿಯ ವಿಗ್ರಹವೇ ಪ್ರಮುಖ ಆಕರ್ಷಣೆ

Mangalore Dasara 2025: ಮೈಸೂರಿನಲ್ಲಿ ಮೈಸೂರು ದಸರಾ ಫೇಮಸ್, ನೀವೇನಾದ್ರು ಬಂದರೂ ನಗರಿ ಮಂಗಳೂರಿನಲ್ಲಿ ಬಂದ್ರೆ ಇಲ್ಲಿ ಮಂಗಳೂರು ದಸರಾ ಸಿಕ್ಕಾಪಟ್ಟೆ ಫೇಮಸ್. ಅದ್ದೂರಿಯಾಗಿ ಆಚರಿಸಲಾಗುವ ಮಂಗಳೂರು ದಸರಾವನ್ನು ಕಣ್ತುಂಬಿಸಿಕೊಳ್ಳಲು ಎರಡು ಕಣ್ಣು ಸಾಲದು. ಆದರೆ ಮೈಸೂರಿಗಿನ ದಸರಾಕ್ಕಿಂತ ಮಂಗಳೂರು ದಸರಾ ತುಂಬಾನೇ ವಿಭಿನ್ನವಾಗಿದೆ. ಈ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

Navaratri 2025: ಮೈಸೂರು ದಸರಾಕ್ಕಿಂತ ಕುಡ್ಲದ ದಸರಾ ಭಿನ್ನ; ಶಾರದಾ ದೇವಿಯ ವಿಗ್ರಹವೇ ಪ್ರಮುಖ ಆಕರ್ಷಣೆ
ಮಂಗಳೂರು ದಸರಾImage Credit source: Pinterest
ಸಾಯಿನಂದಾ
|

Updated on:Sep 22, 2025 | 7:12 PM

Share

ದಸರಾ (Dasara) ಎಂದ ಕೂಡಲೇ ನಮ್ಮ ಕಣ್ಣೆದುರಿಗೆ ಬರುವುದೇ ಮೈಸೂರು. ಆದರೆ ಕರ್ನಾಟಕದ ಮೈಸೂರಿನಲ್ಲಿ ಮಾತ್ರವಲ್ಲ ಮಂಗಳೂರಿನಲ್ಲಿಯೂ ಮಂಗಳೂರು ದಸರಾ (Mangalore Dasara) ಅದ್ದೂರಿಯಾಗಿ ನಡೆಯುತ್ತದೆ. ಅಂದು ಶಾರದಾ ಮಹೋತ್ಸವವಾಗಿ ಆರಂಭವಾದ ಸಂಭ್ರಮದ ಆಚರಣೆಯೂ ಇಂದು ಮಂಗಳೂರು ದಸರಾವಾಗಿ ಪ್ರಸಿದ್ಧಿ ಪಡೆದಿದೆ. ಈ ವಿಶೇಷ ಸಂದರ್ಭದಲ್ಲಿ ದೀಪಾಂಲಕಾರಗಳಿಂದ ಕಂಗೊಳಿಸುವ ಮಂಗಳೂರನ್ನು ನೋಡಲು ಎರಡು ಕಣ್ಣು ಸಾಲದು. ಆದರೆ ಮೈಸೂರು ದಸರಾಕ್ಕೆ ಹೋಲಿಸಿದ್ರೆ ಮಂಗಳೂರು ದಸರಾ ಸಂಪೂರ್ಣ ಭಿನ್ನವಾಗಿರುತ್ತದೆ. ಅದೇಗೆ ಅಂತೀರಾ? ಈ ಕುರಿತಾದ ಮಾಹಿತಿ ಇಲ್ಲಿದೆ.

ಶಾರದಾ ದೇವಿಯ ಪ್ರತಿಷ್ಠಾಪನೆ

ಮಂಗಳೂರು ದಸರಾವು ಮಂಗಳೂರಿನಲ್ಲಿ ಆಚರಿಸಲಾಗುವ ವಿಶಿಷ್ಟ ಹಾಗೂ ಸಂಭ್ರಮದ ಆಚರಣೆ. ಇಲ್ಲಿ ನವರಾತ್ರಿ ಹಬ್ಬವನ್ನು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಹತ್ತು ದಿನಗಳ ಕಾಲ ಸಂಭ್ರಮವು ಮನೆ ಮಾಡುತ್ತದೆ. ಶಾರದಾ ವಿಗ್ರಹವು ಪ್ರಮುಖ ಆಕರ್ಷಣೆಯಲ್ಲಿ ಒಂದು. ಶಾರದಾ ದೇವಿ ವಿಗ್ರಹದೊಂದಿಗೆ ಗಣಪತಿ ಹಾಗೂ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕುಶ್ಮಾಂಡಿನಿ, ಸ್ಕಂದಮಾತಾ, ಕಾತ್ಯಾಯಿನಿ, ಕಾಳರಾತ್ರಿ, ಮಹಾಗೌರಿ, ಸಿದ್ಧಿದಾತ್ರಿ ನವದುರ್ಗೆಯರನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ದೇವಸ್ಥಾನ ಕೇಂದ್ರೀತ ಆಚರಣೆ

ಹೌದು, ಮೈಸೂರು ದಸರಾವು ಪ್ರಮುಖವಾಗಿ ವಿಶ್ವಪ್ರಸಿದ್ಧ ಜಂಬೂಸವಾರಿಗೆ ಪ್ರಮುಖ ಆಕರ್ಷಣೆಯಾಗಿದ್ದರೆ, ಮಂಗಳೂರು ದಸರಾವು ಶಾರದಾ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸುವುದಕ್ಕೆ ಹೆಸರುವಾಸಿಯಾಗಿದೆ. ಮಂಗಳೂರು ದಸರಾದಲ್ಲಿ ದೊಡ್ಡ ದೊಡ್ಡ ಮಂಟಪಗಳನ್ನು ನಿರ್ಮಿಸಿ, ಅದ್ದೂರಿ ಶೋಭಾಯಾತ್ರೆ, ಅರಮನೆಗಳ ಬದಲಿಗೆ ದೇವಸ್ಥಾನಗಳ ಕೇಂದ್ರಿತ ಆಚರಣೆ, ಹಾಗೂ ಪಾರಂಪರಿಕ ಕಲಾಪ್ರದರ್ಶನಗಳನ್ನು ಕಾಣಬಹುದು. ಇನ್ನು ಮಂಗಳೂರು ದಸರಾದಲ್ಲಿ ಕರಾವಳಿ ಭಾಗದ ಸಾಂಸ್ಕೃತಿಕ ಕುಣಿತವಾದ ಹುಲಿವೇಷ ಆಕರ್ಷಣೀಯ ಕೇಂದ್ರಬಿಂದುವಾಗಿದೆ. ಇಲ್ಲಿ ಹುಲಿವೇಷ ಧರಿಸಿ ನೃತ್ಯ ಮಾಡಲಾಗುತ್ತದೆ.

ಇದನ್ನೂ ಓದಿ
Image
ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯವಾಗಿ ಮಖಾನಾ ಪಾಯಸ ಅರ್ಪಿಸಿ
Image
ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ
Image
ಓಣಂ ಹಬ್ಬದ ಸಮಯದಲ್ಲಿ ಹೂವಿನ ರಂಗೋಲಿಯನ್ನು ಹಾಕುವುದೇಕೆ ಗೊತ್ತಾ?
Image
ಕುಟುಂಬದ ಆಚರಣೆಯಾಗಿದ್ದ ಗಣೇಶ ಹಬ್ಬ ಸಾರ್ವಜನಿಕ ಗಣೇಶೋತ್ಸವವಾಗಿದ್ದು ಹೇಗೆ?

ಇದನ್ನೂ ಓದಿ:Navaratri 2025: ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯವಾಗಿ ಮಖಾನಾ ಪಾಯಸ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ

ಭವ್ಯ ಮೆರವಣಿಗೆಯೇ ಪ್ರಮುಖ ಆಕರ್ಷಣೆ

ಮಂಗಳೂರು ದಸರಾವು ತನ್ನ ಭವ್ಯ ಮೆರವಣಿಗೆಯಿಂದಲೇ ಎಲ್ಲರ ಗಮನ ಸೆಳೆಯುತ್ತದೆ. ಇಲ್ಲಿನ ಶಾರದಾ ದೇವಿ ವಿರ್ಸಜನಾ ಮೆರವಣಿಗೆಯನ್ನು ಕಣ್ತುಂಬಿಸಿಕೊಳ್ಳಲು ಜನಸಾಗರವೇ ಸೇರುತ್ತದೆ. ಹೌದು, ವಿಜಯದಶಮಿಯಂದು ಸಂಜೆ ಗೋಕರ್ಣನಾಥೇಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಮರುದಿನ ಮುಂಜಾನೆ ದೇವಸ್ಥಾನದ ಆವರಣದಲ್ಲಿನ ಪುಷ್ಕರಿಣಿ ಕೊಳದಲ್ಲಿ ಪ್ರತಿಷ್ಠಾಪಿಸಲಾದ ವಿಗ್ರಹಗಳ ವಿರ್ಸಜನೆಯೊಂದಿಗೆ ದಸರಾ ಮಹೋತ್ಸವಕ್ಕೆ ತೆರೆ ಬೀಳುತ್ತದೆ. ಈ ಮೆರವಣಿಗೆಯಲ್ಲಿ ನವದುರ್ಗೆಯರು, ಮಹಾಗಣಪತಿ, ಶಾರದಾ ದೇವಿಯ ವಿಗ್ರಹವನ್ನು ನೋಡುವುದೇ ಕಣ್ಣಿಗೆ ಹಬ್ಬ. ಕರಾವಳಿ ಸಾಂಸ್ಕೃ ತಿಕ ವೈಭವಗಳಾದ ಚಂಡೆ, ಜಾನಪದ ನೃತ್ಯಕುಣಿತ, ಯಕ್ಷಗಾನ ವಿವಿಧ ಪಾತ್ರಗಳು, ಹುಲಿವೇಷಗಳು ಇವೆಲ್ಲವನ್ನೂ ಮೆರವಣಿಗೆಯನ್ನು ಇನ್ನಷ್ಟು ಆಕರ್ಷಕವಾಗಿ ಕಂಗೊಳಿಸುವಂತೆ ಮಾಡುತ್ತದೆ. ಮಂಗಳೂರಿನ ದಸರಾದ ಮೆರವಣಿಗೆಯನ್ನು ಕಣ್ಣು ತುಂಬಿಸಿಕೊಳ್ಳಲು ಜನಸ್ತೋಮವೇ ಹರಿದುಬಂದಿರುತ್ತದೆ. ಈ ಎಲ್ಲಾ ಕಾರಣಕ್ಕೆ ಮೈಸೂರು ದಸರಾಕ್ಕಿಂತ ಮಂಗಳೂರು ದಸರಾ ವಿಭಿನ್ನ ಎನ್ನಬಹುದು.

ಇನ್ನಷ್ಟು ಜೀವನಶೈಲಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Published On - 7:11 pm, Mon, 22 September 25

ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಕೆಟ್ಟ ಪ್ರಪಂಚದಲ್ಲಿ ಸ್ವರ್ಗ ತೋರಿಸ್ತೀನಿ; ಉಪ್ಪಿ ಡೈಲಾಗ್​ ಹೇಳಿದ ಗಿಲ್ಲಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
ಬಿಗ್ ಬಾಸ್ ಅಲ್ಲಿ ರಕ್ಷಿತಾ ಶೆಟ್ಟಿ ವಿರುದ್ಧ ತಿರುಗಿಬಿದ್ದ ಮನೆ ಮಂದಿ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
'ಕಣ್ಣೀರು ಸುರಿಸಬೇಡ, ನಿನ್ನ ಹಿಂದೆ ನಾನಿದ್ದೇನೆ'; ರಿಷಬ್​ಗೆ ದೈವದ ಅಭಯ
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ದೆಹಲಿ ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಪ್ರಯಾಣಿಸಿದ ಮೋದಿ-ಪುಟಿನ್
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ಚಿನ್ನದಂಗಡಿ ದೋಚಿ ಬಸ್​​ ಸ್ಟ್ಯಾಂಡ್​​ನಲ್ಲಿ ಹಾಲು ಕುಡಿದಿದ್ದ; ದೃಶ್ಯ ಸೆರೆ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ದೇವರಿಗೆ ಮುಡಿಕೊಟ್ಟು ಪುಣೆಗೆ ತೆರಳುತ್ತಿದ್ದ ಹಂತಕ ಸಿಕ್ಕಿಬಿದ್ದಿದ್ದೇ ರೋಚಕ
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಇಂಡಿಗೋ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ: ಪ್ರಯಾಣಿಕರ ಗೋಳಾಟ ನೋಡಿ!
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ
ಪುಟಿನ್ ಸ್ವಾಗತಕ್ಕೆ ಸುಂದರವಾಗಿ ಅಲಂಕೃತಗೊಂಡ ಪ್ರಧಾನಿ ನಿವಾಸ