Duologue NXT: ಮಹಿಳಾ ಸಾಧಕಿಯರ ಸ್ಪೂರ್ತಿದಾಯಕ ಕಥೆಗಳ ಅನ್ವೇಷಣೆ
ಟಿವಿ9 ನೆಟ್‌ವರ್ಕ್ ಎಂಡಿ ಮತ್ತು ಸಿಇಒ ಬರುಣ್ ದಾಸ್ ಅವರು "ಡ್ಯುಯೊಲಾಗ್ ವಿತ್ ಬರುಣ್ ದಾಸ್" ನ ಹೊಸ ಆವೃತ್ತಿಯನ್ನು "ಡ್ಯುಯೊಲಾಗ್ NXT" ಎಂಬ ಶೀರ್ಷಿಕೆಯೊಂದಿಗೆ ಬಿಡುಗಡೆ ಮಾಡಿದ್ದಾರೆ. ಈ ಕಾರ್ಯಕ್ರಮವು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಮೇಲೆ ಕೇಂದ್ರೀಕರಿಸಲಿದೆ ಎಂದು ಅವರು ಹೇಳಿದ್ದಾರೆ.

ದೇಶದ ಅತಿದೊಡ್ಡ ಸುದ್ದಿ ಜಾಲವಾದ TV9 ನ MD ಮತ್ತು CEO ಬರುಣ್ ದಾಸ್ ‘ಡ್ಯುಯೊಲಾಗ್ ವಿತ್ ಬರುನ್ ದಾಸ್’ ಟಾಕ್ ಶೋ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಈಗಾಗಲೇ “ಡ್ಯುಯೊಲಾಗ್ NXT” (Duologue NXT) ಎಂಬ ಶೀರ್ಷಿಕೆಯೊಂದಿಗೆ ಡ್ಯುಯೊಲಾಗ್ ವಿತ್ ಬರುಣ್ ದಾಸ್ ಕಾರ್ಯಕ್ರಮದ ಹೊಸ ಆವೃತ್ತಿ ಬಿಡುಗಡೆಯಾಗಿದ್ದು, ಈ ಹೊಸ ಆವೃತ್ತಿಯು ಯಶಸ್ವಿ ಮಹಿಳೆಯರ ಸ್ಪೂರ್ತಿದಾಯಕ ಕಥೆಗಳ ಮೇಲೆ ಕೇಂದ್ರೀಕರಿಸುತ್ತದೆ. ಈ ಕಾರ್ಯಕ್ರಮವು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬದಲಾವಣೆಯನ್ನು ತಂದ ಮಹಿಳೆಯರ ಹೋರಾಟಗಳು ಮತ್ತು ಸಾಧನೆಗಳನ್ನು ಪ್ರದರ್ಶಿಸಲಿದೆ ಎಂದು ಬರುಣ್ ದಾಸ್ ಹೇಳಿದ್ದಾರೆ.
ಡ್ಯುಯೊಲಾಗ್ ವಿತ್ ಬರುನ್ ದಾಸ್:
‘ಡ್ಯುಲೋಗ್ ವಿತ್ ಬರುನ್ ದಾಸ್’ ಶೋ ನ ಈ ಮೂರನೇ ಸೀಸನ್‌ನಲ್ಲಿ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುನ್ ದಾಸ್ ಅವರು ಡ್ಯುಲೋಗ್ NXT ಕಾರ್ಯಕ್ರಮದ ಮೂಲಕ ಅನೇಕ ಯಶಸ್ವಿ ಮಹಿಳೆಯರು ಹಾಗೂ ಸಾಧಕಿಯರ ಹೋರಾಟ ಮತ್ತು ಸ್ಫೂರ್ತಿದಾಯಕ ಕಥೆಗಳ ಬಗ್ಗೆ ತಿಳಿಸಿಕೊಡಲಿದ್ದಾರೆ. ಒಟ್ಟಾರೆ ಈ ಕಾರ್ಯಕ್ರಮವು ಮಹಿಳೆಯರು ನೇತೃತ್ವದ ಅಭಿವೃದ್ಧಿ ಕಥೆಗಳ ಮೇಲೆ ಕೇಂದ್ರೀಕರಿಸುತ್ತದೆ. ಯಶಸ್ವಿ ಮಹಿಳೆಯರ ಕಥೆಗಳೊಂದಿಗೆ ಹೆಚ್ಚಿನ ಪ್ರೇಕ್ಷಕರನ್ನು ತಲುಪುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.
ಡ್ಯುಯೊಲಾಗ್ NXT ಪಾಡ್‌ಕ್ಯಾಸ್ಟ್ ಸರಣಿಯಾಗಿದ್ದು, ಇದು ಯಶಸ್ವಿ ಮಹಿಳೆಯರ ಕಥೆಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು SHEconomy ಚಳುವಳಿಯನ್ನು ಪ್ರದರ್ಶಿಸಲಿದೆ, ಇದರ ಅರ್ಥ “ಮಹಿಳಾ ನೇತೃತ್ವದ ಆರ್ಥಿಕತೆ”. ಗಮನಾರ್ಹ ಮತ್ತು ಅಭೂತಪೂರ್ವ ಬದಲಾವಣೆಯನ್ನು ತರಲು ಶ್ರಮಿಸಿರುವ ಯಶಸ್ವಿ ಮಹಿಳೆಯರ ಕಥೆಗಳನ್ನ ಪ್ರೇಕ್ಷಕರ ಮುಂದೆ ತರುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಈ ಕಾರ್ಯಕ್ರಮದಲ್ಲಿ ಸಂಭಾಷಣೆ ತಮಾಷೆಯ ವಾತಾವರಣದಲ್ಲಿದೆ. ಇದರಿಂದ ಸಾಧಕಿಯರು ಕೂಡ ತಮ್ಮ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಬಹುದು.ಈ ಸರಣಿ ಕಾರ್ಯಕ್ರಮ ತಮ್ಮ ಸುತ್ತಲಿನ ಪ್ರಪಂಚವನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತಿರುವ, ಶ್ರಮಿಸುತ್ತಿರುವ ಮಹಿಳೆಯರ ಪ್ರಯಾಣವನ್ನು ಚಿತ್ರಿಸಲಿದೆ.
ಇದನ್ನೂ ಓದಿ: ವಿವಾಹಿತ ಪುರುಷರು ಈ ಕೆಲಸಗಳನ್ನು ಎಂದಿಗೂ ಮಾಡಬಾರದು ಎನ್ನುತ್ತಾರೆ ಚಾಣಕ್ಯ
ಡ್ಯುಯೊಲಾಗ್ NXT ಕೇವಲ ಸಂಭಾಷಣೆಗಿಂತ ಹೆಚ್ಚಿನದು – ಬರುಣ್ ದಾಸ್:
ಈ ಕಾರ್ಯಕ್ರಮದ ಕುರಿತು ಮಾತನಾಡಿದ ಟಿವಿ9 ನೆಟ್‌ವರ್ಕ್ಸ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, “ಮಹಿಳೆಯರು ಬದಲಾವಣೆಗಳ ಮುಂಚೂಣಿಯಲ್ಲಿರಬೇಕು. ನನ್ನ ಈ ಪ್ರಯಾಣದುದ್ದಕ್ಕೂ, ಪ್ರಪಂಚದೊಂದಿಗೆ ಹಂಚಿಕೊಳ್ಳಲು ಅರ್ಹರಾದ ಗಮನಾರ್ಹ ಮಹಿಳಾ ಸಾಧಕರನ್ನು ಭೇಟಿಯಾಗುವ ಸೌಭಾಗ್ಯ ನನಗೆ ಸಿಗಲಿದೆ. ಅವರ ಸ್ಫೂರ್ತಿದಾಯಕ ಮಾತುಗಳ ಮೂಲಕ, ಲಕ್ಷಾಂತರ ಮಹಿಳೆಯರನ್ನು ಮಾತ್ರವಲ್ಲದೆ ಪುರುಷರನ್ನೂ ಸಹ ಎಲ್ಲಾ ಅಡೆತಡೆಗಳನ್ನು ಮೀರಿ ಸಾಧನೆಯ ಶಿಖರವನ್ನೇರಲು ಪ್ರೇರೇಪಿಸುವ ಗುರಿಯನ್ನು ನಾವು ಹೊಂದಿದ್ದೇವೆ. ‘ಡ್ಯುಲೊಗ್ ಎನ್‌ಎಕ್ಸ್‌ಟಿ’ ಒಂದು ಸಂಭಾಷಣೆಗಿಂತ ಹೆಚ್ಚಿನದಾಗಿದೆ; ಇದು ಮಹಿಳೆಯರ ನೇತೃತ್ವದ ಅಭಿವೃದ್ಧಿಯನ್ನು ಮುನ್ನಡೆಸುವ ಒಂದು ಚಳುವಳಿಯಾಗಿದೆ ಮತ್ತು ಈ ಪರಿವರ್ತನಾಶೀಲ ಉಪಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆಯಿದೆ” ಎಂದು ಹೇಳಿದರು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Tue, 23 September 25




