Navaratri 2025: ನವರಾತ್ರಿಯ ಮೊದಲ ದಿನ ದೇವಿಗೆ ನೈವೇದ್ಯವಾಗಿ ಮಖಾನಾ ಪಾಯಸ ಅರ್ಪಿಸಿ, ಸುಲಭ ಪಾಕವಿಧಾನ ಇಲ್ಲಿದೆ
ಹಬ್ಬ ಎಂದ ಮೇಲೆ ಸಿಹಿ ಅಡುಗೆ ಹಾಗೂ ವಿಶೇಷ ಅಡುಗೆ ಇಲ್ಲದೇ ಹೋದರೆ ಹೇಗೆ ಅಲ್ಲವೇ. ನವರಾತ್ರಿ ಹಬ್ಬದಂದು ವಿವಿದ ಬಗೆಯ ಅಡುಗೆ ತಯಾರಿಸಲಾಗುತ್ತದೆ. ನವರಾತ್ರಿಯ ಒಂಬತ್ತು ದಿನಗಳಲ್ಲಿ ಒಂದೊಂದು ದಿನ ಒಂದೊಂದು ರೀತಿಯ ರೆಸಿಪಿ ಮಾಡಿ ದೇವಿಗೆ ನೈವೇದ್ಯವಾಗಿ ಇಡಲಾಗುತ್ತದೆ. ಈ ಬಾರಿ ನವರಾತ್ರಿಯ ಮೊದಲ ದಿನ ಮಖಾನಾ ಪಾಯಸ ಮಾಡಿ ನೈವೇದ್ಯವಾಗಿ ಇದನ್ನು ದೇವಿಗೆ ಅರ್ಪಿಸಬಹುದು.

ಮಖಾನಾ ಪಾಯಸ Image Credit source: Pinterest
ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ನವರಾತ್ರಿ (Navaratri) ಕೂಡ ಒಂದು. ಈ ಬಾರಿ ಶಾರದೀಯ ನವರಾತ್ರಿಯನ್ನು ಸೆಪ್ಟೆಂಬರ್ 22 ರಿಂದ ಅಕ್ಟೋಬರ್ 2 ರಂದು ವಿಜಯದಶಮಿಯವರೆಗೆ ಆಚರಿಸಲಾಗುತ್ತದೆ. ನವರಾತ್ರಿಯಲ್ಲಿ ಒಂಬತ್ತು ದೇವಿಯ ಸ್ವರೂಪಗಳನ್ನು ಪೂಜಿಸಲಾಗುತ್ತದೆ. ಮೊದಲನೆಯ ದಿನ ಶೈಲಪುತ್ರಿಯನ್ನು ಆರಾಧಿಸಲಾಗುತ್ತದೆ. ಈ ದಿನ ದೇವಿಗೆ ನೈವೇದ್ಯವಾಗಿ ಇಡಲು ವಿವಿಧ ಸಿಹಿ ತಿಂಡಿಗಳನ್ನು ಮಾಡಲಾಗುತ್ತದೆ. ಮನೆಯಲ್ಲಿ ಈ ಕೆಲವು ಐಟಂಗಳಿದ್ದರೆ ನೀವು ಆರೋಗ್ಯಕರ ಮಖಾನಾ ಪಾಯಸ ಮಾಡಿ ದೇವಿಗೆ ನೈವೇದ್ಯವಾಗಿ ಇಡಬಹುದು. ಸುಲಭ ರೆಸಿಪಿ ವಿಧಾನ ಇಲ್ಲಿದೆ.
ಬೇಕಾಗುವ ಪದಾರ್ಥಗಳು:
- ಮಖಾನಾ (ಕಮಲದ ಬೀಜ)
- ಹಾಲು
- ಸಕ್ಕರೆ
- ತುಪ್ಪ
- ಏಲಕ್ಕಿ ಪುಡಿ
- ಗೋಡಂಬಿ ಮತ್ತು ಒಣದ್ರಾಕ್ಷಿ
ಇದನ್ನೂ ಓದಿ: Navratri 2025: ನವರಾತ್ರಿಯ 9 ದಿನ ಈ ನವ ವರ್ಣದ ಬಟ್ಟೆಗಳನ್ನು ಧರಿಸಿದರೆ ಶುಭವಂತೆ
ಇದನ್ನೂ ಓದಿ
ತಯಾರಿಸುವ ವಿಧಾನ:
- ಮೊದಲಿಗೆ ಮಖಾನಾವನ್ನು ನೀರಿನಲ್ಲಿ 30 ನಿಮಿಷಗಳ ಕಾಲ ನೆನೆಸಿಡಿ.
- ಒಂದು ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ, ಆ ಬಳಿಕ ನೆನೆಸಿದ ಮಖಾನಾವನ್ನು ಹಾಕಿ, ಉಬ್ಬುವವರೆಗೆ ಹುರಿಯಿರಿ.
- ಹುರಿದ ಮಖಾನಾಕ್ಕೆ ಹಾಲು ಮತ್ತು ಸಕ್ಕರೆ ಸೇರಿಸಿ ಕುದಿಯಲು ಬಿಡಿ.
- ಮಖಾನಾ ಮೃದುವಾಗುವವರೆಗೆ 20-25 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿಕೊಳ್ಳಿ.
- ತದನಂತರದಲ್ಲಿ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಕೊನೆಗೆ ಈಗಾಗಲೇ ಹುರಿದಿಟ್ಟ ಗೋಡಂಬಿ ಮತ್ತು ಒಣದ್ರಾಕ್ಷಿಗಳಿಂದ ಸೇರಿಸಿಕೊಂಡರೆ ನೈವೇದ್ಯಕ್ಕೆ ಮಖಾನಾ ಪಾಯಸ ಸಿದ್ಧ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:47 pm, Sun, 21 September 25








