AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Red Panda Day 2025: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ

ಅರಣ್ಯ ನಾಶ, ಬೇಟೆಯಾಡುವಿಕೆ ಮತ್ತು ಇತ್ಯಾದಿ ಕಾರಣಗಳಿಂದಾಗಿ ಕೆಂಪು ಪಾಂಡಾಗಳ ಸಂತತಿ ಅಳಿವಿನಂಚಿಗೆ ತಲುಪಿವೆ. ಅವುಗಳ ಸಂತತಿ ಗಮನಾರ್ಹವಾಗಿ ಕಡಿಮೆಯಾಗಿದ್ದು, ಪ್ರಸ್ತುತ ಬರೀ 10,000 ಕ್ಕಿಂತಲೂ ಕಡಿಮೆ ರೆಡ್‌ ಪಾಂಡಗಳು ಇವೆ ಎಂದು ಹೇಳಲಾಗುತ್ತದೆ. ಈ ನಿಟ್ಟಿನಲ್ಲಿ ಅವುಗಳ ರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸಲು ಪ್ರತಿವರ್ಷ ಸೆಪ್ಟೆಂಬರ್‌ 3 ನೇ ಶನಿವಾರದಂದು ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನವನ್ನು ಆಚರಿಸಲಾಗುತ್ತದೆ.

International Red Panda Day 2025: ಅಳಿವಿನಂಚಿನಲ್ಲಿವೆ ರೆಡ್‌ ಪಾಂಡಾಗಳು; ಅವುಗಳ ರಕ್ಷಣೆ ಅತ್ಯಗತ್ಯ
ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನImage Credit source: Getty Images
ಮಾಲಾಶ್ರೀ ಅಂಚನ್​
|

Updated on: Sep 20, 2025 | 9:26 AM

Share

ರೆಡ್‌ ಪಾಂಡಾಗಳು (International Red Panda) ಸ್ವಭಾವತಃ ನಾಚಿಕೆಯ ಪ್ರಾಣಿಗಳು. ಅವು ಪ್ರಕೃತಿಯೊಂದಿಗೆ ಏಕಾಂಗಿಯಾಗಿರಲು ಬಯಸುತ್ತವೆ. ಇವುಗಳು ಹೆಚ್ಚಾಗಿ ಶೀತ ಪ್ರದೇಶದಲ್ಲಿ ವಾಸಿಸಲು ಇಷ್ಟಪಡುತ್ತವೆ. ಆದರೆ ಇಂದು ಅರಣ್ಯನಾಶ, ಅಕ್ರಮ ಬೇಟೆ, ವ್ಯಾಪಾರದ ಕಾರಣದಿಂದಾಗಿ ಇಂದು ಇವುಗಳ ಸಂತತಿ ಅಳಿವಿನಂಚಿಗೆ ತಲುಪಿವೆ. ಪ್ರಸ್ತುತ 10,000 ಕ್ಕಿಂತಲೂ ಕಡಿಮೆ ರೆಡ್‌ ಪಾಂಡಾಗಳು ಇವೆ ಎಂದು ಹೇಳಲಾಗುತ್ತದೆ. ಹಾಗಾಗಿ ಅಳಿವಿನಂಚಿನಲ್ಲಿರುವ ಈ ಪ್ರಭೇದಗಳನ್ನು ರಕ್ಷಿಸಬೇಕು, ಇವುಗಳ ರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಉದ್ದೇಶದಿಂದ ಪ್ರತಿವರ್ಷ ಸೆಪ್ಟೆಂಬರ್‌ ಮೂರನೇ ಶನಿವಾರದಂದು ಅಂತಾರಾಷ್ಟ್ರೀಯ ರೆಡ್‌ ಪಾಂಡಾ (International Red Panda Day) ದಿನವನ್ನು ಆಚರಿಸಲಾಗುತ್ತದೆ.

ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನದ ಇತಿಹಾಸವೇನು?

ಪ್ರತಿವರ್ಷ ಸೆಪ್ಟೆಂಬರ್‌ ಮೂರನೇ ಶನಿವಾರದಂದು ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನವನ್ನು ಆಚರಿಸಲಾಗುತ್ತದೆ. ಈ ಉಪಕ್ರಮವನ್ನು ಆರಂಭದಲ್ಲಿ 2010 ರಲ್ಲಿ ನೇಪಾಳದ ಲಾಭರಹಿತ ಸಂಸ್ಥೆಯಾದ ರೆಡ್ ಪಾಂಡಾ ನೆಟ್‌ವರ್ಕ್ ಪ್ರಾರಂಭಿಸಿತು. ಪ್ರತಿ ವರ್ಷ ಒಂದು ದಿನ ಈ ಅಳಿವಿನಂಚಿನಲ್ಲಿರುವ ಪ್ರಭೇದದ ಮೇಲೆ ಪ್ರಪಂಚದ ಗಮನವನ್ನು ಕೇಂದ್ರೀಕರಿಸುವುದು ಮತ್ತು ಹೆಚ್ಚು ಮುಖ್ಯವಾಗಿ, ಅವುಗಳನ್ನು ಉಳಿವಿಗಾಗಿ ಜಾಗೃತಿಯನ್ನು ಇದರ ಗುರಿಯಾಗಿತ್ತು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್‌ 3 ನೇ ಶನಿವಾರದಂದು ಈ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ಇದನ್ನೂ ಓದಿ: ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು

ಇದನ್ನೂ ಓದಿ
Image
ಪರಿಸರ ಸಮತೋಲನದಿಂದ ಕೃಷಿಯವರೆಗೆ ಬಿದಿರಿನ ಉಪಯೋಗ ಹಲವು
Image
ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ
Image
ಅಂತಾರಾಷ್ಟ್ರೀಯ ಸಾಕ್ಷರತಾ ದಿನಾಚರಣೆಯ ಉದ್ದೇಶವನ್ನು ತಿಳಿಯಿರಿ
Image
ಶಿಕ್ಷಕರ ದಿನದ ಆಚರಣೆಯ ಹಿನ್ನೆಲೆಯ ಬಗ್ಗೆ ತಿಳಿಯಿರಿ

ಅಂತಾರಾಷ್ಟ್ರೀಯ ರೆಡ್‌ ಪಾಂಡಾ ದಿನದ ಮಹತ್ವವೇನು?

ಅರಣ್ಯ ನಾಶ, ಬೇಟೆಯಾಡುವಿಕೆ ಮತ್ತು ಅಕ್ರಮ ಸಾಕುಪ್ರಾಣಿ ವ್ಯಾಪಾರದ ಕಾರಣದಿಂದಾಗಿ ಕೆಂಪು ಪಾಂಡಾಗಳು ಅಳಿವಿನಂಚಿಗೆ ತಲುಪಿವೆ. ಅವುಗಳ ಸಂತತಿ ಗಮನಾರ್ಹವಾಗಿ ಕಡಿಮೆಯಾಗಿದೆ. ಹಾಗಾಗಿ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಈ ದಿನದ ಆಚರಣೆಯ ಮುಖ್ಯ ಉದ್ದೇಶವಾಗಿದೆ.  ಈ ದಿನದಂದು ಜಾಗೃತಿ ಅಭಿಯಾನಗಳು ನಿಧಿ ಸಂಗ್ರಹ, ಅರಣ್ಯ ಮತ್ತು ಪರಿಸರ ಸಂರಕ್ಷಣೆಯ ಬಗೆಗಿನ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ