Personality Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಪ್ರಾಣಿ ನಿಮ್ಮ ನಿಗೂಢ ವ್ಯಕ್ತಿತ್ವದ ಬಗ್ಗೆ ತಿಳಿಸುತ್ತದೆ
ವ್ಯಕ್ತಿತ್ವ ಪರೀಕ್ಷೆಯ ಹಲವು ವಿಧಾನಗಳಿವೆ. ಇಂತಹ ಪರ್ಸನಾಲಿಟಿ ಟೆಸ್ಟ್‌ಗಳ ಮೂಲಕ ನೀವು ಸಹ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷೆ ಮಾಡಿರುತ್ತೀರಿ ಅಲ್ವಾ. ಅಂತಹದ್ದೇ ಚಿತ್ರವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದಲ್ಲಿ ನಿಮಗೆ ಮೊದಲು ಯಾವ ಪ್ರಾಣಿ ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ಪರ್ಸನಾಲಿಟಿ ಹೇಗಿದೆ ಎಂಬುದನ್ನು ತಿಳಿಯಿರಿ.

ಸಾಮಾನ್ಯವಾಗಿ ಹೆಚ್ಚಿನವರು ಜ್ಯೋತಿಷ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಸಾಮುದ್ರಿಕ ಶಾಸ್ತ್ರ, ಗಿಣಿ ಶಾಸ್ತ್ರದ ಮೂಲಕ ತಮ್ಮ ಗುಣ ಸ್ವಭಾವ, ಭವಿಷ್ಯದ ಬಗ್ಗೆ ತಿಳಿದುಕೊಳ್ಳುತ್ತಾರೆ. ಇದರ ಹೊರತಾಗಿ ನಮ್ಮೊಳಗಿನ ಸೀಕ್ರೆಟ್ ವ್ಯಕ್ತಿತ್ವವನ್ನು ನಾವೇ ತಿಳಿದುಕೊಳ್ಳಬಹುದು. ಹೌದು ಕೋಪಿಷ್ಠರೆ, ಸಹೃದಯಿಯೇ, ಅಂತರ್ಮುಖಿಯೇ, ಬಹಿರ್ಮುಖಿಯೇ ಹೀಗೆ ನಾವೆಂಥ ವ್ಯಕ್ತಿ ಎಂಬುದನ್ನು ವ್ಯಕ್ತಿಯ ಪರೀಕ್ಷೆಯ (Personality Test) ವಿಧಾನಗಳ ಮೂಲಕ ತಿಳಿದುಕೊಳ್ಳಬಹುದು. ಇಂತಹ ಸಾಕಷ್ಟು ವ್ಯಕ್ತಿತ್ವ ಪರೀಕ್ಷೆಗಳ ಚಿತ್ರಗಳು ಸೋಷಿಯಲ್ ಮೀಡಿಯಾದಲ್ಲಿ ಕಾಣಸಿಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ವಿಶ್ವ ಭೂಪಟದಂತಿರುವ ಆ ಚಿತ್ರದಲ್ಲಿ ನಿಮಗ್ಯಾವ ಪ್ರಾಣಿ ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ ಪ್ರಾಣಿ ಯಾವುದು?
ಕರಡಿ: ಈ ಚಿತ್ರದಲ್ಲಿ ನಿಮಗೆ ಕರಡಿ ಕಾಣಿಸಿದರೆ, ನೀವು ಕಾಳಜಿಯುಳ್ಳ ವ್ಯಕ್ತಿ ಮತ್ತು ಪ್ರಾಮಾಣಿಕರು ಎಂದರ್ಥ. ನೀವು ನಿಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ಆದ್ಯತೆ ನೀಡುತ್ತೀರಿ. ಶುದ್ಧ ಮನಸ್ಸಿನ ಹಾಗೂ ಹೃದಯವಂತರಾಗಿರುವ ನೀವು ನಕಲಿ ಹಾಗೂ ಬೆನ್ನಿಗೆ ಚೂರಿ ಹಾಕುವ ಜನರನ್ನು ಎಂದಿಗೂ ಸಹಿಸುವುದಿಲ್ಲ. ನೀವು ಪ್ರಾಮಾಣಿಕತೆಗೆ ಹೆಚ್ಚಿನ ಬೆಲೆ ಕೊಡುತ್ತೀರಿ.
ಮೀನು: ಈ ನಿರ್ದಿಷ್ಟ ಚಿತ್ರದಲ್ಲಿ ನೀವು ಮೊದಲು ಮೀನನ್ನು ಗಮನಿಸಿದರೆ, ನೀವು ನಿರ್ಧಾರಗಳನ್ನು ತೆಗೆದುಕೊಳ್ಳಲು ಮತ್ತು ಸಮಸ್ಯೆಗಳನ್ನು ಪರಿಹರಿಸಲು ಕಲ್ಪನೆ, ಬುದ್ಧಿವಂತಿಕೆ ಮತ್ತು ಸಾಮಾನ್ಯ ಜ್ಞಾನವನ್ನು ಬಳಸುವ ವ್ಯಕ್ತಿ ಎಂದರ್. ವ್ಯಂಗ್ಯವಾಡುವ ಜನರನ್ನು, ಸಹಾಯ ಮಾಡಲು ಇಷ್ಟಪಡದವರನ್ನು, ವಾದಿಸುವವರನ್ನು ಮತ್ತು ಇತರರನ್ನು ನೋಡಿ ನಗುವವರನ್ನು ಕಂಡರೆ ನಿಮಗೆ ಆಗುವುದಿಲ್ಲ. ಅಂತಹ ಜನರಿಂದ ನೀವು ಸಾಧ್ಯವಾದಷ್ಟು ದೂರವಿರಲು ಬಯಸುತ್ತೀರಿ.
ಕಾಂಗಾರೂ: ನೀವು ಮೊದಲು ಕಾಂಗಾರನ್ನು ನೋಡಿದರೆ, ನೀವು ಪರಿಶುದ್ಧರು, ನಿಸ್ವಾರ್ಥ ಸ್ವಭಾವದ ವ್ಯಕ್ತಿಯೆಂದು ಅರ್ಥ. ನೀವು ಯಾವುದೇ ಏರಿಳಿತಗಳು ಬಂದರೂ ಅದನ್ನು ಛಲದಿಂದ ಎದುರಿಸುತ್ತೀರಿ. ನೀವು ಸಾಮಾನ್ಯ ಮತ್ತು ನಿಮಗೆ ನಿಷ್ಠರಾಗಿರುವ ಜನರ ಗುಂಪಿನಲ್ಲಿರಲು ಇಷ್ಟಪಡುತ್ತೀರಿ. ನಕಲಿ ಸ್ನೇಹಿತರು ಮತ್ತು ಸುಳ್ಳುಗಾರರಿಗೆ ನಿಮ್ಮ ಜೀವನದಲ್ಲಿ ಯಾವುದೇ ಸ್ಥಾನವಿಲ್ಲ. ದ್ರೋಹ ಬಗೆಯುವ ವ್ಯಕ್ತಿಗಳನ್ನು ನೀವು ದ್ವೇಷ ಮಾಡುತ್ತೀರಿ.
ಸಿಂಹ: ಈ ಚಿತ್ರದಲ್ಲಿ ನಿಮಗೆ ಮೊದಲು ಸಿಂಹ ಕಾಣಿಸಿದರೆ ನೀವು ಶೂರ ಮತ್ತು ಧೈರ್ಯಶಾಲಿ ವ್ಯಕ್ತಿಯೆಂದು ಅರ್ಥ. ನೀವು ಅಂದುಕೊಂಡಿದ್ದನ್ನು ಸಾಧಿಸಿಯೇ ತೀರುವಂತಹ ಛಲಗಾರರು. ಆತ್ಮವಿಶ್ವಾಸವನ್ನು ಹೊಂದಿರುವ ನೀವು ನಿಮಗೆ ಇಷ್ಟ ವಿಷಯಗಳನ್ನು ಅಥವಾ ನಿಮ್ಮ ಗುರಿಗಳನ್ನು ನೀವು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ.
ಡಾಲ್ಫಿನ್: ಈ ಚಿತ್ರದಲ್ಲಿ ನಿಮಗೆ ಡಾಲ್ಫಿನ್ ಕಾಣಿಸಿದರೆ ನೀವು ಕಲ್ಪನಾಶೀಲ ಮತ್ತು ಸೃಜನಶೀಲತೆಯನ್ನು ಅವಲಂಬಿಸಿರುವ ವ್ಯಕ್ತಿ ಎಂದರ್ಥ. ಮತ್ತು ನೀವು ಸ್ವಂತಿಕೆಯ ಮೇಲೆ ಮಾತ್ರ ಗಮನ ಹರಿಸುತ್ತೀರಿ. ಜನಸಮೂಹಕ್ಕೆ ಹೊಂದಿಕೊಳ್ಳಲು ಅಥವಾ ಇತರರನ್ನು ಮೆಚ್ಚಿಸಲು ನಿಮ್ಮನ್ನು ಹಾಗೂ ನಿಮ್ಮತನವನ್ನು ನೀವು ಎಂದಿಗೂ ಬದಲಾಯಿಸುವುದಿಲ್ಲ. ಜೊತೆಗೆ ಮುಖವಾಡ ಹಾಕಿಕೊಳ್ಳುವ ಜನರನ್ನೂ ನೀವು ಇಷ್ಟಪಡುವುದಿಲ್ಲ.
ನರಿ: ಈ ಚಿತ್ರದಲ್ಲಿ ನೀವು ಮೊದಲು ನರಿಯನ್‌ನು ನೋಡಿದರೆ ನೀವು ಜನರಿಂದ ಹೊಸ ವಿಷಯಗಳನ್ನು ಸುಲಭವಾಗಿ ಕಲಿಯುವ ವ್ಯಕ್ತಿಯೆಂದು ಅರ್ಥ. ನೀವು ಭೇಟಿಯಾಗುವ ಪ್ರತಿಯೊಬ್ಬರಿಂದಲೂ ಏನನ್ನಾದರೂ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತೀರಿ. ನೀವು ಯಾವಾಗಲೂ ತರ್ಕಕ್ಕೆ ಮೊದಲ ಆದ್ಯತೆಯನ್ನು ನೀಡುವವರಾಗಿರುತ್ತೀರಿ.
ಬೆಕ್ಕು: ಈ ಚಿತ್ರದಲ್ಲಿ ಮೊದಲು ನಿಮ್ಮ ಕಣ್ಣಿಗೆ ಬೆಕ್ಕು ಕಾಣಿಸಿದರೆ ನೀವು ಹೆಚ್ಚು ಮಾತನಾಡುವುದನ್ನು ದ್ವೇಷಿಸುವ ವ್ಯಕ್ತಿಯೆಂದು ಅರ್ಥ. ಈ ಕಾರಣದಿಂದ ಕೆಲವು ಜನರು ನಿಮ್ಮನ್ನು ನಾಚಿಕೆ ಸ್ವಭಾವದವರು ಎಂದು ಭಾವಿಸುತ್ತಾರೆ. ಯಾರು ಏನೇ ಅಂದುಕೊಂಡರೂ ನೀವು ಇತರರ ಗಮನವನ್ನು ಬಯಸುವುದಿಲ್ಲ, ನಿಮ್ಮದೇ ಆದ ರೀತಿಯಲ್ಲಿ ಜೀವನವನ್ನು ನಡೆಸಲು ಬಯಸುತ್ತೀರಿ, ಇತರರು ನಮ್ಮ ಬಗ್ಗೆ ಏನು ಯೋಚಿಸಬಹುದು ಎಂಬುದರ ಬಗ್ಗೆ ನೀವು ಎಂದಿಗೂ ಚಿಂತಿಸುವುದಿಲ್ಲ.
ಹದ್ದು: ಈ ಚಿತ್ರದಲ್ಲಿ ನಿಮಗೆ ಮೊದಲು ಹದ್ದು ಕಾಣಿಸಿದರೆ ನೀವು ಜೀವನದಲ್ಲಿ ಉನ್ನತ ಗುರಿಯನ್ನು ಸಾಧಿಸಲು ಬಯಸುವ ವ್ಯಕ್ತಿಯೆಂದು ಅರ್ಥ. ಒಬ್ಬಂಟಿಯಾಗಿದ್ದರೂ ಸಹ ನೀವು ಎತ್ತರಕ್ಕೆ ಹಾರಲು ಬಯಸುತ್ತೀರಿ. ಜೊತೆಗೆ ನೀವು ನಾಟಕೀಯವಾಗಿ ಬದುಕಲು ಇಷ್ಟಪಡುವುದಿಲ್ಲ. ಇನ್ನೊಂದು ಏನೆಂದರೆ ನೀವು ಇತರರು ನಿಮ್ಮಂತೆಯೇ ಯೋಚಿಸಬೇಕೆಂದು ನೀವು ಬಯಸುತ್ತೀರಿ.
ಆನೆ: ಈ ಚಿತ್ರದಲ್ಲಿ ನಿಮಗೆ ಮೊದಲು ಆನೆ ಕಂಡರೆ ನೀವು ಆತ್ಮವಿಶ್ವಾಸಿ ಮತ್ತು ಸ್ಥಿರ ವ್ಯಕ್ತಿತ್ವವನ್ನು ಹೊಂದಿರುವ ವ್ಯಕ್ತಿಯೆಂದು ಅರ್ಥ. ನೀವು ಕಠೋರವಾಗಿ ಕಂಡರೂ ನೀವು ಎಲ್ಲರ ಬಗ್ಗೆಯೂ ದಯೆ ಮತ್ತು ಪ್ರೀತಿಯನ್ನು ತೋರುತ್ತೀರಿ. ಮತ್ತು ನೀವು ಎಂದಿಗೂ ಕೆಟ್ಟವರ ಸಹವಾಸವನ್ನು ಇಷ್ಟಪಡುವುದಿಲ್ಲ.
ಇದನ್ನೂ ಓದಿ: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನಿಮ್ಮ ಶಕ್ತಿ-ದೌರ್ಬಲ್ಯ ಬಗ್ಗೆ ತಿಳಿಸುತ್ತದೆ
ಮೊಲ: ಚಿತ್ರದಲ್ಲಿ ಮೊಲ ನಿಮ್ಮ ಕಣ್ಣಿಗೆ ಬಿದ್ದರೆ ನೀವು ಸೃಜನಶೀಲ, ಉತ್ಸಾಹಭರಿತ ಮತ್ತು ಚೈತನ್ಯಶೀಲ ವ್ಯಕ್ತಿಯೆಂದು ಅರ್ಥ. ನೀವು ಯಾವಾಗಲೂ ಸಂತೋಷವನ್ನು ಹರಡಲು ಇಷ್ಟಪಡುತ್ತೀರಿ. ಅದಕ್ಕಾಗಿಯೇ ನಿಮ್ಮ ಜೀವನದಲ್ಲಿ ದುಃಖ ಅಥವಾ ಯಾವುದೇ ಇತರ ನಕಾರಾತ್ಮಕತೆಯನ್ನು ತರುವ ಜನರನ್ನು ನೀವು ಇಷ್ಟಪಡುವುದಿಲ್ಲ.
ಜಿರಾಫೆ: ನೀವು ಮೊದಲು ಜಿರಾಫೆಯನ್ನು ನೋಡಿದರೆ ನೀವು ದಯಾಳು ವ್ಯಕ್ತಿ ಮತ್ತು ಇತರರಿಂದ ಅದೇ ರೀತಿಯ ದಯೆಯನ್ನು ನಿರೀಕ್ಷಿಸುವ ವ್ಯಕ್ತಿ ಎಂದರ್ಥ. ನೀವು ಸಮಯಕ್ಕೆ ಗೌರವ ನೀಡದ ಜನರೊಂದಿಗೆ ಇರಲು ಇಷ್ಟಪಡುವುದಿಲ್ಲ. ಜೊತೆಗೆ, ಇತರರ ದೌರ್ಬಲ್ಯಗಳನ್ನು ಎತ್ತಿ ಹಿಡಿಯು ಮತ್ತು ಅವುಗಳನ್ನು ತಮ್ಮ ಸ್ವಂತ ಲಾಭಕ್ಕಾಗಿ ಬಳಸಿಕೊಳ್ಳುವ ಜನರನ್ನೂ ಇಷ್ಟಪಡುವುದಿಲ್ಲ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








