Statistics Day: ರಾಷ್ಟ್ರೀಯ ಅಂಕಿ ಅಂಶಗಳ ದಿನದ ಮಹತ್ವವೇನು? ಯಾವ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 29, 2023 | 9:59 AM

ಪಿಸಿ ಮಹಾನಲೋಬಿಸ್ ಅವರ ಕೊಡುಗೆಗಳನ್ನು ಗುರುತಿಸಲು ಜೂನ್ 29 ರಂದು ರಾಷ್ಟ್ರೀಯ ಅಂಕಿಅಂಶ ದಿನವನ್ನು ಆಚರಿಸಲಾಗುತ್ತದೆ. ಈ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ.

Statistics Day: ರಾಷ್ಟ್ರೀಯ ಅಂಕಿ ಅಂಶಗಳ ದಿನದ ಮಹತ್ವವೇನು? ಯಾವ ಕಾರಣಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ? ಇಲ್ಲಿದೆ ಮಾಹಿತಿ
ಸಾಂದರ್ಭಿಕ ಚಿತ್ರ
Follow us on

ದೈನಂದಿನ ಜೀವನದಲ್ಲಿ ಅಂಕಿ ಅಂಶಗಳ ಬಳಕೆಯನ್ನು ಜನಪ್ರಿಯಗೊಳಿಸಲು ಜೂನ್ 29 ರಂದು ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನವು ಪ್ರೊ.ಪಿ.ಸಿ.ಮಹಾಲನೋಬಿಸ್ ಅವರ ಜನ್ಮ ದಿನಾಚರಣೆಯನ್ನು ನೆನಪಿಸುತ್ತದೆ. ಮಹಲನೋಬಿಸ್‌ ಅವರು ಗಣಿತಶಾಸ್ತ್ರಕ್ಕೆ ನೀಡಿದ ಕೊಡುಗೆಗೆ ಗೌರವ ಸಲ್ಲಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ.

ಇತಿಹಾಸ:

ಜೂನ್ 5, 2007 ರಂದು ಸಂಖ್ಯಾಶಾಸ್ತ್ರ ಮತ್ತು ಆರ್ಥಿಕ ಯೋಜನಾ ಕ್ಷೇತ್ರಗಳಲ್ಲಿ ಪ್ರಶಾಂತ ಚಂದ್ರ ಮಹಾಲನೋಬಿಸ್ ನೀಡಿದ ಕೊಡುಗೆಗಳನ್ನು ಗುರುತಿಸಿ ಭಾರತ ಸರ್ಕಾರವು ಜೂನ್ 29 ಅನ್ನು ರಾಷ್ಟ್ರೀಯ ಅಂಕಿ ಅಂಶ ದಿನವೆಂದು ನಿಗದಿಪಡಿಸಿತು. ಮೊದಲ ರಾಷ್ಟ್ರೀಯ ಅಂಕಿಅಂಶ ದಿನವನ್ನು ಜೂನ್ 29, 2007 ರಂದು ಆಚರಿಸಲಾಯಿತು ಮತ್ತು ಅಂದಿನಿಂದ ಅದನ್ನು ಅದೇ ದಿನದಂದು ಆಚರಿಸಲಾಗುತ್ತಿದೆ. ಪ್ರೊಫೆಸರ್ ಮಹಲನೋಬಿಸ್ ಭಾರತದ ಮೊದಲ ಯೋಜನಾ ಆಯೋಗದ ಭಾಗವಾಗಿದ್ದರು ಮತ್ತು 1931 ರಲ್ಲಿ ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ (ಐಎಸ್ಐ) ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಪ್ರಾಮುಖ್ಯತೆ:

ಕಾರ್ಯತಂತ್ರ, ಆರ್ಥಿಕ ಯೋಜನೆ ಮತ್ತು ನೀತಿ ನಿರೂಪಣೆಯಲ್ಲಿ ಸಂಖ್ಯಾಶಾಸ್ತ್ರದ ಪಾತ್ರ ಮತ್ತು ಪ್ರಾಮುಖ್ಯತೆಯ ಬಗ್ಗೆ ಯುವ ಪೀಳಿಗೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಸಂಖ್ಯಾಶಾಸ್ತ್ರ ದಿನದ ಮಹತ್ವವಾಗಿದೆ. ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ಪ್ರೊಫೆಸರ್ ಮಹಲನೋಬಿಸ್ ಅವರ ಸಾಧನೆಗಳಿಂದ ಕಲಿಯಲು ಬಹಳಷ್ಟಿದ್ದು ಹಾಗಾಗಿ ಈ ಸಂದರ್ಭವನ್ನು ಆ ಎಲ್ಲ ಸಾಧನೆಗಳನ್ನು ನೆನಪಿಸಿಕೊಳ್ಳಲು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ:National Day of Giving 2022: ಇಂದು ರಾಷ್ಟ್ರೀಯ ದಾನ ದಿನ, ಇದರ ಇತಿಹಾಸ ಮತ್ತು ಮಹತ್ವ ಇಲ್ಲಿದೆ

ಆಚರಣೆ:

ಅಂಕಿ ಅಂಶಗಳ ದಿನ 2023 ಕಾರ್ಯಕ್ರಮವನ್ನು ನವದೆಹಲಿಯ ಲೋಧಿ ರಸ್ತೆಯ ಸ್ಕೋಪ್ ಕಾಂಪ್ಲೆಕ್ಸ್ನ ಸ್ಕೋಪ್ ಕನ್ವೆನ್ಷನ್ ಸೆಂಟರ್ನಲ್ಲಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ) ರಾವ್ ಇಂದ್ರಜಿತ್ ಸಿಂಗ್ ಭಾಗವಹಿಸಲಿದ್ದಾರೆ. ಜೊತೆಗೆ ರಾಷ್ಟ್ರೀಯ ಪ್ರಗತಿಗೆ ಸ್ಟ್ಯಾಟಿಸ್ಟಿಕ್ಸ್‌ ಯಾವ ರೀತಿ ಕೊಡುಗೆ ನೀಡುತ್ತದೆ ಎಂಬುದರ ಕುರಿತು ಸಾರ್ವಜನಿಕ ಜ್ಞಾನವನ್ನು ಹೆಚ್ಚಿಸಲು ಸೆಮಿನಾರ್‌ಗಳು, ಸಮ್ಮೇಳನಗಳು, ಚರ್ಚೆಗಳು ಮತ್ತು ಸ್ಪರ್ಧೆಗಳನ್ನು ನಡೆಸಲಾಗುತ್ತದೆ.

ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:57 am, Thu, 29 June 23