ಫ್ರಿಡ್ಜ್ ಇಲ್ಲದೆಯೂ ತರಕಾರಿ, ಹಣ್ಣುಗಳನ್ನು ಫ್ರೆಶ್​ ಆಗಿಡುವುದು ಹೇಗೆ?

|

Updated on: May 01, 2024 | 10:27 PM

ಬೇಸಿಗೆಯಲ್ಲಿ ಹಣ್ಣು- ತರಕಾರಿಗಳನ್ನು ತಾಜಾವಾಗಿ ಉಳಿಸಿಕೊಳ್ಳುವುದು ಬಹಳ ಕಷ್ಟ. ಬಿಸಿಲಿನ ಝಳಕ್ಕೆ ಅವು ಬೇಗ ಒಣಗಿ ಹೋಗುತ್ತವೆ. ಹೀಗಾಗಿ, ಬೇಸಿಗೆ ಕಾಲದಲ್ಲಿ ಫ್ರಿಡ್ಜ್​ನ ಅಗತ್ಯ ಬಹಳ ಇರುತ್ತದೆ. ಆದರೆ, ಫ್ರಿಡ್ಜ್​ ಇಲ್ಲದವರು ತರಕಾರಿ, ಹಣ್ಣುಗಳನ್ನು ಹೇಗೆ ಫ್ರೆಶ್ ಆಗಿಟ್ಟುಕೊಳ್ಳುವುದು?

ಫ್ರಿಡ್ಜ್ ಇಲ್ಲದೆಯೂ ತರಕಾರಿ, ಹಣ್ಣುಗಳನ್ನು ಫ್ರೆಶ್​ ಆಗಿಡುವುದು ಹೇಗೆ?
ಫ್ರಿಡ್ಜ್
Image Credit source: istock
Follow us on

ಬೇಸಿಗೆಯಲ್ಲಿ ಹಣ್ಣುಗಳು (Summer Fruits) ಮತ್ತು ತರಕಾರಿಗಳ ತಾಜಾತನ ಬೇಗ ಹಾಳಾಗುತ್ತದೆ. ಅದಕ್ಕಾಗಿಯೇ ಅವುಗಳನ್ನು ಫ್ರಿಡ್ಜ್​ನಲ್ಲಿ (Fridge) ಸಂಗ್ರಹಿಸಿಡಬೇಕಾದುದು ಅನಿವಾರ್ಯ. ಆದರೆ, ಫ್ರಿಡ್ಜ್​ನಲ್ಲಿಟ್ಟು ತಿನ್ನುವುದು ಆರೋಗ್ಯಕ್ಕೆ ಹೆಚ್ಚು ಆರೋಗ್ಯಕರವಲ್ಲ. ಹೀಗಾಗಿ, ಫ್ರಿಡ್ಜ್ ಇಲ್ಲದವರು ಮತ್ತು ಫ್ರಿಡ್ಜ್ ಅನ್ನು ಹೆಚ್ಚು ಬಳಸದವರು ಹಣ್ಣುಗಳು ಮತ್ತು ತರಕಾರಿಗಳನ್ನು ಫ್ರೆಶ್ ಆಗಿಟ್ಟುಕೊಳ್ಳಲು ಏನು ಮಾಡಬೇಕು? ಇಲ್ಲಿದೆ ಉತ್ತರ.

ಪ್ರತ್ಯೇಕವಾಗಿ ಇರಿಸಿ:

ಹಣ್ಣುಗಳು ಮತ್ತು ತರಕಾರಿಗಳನ್ನು ಪ್ರತ್ಯೇಕ ಕಂಟೇನರ್‌ಗಳಲ್ಲಿ ಸಂಗ್ರಹಿಸಿಡಿ. ಪ್ರತಿ ರೀತಿಯ ತರಕಾರಿ ಮತ್ತು ಹಣ್ಣುಗಳಿಗೆ ವಿಭಿನ್ನ ಚೀಲಗಳನ್ನು ಬಳಸಿ. ಸ್ವಲ್ಪ ಗಾಳಿ ತುಂಬಿದ, ಬಿಗಿಯಾಗಿ ಮುಚ್ಚಿದ ಚೀಲಗಳನ್ನು ಬಳಸಿ.

ಇದನ್ನೂ ಓದಿ: ಈ ತರಕಾರಿಗಳನ್ನು ಮೊಸರಿನೊಂದಿಗೆ ತಿನ್ನುವುದು ಒಳ್ಳೆಯದಲ್ಲ

ಕೋಣೆಯ ಉಷ್ಣಾಂಶದಲ್ಲಿ ಕೌಂಟರ್​ಟಾಪ್​ನಲ್ಲಿ ಇರಿಸಿ:

ಶೀತ ಉಷ್ಣತೆಯು ಸೌತೆಕಾಯಿ, ಮೆಣಸಿನ ಕಾಯಿ ಮತ್ತು ಬಿಳಿಬದನೆಗಳಲ್ಲಿ ವಿಲ್ಟಿಂಗ್ ಮತ್ತು ಕೊಳೆಯುವಿಕೆಯನ್ನು ಉಂಟುಮಾಡಬಹುದು. ಅವುಗಳ ಶೆಲ್ಫ್ ಜೀವಿತಾವಧಿಯನ್ನು ಹೆಚ್ಚಿಸಲು, ಅವುಗಳನ್ನು ಕೌಂಟರ್​ಟಾಪ್​ನಲ್ಲಿ ಕೋಣೆಯ ಉಷ್ಣಾಂಶದಲ್ಲಿ ಸಂಗ್ರಹಿಸಿ.

ಪ್ಯಾಂಟ್ರಿಯಲ್ಲಿ ಸಂಗ್ರಹಿಸಿ:

ಸೇಬು, ಪೇರಳೆ, ಪ್ಲಮ್, ಆವಕಾಡೊ, ಕಿವಿ, ಮಾವಿನಹಣ್ಣು ಮತ್ತು ಅನಾನಸ್‌ನಂತಹ ಹಣ್ಣುಗಳನ್ನು ರೆಫ್ರಿಜರೇಟರ್‌ನಲ್ಲಿ ಇಡಬೇಡಿ. ಅದರ ಬದಲು ಕೌಂಟರ್‌ನಲ್ಲಿ ಅಥವಾ ಪ್ಯಾಂಟ್ರಿಯಲ್ಲಿ ಉತ್ತಮವಾಗಿ ಸಂಗ್ರಹಿಸಿಡಬಹುದು.

ಇದನ್ನೂ ಓದಿ: Summer Fruits: ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಬೇಸಿಗೆಯಲ್ಲಿ ಈ ಹಣ್ಣು ತಿನ್ನಿ

ಹೆಚ್ಚಿನ ಆರ್ದ್ರತೆ ಇರುವ ಸ್ಥಳದಲ್ಲಿ ಸಂಗ್ರಹಿಸಿ:

ಗೆಣಸು ಮತ್ತು ಆಲೂಗಡ್ಡೆಗಳನ್ನು ಫ್ರಿಡ್ಜ್​ನಲ್ಲಿ ಇಡಬಾರದು. ಅದರ ಬದಲು ಗಾಳಿಯಾಡುವ, ತಂಪಾದ ಪ್ರದೇಶದಲ್ಲಿ ಶೇಖರಿಸಿಡಬೇಕು.

ಹಣ್ಣುಗಳನ್ನು ತೊಳೆಯಬೇಡಿ:

ಬೆರಿ ಹಣ್ಣುಗಳು ಮತ್ತು ದ್ರಾಕ್ಷಿಗಳು ಸರಿಯಾಗಿ ಹಣ್ಣಾಗಿ, ತಿನ್ನಲು ಸಿದ್ಧವಾಗುವವರೆಗೆ ಸ್ವಚ್ಛವಾದ, ಶುಷ್ಕ ಸ್ಥಳದಲ್ಲಿ ಶೇಖರಿಸಿಡಬೇಕು.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ