Tart Cherry: ಉತ್ತಮ ನಿದ್ದೆಗೆ ಟಾರ್ಟ್ ಚೆರಿ ಜ್ಯೂಸ್ ಸಹಾಯಕ: ಯಾವಾಗ ಕುಡಿಯಬೇಕು?
ನಿದ್ದೆ ಸರಿಯಾಗಿ ಬಾರದೆ ರಾತ್ರಿ ಕಷ್ಟಪಡುತ್ತಿದ್ದೀರಾ? ಟಾರ್ಟ್ ಚೆರಿ ಜ್ಯೂಸ್ ನಿದ್ದೆಗೆ ಸಹಾಯ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಇದರಲ್ಲಿ ನೈಸರ್ಗಿಕ ಮೆಲಟೋನಿನ್ ಸೇರಿದಂತೆ ಕೆಲವು ಸಂಯುಕ್ತಗಳಿವೆ. ಮಲಗುವ 1-2 ಗಂಟೆ ಮೊದಲು ಸಕ್ಕರೆ ಸೇರಿಸದ ಟಾರ್ಟ್ ಚೆರಿ ಜ್ಯೂಸ್ ಸೇವಿಸುವ ಕುರಿತು ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ನಿದ್ದೆ ಸರಿಯಾಗಿ ಬರುತ್ತಿಲ್ಲವೇ? ಈ ಜ್ಯೂಸ್ ಪ್ರಯತ್ನಿಸಿ!
- ಮಲಗುವ 1–2 ಗಂಟೆ ಮೊದಲು ಇದನ್ನು ಕುಡಿಯಿರಿ!
- ಟಾರ್ಟ್ ಚೆರಿ ಜ್ಯೂಸ್ ನಿದ್ದೆಗೆ ಹೇಗೆ ಸಹಾಯ ಮಾಡುತ್ತದೆ?
ಇತ್ತೀಚಿನ ಜೀವನಶೈಲಿಯಲ್ಲಿ ಕೆಲಸದ ಒತ್ತಡ ಮತ್ತು ರಾತ್ರಿ ಸಮಯದಲ್ಲಿ ಮೊಬೈಲ್ (Mobile) ಹಾಗೂ ಇತರ ಸ್ಕ್ರೀನ್‌ಗಳ ಬಳಕೆಯಿಂದಾಗಿ ಹಲವರ ನಿದ್ದೆಯ ಮೇಲೆ ಪರಿಣಾಮ ಬೀರುತ್ತಿದೆ. ರಾತ್ರಿ ಹಾಸಿಗೆಗೆ ಹೋದರೂ ನಿದ್ದೆ ಬಾರದೆ ಇರುವುದು ಅಥವಾ ಪದೇಪದೇ ಎಚ್ಚರವಾಗುವುದು ಸಾಮಾನ್ಯ ಸಮಸ್ಯೆಯಾಗಿದೆ. ಇಂತಹ ಸಂದರ್ಭದಲ್ಲಿ ಆಹಾರದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಸಹಾಯ ಮಾಡಬಹುದು. ಈ ಪೈಕಿ ಟಾರ್ಟ್ ಚೆರಿ ಅಥವಾ ಹುಳಿಯಾದ ಚೆರಿ ಹಣ್ಣಿನ ಜ್ಯೂಸ್ ಸಹಕಾರಿ ಆಗಿದೆ.
ನಿದ್ದೆಗೆ ಟಾರ್ಟ್ ಚೆರಿ ಹೇಗೆ ಸಹಾಯ ಮಾಡುತ್ತದೆ?
ಟಾರ್ಟ್ ಚೆರಿಯಲ್ಲಿ ನಿದ್ದೆಯೊಂದಿಗೆ ಸಂಬಂಧ ಹೊಂದಿರುವ ಕೆಲವು ನೈಸರ್ಗಿಕ ಸಂಯುಕ್ತಗಳಿವೆ. ಮುಖ್ಯವಾಗಿ ಇದರಲ್ಲಿ ಮೆಲಟೋನಿನ್ ಎಂಬ ಹಾರ್ಮೋನ್ ಸ್ವಾಭಾವಿಕವಾಗಿ ಕಂಡುಬರುತ್ತದೆ. ನಮ್ಮ ದೇಹದ ನಿದ್ದೆ ಮತ್ತು ಎಚ್ಚರದ ಚಕ್ರವನ್ನು ನಿಯಂತ್ರಿಸುವಲ್ಲಿ ಮೆಲಟೋನಿನ್ ಪ್ರಮುಖ ಪಾತ್ರ ವಹಿಸುತ್ತದೆ. ಟಾರ್ಟ್ ಚೆರಿಯಲ್ಲಿರುವ ಇತರ ಪೋಷಕಾಂಶಗಳು ಮತ್ತು ಸಸ್ಯಜನ್ಯ ಸಂಯುಕ್ತಗಳೂ ನಿದ್ದೆಯ ಗುಣಮಟ್ಟಕ್ಕೆ ಕೆಲವು ರೀತಿಯಲ್ಲಿ ಸಹಾಯ ಮಾಡಬಹುದು ಎಂದು ಕೆಲವು ಅಧ್ಯಯನಗಳು ಸೂಚಿಸಿವೆ. ಆದರೆ ಇದು ನಿದ್ದೆಯ ಸಮಸ್ಯೆಗೆ ಖಚಿತ ಪರಿಹಾರ ಎಂದು ಹೇಳಲು ಸಾಕಷ್ಟು ಪುರಾವೆಗಳಿಲ್ಲ.
ಟಾರ್ಟ್ ಚೆರಿಯಲ್ಲಿ ಟ್ರಿಪ್ಟೋಫಾನ್ ಮತ್ತು ಮೆಗ್ನೀಷಿಯಂನಂತಹ ಅಂಶಗಳೂ ಇವೆ. ಜೊತೆಗೆ ಪಾಲಿಫಿನಾಲ್‌ಗಳಂತಹ ಆ್ಯಂಟಿಆಕ್ಸಿಡೆಂಟ್‌ಗಳು ಕಂಡುಬರುತ್ತವೆ. ಇವು ದೇಹದ ಒಟ್ಟಾರೆ ಆರೋಗ್ಯಕ್ಕೆ ಉಪಯುಕ್ತವಾಗಬಹುದು. ಟಾರ್ಟ್ ಚೆರಿ ಕುರಿತು ನಡೆದ ಕೆಲವು ಸಂಶೋಧನೆಗಳಲ್ಲಿ ನಿದ್ದೆಯ ಅವಧಿ ಅಥವಾ ನಿದ್ದೆಯ ಗುಣಮಟ್ಟದಲ್ಲಿ ಸುಧಾರಣೆ ಕಂಡುಬಂದಿದೆ.
ಯಾವ ಟಾರ್ಟ್ ಚೆರಿ ಉತ್ತಮ?
ಸಾಮಾನ್ಯವಾಗಿ ಸಿಹಿ ರುಚಿಯ ಚೆರಿಗಿಂತ ಮಾಂಟ್‌ಮೋರನ್ಸಿ ಟಾರ್ಟ್ ಚೆರಿ ಬಗ್ಗೆ ನಿದ್ದೆಗೆ ಸಂಬಂಧಿಸಿದ ಅಧ್ಯಯನಗಳು ಹೆಚ್ಚು ನಡೆದಿವೆ. ಈ ಬಗೆಯ ಚೆರಿಯಲ್ಲಿ ಮೆಲಟೋನಿನ್ ಮತ್ತು ಇತರ ಸಸ್ಯಜನ್ಯ ಸಂಯುಕ್ತಗಳು ಇರುವುದರಿಂದ ನಿದ್ದೆಗೆ ಸಂಬಂಧಿಸಿದ ಸಂಶೋಧನೆಗಳಲ್ಲಿ ಇದನ್ನು ಹೆಚ್ಚಾಗಿ ಬಳಸಲಾಗಿದೆ.
Dizziness: ದಿಢೀರ್ ಎಂದು ಎದ್ದು ನಿಂತಾಗ ತಲೆ ಸುತ್ತುವುದೇಕೆ?
ಟಾರ್ಟ್ ಚೆರಿ ಜ್ಯೂಸ್ ಯಾವಾಗ ಕುಡಿಯಬೇಕು?
ಟಾರ್ಟ್ ಚೆರಿ ಜ್ಯೂಸ್ ಅನ್ನು ಸೇವಿಸುವ ಸಮಯದ ಬಗ್ಗೆಯೂ ಗಮನ ಹರಿಸಬೇಕು. ಕೆಲವು ಅಧ್ಯಯನಗಳು ರಾತ್ರಿ ಮಲಗುವ ಮುನ್ನ ಸೇವಿಸುವುದರಿಂದ ನಿದ್ದೆಗೆ ಸಂಬಂಧಿಸಿದ ಪ್ರಯೋಜನ ಸಿಗಬಹುದು ಎಂದು ಸೂಚಿಸಿವೆ. ಸಾಮಾನ್ಯವಾಗಿ ಮಲಗುವ ಸಮಯಕ್ಕೆ ಸುಮಾರು ಒಂದರಿಂದ ಎರಡು ಗಂಟೆ ಮೊದಲು ಟಾರ್ಟ್ ಚೆರಿ ಜ್ಯೂಸ್ ಸೇವಿಸುವ ವಿಧಾನವನ್ನು ಕೆಲವು ಆರೋಗ್ಯ ತಜ್ಞರು ಸೂಚಿಸುತ್ತಾರೆ.
ಜ್ಯೂಸ್ ಆಯ್ಕೆ ಮಾಡುವಾಗ ಹೆಚ್ಚುವರಿ ಸಕ್ಕರೆ ಸೇರಿಸಿರುವ ಪಾನೀಯಗಳ ಬದಲು ಶುದ್ಧ ಅಥವಾ ಕಡಿಮೆ ಸಕ್ಕರೆ ಇರುವ ಟಾರ್ಟ್ ಚೆರಿ ಜ್ಯೂಸ್ ಆಯ್ಕೆ ಮಾಡುವುದು ಉತ್ತಮ. ಮಾರುಕಟ್ಟೆಯಲ್ಲಿ ದೊರೆಯುವ ಜ್ಯೂಸ್‌ಗಳ ಲೇಬಲ್ ಅನ್ನು ಪರಿಶೀಲಿಸಿ, ಸಕ್ಕರೆ ಪ್ರಮಾಣವನ್ನು ಗಮನಿಸುವುದು ಮುಖ್ಯ.
ಜ್ಯೂಸ್ ಮಾತ್ರ ಸಾಕಾಗುವುದಿಲ್ಲ
ಟಾರ್ಟ್ ಚೆರಿ ಜ್ಯೂಸ್ ಕುಡಿಯುವುದರಿಂದ ಮಾತ್ರ ನಿದ್ದೆಯ ಸಮಸ್ಯೆ ಸಂಪೂರ್ಣವಾಗಿ ದೂರವಾಗುತ್ತದೆ ಎಂದು ಭಾವಿಸುವುದು ಸರಿಯಲ್ಲ. ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವುದು, ಸಂಜೆ ನಂತರ ಚಹಾ ಮತ್ತು ಕಾಫಿ ಸೇವನೆಯನ್ನು ಕಡಿಮೆ ಮಾಡುವುದು, ಮಲಗುವ ಮುನ್ನ ಮೊಬೈಲ್ ಮತ್ತು ಇತರ ಸ್ಕ್ರೀನ್‌ಗಳ ಬಳಕೆಯನ್ನು ಕಡಿಮೆ ಮಾಡುವುದು ಮುಂತಾದ ಅಭ್ಯಾಸಗಳೂ ಉತ್ತಮ ನಿದ್ದೆಗೆ ಮುಖ್ಯವಾಗಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




