ನಾವು ಜೀವನದುದ್ದಕ್ಕೂ ಸಾಗುವಾಗ, ನಮಗೆ ದುಃಖ ನೀಡುವ ಸಂದರ್ಭಗಳನ್ನು ಎದುರಿಸುತ್ತೇವೆ. ಅದು ಶಾರೀರಿಕವಾಗಿರಲಿ, ಮಾನಸಿಕವಾಗಿರಲಿ ಅಥವಾ ಭಾವನಾತ್ಮಕವಾಗಿರಲಿ, ಬದುಕಿನಲ್ಲಿ ದುಃಖ ಎನ್ನುವುದು ಅನಿವಾರ್ಯ. ಆದರೆ ನಾವು ಅದನ್ನು ವ್ಯವಹರಿಸುವ ವಿಧಾನವು ನಮ್ಮ ನಿಯಂತ್ರಣದಲ್ಲಿರಬೇಕು. “ಭಾವನಾತ್ಮಕ ಯಾತನೆಯು ಮನುಷ್ಯನಾಗಿರುವುದರ ಅನಿವಾರ್ಯ ಭಾಗವಾಗಿದೆ. ಆದರೆ ಇದನ್ನು ದೀರ್ಘ ಕಾಲದವರೆಗೆ ವಿಸ್ತರಿಸಬೇಕು ಎಂದು ಅರ್ಥವಲ್ಲ. ಚಿಕಿತ್ಸಕಿ ದಿವ್ಯಾ ರಾಬಿನ್ ಹೇಳಿರುವ ಪ್ರಕಾರ, ಭಾವನಾತ್ಮಕ ಮತ್ತು ಮಾನಸಿಕ ಯಾತನೆಯನ್ನು ದೀರ್ಘಕಾಲದವರೆಗೆ ವಿಸ್ತರಿಸದೆ ಹೇಗೆ ಪರಿಹರಿಸಬಹುದು ಎಂಬ ಮಾರ್ಗಗಳ ಬಗ್ಗೆ ಕಂಡುಕೊಳ್ಳಬೇಕು ಆದರೆ ನಾವು ಅದನ್ನು ಮತ್ತಷ್ಟು ಹೆಚ್ಚಿಸಿಕೊಳ್ಳುತ್ತೇವೆ ಆ ಬಗ್ಗೆ ಅವರು ಅನೇಕ ಮಾಹಿತಿ ನೀಡಿದ್ದಾರೆ.
ನಮ್ಮ ಮಾನಸಿಕ ಮತ್ತು ಭಾವನಾತ್ಮಕ ಯಾತನೆಯನ್ನು ವಿಸ್ತರಿಸುವ ಕೆಲವು ವಿಧಾನಗಳನ್ನು ದಿವ್ಯಾ ಹಂಚಿಕೊಂಡಿದ್ದಾರೆ. ಇದು ನಮ್ಮ ಮೇಲೆ ಮತ್ತಷ್ಟು ಪರಿಣಾಮ ಬೀರುತ್ತದೆ.
ಇತರರು ಬದಲಾಗುವುದಕ್ಕಾಗಿ ಕಾಯುವುದು: ಇನ್ನೊಬ್ಬ ವ್ಯಕ್ತಿಯು ಬದಲಾಗುತ್ತಾನೆ ಮತ್ತು ಪರಿಸ್ಥಿತಿ ಅಂತಿಮವಾಗಿ ನಮಗೆ ಅನುಕೂಲಕರ ವಾಗುವಂತೆ ಬದಲಾಗುತ್ತದೆ ಎಂದು ನಾವು ಆಗಾಗ ಆಶಿಸುತ್ತೇವೆ. ಇದು ನಮ್ಮಲ್ಲಿ ಬೇರೆಯವರಿಗಾಗಿ ಕಾಯುವ ಭಾವನೆಯನ್ನು ಮತ್ತು ನಮ್ಮ ಭಾವನೆಗಳನ್ನು ನಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಅದಕ್ಕಾಗಿ ನಾವು ಬದಲಾಗ ಬೇಕು. ನಮ್ಮ ಸ್ವಂತ ಕ್ರಿಯೆಗಳಿಗೆ ಜವಾಬ್ದಾರರಾಗಲು ಕಲಿಯಬೇಕು ಹಾಗೂ ಬದುಕಿನಲ್ಲಿ ಏನೇ ಬಂದರೂ ಜಗ್ಗದೇ, ಕುಗ್ಗದೇ ಮುಂದುವರಿಯಬೇಕು.
ಬೇಡವೆನಿಸಿದರೂ ಕೆಟ್ಟ ಸಂಬಂಧಗಳಲ್ಲಿ ಉಳಿಯುವುದು: ಬದುಕಿನಲ್ಲಿ ಆಗಾಗ ನಾವು ಅನೇಕ ರೀತಿಯಲ್ಲಿ ನಮಗೆ ಹಾನಿಕಾರಕವಾದ ಅತೀ ಶೋಚನೀಯ ಸಂಬಂಧಗಳಲ್ಲಿ ಸಿಲುಕಿಕೊಳ್ಳುತ್ತೇವೆ. ಅಂತಹವರ ಜೊತೆ ಇರುವ ಬದಲು, ಅವರ ಸಂಗದಲ್ಲಿ ಬೇಡದ ಸಂಭಾಷಣೆ ನಡೆಸಿಕೊಂಡು ಜಗಳ ಮಾಡುವ ಬದಲು, ನಿಮ್ಮ ಬದುಕಿಗೆ ಅರ್ಥವಿಲ್ಲದ ಸ್ಥಳದಲ್ಲಿ ಇರುವ ಬದಲು, ನಾವು ಅವರೊಂದಿಗೆ ಅಲ್ಲಿಯೇ ಉಳಿಯಲು ಪ್ರಯತ್ನಿಸುತ್ತೇವೆ ಮತ್ತು ಆ ವಿಷಯಗಳು ಬದಲಾಗುವವರೆಗೆ ಕಾಯುತ್ತೇವೆ. ಇದು ನಮಗೆ ಅಗತ್ಯಕ್ಕಿಂತ ಹೆಚ್ಚು ಬಳಲುವಂತೆ ಮಾಡುತ್ತದೆ.
ಬೇರೆಯವರು ನಮ್ಮನ್ನು ಅರ್ಥಮಾಡಿಕೊಳ್ಳಲು ಕಾಯುವುದು: ಇತರ ವ್ಯಕ್ತಿಯು ನೀಡಿದ ನೋವಿಗೆ ನಾವು ಕ್ಷಮೆ ಯಾಚಿಸಲು ಅರ್ಹರು ಎಂದು ನಾವು ಆಗಾಗ ಭಾವಿಸುತ್ತೇವೆ. ಕೆಲವೊಮ್ಮೆ ಇತರ ವ್ಯಕ್ತಿಯು ನಮ್ಮ ನೋವನ್ನು ಅರ್ಥಮಾಡಿಕೊಳ್ಳಲಿ ಎಂದು ಪರಿತಪಿಸುತ್ತೇವೆ. ಇದೂ ಕೂಡ ನಮ್ಮನ್ನು ಹೆಚ್ಚು ಸಮಯದವರೆಗೆ ಬಳಲುವಂತೆ ಮಾಡುತ್ತದೆ.
ಇದನ್ನೂ ಓದಿ: Relationship: ಯಾವುದೇ ಸಂಬಂಧವನ್ನು ಸರಿಪಡಿಸಲು, ಬಲಪಡಿಸಲು ಇರುವ ಕ್ಷಮೆಯ 5 ಭಾಷೆಗಳು
ನಮ್ಮ ಭಾವನೆಗಳನ್ನು ನಿರಾಕರಿಸುವುದು: ನಾವು ನಮ್ಮ ಸ್ವಂತ ಭಾವನೆಗಳನ್ನು ಆದ್ಯತೆಯ ಪಟ್ಟಿಯಲ್ಲಿ ಬಹಳ ಕೆಳಕ್ಕೆ ತಳ್ಳಿರುತ್ತೇವೆ. ಜೊತೆಗೆ ಇತರರನ್ನು ಆದ್ಯತೆಯಾಗಿ ಇರಿಸಿಕೊಳ್ಳಲು ಪ್ರಯತ್ನಿಸುತ್ತೇವೆ. ಇದು ನಮಗೆ ಅನಗತ್ಯ ಭಾವನೆಯನ್ನು ಉಂಟುಮಾಡಿ ಮತ್ತು ನಮ್ಮ ಸ್ವಂತ ಅಗತ್ಯಗಳನ್ನು ಪೂರೈಸಲು ನಮಗೆ ಸಾಧ್ಯವಾಗದಿರುವಂತೆ ಮಾಡುತ್ತದೆ.
ನಿಂದನೆಯ ಮಾತುಗಳನ್ನು ಸಹಿಸಿಕೊಳ್ಳುವುದು: ನಮಗೆ ಗೌರವ ಸಿಗದಿರುವ ಪರಿಸರದಲ್ಲಿದ್ದೇವೆ ಎಂದು ತಿಳಿದಾಗಲೂ ನಮಗಾಗಿ ಒಂದು ನಿಲುವನ್ನು ತೆಗೆದುಕೊಳ್ಳಲು ನಿರಾಕರಿಸಿಸುತ್ತೇವೆ ಮತ್ತು ನಿಂದನೆಯ ಮಾತುಗಳನ್ನು ಸಹಿಸಿಕೊಂಡು ನಾವು ಎದುರಿಸುತ್ತಿರುವ ನೋವನ್ನು ಇನ್ನಷ್ಟು ವಿಸ್ತರಿಸಿಕೊಳ್ಳುತ್ತೇವೆ.
ನಮ್ಮ ಮನಸ್ಸಿನ ಮಾತನ್ನು ನಿರಾಕರಿಸುವುದು: ಕೆಲವೊಮ್ಮೆ, ನಮ್ಮ ಸುತ್ತಲಿನ ಎಲ್ಲರನ್ನೂ ಮೆಚ್ಚಿಸುವ ಉದ್ದೇಶಕ್ಕಾಗಿ, ನಾವು ನಂಬುವ ವಿಷಯಗಳ ಬದಲು ಯಾರೋ ಕೇಳಲು ಬಯಸುವ ವಿಷಯಗಳ ಬಗ್ಗೆ ನಾವು ಮಾತನಾಡುತ್ತೇವೆ.
ವಾಸ್ತವದಿಂದ ತಪ್ಪಿಸಿಕೊಳ್ಳುವುದು: ನಾವು ವಿಷಯಗಳನ್ನು ನೋಡುವ ರೀತಿಯೇ ಬೇರೆ ಮತ್ತು ಯಾವಾಗಲೂ ಪರಿಸ್ಥಿತಿಯ ವಾಸ್ತವತೆಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೇವೆ ಏಕೆಂದರೆ ಅದನ್ನು ನಿಭಾಯಿಸಲು ನಮ್ಮಿಂದ ಸಾಧ್ಯವಾಗುವುದಿಲ್ಲ ಎಂದು ಹೆದರಿಕೊಳ್ಳುವುದು. ಇವೆಲ್ಲವೂ ನಮ್ಮ ನೋವನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ನಾವೇ ದಾರಿ ಮಾಡಿ ಕೊಡುವ ವಿಷಯಗಳಾಗಿವೆ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ