AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಯಾವುದೇ ಸಂಬಂಧವನ್ನು ಸರಿಪಡಿಸಲು, ಬಲಪಡಿಸಲು ಇರುವ ಕ್ಷಮೆಯ 5 ಭಾಷೆಗಳು

ಕೆಲವೊಂದು ಬಾರಿ ನಾವು ನಮ್ಮ ಪ್ರೀತಿಪಾತ್ರರಿಗೆ ನೋವಾಗುವ ರೀತಿಯಲ್ಲಿ ನಡೆದುಕೊಂಡಿರುತ್ತೇವೆ. ಅಲ್ಲಿ ನಾವು ಕೇಳುವ ಒಂದು ಕ್ಷಮೆ ಸಂಬಂಧವನ್ನು ಉಳಿಸುತ್ತದೆ ಹಾಗೂ ಯಾವುದೇ ಭಿನ್ನಾಭಿಪ್ರಾಯಗಳು ತಲೆದೂರದಂತೆ ಮಾಡುತ್ತದೆ. ಕ್ಷಮೆಯನ್ನು ಕೇಳಲು 5 ಕ್ಷಮಾ ಭಾಷೆಗಳಿವೆ.

Relationship: ಯಾವುದೇ ಸಂಬಂಧವನ್ನು ಸರಿಪಡಿಸಲು, ಬಲಪಡಿಸಲು ಇರುವ ಕ್ಷಮೆಯ 5 ಭಾಷೆಗಳು
ಸಾಂದರ್ಭಿಕ ಚಿತ್ರ
ಮಾಲಾಶ್ರೀ ಅಂಚನ್​
| Edited By: |

Updated on: May 27, 2023 | 5:01 PM

Share

ಪ್ರತಿಯೊಬ್ಬ ವ್ಯಕ್ತಿಯು ಸಹಜವಾಗಿ ತಪ್ಪುಗಳನ್ನು ಮಾಡುತ್ತಾನೆ. ವಾಸ್ತವವಾಗಿ ನಾವು ತಪ್ಪುಗಳಿಂದ ಉತ್ತಮ ಜೀವನಪಾಠವನ್ನು ಕಲಿಯುತ್ತೇವೆ. ಆದರೆ ಕೆಲವು ತಪ್ಪುಗಳಿಗೆ ನಾವು ಖಂಡಿತವಾಗಿಯೂ ಕ್ಷಮೆಯಾಚಿಸಬೇಕಾಗುತ್ತದೆ. ಒಂದು ಕ್ಷಮೆ ಯಾವುದೇ ಸಂಬಂಧವನ್ನು ಉಳಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. ಸಂಬಂಧಗಳ ವಿಷಯಕ್ಕೆ ಬಂದಾಗ ಕ್ಷಮೆಯಾಚಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯಗತ್ಯ. ಇಲ್ಲದಿದ್ದರೆ ಸಂಬಂಧವು ಹಾಳಾಗುವ ಸಾಧ್ಯತೆ ಹೆಚ್ಚಿರುತ್ತದೆ. ಕ್ಷಮೆಯನ್ನು ಕೇಳಲು ಐದು ಕ್ಷಮಾ ಮಾರ್ಗಗಳಿವೆ. ನಿಮ್ಮಿಂದ ನಿಮ್ಮ ಪ್ರೀತಿಪಾತ್ರರಿಗೆ ನೋವಾದರೆ ಈ ಕ್ಷಮಾ ಭಾಷೆಯ ಮೂಲಕ ಕ್ಷಮಾಪಣೆ ಕೇಳಬಹುದು.

ಕ್ಷಮೆಯ ಐದು ಭಾಷೆಗಳು:

ಗುಣಮಟ್ಟದ ಸಮಯ: ಈ ಕ್ಷಮೆಯ ಭಾಷೆಯು ನೀವು ನೋಯಿಸಿದ ವ್ಯಕ್ತಿಗೆ ಗುಣಮಟ್ಟದ ಸಮಯ ಮತ್ತು ಗಮನವನ್ನು ನೀಡುವುದನ್ನು ಒಳಗೊಂಡಿರುತ್ತದೆ. ನೀವು ಅವರಿಗೆ ಉತ್ತಮ ಸಮಯವನ್ನು ನೀಡುವ ಮೂಲಕ ಅವರ ಮಾತುಗಳನ್ನು ಸಕ್ರಿಯವಾಗಿ ಆಲಿಸುತ್ತಾ, ಅರ್ಥಪೂರ್ಣ ಸಂಭಾಷಣೆಯಲ್ಲಿ ತೊಡಗಿಕೊಳ್ಳಿ. ಹಾಗೂ ನೀವು ಅವರ ಬಗ್ಗೆ ಪ್ರಾಮಾಣಿಕವಾಗಿ ಕಾಳಜಿ ವಹಿಸುತ್ತಾ ಸಂಬಂಧವನ್ನು ಸರಿಪಡಿಸಲು ಬಯಸುತ್ತೀರಿ ಎಂಬುದನ್ನು ಅರ್ಥಮಾಡಿಸಿ.

ಮೌಖಿಕ ಕ್ಷಮೆ: ಇದು ಮಾತಿನ ಮೂಲಕ ಕ್ಷಮೆಯನ್ನು ಕೇಳುವುದನ್ನು ಒಳಗೊಂಡಿರುತ್ತದೆ. ಇಲ್ಲಿ ಪ್ರೀತಿಪಾತ್ರರಿಗೆ ನಿಮ್ಮಿಂದಾದ ನೋವಿಗೆ ಸ್ವತಃ ನೀವೇ ಜವಬ್ದಾರಿಯನ್ನು ತೆಗೆದುಕೊಂಡು, ಪ್ರಾಮಾಣಿಕವಾಗಿ ಕ್ಷಮೆಯಾಚಿಸಬೇಕಾಗುತ್ತದೆ. ಹಾಗೂ ಅವರ ನೋವಿಗೆ ವಿಷಾದ ವ್ಯಕ್ತಪಡಿಸುತ್ತಾ, ಸಮಧಾನಪಡಿಸಬೇಕು. ಈ ಮೂಲಕ ಸಿಹಿಯಾದ ಮಾತುಗಳನ್ನಾಡುತ್ತಾ, ಸಂಬಂಧವನ್ನು ಸರಿಪಡಿಸಬೇಕು.

ಇದನ್ನೂ ಓದಿ:Illicit Relationship: ವಿವಾಹಿತ ಮಹಿಳೆ ಜತೆ 27ರ ಯುವಕ ಲವ್ವಿಡವ್ವಿ: ಬಳಿಕ ನಡೆದಿದ್ದು ಘನಘೋರ ದುರಂತ

ಸೇವಾ ಕಾಯಿದೆಗಳು: ಈ ಕ್ಷಮಾ ಭಾಷೆಯು ಪದಗಳಿಗಿಂತ ಹೆಚ್ಚಾಗಿ ಕಾರ್ಯಗಳ ಮೂಲಕ ತಪ್ಪುಗಳನ್ನು ಸರಿಪಡಿಸುವುದರ ಮೇಲೆ ಕೇಂದ್ರೀಕೃತವಾಗಿದೆ. ಇದು ಪರಿಸ್ಥಿತಿಯನ್ನು ಸರಿಪಡಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುವುದು, ನೀವು ನೋಯಿಸಿದ ವ್ಯಕ್ತಿಗೆ ಖುಷಿನೀಡುವಂತಹ ಏನನ್ನಾದರೂ ಮಾಡುವುದು ಅಥವಾ ಹಿಂದೆ ಮಾಡಿದ ತಪ್ಪು ಮತ್ತೆ ಸಂಭವಿಸದಂತೆ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಒಳಗೊಂಡಿರುತ್ತದೆ.

ಉಡುಗೊರೆ ನೀಡುವುದು: ಈ ಕ್ಷಮಾ ಭಾಷೆಯು ನಿಮ್ಮಿಂದ ನೋವಿಗೊಳಗಾದ ನಿಮ್ಮ ಪ್ರೀತಿಪಾತ್ರರಿಗೆ ಉಡುಗೊರೆಯನ್ನು ನೀಡುವುದನ್ನು ಒಳಗೊಂಡಿರುತ್ತದೆ. ನಿಮ್ಮಿಂದಾದ ನೋವನ್ನು ಕಡಿಮೆ ಮಾಡಲು ಅರ್ಥಪೂರ್ಣ ಉಡುಗೊರೆಗಳನ್ನು ನೀಡುವ ಕ್ಷಮೆ ಕೇಳಬಹುದು. ಇದು ನೀವು ಮಾಡಿದ ತಪ್ಪನ್ನು ತಿದ್ದುಪಡಿ ಮಾಡುವಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಪ್ರಯತ್ನವನ್ನು ಪ್ರದರ್ಶಿಸುತ್ತದೆ.

ದೈಹಿಕ ಸ್ಪರ್ಷ: ದೈಹಿಕ ಸ್ಪರ್ಶವು ಪಶ್ಚಾತಾಪವನ್ನು ವ್ಯಕ್ತಪಡಿಸುವ ಕ್ಷಮೆಯ ಭಾಷೆಯಾಗಿದೆ. ಇದು ಸಾಂತ್ವನದ ಅಪ್ಪುಗೆ, ಕೈಗಳನ್ನು ಹಿಡಿದುಕೊಳ್ಳುವುದನ್ನು ಒಳಗೊಂಡಿರುತ್ತದೆ. ನಿಮ್ಮ ಸಂಗಾತಿಯನ್ನು ಭುಜದ ಮೇಲೆ ಮಲಗಿಸಿ, ಸಾಂತ್ವನದ ಅಪ್ಪುಗೆಯನ್ನು ನೀಡಿ, ಸಂಗಾತಿಯನ್ನು ಸಮಧಾನಪಡಿಸುತ್ತಾ ಕ್ಷಮೆಯನ್ನು ಕೇಳಬೇಕು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ