ಈ ಬೇಸಿಗೆಯಲ್ಲಿ ಫ್ಯಾನ್ ಗಾಳಿ ಸಾಕಾಗುವುದೇ ಇಲ್ಲ. ಇನ್ನೇನು ಮಳೆಗಾಲ ಪ್ರಾರಂಭವಾಗುತ್ತಿದ್ದರೂ ಕೂಡ ಉರಿ ಬಿಸಿಲು ಕಡಿಮೆಯಾಗಿಲ್ಲ. ಸೆಕೆ ಬೆವರು ,ಹಾಗಂತ ಎಲ್ಲರೂ ಎಸಿ-ಕೂಲರ್ ಖರೀದಿಸಲು ಸಾಧ್ಯವಿಲ್ಲ. ಆದರೆ ವಿಭಿನ್ನವಾದ ಕೂಲರ್ ಒಂದು ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಪ್ಲಾಸ್ಟಿಕ್ ಡ್ರಮ್ ಬಳಸಿ ಏರ್ ಕೂಲರ್ ತಯಾರಿಸಿದ್ದು, ಇದೀಗಾ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ಲಾಸ್ಟಿಕ್ ಡ್ರಮ್ ಬಳಸಿ ಅದರೊಳಗೆ ಫ್ಯಾನ್ ಅಳವಡಿಸಲಾಗಿದೆ. ಜೊತೆಗೆ ನೀರಿನ ಮೋಟಾರ್ ಅಳವಡಿಸಲಾಗಿದೆ. ಜೊತೆಗೆ ಈ ಏರ್ ಕೂಲರ್ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದನ್ನು ವಿಡಿಯೋದಲ್ಲಿ ತೋರಿಸಲಾಗಿದೆ. ವಿಭಿನ್ನ ಪ್ರಯತ್ನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಶ್ಲಾಘನೆ ವ್ಯಕ್ತವಾಗಿದೆ ವಿಡಿಯೋ ಇಲ್ಲಿದೆ ನೋಡಿ.
ಇದನ್ನೂ ಓದಿ: ಬಿಯರ್ ಬಾಟಲಿಗಳ ಕದ್ದು ಓಡಿಹೋಗುವ ಕಳ್ಳನ ಪ್ಲ್ಯಾನ್ ಏನೋ ಚೆನ್ನಾಗಿತ್ತು, ಆದರೆ ಫೇಲ್ ಆಗ್ಬಿಡ್ತು ನೋಡಿ
ವಿಕ್ರಮ್ ಶರ್ಮ ಎಂಬ ಇನ್ಸ್ಟಾಗ್ರಾಮ್ ಬಳಕೆದಾರರು ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ಸಾಕಷ್ಟು ಲೈಕು ಹಾಗೂ ಕಾಮೆಂಟ್ ಪಡೆದುಕೊಂಡಿದೆ. ಸಾಕಷ್ಟು ನೆಟ್ಟಿಗರು ಉತ್ತಮ ಪ್ರಯತ್ನ ಒಳ್ಳೆಯದಾಗಲಿ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 11:45 am, Fri, 9 June 23