60 ವರ್ಷಗಳ ನಂತರ ಮತ್ತೆ ಜಗತ್ತಿನ ಮುಂದೆ ತೆರೆದುಕೊಳ್ಳುತ್ತಿದೆ ಟ್ರಾನ್ಸ್ ಭೂತಾನ್ ಟ್ರಯಲ್

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 06, 2022 | 6:21 PM

ಭೂತಾನ್ ನಲ್ಲಿ ಅತ್ಯಂತ ಬೇಡಿಕೆ ಇರುವ ಪ್ರದೇಶ ಎಂದರೆ ಅದು ಟ್ರಾನ್ಸ್ ಭೂತಾನ್ ಟ್ರಯಲ್ ಪ್ರದೇಶ. ಇದೀಗ ಈ ಪ್ರದೇಶ 60 ವರ್ಷಗಳ ನಂತರ ಮಾರ್ಚ್ 2022ಕ್ಕೆ ತೆರೆಯಲು ಸಿದ್ಧವಾಗಿದೆ. ಈ ರಸ್ತೆಯಲ್ಲಿ 250 ಮೈಲಿಗಳನ್ನು ಸಾಗುವ ಈ ಹಾದಿಯಲ್ಲಿ ಅದ್ಭುತ ದೃಶ್ಯ ಕಾವ್ಯಗಳನ್ನು ಕಾಣಬಹುದು. ಈ ಪ್ರದೇಶ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ. ಟ್ರಾನ್ಸ್ ಭೂತಾನ್ ಟ್ರಯಲ್ ಭೂತಾನ್ ಕೆನಾಡ ಫೌಂಡೇಶನ್ ಪ್ರಕಾರ ನಿರ್ಮಾಣಗೊಂಡಿದೆ, ಒಂಬತ್ತು ಜಿಲ್ಲೆಗಳನ್ನು, 28 ಸ್ಥಳೀಯ ಸರ್ಕಾರಗಳನ್ನು, ಪುರಸಭೆಗಳನ್ನು ಒಂದು ರಾಷ್ಟ್ರೀಯ ಉದ್ಯಾನವನ, ಇದು ಒಟ್ಟು 400 ಸಾಂಸ್ಕೃತಿಕ ತಾಣಗಳನ್ನು ಹೊಂದಿದೆ. 

60 ವರ್ಷಗಳ ನಂತರ ಮತ್ತೆ ಜಗತ್ತಿನ ಮುಂದೆ ತೆರೆದುಕೊಳ್ಳುತ್ತಿದೆ ಟ್ರಾನ್ಸ್ ಭೂತಾನ್ ಟ್ರಯಲ್
Follow us on

ನಮ್ಮ ಜಗತ್ತಿನಲ್ಲಿ ಅನೇಕ ಅದ್ಭುತ ಸ್ಥಳಗಳು ಇವೆ. ಸುಂದರವಾದ ಪ್ರಕೃತಿಯೊಂದಿಗೆ ಮೈಮೆರೆದು ನಿಂತಿರುವ ಅದೆಷ್ಟೂ ಅದ್ಭುತ ಸ್ಥಳಗಳು ನಮ್ಮ ಜಗತ್ತಿನಲ್ಲಿಇದೆ. ಜನರನ್ನು ಮನಸೆಳೆಯುವ ಪ್ರಪಂಚದ ಕೆಲವೊಂದು ಪ್ರಮುಖ ಪ್ರದೇಶಗಳು ಮತ್ತೆ ಮತ್ತೆ ಈ ಸ್ಥಳಕ್ಕೆ ಭೇಟಿ ನೀಡುವಂತೆ ಕೈಚಾಚಿ ಕರೆಯುತ್ತದೆ. ನಮ್ಮ ಮನಸ್ಸಿಗೆ ಸುಖ ನೀಡುವ ತಾಣಗಳನ್ನು  ನಮ್ಮ ಹತ್ತಿರದ ಸಂಬಂಧಿಯಂತೆ ಯಾಕೆಂದರೆ ಕೆಲವೊಂದು ಬಾರಿ ನಮ್ಮ ಬಂಧು-ಮಿತ್ರರಲ್ಲಿ ಹಂಚಿಕೊಳ್ಳದನ್ನು ಪ್ರಕೃತಿ ಮುಂದೆ ಹೇಳಿಕೊಳ್ಳತ್ತೇವೆ. ಈ ಕಾರಣಕ್ಕೆ ಪ್ರಕೃತಿ ಒಬ್ಬ ಸ್ನೇಹಿತನಂತೆ. ಜಗತ್ತಿನಲ್ಲಿ ಹಲವು ಮನಮೋಹಕ ಸ್ಥಳಗಳು ಇವೆ. ಜೊತೆಗೆ ಅವುಗಳಿಗೆ ಐತಿಹಾಸಿಕತೆಯು ಇದೆ. ಕೆಲವೊಂದು ಸ್ಥಳಗಳು ಇತಿಹಾಸಕ್ಕೆ ಸಾಕ್ಷಿಯಾದರೆ ಇನ್ನೂ ಕೆಲವು ಅದ್ಭುತಗಳಿಗೆ ಸಾಕ್ಷಿಯಾಗಿರುತ್ತದೆ. ಹೌದು ಅದ್ಭುತಗಳಿಗೆ ಸಾಕ್ಷಿ ಎನ್ನುವ ಮೂಲಕ ಹಲವು ಪ್ರದೇಶಗಳನ್ನು ನಾವು ಗುರುತಿಸಿಕೊಳ್ಳಬಹುದು. ಪರ್ವತ ಪ್ರದೇಶಗಳು, ಹಿಮಾಲಯ ಪ್ರದೇಶಗಳು ಅದ್ಭುತಗಳಿಗೆ ಸಾಕ್ಷಿಯಾಗಿರುತ್ತದೆ. ಈ ಅದ್ಭುತ ಸಾಕ್ಷಿಯಾದ ಪ್ರದೇಶಗಳು ಹಲವು ಬಾರಿ ಇತಿಹಾಸಕ್ಕೂ ಸಾಕ್ಷಿಯಾದ ಉದಾಹರಣೆಯು ಇದೆ.

ಹೌದು ಇಂತಹ ಅದ್ಭುತಗಳಲ್ಲಿ ಸಾಕ್ಷಿಯಾದ ಪ್ರದೇಶಗಳಲ್ಲಿ ಇತಿಹಾಸಗಳಿಗೆ ಮುನ್ನಡಿ ಬರೆದ ಸನ್ನಿವೇಶಗಳು ಇವೆ.  ಒಂದು ಒಳ್ಳೆಯ ಪ್ರದೇಶ ಹಾಗೂ ಅದ್ಭುತ ಇತಿಹಾಸವನ್ನು ಹೊಂದಿರುವ ಭೂತಾನ್ ಭಾರತ ಮತ್ತು ಚೀನಾದ ಮಧ್ಯೆ ಉನ್ನತ ಶೀಖರದಂತೆ ನೆಲೆಸಿದೆ. ಭೂತಾನ್ ಜಗತ್ತಿನ ಪ್ರಿಯವಾದ ಪ್ರದೇಶವಾಗಿದೆ. ಏಕೆಂದರೆ ಇಲ್ಲಿರುವ ಪ್ರಕೃತಿ ತಾಣಗಳು, ಅದ್ಭುತವಾದ ಪ್ರದೇಶಗಳು ಜನರನ್ನು ಸೆಳೆಯುವ ಸ್ಥಳಗಳು ಈ ಕಾರಣಕ್ಕೆ ಭೂತಾನ್ ಇಂದಿಗೂ ಸುಂದರ, ಸುಮಧುರ, ಅದ್ಭುತಕ್ಕೆ ಸಾಕ್ಷಿಯಾಗಿ . ಭೂತಾನ್ ದೇಶವು ಭಾರತ ಮತ್ತು ಚೀನಾದ ಮಧ್ಯೆ ಇದ್ದರು ತುಂಬಾ ಶಾಂತವಾಗಿ ಮತ್ತು ಪ್ರಾಶಂತವಾಗಿದೆ, ಬುದ್ಧನ್ನು  ಆರಾಧಿಸುವ ಈ ದೇಶ ಬೌದ್ಧ ಶಕ್ತಿಗಳಿಗೆ ಸಾಕ್ಷಿಯಾಗಿದೆ.

ಭೂತಾನ್ ನಲ್ಲಿ ಅತ್ಯಂತ ಬೇಡಿಕೆ ಇರುವ ಪ್ರದೇಶ ಎಂದರೆ ಅದು ಟ್ರಾನ್ಸ್ ಭೂತಾನ್ ಟ್ರಯಲ್ ಪ್ರದೇಶ. ಇದೀಗ ಈ ಪ್ರದೇಶ 60 ವರ್ಷಗಳ ನಂತರ ಮಾರ್ಚ್ 2022ಕ್ಕೆ ತೆರೆಯಲು ಸಿದ್ಧವಾಗಿದೆ. ಈ ರಸ್ತೆಯಲ್ಲಿ 250 ಮೈಲಿಗಳನ್ನು ಸಾಗುವ ಈ ಹಾದಿಯಲ್ಲಿ ಅದ್ಭುತ ದೃಶ್ಯ ಕಾವ್ಯಗಳನ್ನು ಕಾಣಬಹುದು. ಈ ಪ್ರದೇಶ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಹೊಂದಿದೆ. ಟ್ರಾನ್ಸ್ ಭೂತಾನ್ ಟ್ರಯಲ್ ಭೂತಾನ್ ಕೆನಾಡ ಫೌಂಡೇಶನ್ ಪ್ರಕಾರ ನಿರ್ಮಾಣಗೊಂಡಿದೆ, ಒಂಬತ್ತು ಜಿಲ್ಲೆಗಳನ್ನು, 28 ಸ್ಥಳೀಯ ಸರ್ಕಾರಗಳನ್ನು, ಪುರಸಭೆಗಳನ್ನು ಒಂದು ರಾಷ್ಟ್ರೀಯ ಉದ್ಯಾನವನ, ಇದು ಒಟ್ಟು 400 ಸಾಂಸ್ಕೃತಿಕ ತಾಣಗಳನ್ನು ಹೊಂದಿದೆ.

ಇಲ್ಲಿ ಪ್ರಯಾಣಿಸುವ ಪ್ರಯಾಣಿಕರು 18 ಪ್ರಮುಖ ಸೇತುವೆ ಹಾಗೂ ಈ ಪ್ರದೇಶವನ್ನು ಸೇರಲು 10,000 ಮೆಟ್ಟಲುಗಳನ್ನು  ಹತ್ತಬೇಕು, ಇಲ್ಲಿಗೆ ಬೈಕ್ ಮತ್ತು ಸಂದರ್ಶಕರು ಪ್ರಯಾಣಿಕರಿಗೆ ಎಲ್ಲವನ್ನು ವಿಸ್ತಾರವಾಗಿ ಹೇಳುತ್ತಾರೆ.  ಮಧ್ಯ ಭೂತನ್ ನಲ್ಲಿರುವ ಪುರಾತನ ಮತ್ತು ಪವಿತ್ರ ಪ್ರದೇಶಗಳನ್ನು ಇಲ್ಲಿ ಸಾಗುವಾಗ ಕಾಣಬಹುದು. ಈ ಪ್ರದೇಶದಲ್ಲಿ ಪವಿತ್ರವಾದ ಟ್ರೋಂಗ್ಸಾದಲ್ಲಿ ದಿ ಕಿಂಗ್ ಟ್ರಯಲ್  ಮತ್ತೆ ತೆರೆಯಲು  ಮುಂದಾಗಿದ್ದಾರೆ.  ಇದು ಸಮುದಾಯ ಆಧಾರಿತ ಕಟ್ಟವಾಗಿದ್ದು, ಇದು ಪ್ರಾಚೀನ ಸಾಂಸ್ಕೃತಿಯ ಐಕಾನ್ ಆಗಿದ್ದು  ಇಲ್ಲಿಗೆ ಬರುವ ಪ್ರಯಾಣಿಕರಿಗೆ ಅನುಕೂಲವಾಗುವ ಮತ್ತು ಪ್ರಯಾಣಿಕರಿಗೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಮತ್ತು ಯಾವುದೇ ದೇಶದಿಂದ ಇಲ್ಲಿಗೆ ಬರುವ ಎಲ್ಲ ಪ್ರಯಾಣಿಕರ ರಕ್ಷಣೆ ಮಾಡುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಭೂತಾನ್ ಕೆನಡಾ ಫೌಂಡೇಶನ್ ನ ಅಧ್ಯಕ್ಷ ಸ್ಯಾಮ್ ಬ್ಲೈತ್ ಹೇಳಿದರು.