ಕಡಲೆಕಾಯಿಯು ಪೌಷ್ಟಿಕಾಂಶ ಮತ್ತು ಅನೇಕ ಆರೋಗ್ಯ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಶೇಂಗಾ ಬೀಜ ತಿನ್ನಲು ರುಚಿಕರವಾದುದು ಮಾತ್ರವಲ್ಲದೆ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದು ವಿಟಮಿನ್ ಎ, ವಿಟಮಿ ಬಿ1, ಬಿ3, ಪ್ರೋಟೀನ್, ಕ್ಯಾಲಿಯಂ, ಫೈಬರ್, ಮೆಗ್ನೇಸಿಯಂ, ಪೊಟ್ಯಾಸಿಯಂ, ಮತ್ತು ಆರೋಗ್ಯಕ ಕೊಬ್ಬುಗಳಲ್ಲಿ ಸಮೃದ್ಧವಾಗಿದೆ. ಸಾಮಾನ್ಯವಾಗಿ ಕಡಲೆಕಾಯಿಯನ್ನು ಹುರಿದು ತಿನ್ನಲಾಗುತ್ತದೆ ಅಥವಾ ಅದರಿಂದ ವಿವಿದ ರೀತಿಯ ಖಾದ್ಯಗಳನ್ನು ತಯಾರಿಸಲಾಗುತ್ತದೆ. ಆದರೆ ನೀವು ಎಂದಾದರೂ ನೆನೆಸಿದ ಕಡಲೆಕಾಯಿಯನ್ನು ಸೇವಿಸಿದ್ದೀರಾ? ಬಾದಮಿಯಂತೆ ನೆನೆಸಿದ ಶೇಂಗಾದ ನಿಯಮಿತ ಸೇವನೆಯಿಂದ ಕೂಡಾ ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.
ಬಾದಮಿಯಂತೆ ನೆನೆಸಿದ ಕಡಲೆಕಾಯಿಯನ್ನು ತಿನ್ನುವುದರಿಂದಲೂ ಮೆದುಳು ಚುರುಕಾಗುತ್ತದೆ. ಪ್ರತಿದಿನ ಬೆಳಗ್ಗೆ ಸ್ವಲ್ಪ ನೆನೆಸಿದ ಶೇಂಗಾವನ್ನು ತಿನ್ನುವ ಮೂಲಕ ಸ್ಮರಣಾಶಕ್ತಿಯನ್ನು ಸುಧಾರಿಸಬಹುದು. ಮತ್ತು ಇದು ಮೆದುಳಿನ ಸರಿಯಾದ ಕಾರ್ಯನಿರ್ವಹಣೆಗೆ ಸಹಾಯ ಮಾಡುತ್ತದೆ.
ಶೇಂಗಾವನ್ನು ನೀರಿನಲ್ಲಿ ನೆನಸುವುದರಿಂದ ಅವುಗಳಲ್ಲಿನ ಫೈಟಿಕ್ ಆಮ್ಲದ ಪ್ರಮಾಣ ಕಡಿಮೆಯಾಗುತ್ತದೆ. ಇದು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದೆ. ಅಲ್ಲದೆ ಪ್ರತಿದಿನ ಬೆಳಗ್ಗೆ ನೆನೆಸಿದ ಶೇಂಗಾವನ್ನು ಸೇವಿಸುವುದರಿಂದ ಹೊಟ್ಟೆ ಮತ್ತು ಜೀರ್ಣಕ್ರಿಯೆ ಸಂಬಂಧಿ ಕಾಯಿಲೆಗಳು ಕ್ಷಣಾರ್ಧದಲ್ಲಿ ಗುಣವಾಗುತ್ತದೆ. ನೀವು ಗ್ಯಾಸ್, ಅಸಿಡಿಟಿಯಂತಹ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೊಳಗಾಗಿದ್ದರೆ, ಖಂಡಿತವಾಗಿಯೂ ಇದನ್ನು ಪ್ರತಿದಿನ ಸೇವಿಸಿ.
ಹೆಚ್ಚು ಸಮಯಗಳ ಕಾಲ ಒಂದೇ ಸ್ಥಳದಲ್ಲಿ ಕುಳಿತು ಕೆಲಸ ಮಾಡುವುದರಿಂದ ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಹಾಗಿರುವಾಗ ನೆನೆಸಿದ ಶೇಂಗಾವನ್ನು ಬೆಲ್ಲದ ಜೊತೆಗೆ ತಿಂದರೆ ಬೆನ್ನುನೋವಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಕಡಲೆಕಾಯಿಯನ್ನು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೆ ತುಂಬಾ ಪ್ರಯೋಜಕಾರಿ ಎಂದು ಪರಿಗಣಿಸಲಾಗಿದೆ. ಪ್ರೋಟೀನ್ ಮತ್ತು ಅನೇಕ ಅಗತ್ಯ ಪೋಷಕಾಂಶಗಳಲ್ಲಿ ಸಮೃದ್ಧವಾಗಿರುವ ಇದು ಆರೋಗ್ಯಕ ಚರ್ಮ ಮತ್ತು ಕೂದಲನ್ನು ಪಡೆಯಲು ನಿಮಗೆ ಸಹಾಯ ಮಾಡುತ್ತದೆ.
ಕಡಲೆಕಾಯಿಯಲ್ಲಿ ಆರೋಗ್ಯಕರ ಕೊಬ್ಬುಗಳಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ ಇದು ರಕ್ತ ಪರಿಚಲನೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯವೂ ಆರೋಗ್ಯಕರವಾಗಿರುತ್ತದೆ.
ಇದನ್ನೂ ಓದಿ: ಪೌಷ್ಟಿಕಾಂಶದ ಶಕ್ತಿ ಕೇಂದ್ರ: ಹುರಿದ ಕಡಲೆಕಾಯಿಯ ಆರೋಗ್ಯ ಪ್ರಯೋಜನಗಳನ್ನು ತಿಳಿಯಿರಿ
ಪ್ರೋಟೀನ್ನಲ್ಲಿ ಸಮೃದ್ಧವಾಗಿರುವ ನೆನೆಸಿದ ಶೇಂಗಾವನ್ನು ತಿನ್ನುವುದರಿಂದ ಸ್ನಾಯುಗಳ ಆರೋಗ್ಯವನ್ನು ಬಲಪಡಿಸಬಹುದು. . 100 ಗ್ರಾಂ ಕಡಲೆಕಾಯಿಯಲ್ಲಿ ಸುಮಾರು 25 ಗ್ರಾಂ ಪ್ರೋಟೀನ್ ಇದೆ. ಇದು ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಪೋಷಕಾಂಶವಾಗಿದೆ.
ಪೌಷ್ಟಿಕ ತಜ್ಞರ ಪ್ರಕಾರ, ಶೇಂಗಾವನ್ನು ನೆನೆಸುವುದರಿಂದ ಅವು ಹೆಚ್ಚು ಪೌಷ್ಟಿಕಾಂಶವನ್ನು ನೀಡುತ್ತದೆ. ಮತ್ತು ಇದರ ಸೇವನೆಯಿಂದ ನಾವು ಅನೇಕ ಪೋಷಕಾಂಶಗಳನ್ನು ಪಡೆಯಬಹುದು. ಮುಖ್ಯವಾಗಿ ಶೇಂಗಾ ಬೀಜಗಳು ಉತ್ಕರ್ಷಣ ನಿರೋಧಕಗಳು, ತಾಮ್ರ, ಕಬ್ಬಿಣ, ಪೊಟ್ಯಾಸಿಯಂ, ಸೆಲೆನಿಯಮ್, ಸತು ಮತ್ತು ಕ್ಯಾಲ್ಸಿಯಂ ನಿಂದ ಸಮೃದ್ಧವಾಗಿದ್ದು, ಅವು ಆರೋಗ್ಯಕರ ಮೂಳೆಗಳು, ಚರ್ಮ ಮತ್ತು ಕೂದಲಿನ ಆರೋಗ್ಯಕ ನಿರ್ವಹಣೆಗೆ ಬೇಕಾಗಿರುವ ಅಗತ್ಯ ಖನಿಜಗಳಾಗಿವೆ.
ಪೌಷ್ಟಿಕ ತಜ್ಞರ ಪ್ರಕಾರ ನೆನೆಸಿದ ಕಡಲೆಕಾಯಿಯನ್ನು ಬೆಳಗ್ಗೆ ಉಪಹಾರ ಮಾಡುವ ಮೊದಲು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಉತ್ತಮ. ಹಾಗೂ ಶೇಂಗಾಬೀಜದಲ್ಲಿ ಕ್ಯಾಲೋರಿ ಅಂಶಗಳು ಕಂಡುಬರುವುದರಿಂದ ಅವುಗಳನ್ನು ಅತಿಯಾಗಿ ತಿನ್ನಬೇಡಿ.
ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: